Sunday, December 02, 2007

ಸಾಪ್ಟವೇರ್ ಇಂಜಿನೀಯರನ ಕಥೆ-ವ್ಯಥೆ.

ದೆವ್ವದಂತೆ ಬೀಕರವಾಗಿ ನಿಂತಿರುವ ಬಹುಮಹಡಿ ಕಟ್ಟಡ,ಒಳಗಡೆ ಕೇಳಿಬರುತ್ತಿರುವ ಕಂಪ್ಯೂಟರನ ಕೀ-ಬೋರ್ಡನ ಸದ್ದು,ಹೊರಗಡೆ ಇರುವೆ ಸಾಲುಗಳಂತೆ ನಿಂತಿರುವ ಕಂಪನಿಯ ಕ್ಯಾಬುಗಳು,ಹದ್ದಿನ ಕಣ್ಣಿನಂತೆ ಟ್ಯಾಗುಗಳನ್ನು ವಿಕ್ಷಿಸಿಸುತ್ತಿರುವ ಸೆಕ್ಯುರೇಟಿ ಗಾರ್ಡುಗಳು ಮತ್ತು ರೆಸೆಪಿನಿಸ್ಟಗಳು, ಕಾಫಿ-ಬ್ರೇಕ್ ಏರಿಯದಲ್ಲಿ ಮೀನಿನ ಮಾರ್ಕೆಟನಂತೆ ಕೇಳಿಬರುತ್ತಿರುವ ಗದ್ದಲಗಳು,ಹರಟೆಗಳು,ಮೀಟಿಂಗ-ರೂಮನಲ್ಲಿ ನಡೆಯುತ್ತಿರುವ ಸತ್ವಹೀನ ಮೀಟಿಂಗಳೆಲ್ಲವೂ ಸೇರಿ ಒಂದು ಬಹುರಾಷ್ಟೀಯ ಕಂಪನಿಯ(MNC)ಚಿತ್ರಣವನ್ನು ಕಟ್ಟಿಕೊಡುತ್ತವೆ.ಇಂತಹ ಒಂದು ಬೆಂಗಳೂರಿನ ಕಂಪನಿಯಲ್ಲಿ ತುಂಬ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ರಾಹುಲ ಮದ್ಯಾಹ್ನವಿರುವ ತನ್ನ ಅಪ್ರೈಸಲಗಾಗಿ ಕಾತುರದಿಂದ ಕಾಯುತ್ತ ಯೊಚನೆ ಮಾಡುತ್ತಿದ್ದಾನೆ. ವರ್ಷಕ್ಕೆ ಎರಡು ಸಾರಿ ಬರುವ ಈ ಅಪ್ರೈಸಲಗಾಗಿ ಬಹುತೇಕ ಎಲ್ಲರೂ ಶಬರಿ ರಾಮನಿಗೆ ಕಾಯ್ದಂತೆ ಕಾಯುತ್ತಾರೆ ಎನ್ನುವ ಸಂಗತಿ ಈತನಿಗೂ ಸಹ ಗೊತ್ತು.
ಕಳೆದ ೫ ವರ್ಷಗಳಿಂದ ಸಾಪ್ಟವೇರನಲ್ಲಿರುವ ರಾಹುಲನಿಗೆ ,ಉಳ್ಳವರಿಗೆ ಇನ್ನುಷ್ಟನ್ನು ನೀಡುವ ಮ್ಯಾನೆಜುಮೆಂಟು,ಒಂದು ವರ್ಷದ ಕೆಲಸವನ್ನು ಅರ್ಧ ಘಂಟೆಯಲ್ಲಿ ಪರಾಮರ್ಶಿಸುವ ಮ್ಯಾನೇಜರ್ರು ,ಎಲ್ಲಾ ಒಂದು ತರದಲ್ಲಿ ಅರ್ಥಹೀನ ಎಂಬ ಸಣ್ಣ ಸಂಶಯದ ಸುಳಿಯೊಂದು ಮನದಲ್ಲಿ ಬಂದು ಮಾಯವಾಯಿತು.ಮೀಟಿಂಗನಲ್ಲಿ ಪ್ರತಿ ಸರ್ತಿ ಹೇಳುವಂತೆ "You have done good job,you need to improve,their is scope of improvement" ಎನ್ನುವ ಗಿಣಿಪಾಠಕ್ಕೆ ನಾನೇನು ಹೇಳಲಿ? ಎಂಬುದನ್ನು ಚಿಂತಿಸುತ್ತ, ರಾಹುಲ ತನ್ನ ಕಂಪನಿಯ ಬಗ್ಗೆ ,ಸಾಪ್ಟವೇರ ಇಂಡಸ್ಟ್ರಿಯ ಬಗ್ಗೆ ದೀರ್ಘವಾಗಿ ಯೋಚಿಸತೊಡಗಿದ.
"ನೀನೇನು ಬಿಡಪ್ಪ, ಸಾಪ್ಟವೇರನಲ್ಲಿ ಇದ್ದಿಯ,ಕೈತುಂಬ ಸಂಬಳ,ಆಫೀಸ ತುಂಬ ಹುಡಿಗಿಯರು, ನೀನಗೇನು ಚಿಂತೆ" ಎನ್ನುವ ಜನಗಳಿಗೆ ,ನಾನು ಆಫೀಸನಲ್ಲಿ ಕ್ಲೈಂಟ ಕಾಲನಲ್ಲಿ ಉತ್ತರಿಸಲು ಒದ್ದಾಡುವದು,ಮುಗಿಯಲಾರದ ಡೆಡ್-ಲೈನಗಾಗಿ ಕೆಲಸ ಮಾಡುತ್ತ ನಾನೇ ಡೆಡ್ ಆಗ್ತಾ ಇರೋದು,ಬೆಳಿಗ್ಗೆಯಿಂದ ರಾತ್ರಿವರಗೆ ಒಂದೇ ಕುರ್ಚಿಯಲ್ಲಿ ಕುಳಿತು ,ಸ್ಕ್ರೀನ ನೊಡುತ್ತ ,ದಿನೆ ದಿನೆ ಬೊಜ್ಜು ಬೆಳಿಸಿಕೊಳ್ಳುತ್ತ ,ರಾತ್ರಿ ಉಸ್ಸಪ್ಪ ಎಂದು ಮನಗೆ ಬಂದು ಬೀಳುವದು, ರಾತ್ರಿ ನಿದ್ದೆಯಲ್ಲೂ ಸಹ ಅಫೀಸನ ಕೆಲಸ ಬಗ್ಗೆ ಕನಸುಗಳು, ಮತ್ತೆ ಮರುದಿನ ಅದೇ ದಿನಚರಿ,ಯಾರೋ ಶಾಸನ ಬರೆದಿಟ್ಟ ಹಾಗೆ! ಹೀಗೆ ಹಣದ ಹಿಂದೆ ಬಿದ್ದು ಜೀವನವನ್ನು ಪೂರ್ತಿಯಾಗಿ ಅನುಭವಿಸದೇ ಇರೊದು, ಜನಗಳಿಗೆ ಅರ್ಥವಾಗುದು ಹೇಗೆ? ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ತಾನೆ?? ಅಫೀಸನಲ್ಲಿ ಯಾರದೊ ಸಿಟ್ಟನ್ನ ಬಹಳ ಜನ ತಮ್ಮ ಹೆಂಡತಿ-ಮಕ್ಕಳ ಮೇಲೋ ,ಇಲ್ಲಾ ತಂದೆ ತಾಯಿಗಳ ಮೇಲೆ ತೋರಿಸಿಕೊಳ್ಳುವದು ಇಲ್ಲಿಯ ಟ್ರೇಡಮಾರ್ಕ್.
Higher managementನಲ್ಲಿ ಅಗುತ್ತಿರುವ ಬದಲಾವಣೆಗಳಿಂದ ಇರುಸು-ಮುರುಸು ಆಗುತ್ತಿರುವ ಕಂಪನಿಯ ಸಹೋದ್ಯೋಗಿಗಳು,ನಾನು ಬದಲಾವಣೆ ಕೇಳಿದರೆ ತಿಪ್ಪೆ ಸಾರುವ ಮ್ಯಾನೆಜಮೆಂಟು, ಮೇಲಿನಿಂದ ಕೆಳಗಿನವರಗೆ Ego problems, team issues,ಹೀಗಾದರೆ ಕೆಳಗಿರುವ ಜನ ಮೇಲಕ್ಕೆ ಬರುವುದು ಹೇಗೆ? "ಮೇಲಿನವರು ಇನ್ನುಸ್ಟು ಮೇಲೆರಿದಂತೆ, ಕೇಳಗಿನವರು ಇನ್ನುಸ್ಟು ಕೇಳಗಿಳಿವವುರು " ಎಂಬ ಹೊಸ ತರ್ಕ ರಾಹುಲನ ಮನದಲ್ಲಿ ಮೂಡತೊಡಗಿತು.ಡಾಲರ್ ಬೆಲೆ ಕುಸಿದರೆ ಭಯಬೀಳುವ ಈಲ್ಲಿಯ ಜನ,ರೂಪಾಯಿಯ ಬೆಲೆ ಬಲಗೊಂಡಂತೆ,ನಮ್ಮ ದೇಶದ ಹಣಕಾಸು ಸ್ಥಿತಿ ಉತ್ತಮಗೊಂಡಿದೆ ಎನ್ನುವದರ ಬಗ್ಗೆ ಹೆಮ್ಮೆ ಪಡುವದರ ಬದಲು ,ನಾಳಿನ ಭವಿಷ್ಯದ ಬಗ್ಗೆ ಅತಂಕಪಡುವ ಇಲ್ಲಿಯ ಕೆಲವು ಜನಗಳು ಚಿತ್ರ ಮೂಡಿಬಂತು.ಬ್ರಿಟಿಷರ ರಾಜಕೀಯ ಗುಲಾಮಗಿರಿಂದ ,ನಾವೆಲ್ಲ ಅಮೆರಿಕನ್ನರ ಅರ್ಥಿಕ ಗುಲಾಮರಾಗುತ್ತಿದ್ದೆವೆ ಎಂಬ ಭಾವನೆ ತೀವ್ರವಾಗತೊಡಗಿತು. ಹಾಗೆ ಮೊನ್ನೆ ಡಾಲರ ಬೆಲೆ ನಲವತ್ತಿಕ್ಕಿಂತ ಕೆಳಗೆ ಕುಸಿದಾಗ, ಸಹೋದ್ಯೊಗಿ ನೀಡಿದ ಹೇಳಿಕೆ " ಅಮೆರಿಕ್ಕನ್ನರು ಮತ್ತು ಅವರ Ecomony ಚೆನ್ನಾಗಿದ್ದರೆ ಮಾತ್ರ ನಾವು ನೆಮ್ಮದಿಯಾಗಿರಲು ಸಾದ್ಯ " ಎನ್ನುದು ಎಷ್ಟು ಸರಿ ? ತಪ್ಪು ? ಅನ್ನೊದನ್ನ ರಾಹುಲನ ಮನಸ್ಸು ಯೊಚಿಸತೊಡಗಿತು.ಎಲ್ಲಾ ಜಾಗತಿಕರಣದ ಮಾಯೆ.ಒಂದು 30X40ಸೈಟ ಕೊಂಡು,ಒಂದು ಮನೆ ಕಟ್ಟಿಸಿ, ಸಾಯೋವರಗೆ EMI ಕಟ್ಟುತ್ತ ತಂಮ ಜೇವನದ ಸಾರ್ಥಕತೆ ಕಂಡುಕೊಂಡಿರುವ ಸಹೋದ್ಯೋಗಿಗಳಂತೆ ನಾನು ಆಗಬೇಕಂದರೆ ಈಸಲ ಒಳ್ಳೆ ರೇಟಿಂಗ ಮತ್ತು ಪ್ರಮೋಶನಗಾಗಿ ಪ್ರಯತ್ನಿಸಬೇಕು, ಆದರೆ ಇಲ್ಲಿ ಹೊಸದಾಗಿ ಬಂದವರಿಗೆ ಮಣೆ ಹಾಕುತ್ತ ,ಹಳಬರನ್ನು ಕಡೆಗಣಿಸುತ್ತ ,ನಾವು ಕೊಟ್ಟಿದನ್ನು ತಗೊಂಡು ಮುಚ್ಚಕೊಂಡು ಇರು ಅನ್ನೊ ಈ ಕಂಪನಿಯಲ್ಲಿ ನನ್ನಾಸೆ ಕೈಗೂಡುವಂತಿಲ್ಲ ಎನಿಸಿ,ಬೇರೆ ಕಂಪನಿಗೆ ಹೊಸಬನಾಗಿ ಹೋಗಿ,ಹೆಚ್ಚು ಹಣ, ಅಧಿಕಾರ ಪಡೆಯಿಲೆ? ಅನ್ನುವ ಜಿಜ್ಘಾಸೆ ಶುರುವಾಯಿತು.ಬುದ್ದನಂತೆ " ಆಸೆಯೆ ದು:ಖಕ್ಕೆ ಮೂಲ" ಎಂಬ ನುಡಿಯನ್ನು ಅನುಸರಿಸಿ ನಿರ್ಲಿಪ್ತವಾಗಿರೋಣ ಎನ್ನುವದಕ್ಕೆ ಮನಸ್ಸು ಒಪ್ಪಲಿಲ್ಲ.
ಸಾಫ್ಟವೇರ ಬಂದದ್ದರಿಂದಲೇ, ಬೆಂಗಳೂರಿನ ರಿಯಲ ಎಸ್ಟೇಟ, ಮಧ್ಯಮ ವರ್ಗದ ಜನರಿಗೆ ಗಗನಕುಸುಮವಾಯಿತು ಎನ್ನುವ ಯೊಚನೆಯಿಂದ ಹಿಡಿದು ನಾನು ಸಾಫ್ಟವರನಲ್ಲಿ ಇರದಿದ್ದರೆ ಎನು ಮಾಡುತ್ತಿದ್ದೆ? ಮೆಕ್ಯಾನಿಕಲ ಇಂಜಿನಿಯರ ಓದಿದರಿಂದ ಯಾವುದೊ ಕಂಪನಿಯಲ್ಲಿ ಡಿಸೈನ ಅಥವಾ ಪ್ರೊಡಕ್ಷನ ಇಂಜಿನಯರ್ರೊ ,ಇನ್ನೆನೋ ಆಗಿರುತ್ತಿದ್ದೆ.ಯಾರು ಎನೇ ಹೇಳಲಿ ಸಾಫ್ಟವೇರ ಇಂಡಿಸ್ಟ್ರಿಯಿಂದ ಸಾವಿರಾರು ಜನಗಳ ಜೀವನ ಪಾವನವಾಗಿರೊದು ಸುಳ್ಳಲ್ಲ,ಎಷ್ಟೊ ಜನರಿಗೆ ನೇರ ಪರೋಕ್ಷ ಉದ್ಯೋಗಗಳನ್ನು ಕಲ್ಪಿಸಿರುವ ಸಾಫ್ಟವೇರನ್ನು ತೆಗಳುವುದು ಎಷ್ಟು ಅರ್ಥಪೂರ್ಣ? ನಿರೋದ್ಯೊಗ ಸಮಸ್ಯೆಯನ್ನು ನಮ್ಮ ಘನ ಭಾರತ ಸರ್ಕಾರ ಕಳೆದ ೬೦ ವರ್ಷಗಳಲ್ಲಿ ,ಎಷ್ಟು ಪರಿಹರಿಸಿದೆ ? ಅದಕ್ಕಿಂತ ಹೆಚ್ಚು ಜಾಬ್ಸಗಳನ್ನ ಸಾಫ್ಟವೇರ ಕಂಪನಿಗಳು ನೀಡಿವೆ.ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಬ್ರಷ್ಟಾಚರ ,ಲಂಚಗುಳಿತನವಿಲ್ಲ,ಗುಂಪುಗಾರಿಕೆವಿದ್ದರೂ ಸಹ ಪ್ರತಿಭೆಯೊಂದೇ ಮೂಲವಾಗಿ ಬೇಕಾಗಿರುವದು ಎಂಬ ಇತ್ಯಾದಿ ಯೊಚನೆಗಳು ಮನದಲ್ಲಿ ಬಂದು ,ಗೀತೆಯ ಉಪದೇಶದಂತೆ "ಕರ್ಮ ಮಾಡು ಫಲ ಮಾತ್ರ ನಿರಕ್ಷೀಸಬೇಡ" ಎಂದುದನ್ನ ಅನುಷ್ಠಾನಕ್ಕೆ ಇಲ್ಲಿಯೂ ತರಬೇಕಂದು ನಿರಾಳಾಗಿ ತನ್ನ ಕೆಲಸದಲ್ಲಿ ಗಮನಹರಿಸಿದ.

