Wednesday, November 01, 2006

ಸುವರ್ಣ ಕರ್ನಾಟಕ ೫೦

ಇದು ಕರ್ನಾಟಕದ ಜಿಲ್ಲೆಗಳನ್ನು ಮತ್ತು ಆ ರಾಜ್ಯದ ಹಿರಿಮೆಯನ್ನು ತೊರಿಸುವ ಪ್ರಯತ್ನ..



ಬದಾಮಿಯ ಮೆಣಬಸದಿಗಳು:
ಚಾಲುಕ್ಯರ ಶಿಲ್ಪಕಲೆಯ ವೈಭವನ್ನು ಕಾಣಲು ಬದಾಮಿ,ಐಹೊಳೆ,ಪಟ್ಟದಕಲ್ಲು ಮತ್ತು ಅಣ್ಣ ಬಸವಣ್ಣನ ಕೂಡಲಸಂಗಮಗಳಿಗೆ ಬಾಗಲಕೋಟೆ ಜಿಲ್ಲೆ ಪ್ರಸಿದ್ದ.



ಕೆಂಗಲ್ ಹನುಮಂತರಾಯರ ಕನಸಿನ ಕೂಸು:
ಬೆಂಗಳೂರು ಎಂದು ನಿನ್ನೆ ಮರುನಾಮಕರಣಗೊಂಡ ಸಿಲಿಕಾನ ಸಿಟಿಗೆ ಸುಮಾರು ೫೦೦ ವರ್ಷಗಳ ಇತಿಹಾಸವಿದೆ. ಉದ್ಯಾನಗಳ ನಗರ ಎಂದು ಇದಕ್ಕೆ ಇನ್ನೊಂದು ಹೆಸರು.


ಶೊಲೆಯ ಸುಪ್ರಸಿದ್ದ ರಾಮಗಡ:
ಕಿತ್ನೆ ಆದ್ಮಿ ಥೆ!!!! ಎಂದು ಗಬ್ಬರ ಡೈಲಾಗನಿಂದ ದೇಶದಾದಂತ್ಯ ಪ್ರಸಿದ್ದವಾದ ಸ್ಥಳ.

ಬೆಳವಳದ ರಾಣಿ ಚೆನ್ನಮ್ಮಾ:
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣಲ್ಲಿ ಮೆಟ್ಟಬೇಕು...
ಬದುಕಿದು ಜಟಕಾ ಬಂಡಿ ,ಇದು ವಿದಿಯೋಡಿಸುವ ಬಂಡಿ
....


ವಿಜಯನಗರದ ನೆನಪು!!!!!
ಕೆಳಿಸಿದೆ ಕಲ್ಲುಕಲ್ಲಿನಲ್ಲಿ ಹಂಪೆಯ ನುಡಿ.......
ಹಂಪೆಯ ಈ ರಥ ಮತ್ತು ದೇವಾಲಯಕ್ಕೆ ಎನು ವಿವರಣೆ ಬೇಕಾಗಿಲ್ಲ.
ಇ ಸ್ಥಳ ನೊಡಿದ ಮೇಲೆ ಹಾಳು ಹಂಪೆಯ ನೆನಪು ಕಾಡತಾನೆ ಇರುತ್ತೆ...

ಬೀದರಿನ ಕೊಟೆ



ಬಿಜಾಪುರದ ಗೊಲಗುಂಬಜ್.(ಹೇ..ಹೇ..ಹೇ..ಹೇ..ಹೇ..ಹೇ..ಹೇ..)-
ಮಸೀದೆಗಳಿಂದ ಗುಂಬಜಗಳಿಂದ ಊರು....ಜೋಳದ ರೊಟ್ಟಿ ಚಟ್ನಿಗೆ ಪ್ರಸಿದ್ದ.




ಶೃಂಗೇರಿ ಮತ್ತು ಹೊರನಾಡು



ಚಿತ್ರದುರ್ಗದ ಕಲ್ಲಿನ ಕೊಟೆ...ಒಬ್ಬವನ ಕೊಟೆ.



ದಾವಣಗೇರೆಯ ಬೆಣ್ಣೆ ದೊಸೆ :))))



ಯಕ್ಷಗಾನ ಥಾ ,ಥೈ........


ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ......ಪಕ್ಕದಲ್ಲೆ ಇರೋದು ಸಾದನಕೇರಿ.......


ಗದಗ



ಗುಲಬುರ್ಗಾದ ಮಸೀದೆ.



ಬೆಲೂರ ಚೆನ್ನಕೇಶವ ದೇವಾಲಯ



ಕನಕದಾಸರು


ಕನ್ನಡಿಗರ ತಾಯಿ ಕಾವೇರಿ.



ಕೊಟಿ ಲಿಂಗ- ಕೋಲಾರ

ತುಂಗ ಪಾನ ಗಂಗಾ ಸ್ನಾನ



ಮಂಡ್ಯ



ರಾಯಚೂರ ಥರ್ಮಲ್ ಘಟಕ


ಜೋಗದ ಸಿರಿ ಬೆಳಕಿನಲ್ಲಿ ,ತುಂಗೆಯ ತೆನೆ ಬಳುಕಿನಲ್ಲಿ


ದೇವರಾಯನ ದುರ್ಗ


ಉಡುಪಿಯ ದೇವಸ್ಥಾನ



ಕನ್ನಡ ನಾಡಿನ ಕರಾವಳಿ... ಕನ್ನಡ ನಾಡಿನ ಪ್ರಭಾವಳಿ.....



ಕನ್ನಡದ ಪ್ರಖ್ಯಾತ ವ್ಯಕ್ತಿಗಳು..


ಸುವರ್ಣ ಕನ್ನಡ ರಾಜ್ಯೊತ್ಸವದ ಶುಭಾಶಯಗಳು ...ಎಲ್ಲಾದರು ಇರು.. ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು!

ಕನ್ನಡವೇ ಸತ್ಯ... ಕನ್ನಡವೇ ನಿತ್ಯ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

ಚಿತ್ರಗಳ ಕೃಪೆ:Jnanesh.C.M

Tuesday, October 31, 2006

ಹಾರ್ವಡ್ ವಿಶ್ವವಿದ್ಯಾಲಯ




ಮೇಲಿನಿದು ಹಾರ್ವಡ್ ಅಜ್ಜನ ಪ್ರತಿಮೆ..ಸ್ಥಾಪಿತವಾಗಿರೊದು ಹಾರ್ವಡ್ ವಿಶ್ವವಿದ್ಯಾಲಯ ಬೊಸ್ಟನ ಅವರಣದಲ್ಲಿ.USAನಲ್ಲಿ ಈ ವಿಶ್ವವಿದ್ಯಾಲಯಕ್ಕೆ ತುಂಬ ಪ್ರಸಿದ್ದಿ..ಅಮೆರಿಕಾಗೆ ಎಳು Presidentಗಳನ್ನ,೪೦ ಜನ ನೊಬೆಲ್ ಪ್ರಶಸ್ತಿ ಪಡೆದ ಸಾಹಿತಿಗಳನ್ನ ಕೊಟ್ಟಿರೋ ಹಿರಿಮೆ ಈ ವಿಶ್ವವಿದ್ಯಾಲಯದು.
ಜಾನ್ ಹಾರ್ವಡ್ ವಿಶ್ವವಿದ್ಯಾಲಯದ ಸ್ಥಾಪಕ..೧೬೩೮ರಲ್ಲಿ ಹಾರ್ವಡ್ ತೀರಿಕೊಂಡಾಗ ಅತನ Library ಮತ್ತೆ ಎ ಎಸ್ಟಟನ್ನ ಈ ವಿಶ್ವವಿದ್ಯಾಲಯಕ್ಕೆ ದಾನ ಮಾಡಿದ ಹಿರಿಮೆ ಈತನದು..ಈತ ಆ ಕಾಲದ ಮಂತ್ರಿ ಅಗಿದ್ದ ಅನ್ನೊದು ಇನ್ನೊಂದು ವಿಶೇಷ...
ಸುಮಾರು ೧೫೦೦೦ ವಿದ್ಯಾರ್ಥಿಗಳಿರೊ ಈ ವಿಶ್ವವಿದ್ಯಾಲಯಕ್ಕೆ ೩೫೦ ವರ್ಷಗಳ ಭವ್ಯ ಇತಿಹಾಸವಿದೆ.ಚಿತ್ರವನ್ನು ಗಮನವಿಟ್ಟು ನೊಡಿದರೆ ಅಜ್ಜನ ಎಡಗಾಲಿನ ಶೊಎ ಬಂಗಾರದ ಬಣ್ಣಕ್ಕೆ ಮರ್ಪಾಡು ಆಗಿರೊದನ್ನ ಕಾಣಬಹುದು..ಸುಮಾರು ವರ್ಷಗಳಿಂದ ಜನ ಇಲ್ಲಿ ಬಂದು ಈತನ ಪಾದ ಸ್ಪರ್ಶ ಮಾಡಿ ಮಾಡಿ ಹೀಗಾಗಿದೆ ಅಂತ ಇಲ್ಲಿ ಜನರ ಹೇಳಿಕೆ ಮತ್ತು ಅದು ಸತ್ಯ ಕೂಡ...

