Sunday, April 29, 2007

ಚಪ್ಪಲಿಯ ಪ್ರಹಸನ

(ಹಿನ್ನಲೆ:ನಾನು, ಮೈಸೂರಿನವರಾದ ಗಿರಿ ಅವಿನಾಶ ಮತ್ತು ಗುರಂಗಾವದ ರಿಷಿ ಜೊತೆ ಮೈಸೂರ ಸುತ್ತಾಡುತ್ತಾ ಇದ್ದೆವು. ಮೈಸೂರ ಅರಮನೆ ಅವರಣದಲ್ಲಿರುವ ಚಪ್ಪಲಿ ಸ್ಟ್ಯಾಂಡಿನ ಸ್ಠಳ... ಅರಮನೆ ಒಳಭಾಗವೆಲ್ಲಾ ನೋಡಿ ಈ ಸ್ಥಳಕ್ಕೆ ಬಂದೆವು.)

'ಎಲ್ಲಯ್ಯಾ ನನ್ನ ಚಪ್ಪಲಿ? ನಾವು ನಾಲ್ಕು ಜೊತೆ ಚಪ್ಪಲಿಗೆ ಟೊಕನ್ ತಗೊಂಡಿದ್ವಿ.ಈಗ ನೋಡಿದರೇ ಮೂರು ಜೊತೆ ವಾಪಸ್ಸು ಕೊಡ್ತಾ ಇದೀಯಾ.ಇಲ್ಲಿ ಯಾಕೆ ಕೆಲ್ಸಾ ಮಾಡ್ತಾ ಇದೀಯಾ?' ಅಂತ ಅವಿನಾಶ ಚಪ್ಪಲಿ ಕಾಯುವವನ ಜೊತೆ ವಾದ ಮಾಡ್ತಾ ಇದ್ದ.ಚಪ್ಪಲಿ ಕಾಯುವವನ 'ಸೋಮಿ, ನಿಮ್ಮ ಕಾಲು ಹಿಡಕೋತಿನಿ, ಹೆಂಗಾರ ಅಡ್ಜುಸ್ಟ್ ಮಾಡಿಕೊಳ್ಳಿ' 'ಅಡ್ಜುಸ್ಟ್ ಹೇಗೆ ಮಾಡಕೊಳ್ಳೊದು? ನೀ ಇರ್‍ಓದೇ ಯಾಕೆ ಇಲ್ಲಿ? ನಿನಗೆ ಕಾಸು ಕೊಡದು ಚಪ್ಪಲಿ ಕಾಯೊಕೆ ತಾನೆ? ನಾಲ್ಕು ಜೊತೆಯಲ್ಲಿ ಕಾಸ್ಟ್ಲಿಯಿರೋ ನಂದೇ ಚಪ್ಪಲಿ ಯಾಕೆ ಕಳಿಬೇಕು...ಕಳದರೇ ಎಲ್ಲಾ ಜೊತೆ ಕಳಿಬೇಕು' 'ಇಲ್ಲೇ ಮೇಲಿನ ಸಾಲಿನಲ್ಲಿ ಇಟ್ಟಿದ್ದೆ. ಯಾರೋ ಹುಡಗರು ಎತ್ಕೊಂಡು ಹೋದ್ರು....'
ಅವಿನಾಶ ಒಳಗಡೆ ಹೋಗಿ ಚಪ್ಪಲಿಗಳ ಸಾಗರದಲ್ಲಿ ತನ್ನ ಚಪ್ಪಲಿ ಹುಡಕಲು ಶುರು ಮಾಡಿದ... ಜೊತಗೆ ಇದ್ದ ನಾವು ಅವನಿಗೆ ಸಹಾಯ ಮಾಡತೊಡಗಿದೆವು. ನನಗೆ ಮತ್ತು ಗಿರಿಗೆ ಚಪ್ಪಲಿ ಮಾತ್ರ ಕದ್ದೊದಿದಾರೆ ಅಂತ ಖಂಡಿತವಾಗಿ ಅನಿಸತೊಡಗಿತು.ಇದೇ ಸಮಯದಲ್ಲಿ ಒಂದು ಅಂಧ್ರದ ಗ್ಯಾಂಗು ತಮ್ಮ ಎರಡು ಜೊತೆ ನೈಕೆ ಶೊಸ್ ಕಾಣ್ತಾ ಇಲ್ಲಾ ಅಂತ ಹುಡಕಲು ಶುರು ಮಾಡಿದಾಗ,ಅವಿ ಅವರ ಜೊತೆ ಸೇರಿ ಮತ್ತೆ ಗಲಾಟೆ ಶುರು ಮಾಡಿದ.