Monday, August 07, 2006

ಉತ್ತರ ಭಾರತದ ಬವಣೆಗಳು-2

ಎಲ್ಲಾ ಕಡೆ ಮಳೆಗಾಲ,ಚಳಿಗಾಲ,ಬೇಸಿಗೆ ಕಾಲಗಳು ಇದ್ರ ಇಲ್ಲಿ ಇರೋದು ಬೇಸಿಗೆ ಕಾಲ ಮತ್ತು ಚಳಿಗಾಲ.ಇಲ್ಲಿ ಜನಕ್ಕ ಮಳೆಗಾಲ ಅಂದ್ರ ಗೊತ್ತ ಇಲ್ಲ.2-3 ಮೂರು ದಿನ ಯಾರೊ ಅತ್ತಾರಂಗ ಇಲ್ಲಿ ಮಳಿ ಅಗುತ್ತ.ಅದನ್ನ ನೋಡಿ ಇಲ್ಲಿ ಜನ ಭಾರಿ ಮಳೆಯಾಯಿತು ಅನ್ನುಹಾಂಗ ಮಾತಡತಾರ. ಇವರನ್ನ ನಮ್ಮ ಕಡೆ ಇರೊ ಸಿರ್ಸಿ,ಖಾನಪುರ ಕಡಿಗ ಬಿಟ್ಟ್ರ ಮಳೆ ಎನು ಅಂಥ ಅರ್ಥ ಅಗುತ್ತ್ಯ. ಇನ್ನು ಬ್ಯಾಸಗ A/C ಇಲ್ಲಾ ಅಂದ್ರ ಇಲ್ಲಿ ಕೆಲ್ಸಾನ ನಡಿಯೊಲ್ಲ. ಅದು ಅಲ್ದ ಸಿಕ್ಕಾಂಗ Powercut ಬೇರೆ. Power backup ಎಸ್ಟು ಘಂಟೆ ಕೆಲ್ಸಾ ಮಾಡುತ್ತ??ಕಳೆದ ವರುಷ ನಮ್ಮ ಪ್ರದೀಪ ರಾತ್ರಿಯಲ್ಲಾ ಯಾವ ಪಾರ್ಕನಲ್ಲಿ ಚಲೊ ಗಾಳಿ ಬರುತ್ತ,ಎಲ್ಲಿ ಮಲಗಿದರ ಅನಕೂಲ ಅನ್ನೊದನ್ನ PhD ತರಾ ಸಂಶೋದನೆ ಮಾಡಿದ್ದ.ಮೊದ್ಲು ಬಂದಾಗ ಇಲ್ಲಿ ನಾನು ನನ್ನ ದೊಸ್ತ ಒಬ್ಬ ಸೇರಿ ಬರಿ ಬನಿಯನ ಮೇಲೆ ಅಟೊನಲ್ಲಿ ಪೂರ್ತಿ ದೆಲ್ಲಿಯ ಗಲ್ಲಿ ಗಲ್ಲಿ ಸುತ್ತಹಾಕಿದಿವಿ ಇಲ್ಲಿ ಇರೊ ಸೆಖೆ ತಾಳಲಾರದ.ಇನ್ನು ಈ ವರುಷ ಅಂತು Heat waves ಸಿಕ್ಕಾಪಟ್ಟೆ ತ್ರಾಸ ಕೊಟ್ತು.45-47 Cನ್ಯಾಗ ಬಿಸಿಗಾಳಿ ಬರ್ರ ಅಂತ ಬಿಸಿದರ ಎಂತಾ ಗಟ್ಟಿ ಮನಶ್ಯಾ ಅದರು ಗ್ಯಾರೆಂಟಿಯಾಗಿ ತೆಲೆ ತಿರುಗಿ ಬಿಳತಾನ.ಇಂತಾ ಬಿಸ್ಲ ತಡಿಯ್ಯಾಕ ಸಿಗೊದು ಕೂಲ್ಡ್ರಿಂಕ್ಸು ಅದು ಬಿಟ್ಟ್ರ ಲಸ್ಸಿ.ಲಸ್ಸಿ ಸ್ವಾದ ಸವಿಬೇಕು ಅಂದ್ರ ನೀವು ಪಂಜಾಬಗೆ ಹೊಗಬೇಕು ನೋಡಿ. ಈ ಸುಡಗಾಡ ಬಿಸ್ಲ್ಯಾಗ ಲಸ್ಸಿ ಅಮೃತದಂತೆ ಇಲ್ಲಿ ಕೆಲ್ಸಾ ಮಾಡುತ್ತ. ಅದ್ರೆ ಇಲ್ಲಿ ತಿಳಿಮಜ್ಜಿಗಿ, ಎಳನೀರು ಸಿಗೋದು ಇಲ್ಲಾ ಅನ್ನೊದು ತುಂಬಾ ಬ್ಯಾಸರದ ವಿಚಾರ.45-47 C ಬಿಸ್ಲು ,Heat waves,ಬೇಸಿಗೆಯಲ್ಲಿ ಇರದ ವಿದ್ಯುತ್ತು ,ವಿದ್ಯುತ್ತ ಕದಿಯುವ ಚೋರರು,ಮೈಯಲ್ಲಾ ಸುರಿಯುವ ಬೆವರು ಎಲ್ಲಾ ಸೇರಿ ನಿಮಗೆ ಉತ್ತರಭಾರತವೆಂದರೆ ಯಾಕಪ್ಪ ಇಲ್ಲಿ ಬಂದ್ವಿ ಅನಸುತ್ತ.