ಬೊಸ್ಟನಗೆ ಬಂದ್ರೆ ಇಲ್ಲಿ ತಪ್ಪದೆ ಹಾಜರಿ ಹಾಕಿ...

Monday, August 07, 2006

ಉತ್ತರ ಭಾರತದ ಬವಣೆಗಳು-2

ಎಲ್ಲಾ ಕಡೆ ಮಳೆಗಾಲ,ಚಳಿಗಾಲ,ಬೇಸಿಗೆ ಕಾಲಗಳು ಇದ್ರ ಇಲ್ಲಿ ಇರೋದು ಬೇಸಿಗೆ ಕಾಲ ಮತ್ತು ಚಳಿಗಾಲ.ಇಲ್ಲಿ ಜನಕ್ಕ ಮಳೆಗಾಲ ಅಂದ್ರ ಗೊತ್ತ ಇಲ್ಲ.2-3 ಮೂರು ದಿನ ಯಾರೊ ಅತ್ತಾರಂಗ ಇಲ್ಲಿ ಮಳಿ ಅಗುತ್ತ.ಅದನ್ನ ನೋಡಿ ಇಲ್ಲಿ ಜನ ಭಾರಿ ಮಳೆಯಾಯಿತು ಅನ್ನುಹಾಂಗ ಮಾತಡತಾರ. ಇವರನ್ನ ನಮ್ಮ ಕಡೆ ಇರೊ ಸಿರ್ಸಿ,ಖಾನಪುರ ಕಡಿಗ ಬಿಟ್ಟ್ರ ಮಳೆ ಎನು ಅಂಥ ಅರ್ಥ ಅಗುತ್ತ್ಯ. ಇನ್ನು ಬ್ಯಾಸಗ A/C ಇಲ್ಲಾ ಅಂದ್ರ ಇಲ್ಲಿ ಕೆಲ್ಸಾನ ನಡಿಯೊಲ್ಲ. ಅದು ಅಲ್ದ ಸಿಕ್ಕಾಂಗ Powercut ಬೇರೆ. Power backup ಎಸ್ಟು ಘಂಟೆ ಕೆಲ್ಸಾ ಮಾಡುತ್ತ??ಕಳೆದ ವರುಷ ನಮ್ಮ ಪ್ರದೀಪ ರಾತ್ರಿಯಲ್ಲಾ ಯಾವ ಪಾರ್ಕನಲ್ಲಿ ಚಲೊ ಗಾಳಿ ಬರುತ್ತ,ಎಲ್ಲಿ ಮಲಗಿದರ ಅನಕೂಲ ಅನ್ನೊದನ್ನ PhD ತರಾ ಸಂಶೋದನೆ ಮಾಡಿದ್ದ.ಮೊದ್ಲು ಬಂದಾಗ ಇಲ್ಲಿ ನಾನು ನನ್ನ ದೊಸ್ತ ಒಬ್ಬ ಸೇರಿ ಬರಿ ಬನಿಯನ ಮೇಲೆ ಅಟೊನಲ್ಲಿ ಪೂರ್ತಿ ದೆಲ್ಲಿಯ ಗಲ್ಲಿ ಗಲ್ಲಿ ಸುತ್ತಹಾಕಿದಿವಿ ಇಲ್ಲಿ ಇರೊ ಸೆಖೆ ತಾಳಲಾರದ.ಇನ್ನು ಈ ವರುಷ ಅಂತು Heat waves ಸಿಕ್ಕಾಪಟ್ಟೆ ತ್ರಾಸ ಕೊಟ್ತು.45-47 Cನ್ಯಾಗ ಬಿಸಿಗಾಳಿ ಬರ್ರ ಅಂತ ಬಿಸಿದರ ಎಂತಾ ಗಟ್ಟಿ ಮನಶ್ಯಾ ಅದರು ಗ್ಯಾರೆಂಟಿಯಾಗಿ ತೆಲೆ ತಿರುಗಿ ಬಿಳತಾನ.ಇಂತಾ ಬಿಸ್ಲ ತಡಿಯ್ಯಾಕ ಸಿಗೊದು ಕೂಲ್ಡ್ರಿಂಕ್ಸು ಅದು ಬಿಟ್ಟ್ರ ಲಸ್ಸಿ.ಲಸ್ಸಿ ಸ್ವಾದ ಸವಿಬೇಕು ಅಂದ್ರ ನೀವು ಪಂಜಾಬಗೆ ಹೊಗಬೇಕು ನೋಡಿ. ಈ ಸುಡಗಾಡ ಬಿಸ್ಲ್ಯಾಗ ಲಸ್ಸಿ ಅಮೃತದಂತೆ ಇಲ್ಲಿ ಕೆಲ್ಸಾ ಮಾಡುತ್ತ. ಅದ್ರೆ ಇಲ್ಲಿ ತಿಳಿಮಜ್ಜಿಗಿ, ಎಳನೀರು ಸಿಗೋದು ಇಲ್ಲಾ ಅನ್ನೊದು ತುಂಬಾ ಬ್ಯಾಸರದ ವಿಚಾರ.45-47 C ಬಿಸ್ಲು ,Heat waves,ಬೇಸಿಗೆಯಲ್ಲಿ ಇರದ ವಿದ್ಯುತ್ತು ,ವಿದ್ಯುತ್ತ ಕದಿಯುವ ಚೋರರು,ಮೈಯಲ್ಲಾ ಸುರಿಯುವ ಬೆವರು ಎಲ್ಲಾ ಸೇರಿ ನಿಮಗೆ ಉತ್ತರಭಾರತವೆಂದರೆ ಯಾಕಪ್ಪ ಇಲ್ಲಿ ಬಂದ್ವಿ ಅನಸುತ್ತ.

Wednesday, August 02, 2006

ಉತ್ತರ ಭಾರತದ ಬವಣೆಗಳು-1

"ಯಾರಿಗೆ ಬೇಕು ಈ ಲೋಕ
ಬಿಸ್ಲೇ ಇದ್ರು ಸಹ್ಲಿಬೇಕ.... ....
ಚಳಿಯ ಇದ್ರೆ ಇಲ್ರೆಬೇಕ.... "


