Tuesday, March 06, 2007

ಹೋಳಿಯ ಸವಿನೆನಪುಗಳು..........





ಹೋಳಿಯ ಹುಣ್ಣಿಮೆಗೂ ನನ್ನ ಬಾಲ್ಯಕ್ಕೂ ತೀರದ ನಂಟು.ಈಗಿನ ಕಾಲ ಬಿಡಿ....ಟಿವಿಯನ್ನು ನೋಡ್ತಾ ಹೋಳಿಯ ಚಲನಚಿತ್ರಗಳ ಗೀತೆಗಳನ್ನು ನೋಡುತ್ತಾ ಕಳೆಯುದೇ ಆಗಿದೆ. ೪ ಹೋಳಿಯSMS, ೧೦ ಜನಕ್ಕೆ ಹೋಳಿಯ ಮೈಲ್ fwd ಮಾಡಿದ್ರೇ ಮುಗಿದುಹೊಯ್ತು.ಬೆಂಗಳೂರು ಹೋಳಿಯೇಂದ್ರೆ ನಮ್ಮ ಉತ್ತರ ಕರ್ನಾಟಕದ ಬರಗಾಲ ಜೆಲ್ಲೆಗಳನ್ನು ನೆನಪಿಸುತ್ತದೆ. ಏನು ಮಾಡತೀರಾ ಎಲ್ಲಾ ಜಾಗತೀಕರಣದ ಪ್ರಭಾವ. Pizzaವನ್ನೊ, happy hours ನಲ್ಲಿ ಒಂದು ಮಗ್ ಬೀರ ಜೊತೆ ಇನ್ನೊದು ಬೀರನ್ನು ಹೀರುತ್ತಾ ಆಫಿಸನಲ್ಲಿಯ,ರಾಜಕೀಯ ,ಪ್ರಮೋಶನ್ ಅಥವಾ ಹೊಸಾ offers/afailrs ಬಗ್ಗೆ ವೀಕೆಂಡ ಕಳೆದು ಹೊಗವದರಲ್ಲಿ ಸೃಜನಶೀಲತೆಗೆ ಅವಕಾಶವೆಲ್ಲಿ? ನೀವ್ವೇ ಯೋಚಿಸಿ.....ಹೋಳಿಯ ಬಗ್ಗೆ ಬರೆಯುತ್ತಾ ವಿಷ್ಯ ಎಲ್ಲೊಲ್ಲೋ ಹೊಗ್ತಾ ಇದೆ,ಮರಳಿ ಹೋಳಿಗೆ ಬರ್‍ಒಣ.....

"ಕಾಮಣ್ಣನ ಮಕ್ಳು,ಕಳ್ಳಸೂ.. ಮಕ್ಳು...ಎನೇನು ಕದಿಯಲು ಬಂದ್ರು, ಕಳ್ಳು ಕಟಗಿ ಕದಿಯಲು ಬಂದ್ರು" ಎಂದು ಅರಚುತ್ತಾ ಬೆಳ್ಳಂದಿಗಳಲ್ಲಿ ತೀರುಗುತ್ತಿದ್ದು, ಜೊತಗೆ ಹಲಗೆಯ ಪಕ್ಕವಾದ್ಯ,ಲಬೊ ಲಬೊ ಅಂತಾ ಹೊಯ್ಕೊಳ್ಳವ ಹಿನ್ನಲೆ ಸಂಗೀತ ಒಂದು ತರಾ ನಮ್ಮದೇ ಲೋಕವನ್ನು ಸೄಷ್ಟಿಸಿಬಿಡುತ್ತಿದ್ದವು. ಬಾಲ್ಯದ ಹೋಳಿಯಲ್ಲಾ ಕಳೆದಿದ್ದು ಬದಾಮಿ ಮತ್ತು ನವಿಲುತೀರ್ಥದಲ್ಲಿ....ವರ್ಷದ ಎಲ್ಲಾ ದಿನಗಳಲ್ಲಿ ನಮ್ಮ "ಮಂಗ್ಯಾತನಕ್ಕೆ" ಮತ್ತು ಹುಡಗಾಟಕ್ಕೆ ನಿಷೇದವಿದ್ದರೂ ಹೋಳಿಯ ಸಮಯದಲ್ಲಿ ಪೂರ್ಣ ವಿನಾಯತಿ. ಅದು ಬೇರೆ ಹೋಳಿ ನಮ್ಮ ವಾರ್ಷೀಕ ಪರಿಕ್ಷೆಯ ನಂತರ ನಮ್ಮನ್ನು ಹಿಡಿಯುವವರೇ ಇಲ್ಲಾ...