Monday, October 01, 2007

ಬೇಲೂರಿನ ಚನ್ನಕೇಶವ ದೇವಾಲಯ


ಮೊನ್ನೆ ಪ್ರವಾಸದಲ್ಲಿ, ಬೇಲೂರಿನ ಚನ್ನಕೇಶವ ದೇವಾಲಯ ಗೆಳಯ ಶಿವನ ಕ್ಯಾಮರಾ ಕಣ್ಣಿಗೆ ಬಿದ್ದದ್ದು ಹೀಗೆ......

Tuesday, July 03, 2007

ಜೋಕರ...ಬ್ರೋಕರ....ಬ‌ಕ‌ರಾ

ಮೊನ್ನೆ ಪೇಪರನಲ್ಲಿ ಮಾಜಿ ನಿದಾನಿಗಳ ಉವಾಚ "ಕಾ0ಗ್ರೇಸ್ಸಿನ ನಾಯಕರೆಲ್ಲಾ ಜೋಕರಗಳು " ಅ0ತ ಹೇಳಿ ತಮ್ಮ ಗದ್ಲವನ್ನು ಮು0ದುವರಿಸಿದ್ದಾರೆ. ಸನ್ಮಾನ್ಯರ ಕಣ್ಣು ಕೆಸರಿನ ಕಮಲದಿ0ದ ಮೇಡ0ನ ಹಸ್ತದತ್ತ ಏಕೆ ಹೊರಳಿತು ಅನ್ನೊದೇ ಯಕ್ಷಪ್ರಶ್ನೆ..ಕಳೆದ ಚುನಾವಣೆಯಲ್ಲಿ ಚಲಾಯಿಸಿದ ಮತಗಳಲ್ಲಿ ಕೇವಲ 4%ಕ್ಕಿ0ತ ಸ್ವಲ್ಪ ಮತ ಪಡೆದು ಆಳುತ್ತಿರುವ ಜೆಡಿಎಸ್,ಕರ್ನಾಟಕವೆ0ದರೆ ಕೇವಲ ಹಾಸನ ,ರಾಮನಗರ ಅ0ದುಕೊ0ಡು ಅಲ್ಲಿ ಮಾತ್ರ ಯೋಜನಗಳನ್ನ ಜಾರಿ ಮಾಡ್ತಾ ಇರೋದು ಎಳ್ಳಷ್ಟೂ ಸರಿಯಲ್ಲ.
ಮೇಲಿನ ಹೇಳಿಕೆಗೆ ಕಾ0ಗ್ರೇಸ್ಸ್ ನಾಯಕರ ಜವಾಬು " ಸಿ.ಎಮ್. ಕುಟ0ಬದವರೆಲ್ಲಾ ಲ್ಯಾ0ಡ್ ಬ್ರೋಕರಗಳು"ಬಹುಶ್: ಅದಕ್ಕೆ ಇರಬಹುದು ನಮ್ಮ ಮುಖ್ಯಮ0ತ್ರಿಗಳು ಆಸ್ತಿ ವಿವರ ಸಲ್ಲಿಸಲು ಸಮಯ ಕೇಳಿದ್ದಾರೆ. ಪ್ರಾಯಶ್: ಎಲ್ಲಿಲ್ಲಿ ,ಎಷ್ಟೇಷ್ಟು ಇದೆ (ಅದಿಕ್ಱತ,ಅನಿಧೀಕ್ಱತ) ಅನ್ನೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಇನ್ನು ಕಾ0ಗ್ರೇಸ್ಸ್ ನಾಯಕರಿಗೆ ಮೇಡಮ್ ಹೇಳಿದ್ದೇ ವೇದವಾಕ್ಯ. "ಸೂರ್ಯ ಪಶ್ಛಿಮದಲ್ಲಿ ಹುಟ್ಟತಾನೆ" ಅ0ತ ಮೇಡ0 ಹೇಳಿದ್ದರೇ ಒಪ್ಪೋ ಜನ ಇವರು. ಈಗ‌ ನೋಡಿ ಯಾವೋದೋ ಮೂಲೆಯ‌ಲ್ಲಿದ್ದ ಪ್ರತಿಭಾ ಪಾಟೀಲ‌ರ‌ನ್ನ ತ‌0ದಿದ್ದಾರೆ. ಅದ‌ಕ್ಕೆ ನ‌ಮ್ಮ ಕಾ0ಗ್ರೇಸ್ಸ್ ನಾಯಕರುಕ‌ಮ‌ಕ್ ಕಿಮ‌ಕ್ ಎನ್ನದೇ ಒಪ್ಪಿಕೊ0ಡಿದ್ದಾರೆ. ಅಲ್ಲಿಗೆ ಬ‌ಲ‌ಹ‌ಸ್ತದ‌ಲ್ಲಿ ಪ್ರಧಾನಿಯ‌ವ‌ರ‌ನ್ನ ಎಡ‌ಹ‌ಸ್ತದ‌ಲ್ಲಿ ರಾಷ್ಟ್ರಪ‌ತಿಯ‌ವ‌ರ‌ನ್ನ ಕುಣಿಸ‌ಬ‌ಹುದು. ಮೇಲಿನ ಎರಡು ಹೇಳಿಕೆಗೆ ಪೂರ‌ಕ‌ವಾದ‌ ಹೇಳಿಕೆ "ನಿಮ್ಮನ್ನ ಓಟು ಕೊಟ್ಟು ಅರಿಸಿತ‌0ದ‌ ಮ‌ತ‌ದಾರ‌ರು ಬ‌ಕ‌ರಾಗಳು".ಅಲ್ಲಿಗೇ,