ಎನಪ್ಪಾ ಈ ಮನಸ್ಯಾ ಹಿಂಗೆಲ್ಲಾ ಎನೇನೋ ಹುಚ್ಚರಂಗ ಹಾಡಕತ್ತನ್ನ ಅಂತ ಗಾಬರಿ ಬಿಳಬೇಡ್ರಿ........ಉತ್ತರ ಭಾರತದ ಬಗ್ಗೆ ಯೊಚ್ನೆ ಮಾಡಿದಾಗ ಈ ರೀತಿ ಮನಸನ್ಯಾಗ ಎರಡು ಸಾಲು ನೆನಪಿಗೆ ಬಂತು.ಎಲ್ಲರೂ ಮಾಡದು ಹೊಟ್ಟಿಗಾಗಿ ,ಗೇಣು ಬಟ್ಟೆಗಾಗಿ ಎಂಬ ದಾಸರ ಪದದಂತೆ ನಾನು ೨ ವರ್ಷದ ಹಿಂದ ಹೊಟ್ಟೆಪಾಡಿಗಾಗಿ ಇಲ್ಲಿ ಬಂದಿಟ್ಟೆ. ಬಂದ ತಕ್ಷಣ ಮೊದ್ಲು ಗೊತ್ತಾದದ್ದು ಇಲ್ಲಿ ಹಿಂದಿ/ಹಿಂದಿ ಅಂಕಿಗಳು ಗೊತ್ತು ಇಲ್ಲಂದ್ರ ಜೀವನದ ಗಾಡಿ ಮುಂದು ಒಡೊಲ್ಲ ಅನ್ನೊದು.ಹಿಂದಿ ಎನೊ ಸರಿಯಾಗಿ ಬರಿತಿತ್ತು.ಅದ್ರೆ ಆ ಅಂಕಿಗಳು,ಸಂಖ್ಯೆಗಳು ಇನ್ನು ಅದ್ರು ನನ್ನ ತೆಲೆಕೆಡಸತಾವ(ಈಗ ಸರಿ ಸುಮಾರ್ರಾಗಿ ಬರತಾವೆ). ಅಮ್ಯಾಲ ಸಣ್ಣಗ ಗೊತ್ತು ಅಗ್ಯಾಕ ಶುರು ಅಯಿತು ಎನೆನೊ ಇಲ್ಲಿ ಕಳ್ಕೊತಾದೀನಿ ಅಂತ...
ಬೆಳಗಿನ ಟಿ/ಕಾಫಿಗೆ ಬಿತ್ತು ಖೊತ. ಇಗಲೂ ಬೆಳಿಗಿನ 5-6 ಗಂಟೆಗೆ ಚಾ ಸಿಗಬೇಕಂದ್ರ ಮನ್ಯಾಗ ಮಾಡಿ ಕುಡಿಬೇಕು.ಅದು ಬಿಟ್ರೆ officeನ್ಯಾಗ ಸಿಗೊ ಡಿಪ್ ಟೀನೇ ಗತಿ.ಇನ್ನು ಕಾಫಿ ಕುಡಿದು ನನಗೆ ದಶಕನ ಅಗೈತಿ ಅನಸುತ್ತ."ಆರಾಮ ಹರಾಮ ಹೈ" ಅಂತ ನಮ್ಮ ಗಾಂಧಿ ಮುತ್ತ್ಯ ಹೇಳಿದರೆ,ಇಲ್ಲಿ ಜನ ಅದನ್ನ ಸ್ವಲ್ಪ ತಿದ್ದುಕೊಂಡು "ಆರಾಮ ಹಮಾರ ಹೈ" ಅಂತ ತಿಳಕೊಂಡು ಅರಾಮಾಗಿ ಇರೊ ಸೊಂಬೇರಿಗಳು.ಜನ ಇಲ್ಲಿ ಸಾಮನ್ಯವಾಗಿ ಎಳೋದೆ 9-10 am ಹೊಡದ ಮ್ಯಾಲ...ನನಗಂತೂ ಬೆಳಬೆಳಗ್ಗೆ ಹೊಟ್ಟೆಗೆ ಎನು ಹಾಕಲಿಲ್ಲ ಅಂದ್ರ ತೆಲಿನ ಕೆಲ್ಸಾ ಮಾಡುದಿಲ್ಲ. ಇನ್ನು ಊಟದ ವಿಷ್ಯಕ್ಕೆ ಬಂದ್ರ ಅದರ ಬಗ್ಗೆ ಮಾತಡುದ ಬ್ಯಾಡ ಅನ್ಸುತ್ತೆ.ನಾನು ಜ್ಯೊಳದ ರೊಟ್ಟಿ ,ಕೆನಿ ಮೊಸ್ರು,ಎನಗ್ಯಾಯಿ ,ಉಪ್ಪಿಟ್ಟು ,ಅವಲಕ್ಕಿ ತಿಂದ ಬೆಳದ್ಯಾವ.ಇಲ್ಲಿ ಸಮೊಶ,ಜೆಲಿಬಿ,ಪರಾಟ ಯಾರಿಗೆ ಹಿಡಸುತ್ತೆ ಹೇಳಿ?.ನಮ್ಮವ್ವ ಇಲ್ಲಿ ಬಂದ್ಯಾಗ ಹೆಂಗ ಇರ್ತಿಪ ಇಲ್ಲಿ ಇಂತದೆಲ್ಲಾ ತಿಂದು ಅಂತ ಕೇಳಿದ್ಲು ಅಂದ್ರೆ ನೀವ್ವೆ ಯೊಚನೆ ಮಾಡಿ!!!.ಇನ್ನು vegatarainಅಂದ್ರ ಇಲ್ಲಿ ಸಿಗೋದು ಎರಡು-ಮೂರು ಪಲ್ಲ್ಯೆ.ಪನೀರ,ಇಲ್ಲಿ ಎಲ್ಲಾ ಪಲ್ಲೆದ್ಯಾಗ ಸರ್ವಾಂತ್ರಯಾಮಿ,ಅದು ಬಿಟ್ಟ್ರೆ ಅಲೂ-ಗೊಬಿ....ಮೂರನೆ option ದಾಲ..ದಾಲನ್ಯಾಗ ಕಾಲಿ ದಾಲ (ದಾಲ್ ಮಖನಿ),ಪೀಲಿ ದಾಲ(ತೊಗರಿಬೇಳೆ),ಮೂಂಗ ದಾಲ,ಚನ್ನೆ ಕಿ ದಾಲ ಅಂತ ಎನೆನೋ ಸಿಗತವೆ ಇಲ್ಲಿ.ಪನೀರ್,ಅಲೂ, butterರೊಟಿ/ರೊಟಿ ತಿಂದ ತಿಂದ ಹೊಟ್ಟೆ ಬ್ಯಾರೆ ಸಿಕ್ಕಾಪಟ್ಟೆ ಬಂದುಬಿಟ್ಟದ.ಎನ ಮಾಡಿದ್ರು ಸಣ್ಣಗ ಅಗಾಗ ಸಾದ್ಯವಿಲ್ಲ ಅನಸಾಕ್ಕತ್ತೈತಿ.ಇಲ್ಲಿ ಜನ ದಕ್ಷಿಣ ಭಾರತದವರು ಅಂದ್ರ ಬರೆ ದೊಸೆ ,ಇಡ್ಲಿ,ವಡನೂ ಊಟದಲ್ಲಿ ತಿಂತಾರೆ ಅಂತ ತಪ್ಪು ಕಲ್ಪನ ಇದ.ನಾನೇ ಎಷ್ಟೋ ಜನಕ್ಕೆ ಅವೆಲ್ಲ ನಾಷ್ಟದಲ್ಲಿ ಮಾತ್ರ ತಿನ್ನೊದು ಅಂತ ತಿಳಿ ಹೇಳಿದನಿ. ...
ಮುಂದಿನವಾರ ಮುಂದುವರಿವುದು.......




Friday, July 21, 2006

ಚಾಲುಕ್ಯರ ಬೀಡಿನಲ್ಲಿ, ಗಂಡುಮೆಟ್ಟಿದ ನಾಡಿನಲ್ಲಿ.




1) "ಹುಲಿಯು ಹುಟ್ಟಿತ್ತು ಕಿತ್ತೂರ ನಾಡ್ಯಾಗ
ಅಣ್ಣ ರಾಯಣ್ಣನೆಂಬ ಹುಲಿ ಸಂಗೋಳ್ಳಿ ಊರಾಗ"
.............................................................

2) "ಮಂಗ್ಯನ ಕುಲದವ ಸಂಗೋಳ್ಳಿ ರಾಯಣ್ಣ
ಟೊಂಗಿ ಟೊಂಗಿ ಜಿಗದ್ಯಾನ..............."
.................................................