Wednesday, August 02, 2006

ಉತ್ತರ ಭಾರತದ ಬವಣೆಗಳು-1

"ಯಾರಿಗೆ ಬೇಕು ಈ ಲೋಕ
ಬಿಸ್ಲೇ ಇದ್ರು ಸಹ್ಲಿಬೇಕ.... ....
ಚಳಿಯ ಇದ್ರೆ ಇಲ್ರೆಬೇಕ.... "


ಎನಪ್ಪಾ ಈ ಮನಸ್ಯಾ ಹಿಂಗೆಲ್ಲಾ ಎನೇನೋ ಹುಚ್ಚರಂಗ ಹಾಡಕತ್ತನ್ನ ಅಂತ ಗಾಬರಿ ಬಿಳಬೇಡ್ರಿ........ಉತ್ತರ ಭಾರತದ ಬಗ್ಗೆ ಯೊಚ್ನೆ ಮಾಡಿದಾಗ ಈ ರೀತಿ ಮನಸನ್ಯಾಗ ಎರಡು ಸಾಲು ನೆನಪಿಗೆ ಬಂತು.ಎಲ್ಲರೂ ಮಾಡದು ಹೊಟ್ಟಿಗಾಗಿ ,ಗೇಣು ಬಟ್ಟೆಗಾಗಿ ಎಂಬ ದಾಸರ ಪದದಂತೆ ನಾನು ೨ ವರ್ಷದ ಹಿಂದ ಹೊಟ್ಟೆಪಾಡಿಗಾಗಿ ಇಲ್ಲಿ ಬಂದಿಟ್ಟೆ. ಬಂದ ತಕ್ಷಣ ಮೊದ್ಲು ಗೊತ್ತಾದದ್ದು ಇಲ್ಲಿ ಹಿಂದಿ/ಹಿಂದಿ ಅಂಕಿಗಳು ಗೊತ್ತು ಇಲ್ಲಂದ್ರ ಜೀವನದ ಗಾಡಿ ಮುಂದು ಒಡೊಲ್ಲ ಅನ್ನೊದು.ಹಿಂದಿ ಎನೊ ಸರಿಯಾಗಿ ಬರಿತಿತ್ತು.ಅದ್ರೆ ಆ ಅಂಕಿಗಳು,ಸಂಖ್ಯೆಗಳು ಇನ್ನು ಅದ್ರು ನನ್ನ ತೆಲೆಕೆಡಸತಾವ(ಈಗ ಸರಿ ಸುಮಾರ್ರಾಗಿ ಬರತಾವೆ). ಅಮ್ಯಾಲ ಸಣ್ಣಗ ಗೊತ್ತು ಅಗ್ಯಾಕ ಶುರು ಅಯಿತು ಎನೆನೊ ಇಲ್ಲಿ ಕಳ್ಕೊತಾದೀನಿ ಅಂತ...
ಬೆಳಗಿನ ಟಿ/ಕಾಫಿಗೆ ಬಿತ್ತು ಖೊತ. ಇಗಲೂ ಬೆಳಿಗಿನ 5-6 ಗಂಟೆಗೆ ಚಾ ಸಿಗಬೇಕಂದ್ರ ಮನ್ಯಾಗ ಮಾಡಿ ಕುಡಿಬೇಕು.ಅದು ಬಿಟ್ರೆ officeನ್ಯಾಗ ಸಿಗೊ ಡಿಪ್ ಟೀನೇ ಗತಿ.ಇನ್ನು ಕಾಫಿ ಕುಡಿದು ನನಗೆ ದಶಕನ ಅಗೈತಿ ಅನಸುತ್ತ."ಆರಾಮ ಹರಾಮ ಹೈ" ಅಂತ ನಮ್ಮ ಗಾಂಧಿ ಮುತ್ತ್ಯ ಹೇಳಿದರೆ,ಇಲ್ಲಿ ಜನ ಅದನ್ನ ಸ್ವಲ್ಪ ತಿದ್ದುಕೊಂಡು "ಆರಾಮ ಹಮಾರ ಹೈ" ಅಂತ ತಿಳಕೊಂಡು ಅರಾಮಾಗಿ ಇರೊ ಸೊಂಬೇರಿಗಳು.