ಕಾ0ಗ್ರೇಸ್ಸಿನ ನಾಯಕರೆಲ್ಲಾ ಜೋಕರಗಳು
ಸಿ.ಎಮ್. ಕುಟ0ಬದವರೆಲ್ಲಾ ಲ್ಯಾ0ಡ್ ಬ್ರೋಕರಗಳು
ಓಟು ಕೊಟ್ಟು ಅರಿಸಿತ‌0ದ‌ ಮ‌ತ‌ದಾರ‌ರು ಬ‌ಕ‌ರಾಗಳು

Wednesday, June 13, 2007

ಅವರಣದ ಚರ್ಚೆ

Newspaper ನೋಡಿ, ಅವರಣ ಕೃತಿಯ ಬಗ್ಗೆ ಏನಾದರೂ ಇದ್ದೇ ಇರುತ್ತೆ. TV on ಮಾಡಿ ಅಲ್ಲೂ ಕೂಡಾ ಅದರ ಬಗ್ಗೆ ಚರ್ಚೆ.ಸಪ್ನ bookstall ಇತ್ತಿಚಿಗೆ ಸುಮಾರು 2000 ಪ್ರತಿಗಳಿಗೆ Order ಮಾಡಿದೆ ಅನ್ನೋ ಸುದ್ದಿ,ಹತ್ತನೆ ಮುದ್ರಣ ಈ ಕೃತಿಯ ಜನಪ್ರಿಯತೆಯನ್ನು ತೋರಿಸುತ್ತದೆ.ಏನೇ ಅನ್ನಿ ಮೂರ್ತಿಗಳು ಪರೋಕ್ಷವಾಗಿ ಈ ಜನಪ್ರಿಯತೆಯೇಗೆ ಸಾಕ್ಷಿ. ಕನ್ನಡ ಸಾಹಿತ್ಯ ಜಗತ್ತು 'ಅವರಣ ಮಾಯಾ'ವಾಗಿಬಿಟ್ಟಿದೆ. ಗೆಳೆಯ ಪ್ರಸನ್ನ ಕಳಿಸಿರುವ ಸಾಲುಗಳು,

"ಒಂದು ಕೃತಿ ನಮ್ಮ ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಹೋಗಳುವ ನಾವು , ಮತ್ತೊಂದು ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಈ ಭಾವನೆ ಏಕೆ ? ಆವರಣ ಕಾದಂಬರಿ ಓದುಗನಿಗೆ , ನಮಗೆ ಗೊತ್ತಿರದ ಎಷ್ಟೋ ಹೊಸ ವಿಷಯ ತೆರೆದು ಇಡುತ್ತೆ. ಈ ಕೃತಿ ಯಲ್ಲಿ ಬರುವ ವಿಷಯದ ಸತ್ಯ ಅಸತ್ಯ ಚರ್ಚೆ ಮಾಡಲು ತೊಡಗದೆ ನಿಂದನೆ ಮಾಡುವುದು ಎಷ್ಟು ಸರಿ. ಆವರಣ ಕಾದಂಬರಿಯಲ್ಲಿ ಯಾವ ಸತ್ಯ ಇಲ್ಲವೇ ? ಬರಿ ಊಹೆ, ಕಲ್ಪನೆ ಕಾದಂಬರಿಗಳ ಜೊತೆ ಅಂಕಿ ಅಂಶ ಇರುವ ಕಾದಂಬರಿ ಬರೆಯುವ ಬಗೆ ತಪ್ಪೇ. ಈ ತೀರ್ಮಾನ ಕೊಡುವರು ಯಾರು ? ಆವರಣಾವನ್ನು ಒಬ್ಬ ಅನಾಮಿಕ ಬರೆದಿರುವ ಕೃತಿ ಎಂದು ಓದಿ ಅದರ ಚರ್ಚೆ ಮಾಡಿ ನಂತರ ಲೇಖಕನನ್ನು ಸಂವಾದಕ್ಕೆ ಕರೆದು ಚರ್ಚೆ ಮಾಡಲಿ . ಇದಕ್ಕೆ ಮೂರ್ತಿ , ಬೈರಪ್ಪ ನವರು ಸಿದ್ದವ್ವೇ ???"

ನೀವು ಏನಂತೀರಾ???

Sunday, April 29, 2007

ಚಪ್ಪಲಿಯ ಪ್ರಹಸನ

(ಹಿನ್ನಲೆ:ನಾನು, ಮೈಸೂರಿನವರಾದ ಗಿರಿ ಅವಿನಾಶ ಮತ್ತು ಗುರಂಗಾವದ ರಿಷಿ ಜೊತೆ ಮೈಸೂರ ಸುತ್ತಾಡುತ್ತಾ ಇದ್ದೆವು. ಮೈಸೂರ ಅರಮನೆ ಅವರಣದಲ್ಲಿರುವ ಚಪ್ಪಲಿ ಸ್ಟ್ಯಾಂಡಿನ ಸ್ಠಳ... ಅರಮನೆ ಒಳಭಾಗವೆಲ್ಲಾ ನೋಡಿ ಈ ಸ್ಥಳಕ್ಕೆ ಬಂದೆವು.)