ಮೇಲಿನ ಗೀಗೀ ಪದ(ಲಾವಣಿ)ಗಳಿಂದ ನಮ್ಮ ಸಂಗೋಳ್ಳಿ ರಾಯಣ್ಣನ ಬೆಳಗಾಂವ ಜಿಲ್ಲೆಯಾದಂತ್ಯ ಪ್ರಸಿದ್ದ. ಮೊದಲನೆ ಗೀಗೀ ಪದ ರಾಯಣ್ಣನ ಹಿರಿಮೆ ಹೇಳಿದರೆ,ಎರಡನೆಯದು ಆತನ ಗೆರಿಲ್ಲಾ ಯುದ್ಡ ತಂತ್ರಗಳ ಬಗ್ಗೆ.(ನನಗೆ ಪೂರ್ತಿಯಾಗಿ ಯಾವ ಗೀಗೀ ಪದಗಳು ಈಗ ನೆನಪಿರದ ಕಾರಣ,ಗೊತ್ತಿರುವದನ್ನೇ ಬರದಿದ್ದಿನಿ).ಗಂಡು ಮೆಟ್ಟಿನ ಸ್ಥಳವಾದ ಬೈಲಹೊಂಗಲ ತಾಲ್ಕು, ಚಾಲುಕ್ಯರ ಬೀಡಾದ ಬದಾಮಿ ನನಗೆ ಯಾವಗಲೂ ಇಷ್ಟವಾದ ಸ್ಥಳಗಳೇ.ನನ್ನ ತಾಯಿಯ ತವರುಮನೆ ಬೈಲಹೊಂಗಲ.ಎಲ್ಲಾ ಮಕ್ಕಳಂತೆ ನಮ್ಮ ಬೇಸಿಗೆಯ ರಜಗಳು ಕಳೆಯುತ್ತಿದ್ದು ಇಲ್ಲೆ.ಹುಟ್ಟಿದ್ದು ಮತ್ತೆ ಕಾಲೇಜು ಕಲಿತಿದ್ದು ಬೈಲಹೊಂಗಲದಲ್ಲಿ ಆದ ಕಾರಣ ಈ ಸ್ಥಳಕ್ಕೂ ನನಗೂ ಭಾರಿ ನಂಟು.ಕಲ್ಮಠಗಲ್ಲಿಯಲ್ಲಿ ನಮ್ಮ ಅಜ್ಜನ ಮನೆ.ಕಲ್ಮಠರು ಚೆನ್ನಮ್ಮಾಳ ಗುರುಗಳು. ಪ್ರಾಯಶಃ ಯುದ್ದದ ತಂತ್ರಗಳು,ಕತ್ತಿವರಸೆ,ಕುದರೆ ಸವಾರಿ ಕಲಿತಿದ್ದು ಇಲ್ಲೆ ಅನ್ಸುತ್ತೆ. ಇದೇ ಕಾರಣಕ್ಕಾಗಿ ಎನೋ ಕಲ್ಮಠ ಓಣಿಯಲ್ಲೆ, ಚೆನ್ನಮ್ಮ ಸಮಾದಿ ಪಾರ್ಕ್ ಇರುವುದು.
ಚೆನ್ನಮ್ಮಾ ಮದ್ವೆಯಾದದ್ದು ಮಲ್ಲಸರ್ಜನೆಂಬ ಕಿತ್ತೂರ ಸಂಸ್ಥಾನದ ದೊರೆಯನ್ನ.ಮಲ್ಲಸರ್ಜನು 1818ರಲ್ಲಿ ತೀರಿಕೊಂಡನು. ಈ ದಂಪತಿಗಳ ಒಬ್ಬನೆ ಮಗ 1824ರಲ್ಲಿ ಅಕಾಲ ಮರಣಕ್ಕೆ ತುತ್ತಾದಗ, ಚೆನ್ನಮ್ಮಳು ಶಿವಲಿಂಗಪ್ಪ ಎಂಬುವನನ್ನು ದತ್ತಕಕ್ಕೆ ತಗೆದುಕೊಂಡು ಸಿಂಹಾಸನದ ಮೇಲೆ ಕುರಿಸಿದಳು.ಈದಕ್ಕೆ ಅಗಿನ ಬ್ರಿಟಿಷ್ ಸರ್ಕಾರ ಒಪ್ಪದ ಕಾರಣ,ರಾಣಿ ಚೆನ್ನಮ್ಮಾ ಮತ್ತು ಬ್ರಿಟಿಷ್ ನಡುವೆ ಯುದ್ದ ಫ್ರಾರಂಭವಾಯಿತು.ಸಂಗೋಳ್ಳಿ ರಾಯಣ್ಣ ಈ ಯುದ್ದದಲ್ಲಿ ಚೆನ್ನಮ್ಮಳಿಗೆ ಜೊತೆಯಾದನು. ಗೆರಿಲ್ಲಾ ತಂತ್ರದಲ್ಲಿ ನಿಪುಣನಾದ ಈತನ ಸಹಾಯದಿಂದ ಬ್ರಿಟಿಷರನ್ನು ಸೋಲಿಸಿ ,ಥ್ಯಾಕರೆ ಎಂಬ ಅಧಿಕಾರಿಯ ಹತ್ಯೆಯಾಗಿ ಚೆನ್ನಮ್ಮಾಳಿಗೆ ಜಯವಾಯಿತು.ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಮತ್ತೊಮ್ಮೆ ಕಿತ್ತೂರನ ಮೇಲೆ ದಾಳಿ ಮಾಡಿದರು.ಮಲ್ಲಶೆಟ್ಟಿ ಮೊಸತನದಿಂದ ಚೆನ್ನಮ್ಮಳನ್ನು ಬಂಧಿಸಿ ಬೈಲಹೊಂಗಲದ ಜೈಲನಲ್ಲಿಟ್ರು.ಆವಾಗ ರಾಯಣ್ಣನು ಚೆನ್ನಮ್ಮಾಳನ್ನು ಜೈಲನಲ್ಲಿ ಭೇಟಿಯಾಗಿ ಬ್ರಿಟಿಷರ ವಿರುದ್ದ ಹೋರಾಟವನ್ನು ಮುಂದುವರೆಸಿದನು. ಬ್ರಿಟಿಷರ ವಿರುದ್ದ ಹೋರಾಡಿದ ಫ್ರಥಮ ಮಹಿಳೆಯಾದ ಚೆನ್ನಮ್ಮಾ ಸಮಾದಿ/ಪಾರ್ಕ್ ,ಕಿತ್ತೂರನಲ್ಲಿರುವ ಕೊಟೆ,ಸಂಗೋಳ್ಳಿ ರ್‍ಆಯಣ್ಣನ ಊರುಗಳ ಬಗ್ಗೆ ನಮ್ಮ ಸರ್ಕಾರ ಇನ್ನಸ್ಟು ಕಾಳಜಿ ವಹಿಸಬೇಕು ಅನ್ನೊ ಭಾವನೆ ಮನದಲ್ಲಿ ಬರುತ್ತೆ.
ನನ್ನ ತಂದೆ ಕರ್ನಾಟಕ ಸರ್ಕಾರದ ನೌಕರರು ಆದಕಾರಣ 3 ವರ್ಷಕ್ಕೆ ಗಂಟುಮೂಟೆ ಕಟ್ಟುವುದು ಗ್ಯಾರೆಂಟಿಯಾಗಿತ್ತು.ರ್ಕಾರದ ಕೃಪೆಯಿಂದ 1987ರಲ್ಲಿ ತಂದೆಗೆ ಬದಾಮಿಗೆ ಟ್ರಾನ್ಸಪರವಾಯಿತು.
ಬದಾಮಿಗೆ ಹಲವಾರು ಶತಮಾನಗಳ ಇತಿಹಾಸವಿದೆ.ಆಗಸ್ತ್ಯ ಕಾಲದಲ್ಲಿ ಬದಾಮಿಯ ಉಲ್ಲೇಖವಿದೆ.ಬಾದಾಮಿಗೆ ಮೊದ್ಲು ವಾತಪಿ ಎಂಬ ಹೆಸರಿತ್ತು. ಜನಪದ ಕತೆಯ ಪ್ರಕಾರ ಇಲ್ಲಿ ಮೊದ್ಲು ಯಕ್ಷಣಿ ವಿದ್ಯೆ ಗೊತ್ತಿರುವ ಇಲಲ್ವ ಮತ್ತು ವಾತಪಿ ಎಂಬ ಅಸುರ ಸಹೋದರರು ಇಲ್ಲಿರುವ ಗುಡ್ಡ ಬೆಟ್ಟಗಳ ವಾಸವಾಗಿದ್ದರು.ಅಗಿರುವ ಮುನಿಗಳನ್ನು ಹತ್ಯೆಗಯೈಲು ಒಂದು ಸುಲಭ ಉಪಾಯ ಕಂಡುಕೊಂಡಿದ್ದರು. ಯಕ್ಷಣಿ ವಿದ್ಯೆಯಿಂದ ಇಲಲ್ವ ವಾತಪಿಯನ್ನು ಮೇಕೆಯನ್ನಾಗಿ ಪರಿವರ್ತಿಸುತ್ತಿದ್ದ.ನಂತರ ಇಲಲ್ವ ಯಾವುದೇ ಮುನಿಗಳನ್ನು ಕರ್ಕೋಂಡು ಬಂದು,ಆ ಮೇಕೆಯನ್ನೆ ಮಾಂಸದ ಊಟವನ್ನೇ ಬಡಿಸುತ್ತಿದ್ದ.ನಂತರ ಇಲಲ್ವ ವತಾಪಿಯನ್ನು ಹೊರಗೆ ಕರೆಯುತ್ತಿದ್ದ.ವಾತಾಪಿ ಹೊಟ್ಟೆ ಬಗೆದು ಹೊರಗೆ ಬರುತ್ತಿದ್ದ.ಹೀಗೆ ಹಲವಾರು ಮುನಿಗಳ ಹತ್ಯೆಗಳಾದ ಮೇಲೆ ಎಲ್ಲಾ ಕಥೆಯಲ್ಲಿ ಬರುವಂತೆ ದುಷ್ಟ ಸಂಹಾರಕ್ಕೆ ಅಗಸ್ತ್ಯ ಮುನಿಗಳು ಆಗಮಿಸಿದರು. ಊಟವಾದ ನಂತರ ವಾತಪಿ ಜೀರ್ಣವಾಗೆಂದು ಹೇಳಿತ್ತಾರೆ.ಇಲಲ್ವ ವಾತಪಿಯನ್ನು ಹೊರಗೆ ಬಾ ಎಂದಾಗ ಆತ ಜೀರ್ಣವಾದ ಕಾರಣ ಹೊರಗೆ ಬರಲು ಅಗುವದಿಲ್ಲ.ಹೀಗೆ ವಾತಪಿ ಕಥೆ ಮುಗಿಯುತ್ತದೆ.ವಾತಪಿ ಇದ್ದನೆಂಬ ಕಾರಣಕ್ಕಾಗಿ ವಾತಪಿವೆಂಬ ಹೆಸ್ರು ಬಂದಿರಬೇಕು...
ಬಾಗಲಕೋಟಯಿಂದ 40-50 ಕಿ.ಮೀ ದೂರದಲ್ಲಿ ಇರೋ ಬದಾಮಿ ಬೆಟ್ಟಗುಡ್ಡಗಳ ನಡುವೆ ಊರು. ಉತ್ತರಕ್ಕೆ ಬೆಟ್ಟ, ದಕ್ಷಿಣಕ್ಕೆ ಮೇಣಬಸದಿಯ ಬೆಟ್ಟಗಳು, ಈ ಎರಡು ಬೇರ್ಪಡಿಸುವ ಅಗಸ್ತ್ಯ ಹೊಂಡ (ಕೆರೆ) ಪಶ್ಚಿಮಕ್ಕೆದ್ದರೆ, ಬದಾಮಿಯ ಊರು ಪೂರ್ವಕ್ಕೆ ಇದೆ. ಉತ್ತರ ಬೆಟ್ಟಗಳ ಬಾಜುವಿನಿಂದ ಮಹಾಕೂಟಕ್ಕೆ 5 ಕಿ.ಮೀ ದಾರಿ. ಇಲ್ಲಿಂದ ಹೊಗುವಾಗ ಒಂದು ಕಡೆ ಹಳದಿ ಸೆರಗು ಅನ್ನೊ ಜಾಗ ಬರುತ್ತೆ. ಸುಮಾರ್ರು 5೦೦ ಮೀಟ್ರುರೋ ಈ ಜಾಗದಲ್ಲಿ ನಡೆದಾಡುವರಿಗೆ ಎಲ್ಲವು ಹಳದಿ ಬಣ್ಣವಾಗಿ ಕಾಣುತ್ತೆ(ಕಾಮಲೆ ಕಣ್ಣಲ್ಲಾ ಸ್ವಾಮಿ,ನಿಜವಾಗಿಲು ಹಳದಿನೇ ಕಾಣೊದು). ಇದರ ಹಿಂದೆ ಎನೋ ಒಂದು ಕತೆಯಿದೆ. ಸದ್ಯಕ್ಕೆ ಅದು ನನೆಪಿಗೆ ಬರದ ಕಾರಣ ಹಾಗೆ ಮುಂದುವರಿತಾ ಇದೀನಿ.