ಆಗ ಅಲ್ಲಿದ್ದ ಒಬ್ಬ ಖಾಕಿ ಮೀಸೆ ಬಂದು 'ಗಲಾಟೆ ಯಾಕೆ? ' ಅಂದದೇ ತಡ,ಚಪ್ಪಲಿ ಕಳೆದುಕೊಂಡು ಸಿಟ್ಟಿನಲ್ಲಿ ಇದ್ದ ಅವಿ,'ಇಲ್ಲೇನು ನೀವು ಅಲ್ಲಾಡಸಕೊಂಡು ಡ್ಯೂಟಿ ಮಾಡ್ತಾ ಇರೋದು? ಅಂತ ಮರ್ಮಕ್ಕೆ ತಾಗುವಂತೆ ಮಾತಾಡಿ,'ನಾನು ಬೇರೆಯವರ ಚಪ್ಪಲಿ ಎತ್ಕೋಂಡು ಹೋಗತೀನಿ.' ಮೀಸೆ,'ಆದೇಗೆ ಎತ್ಕೋಂಡು ಹೊಯಿತೀಯಾ? ನೀನು ಯಾರು?,ಎತ್ತ ಅಂತ?' ಕುಲಗೋತ್ರ ವಿಚಾರಿಸೋಕೆ ಬಂದ. ಅದಕ್ಕೆ ಸೊಪ್ಪು ಅವಿ ಸೊಪ್ಪು ಹಾಕದೇ ನಾನು ಮೈಸೂರಿನವನೇ ಅಂತ ಗುರುಗುಟ್ಟಿ ಗಲಾಟೆ ಮುಂದುವರಿಸಿದ. 'ಇಲ್ಲಿ ಗಲಾಟೆ ಮಾಡಬೇಡಿ.ನಮ್ಮ ಸಾರ್ ಹತ್ರ ಕರೆದುಕೊಂಡು ಹೋಗತಿನಿ, ಅಲ್ಲಿ ಕಂಪ್ಲೇಂಟ ಕೊಡಿ' ಅಂತ ಮೀಸೆ ಹೇಳಿ ಅಲ್ಲಿಗೆ ಕರೆದುಕೊಂಡು ಹೊದಾಗ, ಆ ಮೀಸೆಯ ಸಾರ್, ಅರಮನೆ ಕಚೇರಿಯಲ್ಲಿ ದೂರು ಕೊಡಿ, ಅವರು ಆ ಕೆಲಸದವನನ್ನ ವಿಚಾರಿಸಿಕೊಳ್ಳತಾರೆ ಅಂತ ನಮ್ಮನೆಲ್ಲಾ ಸಾಗಹಾಕಿದ. ಕಚೇರಿಯಲ್ಲಿ ಅಂಧ್ರದ ಗ್ಯಾಂಗನಲ್ಲಿರುವ ಅಮ್ಮಾಯಿ ಅಲ್ಲಿರುವ ಅಫೀಸಿರ್ ಜೊತೆ ಸಿಕ್ಕಾಪಟ್ಟೆ ವಾದ ಮಾಡಿ ಅವಿನಾಶಗೆ ಪೈಪೋಟಿ ಕೊಟ್ಟಳು. ಅಧಿಕಾರಿ ಆ ಕೆಲಸಗಾರನನ್ನು ಕರೆಸಿ, 'ನಿನ್ನನ್ನು ಡಿಸಮಿಸ್ ಮಾಡಿಸಿತೀನಿ,ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಿದರೂ ಮತ್ತೆ ಇಲ್ಲೆ ಬಂದು ಸೇರಿ ನನ್ನ ಪ್ರಾಣ ಇಂತೀರಾ. ಸರಿಯಾಗಿ ಕೆಲ್ಸ ಮಾಡೋಕೆ ಬರೊಲ್ವಾ? ಕೌಂಟರನಲ್ಲಿ ಕತ್ತೆ ಕಾಯಿತಾ ಇರತಿಯಾ? ಬೊ.... ಮಗನೇ' ಅಂತಾ ತನ್ನ ಬಿ.