'ಎಲ್ಲಯ್ಯಾ ನನ್ನ ಚಪ್ಪಲಿ? ನಾವು ನಾಲ್ಕು ಜೊತೆ ಚಪ್ಪಲಿಗೆ ಟೊಕನ್ ತಗೊಂಡಿದ್ವಿ.ಈಗ ನೋಡಿದರೇ ಮೂರು ಜೊತೆ ವಾಪಸ್ಸು ಕೊಡ್ತಾ ಇದೀಯಾ.ಇಲ್ಲಿ ಯಾಕೆ ಕೆಲ್ಸಾ ಮಾಡ್ತಾ ಇದೀಯಾ?' ಅಂತ ಅವಿನಾಶ ಚಪ್ಪಲಿ ಕಾಯುವವನ ಜೊತೆ ವಾದ ಮಾಡ್ತಾ ಇದ್ದ.ಚಪ್ಪಲಿ ಕಾಯುವವನ 'ಸೋಮಿ, ನಿಮ್ಮ ಕಾಲು ಹಿಡಕೋತಿನಿ, ಹೆಂಗಾರ ಅಡ್ಜುಸ್ಟ್ ಮಾಡಿಕೊಳ್ಳಿ' 'ಅಡ್ಜುಸ್ಟ್ ಹೇಗೆ ಮಾಡಕೊಳ್ಳೊದು? ನೀ ಇರ್‍ಓದೇ ಯಾಕೆ ಇಲ್ಲಿ? ನಿನಗೆ ಕಾಸು ಕೊಡದು ಚಪ್ಪಲಿ ಕಾಯೊಕೆ ತಾನೆ? ನಾಲ್ಕು ಜೊತೆಯಲ್ಲಿ ಕಾಸ್ಟ್ಲಿಯಿರೋ ನಂದೇ ಚಪ್ಪಲಿ ಯಾಕೆ ಕಳಿಬೇಕು...ಕಳದರೇ ಎಲ್ಲಾ ಜೊತೆ ಕಳಿಬೇಕು' 'ಇಲ್ಲೇ ಮೇಲಿನ ಸಾಲಿನಲ್ಲಿ ಇಟ್ಟಿದ್ದೆ. ಯಾರೋ ಹುಡಗರು ಎತ್ಕೊಂಡು ಹೋದ್ರು....'
ಅವಿನಾಶ ಒಳಗಡೆ ಹೋಗಿ ಚಪ್ಪಲಿಗಳ ಸಾಗರದಲ್ಲಿ ತನ್ನ ಚಪ್ಪಲಿ ಹುಡಕಲು ಶುರು ಮಾಡಿದ... ಜೊತಗೆ ಇದ್ದ ನಾವು ಅವನಿಗೆ ಸಹಾಯ ಮಾಡತೊಡಗಿದೆವು. ನನಗೆ ಮತ್ತು ಗಿರಿಗೆ ಚಪ್ಪಲಿ ಮಾತ್ರ ಕದ್ದೊದಿದಾರೆ ಅಂತ ಖಂಡಿತವಾಗಿ ಅನಿಸತೊಡಗಿತು.ಇದೇ ಸಮಯದಲ್ಲಿ ಒಂದು ಅಂಧ್ರದ ಗ್ಯಾಂಗು ತಮ್ಮ ಎರಡು ಜೊತೆ ನೈಕೆ ಶೊಸ್ ಕಾಣ್ತಾ ಇಲ್ಲಾ ಅಂತ ಹುಡಕಲು ಶುರು ಮಾಡಿದಾಗ,ಅವಿ ಅವರ ಜೊತೆ ಸೇರಿ ಮತ್ತೆ ಗಲಾಟೆ ಶುರು ಮಾಡಿದ.ಆಗ ಅಲ್ಲಿದ್ದ ಒಬ್ಬ ಖಾಕಿ ಮೀಸೆ ಬಂದು 'ಗಲಾಟೆ ಯಾಕೆ? ' ಅಂದದೇ ತಡ,ಚಪ್ಪಲಿ ಕಳೆದುಕೊಂಡು ಸಿಟ್ಟಿನಲ್ಲಿ ಇದ್ದ ಅವಿ,'ಇಲ್ಲೇನು ನೀವು ಅಲ್ಲಾಡಸಕೊಂಡು ಡ್ಯೂಟಿ ಮಾಡ್ತಾ ಇರೋದು? ಅಂತ ಮರ್ಮಕ್ಕೆ ತಾಗುವಂತೆ ಮಾತಾಡಿ,'ನಾನು ಬೇರೆಯವರ ಚಪ್ಪಲಿ ಎತ್ಕೋಂಡು ಹೋಗತೀನಿ.' ಮೀಸೆ,'ಆದೇಗೆ ಎತ್ಕೋಂಡು ಹೊಯಿತೀಯಾ? ನೀನು ಯಾರು?,ಎತ್ತ ಅಂತ?' ಕುಲಗೋತ್ರ ವಿಚಾರಿಸೋಕೆ ಬಂದ. ಅದಕ್ಕೆ ಸೊಪ್ಪು ಅವಿ ಸೊಪ್ಪು ಹಾಕದೇ ನಾನು ಮೈಸೂರಿನವನೇ ಅಂತ ಗುರುಗುಟ್ಟಿ ಗಲಾಟೆ ಮುಂದುವರಿಸಿದ. 'ಇಲ್ಲಿ ಗಲಾಟೆ ಮಾಡಬೇಡಿ.ನಮ್ಮ ಸಾರ್ ಹತ್ರ ಕರೆದುಕೊಂಡು ಹೋಗತಿನಿ, ಅಲ್ಲಿ ಕಂಪ್ಲೇಂಟ ಕೊಡಿ' ಅಂತ ಮೀಸೆ ಹೇಳಿ ಅಲ್ಲಿಗೆ ಕರೆದುಕೊಂಡು ಹೊದಾಗ, ಆ ಮೀಸೆಯ ಸಾರ್, ಅರಮನೆ ಕಚೇರಿಯಲ್ಲಿ ದೂರು ಕೊಡಿ, ಅವರು ಆ ಕೆಲಸದವನನ್ನ ವಿಚಾರಿಸಿಕೊಳ್ಳತಾರೆ ಅಂತ ನಮ್ಮನೆಲ್ಲಾ ಸಾಗಹಾಕಿದ. ಕಚೇರಿಯಲ್ಲಿ ಅಂಧ್ರದ ಗ್ಯಾಂಗನಲ್ಲಿರುವ ಅಮ್ಮಾಯಿ ಅಲ್ಲಿರುವ ಅಫೀಸಿರ್ ಜೊತೆ ಸಿಕ್ಕಾಪಟ್ಟೆ ವಾದ ಮಾಡಿ ಅವಿನಾಶಗೆ ಪೈಪೋಟಿ ಕೊಟ್ಟಳು. ಅಧಿಕಾರಿ ಆ ಕೆಲಸಗಾರನನ್ನು ಕರೆಸಿ, 'ನಿನ್ನನ್ನು ಡಿಸಮಿಸ್ ಮಾಡಿಸಿತೀನಿ,ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಿದರೂ ಮತ್ತೆ ಇಲ್ಲೆ ಬಂದು ಸೇರಿ ನನ್ನ ಪ್ರಾಣ ಇಂತೀರಾ. ಸರಿಯಾಗಿ ಕೆಲ್ಸ ಮಾಡೋಕೆ ಬರೊಲ್ವಾ? ಕೌಂಟರನಲ್ಲಿ ಕತ್ತೆ ಕಾಯಿತಾ ಇರತಿಯಾ? ಬೊ.... ಮಗನೇ' ಅಂತಾ ತನ್ನ ಬಿ.ಪಿ. ಬೇರೆ ರೈಸ್ ಮಾಡ್ಕೋಂಡ ಉಗಿತ ಮುಂದುವರಿಸಿದ. ಇದೇ ಸಮಯದಲ್ಲಿ ಈ ಪ್ರಹಸನಕ್ಕೆ ಮಂಗಳೂರಿನ ಕಡೆ ಮಾಣಿ ಎಂಟ್ರಿ ಕೊಟ್ಟು,'ಎಂಥ ಮಾರಾಯ,ಎಂಥ ಕೆಲಸ ಅಗೊಹೊಯಿತು,ಶೂಸ್ ತಕ್ಕೊಂಡು ೨ ವಾರ ಬೇರೆ ಅಗಿರಲಿಲ್ಲ...ಕದ್ದುಕೊಂಡು ಹೋಗಿದ್ದಾರೆ,ಇವರದೇಲ್ಲಾ ಇಲ್ಲೊಂದು ಗ್ಯಾಂಗು ಇದೆ,ಇದೇನು ಅರಮನೆ ಅವರಣವಾ? ಇಲ್ಲಾ ಕಳ್ಳರ ಮನೇನಾ? ಬರೆಗಾಲಲ್ಲಿ ನಡೆಯುಂತೆ ಅಯಿತಲ್ಲಾ' ಅಂತ ಒಂದೇ ಸಮನೆ ಪಿರಿಪಿರಿಯಾಗಿ ಅಧಿಕಾರಿಗೆ ಹೇಳತೊಡಗಿದ. ನಾವೆಲ್ಲ ಸೇರಿದರಿಂದ ಅಧಿಕಾರಿ ಕೊಣೆ ತುಂಬಿ ಹೋಗಿ,ಅಧಿಕಾರಿ ಆ ಕೆಲಸದವನಿಗೆ 'ನಿನ್ನ ೨ ವರ್ಷದ ಸಂಬ್ಳ ಕಟ್ ಮಾಡಿದ್ರು ಆ ಕಾಸು ಗಿಟ್ಟೊಲ್ಲಾ, ಯಾರಿಗೆ ಕೊಟ್ಟಿದೀಯಾ ಹೇಳು'ಅಂದಾಗ ಆತ ಕಪ್ಪೆ ವಟಗುಟ್ಟುವಂತೆ ' ಯಾರ್ರೊ ಹುಡಗರು ಎತ್ತ್ಕೊಂಡರು,ಎನೋ ಅಗಿಬಿಟ್ಟಿತ್ತು 'ಎಂದು ಹಳೇ ಪ್ಲೇಟ ಹಾಕತೊಡಗಿದ. ಹಿಂದಿನ ದಿನ ಜಾತ್ರೆಯ ಕಾರಣದಿಂದ ಮೇಲುಕೋಟಯ ಚಲುವನರಸಿಂಹ ದರ್ಶನವಾಗದ ಹತಾಶೆ,ಬಲಮುರಿಯಲ್ಲಿ ಅಟ್-ಲಿಸ್ಟ ಈಜು ಮಾಡಲು ಇರದಷ್ಟು ಇಲ್ಲದ ನೀರಿನ ಮೇಲಿನ ತಾಪ, ಕೆಅರ್ ಎಸ್ ಗೆ ಕಳೆದ ೫೧ ದಿನಗಳಿಂದ ಬಂದ್ ಮಾಡಿದ ಕೋಪ,ಎಲ್ಲ ಸೆರಿ ಅವಿಗೆ ಪಿತ್ತ ನೆತ್ತಿಗೆ ಏರಿ, 'ಮಗನೇ,ಸಾವಿರಾರು ರೂಪಾಯಿ ಚಪ್ಪಲ್ಲು/ಶೂಸ್ ಮಾತ್ರ ಹೇಗೆ ಕದ್ದುಹೊಯಿತು? ಬಾಕಿ ಎಲ್ಲಾ ಯಾಕೆ ಕಳೇದಿಲ್ಲಾ... ನೀವೆಲ್ಲಾ ಸೇರಿ ಚೊರ-ಬಜಾರನಲ್ಲಿ ಮಾರಿ ಕಾಸು ಮಾಡತಾ ಇದೀರಾ...ನಿನ್ನ ಸುಮ್ನೆ ಬಿಡಬಾರದು' ಅಂತ ಎನೇನು ಸೇರಿಸಿ ಭಾವಗೀತೆಯಂತೆ ಆತನಿಗೆ ಸರಿಯಾಗಿ ಇನ್ನೊಮ್ಮೆ ಉಗಿದ...ಈ ಬಯ್ಗುಳದ ಭಾವಗೀತೆಗೆ ಕೊರಸ್ ಆಗಿ ಆಂದ್ರದ ಅಮ್ಮಾಯಿ ಮತ್ತು ಮಂಗಳೂರಿನ ಮಾಣಿ ಜೊತೆ ಕೊಟ್ಟರು.
ಇಂತಿಪ್ಪ ಘಟನೆಗಳು ನಡೆದ ಮೇಲೆ ,ಅಲ್ಲಿರುವ ಅಧಿಕಾರಿ 'ನೀವೆಲ್ಲಾ ಒಂದು ಅರ್ಜಿ ಬರೆದುಕೊಡಿ,ನಾವು ಅದರೆ ಮೇಲೆ ವಿಚಾರಣೆ ಮಾಡಿ ,ಆತನ ಸಂಬಳದಿಂದ ಕಾಸು ಕಟ್ ಮಾಡಿ ನಿಮಗೆ ಪೊಸ್ಟ್ ಮೂಲಕ ಕಳಿಸಿಕೋಡುತ್ತೆವೆ'ಅಂತ ಹೇಳಿದಾಗ ಆಂದ್ರದ ಅಮ್ಮಾಯಿ "How much time it will take?" ಕೇಳಿದಕ್ಕೆ ಒಂದು ವಾರ ಅಗುತ್ತೆ ಅಂದಾಗ ,ಸರ್ಕಾರಿ ಕೆಲಸ ದೇವರ ಕೆಲಸ...ದೇವರ ಕೆಲಸ ನೈವದ್ಯ ಕೊಟ್ಟು ಮೇಲೂ ಬಸವನಹುಳು ತರಾ ಸಾಗುವದನ್ನ ಕಂಡುದನ್ನ ಕಂಡಿದ್ದ ನನಗೆ ,ಗಿರಿಗೆ ಚಪ್ಪಲಿಯಂತು ಹೋಯಿತು...ಇನ್ನು ನಮ್ಮ ದುರ್ವಾಸಿ ಮುನಿಗಳ ಅಪರಾವತಾರದಂತಿರುವ ಯಾವಗಲಾದರೂ ಬರ್ಲಿ ಅಂತ ಹೊರಗಡೆ ಕಾಯಿತಾ ನಿಂತೆವು...೧೦-೧೫ ಅವಿ ಬಂದು " we should teach him a lesson " ಮುಂದೆ ಬರುವವರಿಗೆ ತೊಂದರೆ ಅನುಭವಿಸಬಾರದು ,ನಮ್ಮ ಮೈಸೂರಿಗೆ ಕೆಟ್ಟ ಹೆಸ್ರು ಬರಬಾರದು' ಅಂತ ಹೇಳಿ ಕಾರಿನತ್ತ ನಡೆಯುತ್ತಾ.. " Mostly ಚಪ್ಪಲಿ ಸ್ಟಾಂಡಿನಲ್ಲಿ ಚಪ್ಪಲಿ ಕಳೆದುಕೊಂಡ ಮೊದಲ ಬಕರಾ ನಾನೇ ಇರಬೇಕು ಅಂತ ಹೇಳಿ ಗಿರಿ ಮನೆಯತ್ತ ಕಾರು ನಡೆಸಿದ... ಕಾರಿನಲ್ಲಿ ಅವಿ " Aisa pehle baar huwa hain 17-18 saalo mein....." ಅಂತ ಗುನಗುನಿಸುತ್ತಾ ಕಾರು ಮನೆಯತ್ತ ಚಲಾಯಿಸಿದ.
ಆವಿ ಇನ್ನುವರಗೆ ತನ್ನ ಚಪ್ಪಲಿಯ ಕಾಸು ಯಾವಗ ಬರುತ್ತೆ ಅಂತ ಕಾಯಿತಿದಾನೆ.

Thursday, April 12, 2007

ಹನಿಗವನಗಳು

ಅರಳು-ಮರಳು

ಅರವತ್ತರ ಅರಳು ಮರಳಿನ ಮೂರ್ತಿ
ಇವರಿಗೇ ಗೊತ್ತಿಲ್ಲವೇ ರಾಷ್ಟ್ರಗೀತೆಯ ಕೀರ್ತಿ ?
ಬೆಳಿಸಿಕೊಳ್ಳಿ ,ನಾಡಿನ ನೆಲ-ಜಲದ ಬಗ್ಗೆ ಪ್ರೀತಿ....


ಗೊಸುಂಬೆಗಳು....