6-8 ನೇ ಶತಮಾನದಲ್ಲಿ ಅತ್ಯಂತ ವೈಭವದ ದಿನಗಳನ್ನು ಕಂಡ ಬದಾಮಿಯಲ್ಲಿ ಈಗಲೂ ಸಹ ಚಾಲುಕ್ಯರ ಶಿಲ್ಪಕಲೆಯ ವೈಭವ ನೋಡಬಹುದು. 2ನೇ ಪುಲಕೇಶಿ ಚಾಲುಕ್ಯರ ಹೆಸರುವಾಸಿ ದೊರೆ. ಈತನ ಕಾಲದಲ್ಲಿ ಚಾಲುಕ್ಯರ ಸಾಮ್ರಾಜ್ಯ ನರ್ಮದಾ ನದಿ ತೀರದವರೆಗೆ ಹಬ್ಬಿತ್ತು. ಪುಲಕೇಶಿಗೂ ಮತ್ತೆ ಹರ್ಷವರ್ದನಿಗೆ ಘೋರ ಕಾಳಗವಾಯಿತು. ಇದರಲ್ಲಿ, ಪುಲಕೇಶಿಗೆ ಜಯವಾಗಿ, "ದಕ್ಷಣಾಪಥೇಶ್ವರ" ಎಂಬ ಬಿರುದನ್ನ ಸ್ವತಃ ಹರ್ಷವರ್ದನನೇ ದಯಪಾಲಿಸಿದನು. ಚಾಲುಕ್ಯರ ವೈಭವವನ್ನು ಇಲ್ಲಿರುವ ಮೇಣಬಸದಿಯಲ್ಲಿ,ಪಟ್ಟದಕಲ್ಲಿನಲ್ಲಿ ಮತ್ತು ಐಹೊಳೆಯಲ್ಲಿ ನೀವು ಕಾಣಬಹುದು.
ಮೊದ್ಲೆ ಹಳಿದಂತೆ, ದಕ್ಷಿಣದಲ್ಲಿರುವ ಬೆಟ್ಟಗಳಲ್ಲಿ ಮೇಣಬಸದಿಯಿದೆ.ಇದರಲ್ಲಿ 4 ಗುಹೆಗಳಿವೆ.ಗುಹೆ 1 ಮಹಾದೇವ(ಶಿವ)ನಿಗೆ ಅರ್ಪಿತವಾಗಿದೆ.ಇಲ್ಲಿ ನಟರಾಜನ ಒಂದು ಅದ್ಬುತವಾದ ನಾಟ್ಯದ ಭಂಗಿಯಿದೆ. ಅರ್ಧನಾರಿಶ್ವರನ ವಿಗ್ರಹ, ನಂದಿ,ದುರ್ಗ,ಗಣಪತಿ ಮತ್ತು ದೊಡ್ದದಾದ ಹಾವಿನ ಕೆಳಗಡೆರುವ ಶಿವ ,ಮುಂತಾದ ಸೊಗಸಾದ ಕೆತ್ತನೆಗಳನ್ನು ನೀವಿಲ್ಲಿ ಕಾಣಬಹುದು. ಈ ಗುಹೆ ವಿರಶೈವರಿಗೆ ಅರ್ಪಿತವಾಗಿದೆ. 2 ಮತ್ತು 3ನೇ ಗುಹೆಗಳು ವಿಷ್ಣುವಿಗೆ ಸರ್ಪಿತವಾಗಿವೆ. ಪುರೋಹಿತಶಾಹಿ ಪ್ರಾಬಲ್ಯ ಆ ಕಾಲದಿಂದಲೂ ಇತ್ತು ಅಂತ ಕಾಣುತ್ತದೆ. ಪ್ರವೇಶದ್ವಾರದಲ್ಲಿ ಜಯ-ವಿಜಯ ದ್ವಾರಪಾಲಕರು, ಒಳಗಡೆ ವಿಷ್ಣುವಿನವತಾರಗಳಾದ ವಾಮನ ಅವತಾರ,ಕೄಷ್ಣ ಲೀಲೆಗಳು,ನರಸಿಂಹನ ಅವತಾರ, ಹರಿಹರ,ಶೇಷನಾಗ ಮತ್ತು
ಛಾವಣಿ ಮೇಲೆ ಸ್ವಸ್ತಿಕ ಮತ್ತು ಮತ್ಸಗಳ ಸುಂದರವಾದ ಕೆತ್ತನೆ ಕಾಣಬಹುದು. ಜೈನರಿಗೆ ಸಮರ್ಪಿತವಾದ ಈ ಗುಹೆಯಲ್ಲಿ ಪಾರ್ಶ್ವನಾಥ,ತೀರ್ಥಂಕರರ ಕೆತ್ತನೆಯಿದೆ. ಇನ್ನು ಮೇಲಗಡೆ ಒಂದು ಚಿಕ್ಕದಾದ ಕೊಟೆಯಿದ್ದು, ಅಲ್ಲಿ ಒಂದು ದೊಡ್ಡದಾದ ತೊಪು ಇದೆ. ಇಲ್ಲಿಂದ ಬದಾಮಿಯ ವಿಹಂಗಮ ನೋಟ ನೋಡಬಹುದು. ಅದ್ರೆ ಸುಮಾರ್ರು ವರ್ಷಗಳ ಇಲ್ಲಿ ಹೊಗೊ ದಾರಿ ಬಂದಾಗಿದೆ. (ಯಾರೋ, ಇಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಾರಣ ಸಕ್ರಾರದವರೇ ಈ ದಾರಿ ಬಂದು ಮಾಡಿದ್ದಾರೆ).
ಉತ್ತರದಲ್ಲಿರೋ ಬೆಟ್ಟದಲ್ಲೆ ಯಾವದೇ ಮಹತ್ತರವಾದ ಕೆತ್ತನೆಗಳಿಲ್ಲ. ಇಲ್ಲಿ ಒಂದು ಮೂಸಿಮಂ ಇದೆ. ಇಲ್ಲಿ ಚಾಲುಕ್ಯರ ಇತಿಹಾಸ ಮತ್ತು ಶಿಲ್ಪಕಲೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಈ ಬೆಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯಗಳ ದಿನದಂದು ಮೇಲೆಗಡೆ ಇರುವ ಕೋಟೆಯಲ್ಲಿ ದ್ವಜಾವಂದನೆ ಹೊಗುತ್ತಿದ್ದು ನನಗೆ ಒಂದು ಒಳ್ಳೆ ನೆನಪು. ಮನೆಯಲ್ಲಿ ಬೇಜಾರದಾಗ ,ನಂಟರು ಬಂದಾಗ ನಾನು ಭೇಟಿ ಕೊಡುತ್ತಿದ್ದೆ ಈ ಮೆಣಬಸದಿಗಳಿಗೆ!!!! ಪ್ರತಿಸರತಿ ನೊಡಿದಾಗ ಮತ್ತೆಮ್ಮೆ ನೋಡಬೇಕೆಂಬ ಮೆಣಬಸದಿಯನ್ನು ಒಮ್ಮೆಯಾದರೂ ನೋಡಿಬನ್ನಿ.
"ವೈಭವದ ಸಾಮ್ರಾಜ್ಯಗಳು ,ಕೋಟೆಗಳು,ರಾಜಮನೆತನಗಳು ಏಕೆ ಹಾಳುಗುತ್ತವೆ? ಮೇಲೆರಿದ್ದು ಕಳಗಡೆ ಬರಬಕೆಂಬ ಪ್ರಕೃತಿ ಜಡ ನಿಯಮವೊ?"
ಇಷ್ಟೇಲ್ಲಾ ಯಾಕೆ ನೆನಪಿಗೆ ಬಂತು ಅಂದ್ರೇ,ಯಾವನೋ ಮಂಗ ತಮಿಳುನಲ್ಲಿ ಯಾವೊದೊ ಒಂದು ಚಲನಚಿತ್ರದಲ್ಲಿ,ನಮ್ಮ ಇಮ್ಮಡಿ ಪುಲಕೇಶಿ ಮತ್ತೆ ಸಂಗೋಳ್ಳಿ ರಾಯಣ್ಣ ಬಗ್ಗೆ ಎನೇನೋ ಹೇಳಿದಾರೆ ಅಂತಾ ಪೇಪರನಲ್ಲಿ ಓದಿದ ಮೇಲೆ ಅನ್ನೊದು ಕೂಡ ಒಂದು ವಿಪರಾಸ್ಯವೆ!!!!!!!