ಪಿ. ಬೇರೆ ರೈಸ್ ಮಾಡ್ಕೋಂಡ ಉಗಿತ ಮುಂದುವರಿಸಿದ. ಇದೇ ಸಮಯದಲ್ಲಿ ಈ ಪ್ರಹಸನಕ್ಕೆ ಮಂಗಳೂರಿನ ಕಡೆ ಮಾಣಿ ಎಂಟ್ರಿ ಕೊಟ್ಟು,'ಎಂಥ ಮಾರಾಯ,ಎಂಥ ಕೆಲಸ ಅಗೊಹೊಯಿತು,ಶೂಸ್ ತಕ್ಕೊಂಡು ೨ ವಾರ ಬೇರೆ ಅಗಿರಲಿಲ್ಲ...ಕದ್ದುಕೊಂಡು ಹೋಗಿದ್ದಾರೆ,ಇವರದೇಲ್ಲಾ ಇಲ್ಲೊಂದು ಗ್ಯಾಂಗು ಇದೆ,ಇದೇನು ಅರಮನೆ ಅವರಣವಾ? ಇಲ್ಲಾ ಕಳ್ಳರ ಮನೇನಾ? ಬರೆಗಾಲಲ್ಲಿ ನಡೆಯುಂತೆ ಅಯಿತಲ್ಲಾ' ಅಂತ ಒಂದೇ ಸಮನೆ ಪಿರಿಪಿರಿಯಾಗಿ ಅಧಿಕಾರಿಗೆ ಹೇಳತೊಡಗಿದ. ನಾವೆಲ್ಲ ಸೇರಿದರಿಂದ ಅಧಿಕಾರಿ ಕೊಣೆ ತುಂಬಿ ಹೋಗಿ,ಅಧಿಕಾರಿ ಆ ಕೆಲಸದವನಿಗೆ 'ನಿನ್ನ ೨ ವರ್ಷದ ಸಂಬ್ಳ ಕಟ್ ಮಾಡಿದ್ರು ಆ ಕಾಸು ಗಿಟ್ಟೊಲ್ಲಾ, ಯಾರಿಗೆ ಕೊಟ್ಟಿದೀಯಾ ಹೇಳು'ಅಂದಾಗ ಆತ ಕಪ್ಪೆ ವಟಗುಟ್ಟುವಂತೆ ' ಯಾರ್ರೊ ಹುಡಗರು ಎತ್ತ್ಕೊಂಡರು,ಎನೋ ಅಗಿಬಿಟ್ಟಿತ್ತು 'ಎಂದು ಹಳೇ ಪ್ಲೇಟ ಹಾಕತೊಡಗಿದ. ಹಿಂದಿನ ದಿನ ಜಾತ್ರೆಯ ಕಾರಣದಿಂದ ಮೇಲುಕೋಟಯ ಚಲುವನರಸಿಂಹ ದರ್ಶನವಾಗದ ಹತಾಶೆ,ಬಲಮುರಿಯಲ್ಲಿ ಅಟ್-ಲಿಸ್ಟ ಈಜು ಮಾಡಲು ಇರದಷ್ಟು ಇಲ್ಲದ ನೀರಿನ ಮೇಲಿನ ತಾಪ, ಕೆಅರ್ ಎಸ್ ಗೆ ಕಳೆದ ೫೧ ದಿನಗಳಿಂದ ಬಂದ್ ಮಾಡಿದ ಕೋಪ,ಎಲ್ಲ ಸೆರಿ ಅವಿಗೆ ಪಿತ್ತ ನೆತ್ತಿಗೆ ಏರಿ, 'ಮಗನೇ,ಸಾವಿರಾರು ರೂಪಾಯಿ ಚಪ್ಪಲ್ಲು/ಶೂಸ್ ಮಾತ್ರ ಹೇಗೆ ಕದ್ದುಹೊಯಿತು? ಬಾಕಿ ಎಲ್ಲಾ ಯಾಕೆ ಕಳೇದಿಲ್ಲಾ... ನೀವೆಲ್ಲಾ ಸೇರಿ ಚೊರ-ಬಜಾರನಲ್ಲಿ ಮಾರಿ ಕಾಸು ಮಾಡತಾ ಇದೀರಾ...ನಿನ್ನ ಸುಮ್ನೆ ಬಿಡಬಾರದು' ಅಂತ ಎನೇನು ಸೇರಿಸಿ ಭಾವಗೀತೆಯಂತೆ ಆತನಿಗೆ ಸರಿಯಾಗಿ ಇನ್ನೊಮ್ಮೆ ಉಗಿದ...ಈ ಬಯ್ಗುಳದ ಭಾವಗೀತೆಗೆ ಕೊರಸ್ ಆಗಿ ಆಂದ್ರದ ಅಮ್ಮಾಯಿ ಮತ್ತು ಮಂಗಳೂರಿನ ಮಾಣಿ ಜೊತೆ ಕೊಟ್ಟರು.