ನಮಗೆಕಪ್ಪಾ ಕಾವೇರಿ ನೀರು
ನಾವು ಕುಡಿಯೋದು ಬೀಸಿಲೇರಿ ನೀರು/ಬೀರು
ಅನ್ನೊ ಗೊಸುಂಬೆಗಳ ನಡುವೆ
ನ್ಯಾಯ ಅನ್ನೊದು ಮರೀಚಿಕೆಯೇ!!!!!!

ಮಳಿ.....

ಎಲ್ಲಿ ಹೋಗಿದಿ ಮಳಿ
ಒಣಗ್ಯಾವ ಹೊಲದಾನ ಬೆಳಿ
ಬತ್ತ್ಯಾವ ಊರಿನ ಹೊಳಿ
ತಪ್ಪ್ಯಾವ ರೈತರ ಜೀವನದ ಹಳಿ
ಅಡು ಭೂತಾಯಿ ಜೊತೆ ಓಕುಳಿ
ಆಗ ನೋಡು ಎಲ್ಲಾರ ಮಕದ್ಯಾಗ ಕಳಿ.....

Sunday, April 08, 2007

ತೇಜಸ್ವಿಯವರಿಗೊಂದು ಭಾವಪೂರ್ಣ ಶ್ರಧ್ದಾಂಜಲಿ........

ಮಾಯಾಲೋಕದ ಕಿಂದರಜೋಗಿ
ಸಹಜಕೃಷಿಯ ಹಠಯೋಗಿ
ನಿಗೂಡ ಜಗತ್ತಿನ ಮಾಯಾವಿ
ನಮ್ಮೆಲ್ಲರ ಪ್ರೀತಿಯ ಸಾರ್ ,ತೇಜಸ್ವಿ

ಅಡು ಮುಟ್ಟದ ಸೊಪ್ಪಿಲ್ಲ
ತೇಜಸ್ವಿ ಬರೆಯದ ವಿಷಯವಿಲ್ಲ
ಪಶ್ಚಿಮ ಘಟ್ಟದಲ್ಲಿ ತಿರುಗದ ಜಾಗವಿಲ್ಲ
ಸಿದ್ದರೀತಿಯ ಮಾದರಿಯಲ್ಲಿ ಬರೆಯಲಿಲ್ಲ

ಹುಚ್ಚು ಹಿಡಿಸಿದ ಕರ್ವಾಲೋ
ನೀವು ಹಿಡಸದಿದ್ದರೆ ನ್ಯಾಸ್ಟಿಪೇಲೋ
ಕೋಲಾಜ್ ಮೂಲಕ ಮಾಯಾಲೋಕ ತೋರಿದ ಚಿತ್ರಗಾರ
ಕಾಡು,ನಾಡಿನ ಹಕ್ಕಿಗಳ ಪರಿಚಯಿಸಿದ ಪೊಟೊಗ್ರಾಪರ

ಏಲಕ್ಕಿಯ ಕಾಳಸಂತೆಯ ಜುಗಾರಿಕ್ರಾಸ್
ತಬರನ ಕತೆ, ಅಬಚೂರಿನ ಪೊಸ್ಟಾಪಿಸ್
ಘಾಟಿಯ ರಗಳೆಯ ಖುದ್ದೂಸ್ ಎಕ್ಸಪ್ರೆಸ್
ಅಣ್ಣನ ನೆನಪಿನಲ್ಲಿ ಹಾಸುಹೊಕ್ಕಾಗಿರುವ ಶಾಮಣ್ಣನ ಬೈಕು ಪ್ರಿನ್ಸ್

ಹಾರುವ ಓತಿ ಬೆನ್ನು ಹತ್ತಿದ ಮಂದಣ್ಣ
ಹಲವಾರು ವೃತ್ತಿ ಮಾಡಿದ ಕರಾಟೆ ಮಂಜಣ್ಣ
ಜೀವದ ಗೆಳಯರಾದ ರಾಮದಾಸ್,ಶಾಮಣ್ಣ
ಎಲ್ಲಾ ಬಿಟ್ಟು ಮೌನವಾಗಿ ಎಲ್ಲಿ ನಡೆದಿರೇಣ್ಣ?

ಮೂಡಿಗೇರೆ ತೋಟವೀಗ ಅಕ್ಷರಶ್:ನಿರುತ್ತರ
ಅಲ್ಲೀಗ ,ಮೌನವಂದೇ ನಿರಂತರ!
ಕುವೆಂಪು,ಕಾರಂತರ ಕಲಾಸಂಗಮವಾಗಿರುವ ಪೂರ್ಣಚಂದಿರ
ತೇಜಸ್ವಿಯವರ ಲೇಖನ,ಕೃತಿಗಳೆಲ್ಲ ಅಜರಾಮರ!

Wednesday, March 28, 2007

ಹೂವಿನ ಘಮ್ಮತ್ತು.....

"ಹೂವಿಲ್ಲದೆ ಬದುಕಿಲ್ಲ. ಹೂ ಅರಳದ ದಿನವಿಲ್ಲ. ಇಡೀ ಭೂಮಂಡಲವನ್ನೇ ಬೇಸೆಗೆ ಆಳುತ್ತಿರುವ ಸಂದರ್ಭದಲ್ಲೂ,ನಾಡನ್ನು ಬರಗಾಲ ಕಾಡುವ ಕ್ಷಣದಲ್ಲೂ ಅದು ಹೇಗೋ ಹೂವು ಅರಳುತ್ತದೆ! ದೇವರ ಸನ್ನಧಿ ಸೇರಿ ಧನ್ಯವಾಗುತ್ತದೆ.ಹೂವಿಲ್ಲದೆ ಯಾವುದಾದರು ಹಬ್ಬ ನಡೆದಿದೆಯೇ ಹೇಳಿ? ಹುಟ್ಟಿದ ಕ್ಷಣ, ಮದುವೆಯಾದ ಸಂದರ್ಭ, ಪ್ರಸ್ತದ ಅಮಲಿನ ವೇಳೆಯಲ್ಲಿ ಮಾತ್ರವಲ್ಲ,ಮನುಷ್ಯನ ಕೊನೆಯುಸಿರು ಎಳೆದ ಘಳಿಗೆಯಲ್ಲೂ ಹೂವು ಜತಗೇ ಇರುತ್ತದೆ".
( ಸುನಂದಾವರ ಬೆಟ್ಟಸಾಲು ಪುಸ್ತಕದಿಂದ)

ನಾವೆಲ್ಲರೂ ಒಂದೇ. ನಮ್ಮದು ಕೂಡು ಕುಟಂಬ.ಯಾವುದೇ ಜಂಜಾಟವಿಲ್ಲ...ಜಗಳವಿಲ್ಲ.. ಮನುಷ್ಯರಂತೆ ಅತ್ಯಾಸೆ ಹೊಂದಿದವರಲ್ಲ.ಅದ್ರೂ ಮನುಷ್ಯರೂ ನಮ್ಮಲ್ಲೇ ಭೇದ-ಬಾವ ಮಾಡಿ ಅವಳು ಮೊದ್ಲು ,ಇವಳು ದ್ವಿತಿಯ ಅಂತಾ ಬಹುಮಾನ ಕೊಡುತ್ತಾರೆ. ನಾವೆಲ್ಲ ಒಂದೊಂದು ಥರಾ ಚೆನ್ನಾಗಿದ್ದೇವೆ.ನಾವೇಲ್ಲಾ ಒಟ್ಟಾಗಿ ಸೇರೊದು ಅಗಸ್ಟ್ ೧೫ ,ಜನವರಿ ೨೬ ರಂದು. ಅ ದಿನ ನಮ್ಮನೆಲ್ಲಾ ಬೇರೆ ಬೇರೆ ಪ್ರದೇಶಗಳಿಂದ ತಂದು ಲಾಲಭಾಗನಲ್ಲಿ ಪ್ರದರ್ಶನಕ್ಕೆ ಇಡುತ್ತಾರೆ. ಆ ದಿನ ನಾವೆಲ್ಲ ಜೊತೆಯಾಗಿದ್ದು ನಮ್ಮ ಕಸ್ಟ-ಸುಖಗಳನ್ನು ಹಂಚಿಕೊಳ್ಳುತ್ತೆವೆ. ಮೊದ್ಲಿನ ದಿನಗಳಲ್ಲಿ ಆ ಎರಡು ಸಂಧರ್ಭಗಳಲ್ಲಿ ಇಲ್ಲಿ ಭಯಂಕರ ರಶ್ಶು..ಇತ್ತಿಚಿನ ದಿನಗಳಲ್ಲಿ ಮೊದ್ಲಿನ ರಶ್ಶು,ಈಗ ಕಾಣೆಯಾಗಿದೆ.
ನಾವೆಂದರೆ ನಾಡಿಮಿಡಿತ,ನಾವೆಂದರ್‍ಎ ಎಂಥದೋ ಒಂದು ತುಡಿತ,ನಾವೆಂದರೆ ಈ ಜೀವ ಪ್ರತೀಕ. ನಾವ್ವೆಂದರೆ ಒಂದು ರೂಪಕ ಅಂತ ಹಲವಾರು ಕವಿಗಳು ಹಾಡಿ ಹೊಗಳಿದ್ದಾರೆ. ಅಚ್ಚ ಬಿಳಿಯದಕ್ಕೆಲ್ಲಾ ನಮ್ಮ ಮಲ್ಲಿಗೆಯದೇ ಉಪಮೆ.ಇನ್ನು ಸುಂದರವಾದ ಹುಡಗಿಯನ್ನು ವರ್ಣಿಸುವಾಗ ನಮ್ಮ ಪರಿವಾರದೇ ಸಿಂಹಪಾಲು.'ಹೂವ್ವೇ ಹೂವ್ವೇ','ಹೂವು ಚಲುವೆಲ್ಲಾ ನಂದೆದಿತು' ಅನ್ನುವ ಚಿತ್ರಗೀತೆಗಳಿಂದ ಹಿಡಿದು ಬೇಂದ್ರೆ ಮಾಸ್ತರ 'ಘಮ್ಮ ಘಮ್ಮಡಾಸತಾವ ಮಲ್ಲಿಗೆ, ನೀನು ಹೊರಟಿ ಈಗ ಎಲ್ಲಿಗೆ?' ಅನ್ನೊ ಕವಿತೆಗಳಲ್ಲಿ ಎಲ್ಲಾ ಕಡೆ ನಾವ್ವೇ ಸರ್ವಂತ್ರಾಯಾಮಿ. ಇನ್ನು ಪ್ರೇಮ ಕವಿ ಕೆ.ಎಸ್.ಎನ್ ಅವರ ಕೃತಿಯ ಮಲ್ಲಿಗೆ ಪರಿಮಳದ ಹಾಗೆ ಎಲ್ಲಾ ಕಡೆ ಹರಡಿದೆ. ನಾವೇಂದರೆ ಹೆಣ್ಣ ಬದುಕಿನ ಅವಿಬಾಜ್ಯ ಅಂಗ...