ಬದಾಮಿಯ ನೀರಾವರಿಯ ವಸತಿಗೃಹಗಳ ಮುಂದೆ ಚಿಕ್ಕ ಗಾರ್ಡನವಿರುದು ಸಾಮಾನ್ಯ.ಹೋಳಿಯ ದಿನಗಳಲ್ಲಿ ಈ ಎಲ್ಲಾ ಗಾರ್ಡನಗಳ ಬೇಲಿ ಮಾಯವಾಗಿತ್ತಿದ್ದು ಸಾಮಾನ್ಯ.ಹೋಲಿಕಾಳು ಬೆಂಕಿಯಲ್ಲಿ ಪ್ರವೇಶವಾದದರಿಂದ, ಕಾಮದೇವ ಶಿವನ ಮೂರನೆ ಕಣ್ಣಿನಿಂದ ಸುಟ್ಟಿಹೋದ ಕಥೆ ನನಗಿಂತಾ ನಿಮಗೆ ಚೆನ್ನಾಗಿ ಗೊತ್ತಿರುವದರಿಂದ , ಆ ಬಗ್ಗೆ ಹೆಚ್ಚು ಹೇಳದೇ ನನ್ನ ಹೊಳಿಯ ಆಚರಣೆ ಬಗ್ಗೆ ಹೇಳತಾ (ಕೋರಿತಾ?) ಇದಿನಿ..
೧೫ ದಿನ ಮೊದಲು ಕಾಮಣ್ಣಪಟ್ಟಿ( ಹಣ)ದ ಕಲೆಕ್ಷನ್. ಹುಣ್ಣಿಮೆಯ ಬೆಳಂದಿಗಳ ರಾತ್ರಿಯಲ್ಲಿ ಕಾಮದಹನವಾದ ಮೇಲೆ ನಮ್ಮ ಬಣ್ಣದಾಟ. ಕಾಲೋನಿಯಲ್ಲಿರುವ ಎಲ್ಲಾ ಹುಡಗರು ಸೇರಿ,ನಮ್ಮದೇ ಒಂದು ಬೆಟಾಲಿಯನ ಮಾಡಿ ಮದ್ಯಾಹ್ನ ೧ ಘಂಟೆಯವರಗೆ ಬಣ್ಣ ಅಡಿದ್ದೇ ಅಡಿದ್ದು. ಎಲ್ಲಾ ಮೊರೆಗಳು ಒಂದೇ ಥರಾ.ದೇಹದ ಎಲ್ಲಾ ಭಾಗಗಳು ಬಣ್ಣದಿಂದ ಅಲಂಕೄತ. ಯಾರು ಯಾರು ಅನ್ನೊದನ್ನ ದ್ವನಿ ಮಾತ್ರದಿಂದ ಗುರಿತಿಸಬೇಕು..
ಬದಾಮಿಯ ಬಣ್ಣದ ಪರಿ ಆದರೆ ನವಿಲುತೀರ್ಥದ ಬಣ್ಣದ ರಂಗೆ ಬೇರೆ...ಕಾಲೋನಿಯಲ್ಲಿ ಆ ದಿನ ಬಣ್ಣದ ಪ್ರಪಂಚ. ಮನೆ ಗೊಡೆ, ಅಂಗಳ, ಗಿಡಮರಗಳು ಬಣ್ಣಮಯ.ಒಟ್ಟಿನಲ್ಲಿ ಬಣ್ಣ ಆ ದಿನ ಸರ್ವಾಂತ್ರಯಾಮಿ.೮-೧೦ ಡ್ರಮ್ಮುಗಳಲ್ಲಿ ತರಾವರಿ ಬಣ್ಣ ತುಂಬಿಕೊಂಡು ಒಂದು ಕಡೆಯಿಂದ ಪ್ರಾರಂಭವಾದ ಬಣ್ಣದ ರಂಗು,೩೫೦ ಮನೆಗಳು ಮುಗಿಯುವರಗೆ ದಣಿವರಿಯದ ಆಟ,ಈ ಓಕುಳಿಯಾಟ....ಎಲ್ಲಾ ಮುಖಗಳು ರಂಗುಬಿರಂಗು....