ಇಂತಿಪ್ಪ ಘಟನೆಗಳು ನಡೆದ ಮೇಲೆ ,ಅಲ್ಲಿರುವ ಅಧಿಕಾರಿ 'ನೀವೆಲ್ಲಾ ಒಂದು ಅರ್ಜಿ ಬರೆದುಕೊಡಿ,ನಾವು ಅದರೆ ಮೇಲೆ ವಿಚಾರಣೆ ಮಾಡಿ ,ಆತನ ಸಂಬಳದಿಂದ ಕಾಸು ಕಟ್ ಮಾಡಿ ನಿಮಗೆ ಪೊಸ್ಟ್ ಮೂಲಕ ಕಳಿಸಿಕೋಡುತ್ತೆವೆ'ಅಂತ ಹೇಳಿದಾಗ ಆಂದ್ರದ ಅಮ್ಮಾಯಿ "How much time it will take?" ಕೇಳಿದಕ್ಕೆ ಒಂದು ವಾರ ಅಗುತ್ತೆ ಅಂದಾಗ ,ಸರ್ಕಾರಿ ಕೆಲಸ ದೇವರ ಕೆಲಸ...ದೇವರ ಕೆಲಸ ನೈವದ್ಯ ಕೊಟ್ಟು ಮೇಲೂ ಬಸವನಹುಳು ತರಾ ಸಾಗುವದನ್ನ ಕಂಡುದನ್ನ ಕಂಡಿದ್ದ ನನಗೆ ,ಗಿರಿಗೆ ಚಪ್ಪಲಿಯಂತು ಹೋಯಿತು...ಇನ್ನು ನಮ್ಮ ದುರ್ವಾಸಿ ಮುನಿಗಳ ಅಪರಾವತಾರದಂತಿರುವ ಯಾವಗಲಾದರೂ ಬರ್ಲಿ ಅಂತ ಹೊರಗಡೆ ಕಾಯಿತಾ ನಿಂತೆವು...೧೦-೧೫ ಅವಿ ಬಂದು " we should teach him a lesson " ಮುಂದೆ ಬರುವವರಿಗೆ ತೊಂದರೆ ಅನುಭವಿಸಬಾರದು ,ನಮ್ಮ ಮೈಸೂರಿಗೆ ಕೆಟ್ಟ ಹೆಸ್ರು ಬರಬಾರದು' ಅಂತ ಹೇಳಿ ಕಾರಿನತ್ತ ನಡೆಯುತ್ತಾ.. " Mostly ಚಪ್ಪಲಿ ಸ್ಟಾಂಡಿನಲ್ಲಿ ಚಪ್ಪಲಿ ಕಳೆದುಕೊಂಡ ಮೊದಲ ಬಕರಾ ನಾನೇ ಇರಬೇಕು ಅಂತ ಹೇಳಿ ಗಿರಿ ಮನೆಯತ್ತ ಕಾರು ನಡೆಸಿದ... ಕಾರಿನಲ್ಲಿ ಅವಿ " Aisa pehle baar huwa hain 17-18 saalo mein....." ಅಂತ ಗುನಗುನಿಸುತ್ತಾ ಕಾರು ಮನೆಯತ್ತ ಚಲಾಯಿಸಿದ.
ಆವಿ ಇನ್ನುವರಗೆ ತನ್ನ ಚಪ್ಪಲಿಯ ಕಾಸು ಯಾವಗ ಬರುತ್ತೆ ಅಂತ ಕಾಯಿತಿದಾನೆ.