ಮುಗಿಸುವ ಮುನ್ನ:
"ಬಿಸೋ ಗಾಳಿ ಬದಲಾಗಿಲ್ಲ,ಹರಿಯೋ ನೀರು ಬದಲಾಗಿಲ್ಲ,ಹೂವು ಬದಲಾಗಲ್ಲ,ಈ ಮನುಷ್ಯ ಮಾತ್ರ ಈ ಪಾಟಿ ಬದಲಾಗಿದ್ದಾನೆ" ಅನ್ನೊ ಬಳೆಗಾರ ಚೆನ್ನಯ್ಯನ ಮಾತಿನಿಂದ ಶುರುವಾಗೋ 'ಮೈಸೂರು ಮಲ್ಲಿಗೆ' ಗೀತನಾಟಕ ನೋಡೊ ಅವಕಾಶ ಮೊನ್ನೆ ಶನಿವಾರದಂದು ಸಿಕ್ಕಿತ್ತು. ಸುಮಾರು ೨೦ ಜನ ರಂಗ ಕಲಾವಿದರು , ೨ ಗಾಯಕ/ಗಾಯಕಿಯರು ೯೦ ನಿಮಿಷಗಳಲ್ಲಿ ಅದ್ಬುತ ಮಾಯಾಲೋಕ ಸೃಷ್ಟಿಸಿಕೊಡುತ್ತಾರೆ. ಕಲಾಗಂಗೋತ್ರಿಯಿಂದ ಪ್ರದರ್ಶಿತವಾಗುತ್ತಿರುವ ಈ ಗೀತನಾಟಕ, ಡಾ. ಬಿ.ವಿ. ರಾಜರಾಂವರ ನಿರ್ದೇಶನ.ರಾಜೇಂದ್ರ ಕಾರಂತ ಕಲ್ಪನಾ ಶಕ್ತಿಯಲ್ಲಿ ಅರಳಿರುವ ಈ ಗೀತನಾಟಕ ಒಂದು ಅನ್ಯನ್ಯ ಪ್ರಯೋಗ.
ನಾಟಕ ಪೂರ್ತಿ ಸೂತ್ರದಾರ ಬಳೆಗಾರ್‍ಅ ಚೆನ್ನಯ್ಯ...ನಿಜ ಆತನಿಗೆ ವಯಸ್ಸಾಗಿದೆ. ಬೆನ್ನು ಬಾಗಿದೆ. ಶಾನುಭೋಗರ ಮಗಳು ಸೀತಮ್ಮಳ ಮರಿಮೊಗಳನ್ನು ಬೇಟಿ ಮಾಡುವ ಈತನಿಗೆ ಅಧುನಿಕತೆಯ ಅರಿವಾದ ನಂತರ ನಿಮ್ಮನ್ನು ಹಳೆಯ ಕಾಲಕ್ಕೆ ಕರೆದೊಯ್ಯುತ್ತಾನೆ. ಪ್ರೇಮ ಕವಿ ಕೆ.ಎಸ್.ನರಸಿಂಹ ಅವರ ಮೈಸೂರು ಮಲ್ಲಿಗೆಯ ಕವನ ಸಂಕಲನದ ಕವನಗಳನ್ನು ಕವಿಯೊಬ್ಬರ ಜೀವನಕ್ರಮಕ್ಕೆ ಅಳವಡಸಿ,ಪಾತ್ರಗಳನ್ನು ಕವನದಲ್ಲೇ ನಿರೂಪಿಸುವುದು ಈ ಪ್ರಯೋಗದ ವೈಶಿಷ್ಟ... "ಮನೆಯಲ್ಲೊಂದು ಮಲ್ಲಿಗೆ ಹೂ ಗಿಡ ನೆಟ್ಟು ಕನ್ನಡದ ಕಂಪನ್ನು ಹರಿಸಿರಿ..." ಎಂದು ಕಡೆಯಲ್ಲಿ ಸಂದೇಶ ಮೆಚ್ಚುಗೆ ಗಳಿಸುತ್ತದೆ...
ಈ ವಾರದ ಶನಿವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ಪುನ್: ಪ್ರದರ್ಶಿತವಾಗುತ್ತಿರುವ ಮೈಸೂರು ಮಲ್ಲಿಗೆಯನ್ನು ತಪ್ಪದೇ ವಿಕ್ಷಿಸಿ.ಕೊನೆ ಕ್ಷಣದಲ್ಲಿ ಟಿಕೇಟ್ಟು ಖಂಡಿತಾ ಸಿಗೋದಿಲ್ಲಾ. ಮೊದ್ಲೇ ಬುಕ್ ಮಾಡಿ ಹೋಗಿ..
ಯಶವಂತ ಸರದೇಶಪಾಂಡೆಯ 'ಸಹಿ ರೀ ಸಹಿ' ಮತ್ತು 'ಆಲ್ ದಿ ಬೆಸ್ಟ್' ಎಂಬ ಸುಂದರ ನಗೆ ನಾಟಕಗಳು ವಾರಂತ್ಯದಲ್ಲಿ ಎಚ್.ಎನ್.ಕಲಾಕ್ಷೇತ್ರ ,ಜಯನಗರದಲ್ಲಿ ಪ್ರದರ್ಶಿತವಾಗುತ್ತಿವೆ...


(ಚಿತ್ರಗಳು: ಲಾಲಭಾಗ ಫಲ-ಪುಷ್ಪ ಪ್ರದರ್ಶನ ೨೦೦೭)

Saturday, March 17, 2007

ಜನರೇಷನ್ ಗ್ಯಾಪ್............



ಪ್ರಸಂಗ ೧:
ನನ್ನ ಮತ್ತು ಅಜ್ಜನ ನಡುವೆ,
ಅಜ್ಜ : ಯಾವ ಇಸ್ವಿ ನೀನು ಹುಟ್ಟಿದ್ದು?
ನಾನು : ೧೯೮೦ ಅಜ್ಜಾ.
ಅಜ್ಜ : ಹಂಗದರ ಎಸ್ಟು ವಯಸ್ಸು ಅದು?
ನಾನು : ೨೬ ನಡ್ಯಾತ್ತವ.
ಅಜ್ಜ :ಮದ್ವಿ ಬಗ್ಗೆ ಎನು ಯೊಚ್ನೆ ಮಾಡಿ?
ನಾನು : ನನಗೇನು ವಯಸ್ಸಾಗ್ಯವು?
ಅಜ್ಜ : ಮಗನಾ, ನಿನ್ನ ವಯಸ್ಸಿನ್ಯಾಗ ಎರಡು ಮಕ್ಳು ಇದ್ದು ನಂಗ!!!!
ನಾನು " ನಿಮ್ಮ ಕಾಲನೇ ಬೇರೆ, ನಮ್ಮ ಕಾಲನೇ ಬೇರೆ"...

ಪ್ರಸಂಗ ೨:
ನಮ್ಮ ಅಮ್ಮ ಮತ್ತು ತಮ್ಮನ ನಡುವೆ...
ಅಮ್ಮ : ಇಸ್ತ್ರಿ ಪೆಟ್ಟಿಗೆ ಮತ್ತ ಸಿ. ಡಿ. ಪ್ಲೇಯರ ರಿಪೇರಿ ಮಾಡಿಸಿಕೊಂಡು ಬಾರೋ
ತಮ್ಮ : ಹಳೇದೆ ಎನು ಮಾಡತೀ ಬೇ, ಹೊಸಾದ ತಗೊಂಡು ಬರ್‍ಓಣ,
ಅಮ್ಮ : ಯಾಕಪಾ ನಿಂಗ ರೊಕ್ಕ ಹೆಚ್ಚಾಗವೇನು????


ಪ್ರಸಂಗ ೩:
ತಮ್ಮ : ಅಣ್ಣಾ ಲೇ ,ನಿಂಗ ಸ್ಯಾಲರಿ ಏಷ್ಟು ಲೇ?
ನಾನು : ***** ಇಸ್ಟು ಇದೇ ನೋಡಲೇ...
ತಮ್ಮ : ಏನಲೇ? ಎಷ್ಟು ಕಡಿಮಿ ರೊಕ್ಕಕ್ಕೆ ಕೆಲ್ಸಾ ಮಾಡತಿ ಅಲ್ಲಾ ಲೇ ,ನಿಮ್ಮ ಜುನಿಯರ್ಸ್ ನೋಡು ನಿನಗೀಂತ ಜಾಸ್ತಿ ಗಳಸತಾರ.
ನಾನು : ?????????

ಪ್ರಸಂಗ ೪
ನಮ್ಮ :ಮಾವನ ಮಗಳು ಮತ್ತು ನನ್ನ ನಡುವೆ,
ಸೊಸೆ: ಮಾಮ ,ಪ್ರೊಜೆಕ್ಟ ಮಾಡೋದು ಹೇಳಿಕೊಡು....
ನಾನು: ಪ್ರೊಜೆಕ್ಟ ???
ಸೊಸೆ: ಹೂಂ......
ನಾನು : ನನಗ 1st ಬಿ.ಇ ವರಗೆ ಪ್ರೊಜೆಕ್ಟ ಅನ್ನೊದೇ ಗೊತ್ತ ಇರಲಿಲ್ಲ.....
ಸೊಸೆ: ನಿನ್ನ ಕಾಲನೇ ಬೇರೆ ನನ್ನ ಕಾಲನೇ ಬೇರೆ.....

ಮೇಲಿನ ಪ್ರಸಂಗಗಳು ಪೀಳಿಗೆಗಳ ನಡುವೆ ಹೆಚ್ಚುತ್ತಿರುವ ಜೆನರೇಷನ ಗ್ಯಾಪಗೆ ಅತ್ಯ್ತುತಮ ಉದಾಹರಣೆಗಳು.....

ಮುಗಿಸುವ ಮುನ್ನ:
ಭೂಮಿ ಹಸಿರುಟ್ಟ ನಿಂತಾಳ ನೋಡ
ಪೈರು ತಲೆದೂಗಿ ಹಾಡ್ಯಾವ ನೋಡ
ಕುಯ್ಯೋ ಕುಡುಗೋಲು ಕುಣಿದಾವೆ ನೋಡ
ಮೇಲೆ ಹಾರ್ಯವೆ ಬೆಳವಕ್ಕಿ ಜೋಡ......
(ಹಕ್ಕಿ ಹಾಡೇ.... ಪುನರ್ಜನ್ಮ )

ಸರ್ವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.....................

( ಚಿತ್ರ: ನಾನು ,ತಮ್ಮ ಹಾಗೂ ತಂಗಿ.....೨೩ ವರ್ಷಗಳ ಹಿಂದೆ:)-)

Wednesday, March 07, 2007

ಕಾವೇರಿ

ರಾಜ್ಯದ್ಯಾದಂತ್ಯ ಕಾವೇರಿಗಾಗಿ ಹೋರಾಟ
ಶಾಸನ ಸಭೆಯಲ್ಲಿಸಭಾಪತಿಗಾಗಿ ಕಿತ್ತಾಟ
ಇದೆಲ್ಲಾ ಕಾಗೆಗಳ ರಾಜಕೀಯದಾಟ
ಎಲ್ಲಿಯವರಗೆ ಕನ್ನಡಿಗರ ಪರದಾಟ?