Thursday, July 20, 2006

ಮನಾಲಿಯಲ್ಲಿ ಮಹಾಂತೇಶ


ಬಾಳ ದಿನ್ಳಿಂದ ಮನಾಲಿ ಬಗ್ಗೆ ಬರೀಲಿ ಅಂತ ಮನಸ್ಸಿನಾಗ ಇತ್ತು.ಅಂತು ಕೊನೆಗೂ ಅದಕ್ಕ ಕಾಲ ಕೂಡಿ ಬಂತ ಅನ್ನಿ....ಇದು ಸರಿ ಸುಮಾರು 2ವರ್ಷದ ಹಿಂದಿನ ಮಾತು..ನಾನು justಅವಾಗ ತಾನೆ ನಾರ್ತ ಇಂಡಿಯಾಗೆ ಕಾಲಿಟ್ಟಿದ್ದೆ.ಚಂಡಿಗಢನಲ್ಲಿ ವರ್ಕ ಮಾಡ್ತಾ ಇರೋವಾಗ ಮನಾಲಿಗೇ ಹೊಗೊ ಪ್ಲಾನ ಮಾಡಿದ್ವಿ.ಅದು ಎನೋ ಒಂದು ಕಾರಣಕ್ಕೆ ಮುಂದು ಹೊಗ್ತಾ ಇತ್ತು..."ಅಂತು ಇಂತು ಕುಂತೀ ಮಕ್ಕಳಿಗೆ ರಾಜ್ಯ ಸಿಕ್ತು" ಅನ್ನೊ ಹಾಂಗ ನಾವು ಮನಾಲಿಗೆ ಹೊಗೊ ದಿನ ಬಂದೇ ಬಿಡ್ತು.ನಮ್ಮದು ನಾಲ್ಕು ಜನರ ಗ್ರುಫ,ಇಲಕಲ್ಲದ ರಫೀ,ಬಿಜಾಪುರದ ವಿಶ್ವ,ಸಾಂಗ್ಲಿಯಿಂದ ಅಭಯಎಲ್ಲಾ ಸೇರಿ ರಾತ್ರಿ 9.೦೦ ಘಂಟೆಗೆಹೊರಟ್ವಿ.ನಮಗೆ ಶಿವು (Ref:http://chittey.blogspot.com/)ತರಾ ಫ್ರೀ ವೇ ಎನೂ ಸಿಗದ ಕಾರಣ ಇರೋ ರಸ್ತೆಯಲ್ಲಿ ನಮ್ಮ ಪ್ರಯಾಣ ಶುರು ಅಯಿತು.
ಡಿಶೆಂಬರ ತಿಂಗ್ಳು,ಹೊರಗಡೆ ಕೊರೆಯುವ ಥಂಡಿ....ಕಾರನಲ್ಲಿ ನಾವು ಬೆಚ್ಚಗೆ ನಿದ್ದೆಯಲ್ಲಿ.ಮೋದಲೇ ನಿರ್ಧಾರದಂತೆ ಸರಿತಿಗಿಬ್ಬರು ಎಚ್ಚರ ಇರೊದು.ಮೊದ್ಲು ಪಾಳಿ ರಫಿ ಮತ್ತೆ ವಿಶ್ವ. 2 ತಾಸು ಪ್ರಯಾಣ ಆದ ಮೇಲೆ ಯಾವದೋ ಒಂದು ಧಾಬದಲ್ಲಿ ಕಾರ ನಿಲ್ಲಿಸಿದ್ರು ಊಟಕ್ಕೆ.( ಧಾಬಗಳ ಬಗ್ಗೆ ಒಂದು ಸವಿವರವಾದ ಬ್ಲಾಗ ಬರ್ರಿಬಹುದು ನೊಡ್ರಿ)ಕಾರಿನಿಂದ ಕಾಲಿಟ್ಟ ತಕ್ಷಣ ಎಲ್ಲಾರಿಗೂ ಥಂಡಿ ಅನುಭವಕ್ಕೆ ಬಂತು ನೋಡಿ,ಆವಾಗ ನಮಗೇಲ್ಲಾ ಗೊತ್ತು ಇದು ಪ್ರಯಾಣ ನಾವು ಅಂದುಕೊಂಡಿದ್ದಕ್ಕಿಂತಾ ಬಾಳ ತ್ರಾಸ ಇದೆ ಅಂತ.ಈ ಹಾಳು ಡಿಶೆಂಬರನಲ್ಲಿ ಯಾಕದ್ರು ಹೊಂಟ್ವಿ ಅಂತ ಯೋಚನೆ ಮನದಲ್ಲಿ ಬಂತು ಅನ್ನಿ.ಇನ್ನು ನನ್ನ ಸರ್ತಿ ಎಚ್ಚರ ಇರೊದು.ಮಂಡಿಯಿಂದ ಶುರು ಅಯಿತು ನೋಡಿ ರಸ್ತೆ,ಭಯಂಕರ ಹೈರ್ ಪಿನ ಕರ್ವಗಳು,singleರಸ್ತೆ,ರಾತ್ರಿ ಚೆಕ್ಕಿಂಗಗಳು,ಘಾಟ್ ರಸ್ತೆಗಳು ಪೂರ್ತಿ ಮನಾಲಿವರಗೆ ಇದೆ ತರಾ ರಸ್ತೆ ಗೊಳು.ಸುಮಾರ್ರು 10 ಘಂಟೆಗೆ ಪ್ರಯಾಣದ ನಂತರ ನಮ್ಮ ಗುರಿ ಮುಟ್ಟಿದೆವು.ನಮ್ಮಲ್ಲಿ ಈ ಮೊದಲು ಯಾರು ಹಿಮಾಲಯದ ತಪ್ಪಲ್ಲಲಿ ಇರೋ ಗಿರಿಧಾಮಗಳನ್ನು ನೋಡ್ರಿದ್ದ ಕಾರಣ ,ನಾವೆಲ್ಲರೋ ಬಾರಿ ಉತ್ಸಾಹಗೊಂಡೆವು.ದೂರದಲ್ಲಿ ಕಾಣ್ಸಿತ್ತಿದ್ದ ಗಿರಿಗಳ ಮೇಲಿನ ಬೆಳಗಿನ ಮಂಜು ನಮ್ಮನೆಲ್ಲಾ ಬೇರೆ ಲೋಕಕ್ಕೆ ಕರೀತಾ ಇದೆ ಅನ್ನೊ ಭಾವನೆ ಸಹಾ ಬಂತು.ನಮ್ಮ ದಕ್ಷಿಣ ಭಾರತದಲ್ಲಿ ಇರೋಗಿರಿಧಾಮಗಳಿಗೆ ಹೊಲಿಸಿದರೆ ಮನಾಲಿ ತುಂಬಾ ಬಿನ್ನವಾಗಿ ಇದೆ. ಸದಾ ಮಂಜು ಮುಸುಕಿರೋ ಬೆಟ್ಟಗಳು ,ತಣ್ಣನೆಯ ಗಾಳಿ ಎಲ್ಲಾ ಸೇರಿ ರಫಿಗೆ ಮೋಡಿ ಮಾಡಿ ಬಿಟ್ಟಿದ್ದವು.
ಗೆಸ್ಟಹೌಸ ಬುಕ ಮಾಡಿದರಿಂದ ಅಲ್ಲಿ ಎನು ಪ್ರಾಮ್ಲಂ ಅಗಲಿಲ್ಲಾ.ಬೆಳಿಗ್ಗೆ ನಾಷ್ಟ ಮಾಡಿ,ಎಲ್ಲಿ ಮತ್ತೆ ಏನನ್ನು ನೋಡಬೇಕು ಅನ್ನೋದನ್ನ ನೀರ್ಧರಿಸಿದೆವು.ನಮ್ಮ ಪ್ರಯಾಣ ಮೊದ್ಲಿಗೆ ಗುಲಾಬ ಅನ್ನೊ ಸ್ಥಳಕ್ಕೆ ಹೊರಟೆವು.ದಾರಿಯಲ್ಲಿ ಮೇಲೆ ಹೊಗಲು ಬೇಕಾದ ಓವರಕೋಟು,ಬೂಡ್ಸು, ಸ್ಟೀಕ್ಸಗಳನೇಲ್ಲಾ ರೆಂಟಗೆ ತೊಗಂಡು,ಧರಿಸಿದ ಮೇಲೆ ಓಳ್ಳೆ ಸ್ಪೇಸ ಯಾತ್ರಿಗಳ ತರಾ ಅಗಿ ನಮ್ಮ ಪ್ರಯಾಣ ಮುಂದುವರೆಸಿದೆವು.
ಈ ರೋಡು ಮೋದಲಿನಗಿಂತಾ ಭೀಕರವಾಗಿತ್ತು. ಸ್ಟೀಫ ಕರ್ವಗಳು,ಇಕ್ಕಟಾದ ರಸ್ತೆ ಜೊತೆ ಮಂಜು ಸಹಾ ದಾರಿ ತುಂಬ.ನಮ್ಮ ಡ್ರೈವರ ಪೂರ್ತಿ ಹುಷಾರಾಗಿ ಕಾರ ಒಡಿಸತೊಡಗಿದ.ಈದೆ ರಸ್ತೆ ಮುಂದು ಹೋಗಿ Rotangpass ಮೂಲಕ ಲೇಹ,ಲಡಾಕಗೆ ಹೊಗುತ್ತೆ.ವರ್ಷದ್ಯಾಗ 6 ತಿಂಗ್ಳು ಮಾತ್ರ ಈ ರಸ್ತೆ ಓಪೆನ ಅಗಿ ಇರ್ರುತ್ತ.ನಾವು ಹೋದಾಗ ಈ ರಸ್ತೆ ಗುಲಾಬವರಗೆ ಮಾತ್ರ ಇತ್ತು.ಮುಂದೆ ಸಿಕ್ಕಾಪಟ್ಟೆ ಹಿಮ ರಸ್ತೆ ಮೇಲೆ ಇರೋ ಕಾರಣ ಮುಂದುವರಿವುದು ಅಸಾಧ್ಯವಾಗಿತ್ತು. ಗುಲಾಬದವರಗೆ ದಾರ್ರಿನು ಅಸ್ಟು ಸರಿ ಇರಲಿಲ್ಲಾ.ಕಾರು ಒಂದು ಮೀಟ್ರು ದೂರ ಹೊದ್ರೆ ಎರಡು ಮೀಟ್ರು ಹಿಂದಕ್ಕೆ ಜರಿಯುತಿತ್ತು ಈ ಹಾಳು ಮಂಜಿನ ಕಾರಣಕ್ಕೆ.ಆ ದಾರಿ ಇಸ್ಟು ಭಯಾನಕವಾಗಿತ್ತು ಅಂದ್ರೆ ನಾವು ಸುತ್ತು ಮುತ್ತ ಇರೋ ಬೆಟ್ಟಗುಡ್ಡಗಳನ್ನೆ ಮರತು ಮುಂದೆ ಇರೊ ದಾರಿನ್ನೆ ನೊಡ್ತಾ ಇದ್ದೇವು.ಕೊನಗೂ ತೆವಳುತ್ತಾ ಗುಲಾಬ ತಲುಫಿದೆವು.16 ಕಿ.ಮೀ.ಗೆ ಸುಮಾರು 1 ಘಂಟೆಗಿಂತಾ ಜಾಸ್ತಿ ಟೈಮ ಹಾಳು ಮಾಡಿ ಅಲ್ಲಿ ಮುಟ್ಟಿದೆವು.ಆವಾಗ ನಮಗೆ ಗೊತ್ತು ಸುತ್ತು ಮುತ್ತಲು ಇರೊ ನಿಸರ್ಗದ ಚಮತ್ಕಾರವನ್ನು ನೋಡತೊಡಗಿದೆವು. ನಾವು ಹಾಕ್ಕೋಂಡಿರೋ ಓವರಕೋಟ,ಬೂಡ್ಸಗಳ ಮಹಿಮೆ ಈಗ ಅರ್ಥವಾಗತೊಡಗಿತು. ಅಲ್ಲಿ ಇರೊ ಅಸಾದ್ಯ ಚಳಿಯನ್ನು ತಡೆಯಲು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡದವನ್ನಿ.