Thursday, April 12, 2007

ಹನಿಗವನಗಳು

ಅರಳು-ಮರಳು

ಅರವತ್ತರ ಅರಳು ಮರಳಿನ ಮೂರ್ತಿ
ಇವರಿಗೇ ಗೊತ್ತಿಲ್ಲವೇ ರಾಷ್ಟ್ರಗೀತೆಯ ಕೀರ್ತಿ ?
ಬೆಳಿಸಿಕೊಳ್ಳಿ ,ನಾಡಿನ ನೆಲ-ಜಲದ ಬಗ್ಗೆ ಪ್ರೀತಿ....


ಗೊಸುಂಬೆಗಳು....

ನಮಗೆಕಪ್ಪಾ ಕಾವೇರಿ ನೀರು
ನಾವು ಕುಡಿಯೋದು ಬೀಸಿಲೇರಿ ನೀರು/ಬೀರು
ಅನ್ನೊ ಗೊಸುಂಬೆಗಳ ನಡುವೆ
ನ್ಯಾಯ ಅನ್ನೊದು ಮರೀಚಿಕೆಯೇ!!!!!!

ಮಳಿ.....

ಎಲ್ಲಿ ಹೋಗಿದಿ ಮಳಿ
ಒಣಗ್ಯಾವ ಹೊಲದಾನ ಬೆಳಿ
ಬತ್ತ್ಯಾವ ಊರಿನ ಹೊಳಿ
ತಪ್ಪ್ಯಾವ ರೈತರ ಜೀವನದ ಹಳಿ
ಅಡು ಭೂತಾಯಿ ಜೊತೆ ಓಕುಳಿ
ಆಗ ನೋಡು ಎಲ್ಲಾರ ಮಕದ್ಯಾಗ ಕಳಿ.....

Sunday, April 08, 2007

ತೇಜಸ್ವಿಯವರಿಗೊಂದು ಭಾವಪೂರ್ಣ ಶ್ರಧ್ದಾಂಜಲಿ........

ಮಾಯಾಲೋಕದ ಕಿಂದರಜೋಗಿ
ಸಹಜಕೃಷಿಯ ಹಠಯೋಗಿ
ನಿಗೂಡ ಜಗತ್ತಿನ ಮಾಯಾವಿ
ನಮ್ಮೆಲ್ಲರ ಪ್ರೀತಿಯ ಸಾರ್ ,ತೇಜಸ್ವಿ

ಅಡು ಮುಟ್ಟದ ಸೊಪ್ಪಿಲ್ಲ
ತೇಜಸ್ವಿ ಬರೆಯದ ವಿಷಯವಿಲ್ಲ
ಪಶ್ಚಿಮ ಘಟ್ಟದಲ್ಲಿ ತಿರುಗದ ಜಾಗವಿಲ್ಲ
ಸಿದ್ದರೀತಿಯ ಮಾದರಿಯಲ್ಲಿ ಬರೆಯಲಿಲ್ಲ

ಹುಚ್ಚು ಹಿಡಿಸಿದ ಕರ್ವಾಲೋ
ನೀವು ಹಿಡಸದಿದ್ದರೆ ನ್ಯಾಸ್ಟಿಪೇಲೋ
ಕೋಲಾಜ್ ಮೂಲಕ ಮಾಯಾಲೋಕ ತೋರಿದ ಚಿತ್ರಗಾರ
ಕಾಡು,ನಾಡಿನ ಹಕ್ಕಿಗಳ ಪರಿಚಯಿಸಿದ ಪೊಟೊಗ್ರಾಪರ

ಏಲಕ್ಕಿಯ ಕಾಳಸಂತೆಯ ಜುಗಾರಿಕ್ರಾಸ್
ತಬರನ ಕತೆ, ಅಬಚೂರಿನ ಪೊಸ್ಟಾಪಿಸ್
ಘಾಟಿಯ ರಗಳೆಯ ಖುದ್ದೂಸ್ ಎಕ್ಸಪ್ರೆಸ್
ಅಣ್ಣನ ನೆನಪಿನಲ್ಲಿ ಹಾಸುಹೊಕ್ಕಾಗಿರುವ ಶಾಮಣ್ಣನ ಬೈಕು ಪ್ರಿನ್ಸ್

ಹಾರುವ ಓತಿ ಬೆನ್ನು ಹತ್ತಿದ ಮಂದಣ್ಣ
ಹಲವಾರು ವೃತ್ತಿ ಮಾಡಿದ ಕರಾಟೆ ಮಂಜಣ್ಣ
ಜೀವದ ಗೆಳಯರಾದ ರಾಮದಾಸ್,ಶಾಮಣ್ಣ
ಎಲ್ಲಾ ಬಿಟ್ಟು ಮೌನವಾಗಿ ಎಲ್ಲಿ ನಡೆದಿರೇಣ್ಣ?

ಮೂಡಿಗೇರೆ ತೋಟವೀಗ ಅಕ್ಷರಶ್:ನಿರುತ್ತರ
ಅಲ್ಲೀಗ ,ಮೌನವಂದೇ ನಿರಂತರ!
ಕುವೆಂಪು,ಕಾರಂತರ ಕಲಾಸಂಗಮವಾಗಿರುವ ಪೂರ್ಣಚಂದಿರ
ತೇಜಸ್ವಿಯವರ ಲೇಖನ,ಕೃತಿಗಳೆಲ್ಲ ಅಜರಾಮರ!