ತಂದೆ-ಮಕ್ಕಳ ದಿವ್ಯಮೌನ,ಮೌನಂ ಸಮ್ಮತಿ ಲಕ್ಷಣವೇ?
ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೆ?
ಮೇಲಿನ ಕೄಷ್ಣಾ ಆಂಧ್ರಕ್ಕೆ,ಈಗಕಾವೇರಿ ತಮಿಳುನಾಡಿಗೆ??
ಏಚ್ಚತ್ತುಕೊಳ್ಳಿ ಡೊಂಕುಬಾಲಕದ ನಾಯಕರೇ!

ಅಂಬಿ ರಾಜಿನಾಮೆ ಕಾವೇರಿಗಾಗಿ ಅನ್ನೋ ಗಿಮಿಕ್ಕು
ಮಂತ್ರಿಗಳ ಜನತಾ ದರ್ಶನ,ಸಾಲಮನ್ನಾದ ಚಮಕ್ಕು
ತಮಿಳಿರಿಗೆ ಸಿಂಹಪಾಲಿನಲ್ಲಿ ಕೇಂದ್ರದ ಕುಮ್ಮಕ್ಕು
ನಮ್ಮ ಶಾಸಕರು ಕತ್ತೆಕಾಯೊದಕ್ಕೆ ಲಾಯಖ್ಖು

ಬನ್ನಿ ಕನ್ನಡಿಗರ್‍ಏ ನಾವೆಲ್ಲಾ ಒಟ್ಟಾಗೋಣ
ನಮ್ಮ ಜಲ-ನೆಲ ಹಕ್ಕಿಗಾಗಿ ಹೋರಾಡೋಣ
ಕನ್ನಡ ಭಾಷೆ,ಸಂಸ್ಕೄತಿ ಉಳಿಸೋಣ
ಜಗತ್ತಿನ್ಯಾದಂತ ಕನ್ನಡಿಗರ ಕೀರ್ತಿ ಪತಾಕೆ ಹರಡೋಣ

Tuesday, March 06, 2007

ಹೋಳಿಯ ಸವಿನೆನಪುಗಳು..........





ಹೋಳಿಯ ಹುಣ್ಣಿಮೆಗೂ ನನ್ನ ಬಾಲ್ಯಕ್ಕೂ ತೀರದ ನಂಟು.ಈಗಿನ ಕಾಲ ಬಿಡಿ....ಟಿವಿಯನ್ನು ನೋಡ್ತಾ ಹೋಳಿಯ ಚಲನಚಿತ್ರಗಳ ಗೀತೆಗಳನ್ನು ನೋಡುತ್ತಾ ಕಳೆಯುದೇ ಆಗಿದೆ. ೪ ಹೋಳಿಯSMS, ೧೦ ಜನಕ್ಕೆ ಹೋಳಿಯ ಮೈಲ್ fwd ಮಾಡಿದ್ರೇ ಮುಗಿದುಹೊಯ್ತು.ಬೆಂಗಳೂರು ಹೋಳಿಯೇಂದ್ರೆ ನಮ್ಮ ಉತ್ತರ ಕರ್ನಾಟಕದ ಬರಗಾಲ ಜೆಲ್ಲೆಗಳನ್ನು ನೆನಪಿಸುತ್ತದೆ. ಏನು ಮಾಡತೀರಾ ಎಲ್ಲಾ ಜಾಗತೀಕರಣದ ಪ್ರಭಾವ. Pizzaವನ್ನೊ, happy hours ನಲ್ಲಿ ಒಂದು ಮಗ್ ಬೀರ ಜೊತೆ ಇನ್ನೊದು ಬೀರನ್ನು ಹೀರುತ್ತಾ ಆಫಿಸನಲ್ಲಿಯ,ರಾಜಕೀಯ ,ಪ್ರಮೋಶನ್ ಅಥವಾ ಹೊಸಾ offers/afailrs ಬಗ್ಗೆ ವೀಕೆಂಡ ಕಳೆದು ಹೊಗವದರಲ್ಲಿ ಸೃಜನಶೀಲತೆಗೆ ಅವಕಾಶವೆಲ್ಲಿ? ನೀವ್ವೇ ಯೋಚಿಸಿ.....ಹೋಳಿಯ ಬಗ್ಗೆ ಬರೆಯುತ್ತಾ ವಿಷ್ಯ ಎಲ್ಲೊಲ್ಲೋ ಹೊಗ್ತಾ ಇದೆ,ಮರಳಿ ಹೋಳಿಗೆ ಬರ್‍ಒಣ.....

"ಕಾಮಣ್ಣನ ಮಕ್ಳು,ಕಳ್ಳಸೂ.. ಮಕ್ಳು...ಎನೇನು ಕದಿಯಲು ಬಂದ್ರು, ಕಳ್ಳು ಕಟಗಿ ಕದಿಯಲು ಬಂದ್ರು" ಎಂದು ಅರಚುತ್ತಾ ಬೆಳ್ಳಂದಿಗಳಲ್ಲಿ ತೀರುಗುತ್ತಿದ್ದು, ಜೊತಗೆ ಹಲಗೆಯ ಪಕ್ಕವಾದ್ಯ,ಲಬೊ ಲಬೊ ಅಂತಾ ಹೊಯ್ಕೊಳ್ಳವ ಹಿನ್ನಲೆ ಸಂಗೀತ ಒಂದು ತರಾ ನಮ್ಮದೇ ಲೋಕವನ್ನು ಸೄಷ್ಟಿಸಿಬಿಡುತ್ತಿದ್ದವು. ಬಾಲ್ಯದ ಹೋಳಿಯಲ್ಲಾ ಕಳೆದಿದ್ದು ಬದಾಮಿ ಮತ್ತು ನವಿಲುತೀರ್ಥದಲ್ಲಿ....ವರ್ಷದ ಎಲ್ಲಾ ದಿನಗಳಲ್ಲಿ ನಮ್ಮ "ಮಂಗ್ಯಾತನಕ್ಕೆ" ಮತ್ತು ಹುಡಗಾಟಕ್ಕೆ ನಿಷೇದವಿದ್ದರೂ ಹೋಳಿಯ ಸಮಯದಲ್ಲಿ ಪೂರ್ಣ ವಿನಾಯತಿ. ಅದು ಬೇರೆ ಹೋಳಿ ನಮ್ಮ ವಾರ್ಷೀಕ ಪರಿಕ್ಷೆಯ ನಂತರ ನಮ್ಮನ್ನು ಹಿಡಿಯುವವರೇ ಇಲ್ಲಾ...ಬದಾಮಿಯ ನೀರಾವರಿಯ ವಸತಿಗೃಹಗಳ ಮುಂದೆ ಚಿಕ್ಕ ಗಾರ್ಡನವಿರುದು ಸಾಮಾನ್ಯ.ಹೋಳಿಯ ದಿನಗಳಲ್ಲಿ ಈ ಎಲ್ಲಾ ಗಾರ್ಡನಗಳ ಬೇಲಿ ಮಾಯವಾಗಿತ್ತಿದ್ದು ಸಾಮಾನ್ಯ.ಹೋಲಿಕಾಳು ಬೆಂಕಿಯಲ್ಲಿ ಪ್ರವೇಶವಾದದರಿಂದ, ಕಾಮದೇವ ಶಿವನ ಮೂರನೆ ಕಣ್ಣಿನಿಂದ ಸುಟ್ಟಿಹೋದ ಕಥೆ ನನಗಿಂತಾ ನಿಮಗೆ ಚೆನ್ನಾಗಿ ಗೊತ್ತಿರುವದರಿಂದ , ಆ ಬಗ್ಗೆ ಹೆಚ್ಚು ಹೇಳದೇ ನನ್ನ ಹೊಳಿಯ ಆಚರಣೆ ಬಗ್ಗೆ ಹೇಳತಾ (ಕೋರಿತಾ?) ಇದಿನಿ..
೧೫ ದಿನ ಮೊದಲು ಕಾಮಣ್ಣಪಟ್ಟಿ( ಹಣ)ದ ಕಲೆಕ್ಷನ್. ಹುಣ್ಣಿಮೆಯ ಬೆಳಂದಿಗಳ ರಾತ್ರಿಯಲ್ಲಿ ಕಾಮದಹನವಾದ ಮೇಲೆ ನಮ್ಮ ಬಣ್ಣದಾಟ. ಕಾಲೋನಿಯಲ್ಲಿರುವ ಎಲ್ಲಾ ಹುಡಗರು ಸೇರಿ,ನಮ್ಮದೇ ಒಂದು ಬೆಟಾಲಿಯನ ಮಾಡಿ ಮದ್ಯಾಹ್ನ ೧ ಘಂಟೆಯವರಗೆ ಬಣ್ಣ ಅಡಿದ್ದೇ ಅಡಿದ್ದು. ಎಲ್ಲಾ ಮೊರೆಗಳು ಒಂದೇ ಥರಾ.ದೇಹದ ಎಲ್ಲಾ ಭಾಗಗಳು ಬಣ್ಣದಿಂದ ಅಲಂಕೄತ. ಯಾರು ಯಾರು ಅನ್ನೊದನ್ನ ದ್ವನಿ ಮಾತ್ರದಿಂದ ಗುರಿತಿಸಬೇಕು..
ಬದಾಮಿಯ ಬಣ್ಣದ ಪರಿ ಆದರೆ ನವಿಲುತೀರ್ಥದ ಬಣ್ಣದ ರಂಗೆ ಬೇರೆ...ಕಾಲೋನಿಯಲ್ಲಿ ಆ ದಿನ ಬಣ್ಣದ ಪ್ರಪಂಚ. ಮನೆ ಗೊಡೆ, ಅಂಗಳ, ಗಿಡಮರಗಳು ಬಣ್ಣಮಯ.ಒಟ್ಟಿನಲ್ಲಿ ಬಣ್ಣ ಆ ದಿನ ಸರ್ವಾಂತ್ರಯಾಮಿ.೮-೧೦ ಡ್ರಮ್ಮುಗಳಲ್ಲಿ ತರಾವರಿ ಬಣ್ಣ ತುಂಬಿಕೊಂಡು ಒಂದು ಕಡೆಯಿಂದ ಪ್ರಾರಂಭವಾದ ಬಣ್ಣದ ರಂಗು,೩೫೦ ಮನೆಗಳು ಮುಗಿಯುವರಗೆ ದಣಿವರಿಯದ ಆಟ,ಈ ಓಕುಳಿಯಾಟ....ಎಲ್ಲಾ ಮುಖಗಳು ರಂಗುಬಿರಂಗು....ಬಣ್ಣ ಮುಗಿದ ನಂತರವು ಒಂದು ವಾರದವರೆಗೆ ನನ್ನ ಮುಖದಲ್ಲಿ ಬಣ್ಣದ ಕಲೆ ಇರುತಿತ್ತು.ಬಣ್ಣವಾದ ನಂತರ ನಾವೆಲ್ಲ ಸೇರಿ ಜಳಕ ಮಾಡಲು ಮಲಪ್ರಭಾ ಹೊಳಿಗೆ ಹೊಗುವ ಮಜಾನೇ ಬೇರೆ.... ಮನೆಯಿಂದ ಸುಮಾರ್ರು ೨ ಕಿ.ಮೀ ಇರುವ ಹೊಳೆಗೆ ಗುಡ್ಡವಿಳಿದು ಹೋಗುತ್ತಿದ್ದು ಒಂದು ಮಧುರ ಅನುಭವ.ನಮ್ಮ ಗುಂಪಿನ (೧೦-೧೨) ಜನರಲ್ಲಿ ಇಬ್ಬರಿಗೆ ಚೆನ್ನಾಗಿ ಈಸಲು ಬರುತಿತ್ತು.ಅವರಿಬ್ಬರೂ ಎಲ್ಲಿಯರಗೆ ಎಷ್ಟು ಆಳವಿದೆ ನೀರ್ಧರಿಸಿ ಒಂದು ಬೌಂಡರಿ ನೀರ್ಧರಿಸುತ್ತಿದ್ದರು.ಆ ಬೌಂಡರಿ ಒಂದು ಥರಾ ಲಕ್ಷಣ ರೇಖೆಯಿದ್ದ ಹಾಗೆ. ಯಾರು ಅದನ್ನು ದಾಟುವ ಪ್ರಯತ್ನ ಮಾಡೊ ಹಾಗಿರಲಿಲ್ಲ. ಆಗ ನಾನು ಗುಬ್ಬಿ ಜಳಕ (ಹೋಳೆ ದಂಡೆ ಸ್ನಾನ)ಮಾಡಿ, ನನ್ನ ಮುಖ ಬಣ್ಣ ಹೋಗಿ ನನ್ನಾದಾಯಿತು ಅನ್ನೊವರಗೆ ಜಳಕ ಮಾಡಿ, ಮನಗೆ ಬಂದು ಲಬೊ ಲಬೊ ಅಂತ ಹೊಯ್ಕಂಡ ಕೈಯಲ್ಲಿ ಹೊಳಿಗೆ ತಿನ್ನೋ ಸುಖ ವರ್ಣಿಸಲು ಸಾದ್ಯವಿಲ್ಲಾ ಬಿಡಿ..೫-೬ ವರ್ಷಗಳ ಈ ಹೋಳಿ ಆಚರಣೆ ನನ್ನ ಬದುಕಿನ ರಂಗು ರಂಗಿನ ಪುಟಗಳ ಎಂದು ಹೇಳಬಹುದು.