ಸ್ಠಳಕ್ಕೆ ಗುಲಾಬ ಅಂತ ಯಾಕೆ ಹೆಸ್ರು ಬಂತು ಅಂದ್ರೆ, ಬೇಸಿಗೆ ಕಾಲದಲ್ಲಿ ಇಲ್ಲಿ ಸಿಕ್ಕಾಪಟ್ಟೆ ಗುಲಾಬಿ ಬೆಳಿತಾರೆ ಅನ್ನೊ ಊತ್ತರ ಬಂತು.ಗುಲಾಬ ಒಂದು ಸಮತಾಟ್ಟಗಿರೊ ಪ್ರದೇಶ. ಇಲ್ಲಿ ಹಲವಾರು ಮಂಜಿನ ಮೇಲೆ ಅಡೋ ಅಟಗಳೀಗೆ ಅವಕಾಶ ಇರ್ರುತ್ತೆ.ಸ್ಕೆಟಿಂಗ್,ಮೋಟರ ಡ್ರೈವಿಂಗು,ಟೈರ ಮೇಲೆ ಕುಳಿತು ಮೇಲಿನಿಂದ ಜಾರುವದು ಮುಂತಾದವುಗಳು.ನಾವೆಲ್ಲ ಮೊದ್ಲು ಸ್ಕೆಟಿಂಗ ಟ್ರೈ ಮಾಡೋಣ ಅಂತಾ ನಿರ್ದರಿಸಿ ಶುರು ಮಾಡಿದೆವು.ಈ ಸ್ಕೇಟಿಂಗ ಸಿಕ್ಕಾಪಟ್ಟೆ ತರ್ಲೆ ಆಟ.Bodyನ ಸರಿಯಾಗಿ ಬಾಲೆನ್ಸ ಮಾಡಿ,ಸ್ಟಿಕ್ಸ ಸಹಾಯದಿಂದ ಮುಂದೆ ಹೋಗಬೇಕು.ಇ ಜಾಗದಲ್ಲಿ ನಿಮಗೆ ಸ್ಕೆಟಿಂಗ ಕಲಿಸಿಕೊಡೆಕೆ ಸುಮಾರು ಬಾಯ್ಸಗಳು ಸಿಗತಾರೆ. ನಮಗೆಲ್ಲಾ ಒಬ್ಬ ಬಾಯ ಸ್ಕೇಟಿಂಗ ಬಗ್ಗೆ ಹೇಳಿಕೊಟ್ಟ.ಆಗ ಶುರುವಾಯಿತು ನೋಡ್ರಿ ಅಸಲಿ ತಮಾಶಿ..... ನಾನು ಆ ಹುಡಗನ ಸಫ್ಫೋರ್ಟ್ ಇರೋವಾಗ ಸರಿಯಾಗಿ ಇರ್ತಿದ್ದಿನಿ. ಆವನ್ನು ನನ್ನ ಕೈ ಬಿಟ್ಟ ತಕ್ಷಣ ನನ್ನ ಬಾಲೆನ್ಸ ಮಾಯಾಅಗಿ ಬಿದ್ದುಬಿಡತ್ತೀದ್ದೆ.ಒಮ್ಮೆ ಚಿತ್ತ ,ಒಮ್ಮೆ ಬೋರಲು,ಒಮ್ಮೆ ಎರಡು ಕಾಲಗಳು ಗಾಳಿಯಲ್ಲಿ..ಹೀಗೆ ಸುಮಾರು ಆಂಗ್ಯಲನಲ್ಲಿ ಬಿಳ್ತಾ ಇದ್ದೆ.ಇದು ತುಂಬಾ ಹೊತ್ತು ನಡೆಯಿತು. ಆ ಹುಡಗನ ಇವನು ಈ ಜನ್ಮದಲ್ಲಿ ಸ್ಕೆಟಿಂಗ ಕಲಿಯೊಲ್ಲಾ ಅಂದುಕೊಂಡು ಸುಮ್ನಾಗಿಬಿಟ್ಟ್.ಸುಮಾರು 1 ಘಂಟೆ ನಿರಂತರ ಪ್ರಯತ್ನ ನಂತ್ರ ನಾನು ಹೇಗೊ ಬಾಲೆನ್ಸ ಮಾಡಿ ಸ್ಕೆಟಿಂಗ ಕಲಿತುಬಿಟ್ಟೆ. ಅವಾಗ ಎನೊ ಒಂದು ಮಹತ್ತರವನ್ನ ಸಾಧಿಸಿದಂತೆ ಅಯಿತು.