ಜನ ಇಲ್ಲಿ ಸಾಮನ್ಯವಾಗಿ ಎಳೋದೆ 9-10 am ಹೊಡದ ಮ್ಯಾಲ...ನನಗಂತೂ ಬೆಳಬೆಳಗ್ಗೆ ಹೊಟ್ಟೆಗೆ ಎನು ಹಾಕಲಿಲ್ಲ ಅಂದ್ರ ತೆಲಿನ ಕೆಲ್ಸಾ ಮಾಡುದಿಲ್ಲ. ಇನ್ನು ಊಟದ ವಿಷ್ಯಕ್ಕೆ ಬಂದ್ರ ಅದರ ಬಗ್ಗೆ ಮಾತಡುದ ಬ್ಯಾಡ ಅನ್ಸುತ್ತೆ.ನಾನು ಜ್ಯೊಳದ ರೊಟ್ಟಿ ,ಕೆನಿ ಮೊಸ್ರು,ಎನಗ್ಯಾಯಿ ,ಉಪ್ಪಿಟ್ಟು ,ಅವಲಕ್ಕಿ ತಿಂದ ಬೆಳದ್ಯಾವ.ಇಲ್ಲಿ ಸಮೊಶ,ಜೆಲಿಬಿ,ಪರಾಟ ಯಾರಿಗೆ ಹಿಡಸುತ್ತೆ ಹೇಳಿ?.ನಮ್ಮವ್ವ ಇಲ್ಲಿ ಬಂದ್ಯಾಗ ಹೆಂಗ ಇರ್ತಿಪ ಇಲ್ಲಿ ಇಂತದೆಲ್ಲಾ ತಿಂದು ಅಂತ ಕೇಳಿದ್ಲು ಅಂದ್ರೆ ನೀವ್ವೆ ಯೊಚನೆ ಮಾಡಿ!!!.ಇನ್ನು vegatarainಅಂದ್ರ ಇಲ್ಲಿ ಸಿಗೋದು ಎರಡು-ಮೂರು ಪಲ್ಲ್ಯೆ.ಪನೀರ,ಇಲ್ಲಿ ಎಲ್ಲಾ ಪಲ್ಲೆದ್ಯಾಗ ಸರ್ವಾಂತ್ರಯಾಮಿ,ಅದು ಬಿಟ್ಟ್ರೆ ಅಲೂ-ಗೊಬಿ....ಮೂರನೆ option ದಾಲ..ದಾಲನ್ಯಾಗ ಕಾಲಿ ದಾಲ (ದಾಲ್ ಮಖನಿ),ಪೀಲಿ ದಾಲ(ತೊಗರಿಬೇಳೆ),ಮೂಂಗ ದಾಲ,ಚನ್ನೆ ಕಿ ದಾಲ ಅಂತ ಎನೆನೋ ಸಿಗತವೆ ಇಲ್ಲಿ.ಪನೀರ್,ಅಲೂ, butterರೊಟಿ/ರೊಟಿ ತಿಂದ ತಿಂದ ಹೊಟ್ಟೆ ಬ್ಯಾರೆ ಸಿಕ್ಕಾಪಟ್ಟೆ ಬಂದುಬಿಟ್ಟದ.ಎನ ಮಾಡಿದ್ರು ಸಣ್ಣಗ ಅಗಾಗ ಸಾದ್ಯವಿಲ್ಲ ಅನಸಾಕ್ಕತ್ತೈತಿ.ಇಲ್ಲಿ ಜನ ದಕ್ಷಿಣ ಭಾರತದವರು ಅಂದ್ರ ಬರೆ ದೊಸೆ ,ಇಡ್ಲಿ,ವಡನೂ ಊಟದಲ್ಲಿ ತಿಂತಾರೆ ಅಂತ ತಪ್ಪು ಕಲ್ಪನ ಇದ.ನಾನೇ ಎಷ್ಟೋ ಜನಕ್ಕೆ ಅವೆಲ್ಲ ನಾಷ್ಟದಲ್ಲಿ ಮಾತ್ರ ತಿನ್ನೊದು ಅಂತ ತಿಳಿ ಹೇಳಿದನಿ. ...
ಮುಂದಿನವಾರ ಮುಂದುವರಿವುದು.......