ಕಾಲ ಯಾರಿಗೆ ಕಾಯುತ್ತೆ ಹೇಳಿ.ಕಾಲ ಮುಂದುವರೆದ ಹಾಗೆ ಬಾಗಲಕೋಟೆ ಕಾಲೇಜಿಗೆ ಸೇರಿದ್ದಾಯಿತು... ಎಲ್ಲಾ ಕಡೆ ಬಣ್ಣದಾಟ ೧ ದಿನವಾದರೆ ಇಲ್ಲಿ ೫ ದಿನ.ಈಗ ಅದು ಮೂರು ದಿನಕ್ಕೆ ಇಳಿದಿದೆ.ಇಲ್ಲಿಯ ಜನ ಮೂರು ದಿನಾ ಜಳಕವನ್ನೇ ಮಾಡದೇ ಬರೇ ಬಣ್ಣ ಅಡುತ್ತಾ ಕಾಲ ಕಳೆಯುತ್ತಾರೆ. ಕೊನೆಯ ವರ್ಷದ ಹೋಳಿಯಂತು ಅವಿಸ್ಮರಣೀಯ.ಎಲ್ಲಾ ಸೇರಿ ಬಣ್ಣ ಬಳಿದುಕೊಂಡು ಲೇಡಿಜ್ ಹಾಸ್ಟೆಲ ಮುಂದೆ ಗಲಾಟೆ ಮಾಡಿದ್ದೇ ಮಾಡಿದ್ದು..ಮುಂದೆ ಕೆಲಸಕ್ಕಾಗಿ ಉತ್ತರಭಾರತಕ್ಕೆ ಹೊದಾಗ ಅಲ್ಲಿಯ ಹೊಳಿ ನೊಡಲು ಅವಕಾಶ ಸಿಕ್ಕಿತು... ಹಿರಿಕಿರಿಯರು ಎನ್ನದೇ,ಅಲ್ಲಿ ಎಲ್ಲರೂ ಓಕುಳಿಯಾಡಿ,ನಂತರ ಸಿಹಿ,ಬಾಂಗ್, ಕುಡಿತ ಅಲ್ಲಿ ಸರ್ವೆಸಾಮನ್ಯ.೨೦೦೪ರಲ್ಲಿ ಹೋಳಿಯ ಕಾಟ ಬೇಡವೆಂದು ನೈನಿತಾಲಗೆ ಹೊಗಿದ್ದವು.ಅಲ್ಲಿ ಹೊದ್ರು ಬಣ್ಣದಾಟ ತಪ್ಪಲಿಲ್ಲ..ಹೋಳಿಯ ದಿನಾ ಇಡಿ ಉತ್ತರ ಭಾರತ ಒಂಡು ತರಾ ಅಘೊಷಿತ ಬಂದ್ ಇದ್ದ ಹಾಗೆ..ಹೊರಗಡೆ ನಿಮಗೆ ಎನೂ ಸಿಗುವದಿಲ್ಲಾ.ಈ ದಿನ ತಿರುಗಿ ಬರುವಾಗ ಇದು ನಮ್ಮ ಅನುಭವಕ್ಕೆ ಬಂತು.ಸುಮಾರು ೩೦೦ ಕಿ.ಮೀವರಗೆ ಒಂದೇ ಒಂದು ತಗಿದಿರೊ ಧಾಬಾ ಸಿಗಲಿಲ್ಲ. ಅಂತು ಹೇಗೊ ಒಂದು ಧಾಬದವನ್ನು ಒಪ್ಪಿಸಿ ತುತ್ತಿನ ಚೀಲ ಭರ್ತಿ ಮಾಡಿ ಮುಂದುವರಿದೆವು.ಕಳೆದ ವರ್ಷದ ಹೋಳಿಯಲ್ಲಿ ಸೆಕ್ಟರ್ ೧೪ ಗುರಂಗಾವ ತುಂಬಾ ನಮ್ಮದೇ ಗದ್ದಲ.ಇರೊ ಬರೊರಿಗೆ ಬಣ್ಣ ಬಳಿದು ಬಂದಾಗ ಮತ್ತೆ ಅದೇ ಊಟದ ಸಮಸ್ಯೆ.ಬಾರಗಳು ಮಾತ್ರ ಅರ್ಧ ತೆರದಿದ್ದು ಬಿಟ್ರೆ ಬೇರೆ ಗತಿನೇ ಇಲ್ಲಾ.ಮನೆಯಲ್ಲಿ ಮಾಡೊಣ ಅಂದ್ರೆ ಬೇಕಾದ ಸಾಮಾಗ್ರಿಗಳೇ ಇಲ್ಲಾ..೪-೫ ಘಂಟೆಗೆ ಹೇಗೊ ಒಂದು ಧಾಬದ ನಂಬರ ಪತ್ತೆ ಮಾಡಿ ಊಟ ತರಿಸಿದೆವು ತೄಪ್ತಿ ಫಟ್ಟೆವು.
ಈ ಸಲದ ಹೋಳಿ ಬೈಲಹೊಂಗಲದಲ್ಲಿ... ಈ ಊರಿನ ಹೋಳಿ ತುಂಬಾ ವಿಶಷ್ಟತೆಯಿಂದ ಕೂಡಿದೆ.. ಬಣ್ಣದ ಹಿಂದಿನ ದಿನ ಓಣಿಯ ಸಣ್ಣಪುಟ್ಟ ದಹನವಾಗುವವು. ಮರುದಿನ ಬಣ್ಣವಾದ ಮೇಲೆ ಊರ ಚಾವಡಿಯ ಕಾಮಣ್ಣ ದಹನಕ್ಕೆ ಸಿದ್ದಪಡಿಸುತ್ತಾರೆ. ಈ ಕಾಮಣ್ಣನ ದಹನಕ್ಕೆ ಊರ ಹೊರಗಿರುವ ಹೊಲೆಯರ ಬೆಂಕಿಯೇ ಬೇಕು....ಅದು ಕೂಡ ಸುಲಭವಾಗಿ ಸಿಗುವದಿಲ್ಲ. ಸ್ವಲ್ಪ ಕಾದಾಟ,ಬಡೆದಾಟವಾದ ನಂತರ ಅಲ್ಲಿಂದ ಬೆಂಕಿ ಸಿಕ್ಕ ಮೇಲೆ, ಆ ಇಬ್ಬರೂ ಬೆಂಕಿ ಕೊಡುವವರು ಸುಮಾರು ೧.೫ ಕಿ.ಮಿ, ಬರಿಗಾಲಲ್ಲಿ ಕಾಮಣ್ಣವರಗೆ ಓಡಿ ಬಂದು ಬೆಂಕಿ ಕೋಡುತ್ತಾರೆ. ಕಾಮಣ್ಣ ಮುಖ ಯಾವ ದಿಕ್ಕಿಗೆ ಬಿಳ್ಳೊತ್ತೋ ಆ ಕಡೆ ಜಾಸ್ತಿ ಮಳೆ ಬೆಳೆ ಅಂತಾ ತಲತಲಾಂತರದ ನಂಬಿಕೆ..


ಮುಗಿಸುವ ಮುನ್ನ: ಮೊನ್ನೆ ಕೆಲಸದ ನಿಮಿತ್ತ ಬೈಲಹೊಂಗಲದ ನಮ್ಮ ಸೋದರ ಮಾವನ ಮನೆಯಲ್ಲಿದ್ದಾಗ, ಬಣ್ಣವಾಡಬಾರದೆಂದು ನೀರ್ಧರಿಸಿ ಮನೆಯಲ್ಲಿ ೮ ವರ್ಷದ ನಮ್ಮ ಮಾವನ ಮಗನ ಸವಾಲು " ಗಂಡಿಸ ಅಗಿದ್ಡರ ಬಂದು ಬಣ್ಣ ಆಡು ಮಾಮಾ"....ಸವಾಲಿನ ಆಳ,ಮಹತ್ವ ಎಲ್ಲಾ ನೀವ್ವೆ ಯೋಚಿಸಿ.

[ಹಲವಾರು ಕಾರಣಗಳಿಂದ ನನ್ನ ಬ್ಲಾಗ್ ಒಣಗಿದ ಮರವಾಗಿತ್ತು. ಅದನ್ನು ಮತ್ತೆ ಪೊಷಿಸಲು ಉತ್ತೇಜನ ಕೊಟ್ಟ ಪ್ರೇಮಿ ಶಿವ, ಅನ್ವೇಷಿ,ಹಿರಿಯರಾದ ಶ್ರೀಗಳಿಗೆ ಮತ್ತು ಹಲವು ಮಿತ್ರರಿಗೆ ಧನ್ಯವಾದಗಳು.]