ಈ ಆಟದ ಗೊಂದಲನಲ್ಲಿ ಟೈಮ್ ಪಾಸ್ಸದ್ದೆ ತಿಳಿಲಿಲ್ಲಾ.ನಂತರ ಟೈರನಿಂದಾ ಸುಮಾರು ಎತ್ತರಿಂದಾ ಸ್ಲೈಡ ಅಗ್ತಾ ಕೆಳಗಡೆ ಬಂದ್ವಿ.ಸುಮಾರ್ರು ದೂರ ಮೇಲ್ಗೆಡೆ ಚಾರಣ ಮಾಡಿದೇವು. ಸಮುದ್ರ ಮಟ್ಟದಿಂದಾ ಮೇಲೆ ಹೊದಂತೆ ಪ್ರಾಣವಾಯು(Oxygen)ಕಡಿಮೆ ಅಗ್ತಾ ಬಂತು.ಮೇಲಗಡೆಯಿಂದ ಅದ್ಬುತ ನಿಸರ್ಗದ್ರಶ್ಯಗಳನ್ನ ನೋಡಿ ಮನಸ್ಸಿಗೇಲ್ಲಾ ಖುಶಿ ಅಯಿತು.ಇಸ್ಟೇಲ್ಲಾ ಅಗೊ ಹೊತ್ತಿಗೆ ಸಾಯಂಕಲ ಆಗಿ ಹೊಗಿತ್ತು.ಈ ಜಾಗದ್ಯಾಗ ಚಾ ,ಟೀ (ಸ್ನಾಕ್ಸ) ಬಿಟ್ಟರೆ ಬೇರೆ ಎನು ಗತಿ ಇರಲಿಲ್ಲಾ. ಅದಕ್ಕ ಇರೋ ಸ್ನಾಕ್ಸ ತಿಂದು ,ಚಾ ಕುಡಿದು ಸೊಲನವ್ಯಾಲಿ ಹೊರಟ್ವಿ.ಸೊಲನವ್ಯಾಲಿ ಮನಾಲಿಯಿಂದ 3-4 ಕಿ.ಮೀ.ದೂರದಲ್ಲಿ ಇರೋ ಜಾಗ.ಇಲ್ಲಿ ಸ್ಕೇಟಿಂಗ ಕಾಂಫೀಟೆಶನಗಳು ನಡಿತಾ ಇರತಾವ.ಹೊಟ್ಟೆಗೆ ಇನ್ನಸ್ಟು ಟೀ ಹಾಕಿ ನಮ್ಮ ಗ್ರುಫ ಸ್ಕೇಟಿಂಗ ಅಡಲು ರೆಡಿ ಅಯಿತು....ಮೇಲೆ ಕಲಿತುಬೇರೆ ಬಂದಿದ್ಚಿ.ಇಲ್ಲಿ ಗುಲಾಬಗೆ ಹೊಲಿಸಿದರೆ ಸ್ಕೇಟಿಂಗ ತುಂಬಾ ಸರಳವಾಗಿತ್ತು,ಕಾರಣ ಇಲ್ಲಿ ಜಾಗ ತುಂಬಾ ಸಮತಟ್ಟಾಗಿತ್ತು.ಈ ಆಟಗಳ ಗೊಂದಲದಲ್ಲಿ ನನ್ನ ಬೂಡ್ಸವಳಗೆ ಮಂಜು ಹೊಗಿದ್ದನ್ನಾ ನಾನು ಗಮನಸಿಲಿಲ್ಲಾ. ಅದ್ರ ಪರಿಣಾಮ ಒಂದು ತಾಸು ಆದ ಮೇಲೆ ಶುರು ಅಯಿತು ನೋಡಿ ನನ್ನ ಕಾಲೆಲ್ಲಾ ಹಿಮದ ಕಾರಣ ರಕ್ತ ಸಂಚಲನೆಯೆ ನಿಂತು ಹೊಯಿತು.ಸಿಕ್ಕಾಫಟ್ಟೆ ಥಂಡಿನೂ ಹತ್ತಾಕ್ಕತ್ತು.ಬೂಡ್ಸ ತಗದು ಮಂಜು ತಗದ್ರು ಎನು ಅಸರ ಆಗಲ್ಲಿಲ್ಲಾ.ರಫಿ ಸಹಾಯದಿಂದ ಹೇಗೂ ಕಾರ ತಲುಫಿದೆ.ಎನೇನೋ ಮಡಿದರೂ ಥಂಡಿ ಮಾತ್ರ ಕಡಿಮಿ ಅಗಲಿಲ್ಲ.ಅಲ್ಲೇ ಒಂದು ಹೊಟ್ಲುನಲ್ಲಿ ಊಟ ಮಾಡಿ ರೂಮಗೆ ಓಡಿದವು.roomನಲ್ಲಿ ಹೋಗಿ ಸುಡು ಸುಡು ನೀರಿನಲ್ಲಿ ಜಳಕ ಮಾಡಿ,ನಂತರ ಹೀಟರ ಮುಂದೆ ಕುಳಿತಾಗ್ಲೆ ನನಗೆ ಸಮಾಧಾನವಾದದ್ದು.ಇದೆಲ್ಲಾ ಆಗುವರಗೆ ರಾತ್ರಿ 8 ಹೊಡದಿತ್ತು.ನನ್ನ ಬಿಟ್ಟು ಬೇರೆಯರಲ್ಲಾ ಮಾಲ್ ರೋಡ ತಿರಗಿ ಬರತಿವಿ ಅಂತಾ ಹೊದ್ರು.ನಾನು ಚಳಿ ಕಾರಣ ಹೊರಗಡೆ ಬರೊಲ್ಲಾ ಅಂತ ಹೆಳ್ದೆ. ರಾತ್ರಿ ಭರ್ಜರಿ ಊಟ ಮಾಡಿ ಹಾಸಿಗೆ ತೆಲೆ ಇಟ್ಟದ್ದೆಷ್ಟು ನೆನಪು....
ಬೆಳಿಗ್ಗೆ ಕಣ್ಣು ಬಿಟ್ಟಾಗ ಮೊದ್ಲು ಎಲ್ಲಿದ್ದಿವಿ ಅನ್ನೊದೆ ಮರೆತು ಹೊಗಿತ್ತು.ಈ ದಿನ ಮನಾಲಿಯಲ್ಲಿ ಇರೊ ಗುಡಿಗಳನ್ನ ನೋಡೊದು, ಅಮೇಲೆ ಕುಲ್ಲು,ಮಣಿಕನ್ನನ ನೋಡಿ ಮರಳಿ ಗೂಡಿಗೆ ಹೋಗೊದು ಅಂತಾ ನೀರ್ಧಾರ ಮಾಡಿದೇವು .ಮೊದಲು ಆಗಸ್ತ್ಯ ದೇವಾಲಯಕ್ಕೆ ಭೇಟಿ.ನಂತರ ವಶಿಸ್ಟ ದೇವಾಲಯ ನೋಡಿದೇವು.ಏರಡು ದೇವಾಲಯಗಳು ಸರಿ ಸುಮಾರ್ರಿಗಿದ್ವು.ಮುಂದೆ ಹಿಡಂಬಾ ದೇವಾಲಯಕ್ಕೆ ಭೇಟಿ.ಅಶ್ಚರ್ಯವಾಗಬೇಡಿ!!! ಹಿಡಂಬೆ ಯಾರು ಅಂತಾ.
ಮಹಾಭಾರತದಲ್ಲಿ ಭೀಮನೀಗೆ ಮನಸೊತು (ಲವ ಅಗಿ) ಮದ್ವೆ ಆದ ರಾಕ್ಷಷಿಯೇ.ಭೀಮ ಮನಾಲಿಯಲ್ಲಿ ಮದ್ವೆ ಆದ ಕಾರಣಕ್ಕೆ ಇಲ್ಲಿ ಅವಳ ಹೆಸ್ರನಲ್ಲಿ ದೇವಾಲಯ ಇದೆ.ಇದು ತುಂಬಾ ಹಳೇ ಕಾಲದ ದೇವಾಲಯ. ಅರ್ಧಕ್ಕಿಂತಾ ಜಾಸ್ತಿ ಮರದಲ್ಲಿ ಕಟ್ಟಿದ್ದು.ಕೊನಯದಾಗಿ ನಾವು ಭೇಟಿ ಕೊಟ್ಟದ್ದು "ಬುದ್ದಂ ಶರಣಂ ಗಚ್ಚಾಮಿ!"ಅಂತಾ ಜಗತ್ತಿಗೆ ಶಾಂತಿ ಮಂತ್ರ ಹೇಳಿದ ಬುದ್ದನ ದೇವಾಲಯಕ್ಕೆ.ನಾನು ಈ ಮೊದ್ಲು ಬುದ್ದ ಮಂದಿರ ನೋಡಿರದ ಕಾರಣ ನನಗೆ ಈ ಮಂದಿರ ತುಂಬಾನೇ ಇಸ್ಟ ಅಯಿತು.
ನಮ್ಮ ಮುಂದಿನ ಪ್ರಯಾಣ,ಮನಿಕನ್ನನಗೆ.ಈ ಜಾಗದ ವಿಶೇಷತೆ ಎನೇಂದ್ರೆ,ಎಲ್ಲಿ ನಮ್ಮ ಶಿವಪ್ಪನದು ಒಂದು ಮಂದಿರವಿದೆ.ಇಲ್ಲಿ ಹಾಟ್ ಸಲ್ಫರ್ ಸ್ಪ್ರಿಂಗ (Hot sulfer Spring)ಬೇರೆ ಇದೆ.ನಾರ್ತಇಂಡಿಯಾದಲ್ಲಿ ಇ ತರಾ ಸಲ್ಫರ್ ಸ್ಪ್ರಿಂಗ ಬೇಕಾದಷ್ಟು ಸೀಗತಾವೆ.365 ದಿನ ಇಲ್ಲಿ ನೆಲದಿಂದ ಬಿಸಿ ನೀರು ಸದಾ ಬರ್ತಾ ಇರುತ್ತೆ.ಹಾಗೆ ಒಂದು ಗುರುದ್ವಾರನು ಇದೆ.ಗುರುದ್ವಾರದ ಲಂಗರನಲ್ಲಿ ಒಂದು ಸಕ್ಕತಾದ ಊಟ ಮಾಡಿ ನೋಡಿ ನಾವು ಚಂಡಿಗಢಕ್ಕೆ ಮರಳಿ ಹೊರಟೆವು.