ಬಣ್ಣ ಮುಗಿದ ನಂತರವು ಒಂದು ವಾರದವರೆಗೆ ನನ್ನ ಮುಖದಲ್ಲಿ ಬಣ್ಣದ ಕಲೆ ಇರುತಿತ್ತು.ಬಣ್ಣವಾದ ನಂತರ ನಾವೆಲ್ಲ ಸೇರಿ ಜಳಕ ಮಾಡಲು ಮಲಪ್ರಭಾ ಹೊಳಿಗೆ ಹೊಗುವ ಮಜಾನೇ ಬೇರೆ.... ಮನೆಯಿಂದ ಸುಮಾರ್ರು ೨ ಕಿ.ಮೀ ಇರುವ ಹೊಳೆಗೆ ಗುಡ್ಡವಿಳಿದು ಹೋಗುತ್ತಿದ್ದು ಒಂದು ಮಧುರ ಅನುಭವ.ನಮ್ಮ ಗುಂಪಿನ (೧೦-೧೨) ಜನರಲ್ಲಿ ಇಬ್ಬರಿಗೆ ಚೆನ್ನಾಗಿ ಈಸಲು ಬರುತಿತ್ತು.ಅವರಿಬ್ಬರೂ ಎಲ್ಲಿಯರಗೆ ಎಷ್ಟು ಆಳವಿದೆ ನೀರ್ಧರಿಸಿ ಒಂದು ಬೌಂಡರಿ ನೀರ್ಧರಿಸುತ್ತಿದ್ದರು.ಆ ಬೌಂಡರಿ ಒಂದು ಥರಾ ಲಕ್ಷಣ ರೇಖೆಯಿದ್ದ ಹಾಗೆ. ಯಾರು ಅದನ್ನು ದಾಟುವ ಪ್ರಯತ್ನ ಮಾಡೊ ಹಾಗಿರಲಿಲ್ಲ. ಆಗ ನಾನು ಗುಬ್ಬಿ ಜಳಕ (ಹೋಳೆ ದಂಡೆ ಸ್ನಾನ)ಮಾಡಿ, ನನ್ನ ಮುಖ ಬಣ್ಣ ಹೋಗಿ ನನ್ನಾದಾಯಿತು ಅನ್ನೊವರಗೆ ಜಳಕ ಮಾಡಿ, ಮನಗೆ ಬಂದು ಲಬೊ ಲಬೊ ಅಂತ ಹೊಯ್ಕಂಡ ಕೈಯಲ್ಲಿ ಹೊಳಿಗೆ ತಿನ್ನೋ ಸುಖ ವರ್ಣಿಸಲು ಸಾದ್ಯವಿಲ್ಲಾ ಬಿಡಿ..೫-೬ ವರ್ಷಗಳ ಈ ಹೋಳಿ ಆಚರಣೆ ನನ್ನ ಬದುಕಿನ ರಂಗು ರಂಗಿನ ಪುಟಗಳ ಎಂದು ಹೇಳಬಹುದು.


ಕಾಲ ಯಾರಿಗೆ ಕಾಯುತ್ತೆ ಹೇಳಿ.ಕಾಲ ಮುಂದುವರೆದ ಹಾಗೆ ಬಾಗಲಕೋಟೆ ಕಾಲೇಜಿಗೆ ಸೇರಿದ್ದಾಯಿತು... ಎಲ್ಲಾ ಕಡೆ ಬಣ್ಣದಾಟ ೧ ದಿನವಾದರೆ ಇಲ್ಲಿ ೫ ದಿನ.ಈಗ ಅದು ಮೂರು ದಿನಕ್ಕೆ ಇಳಿದಿದೆ.ಇಲ್ಲಿಯ ಜನ ಮೂರು ದಿನಾ ಜಳಕವನ್ನೇ ಮಾಡದೇ ಬರೇ ಬಣ್ಣ ಅಡುತ್ತಾ ಕಾಲ ಕಳೆಯುತ್ತಾರೆ. ಕೊನೆಯ ವರ್ಷದ ಹೋಳಿಯಂತು ಅವಿಸ್ಮರಣೀಯ.ಎಲ್ಲಾ ಸೇರಿ ಬಣ್ಣ ಬಳಿದುಕೊಂಡು ಲೇಡಿಜ್ ಹಾಸ್ಟೆಲ ಮುಂದೆ ಗಲಾಟೆ ಮಾಡಿದ್ದೇ ಮಾಡಿದ್ದು..ಮುಂದೆ ಕೆಲಸಕ್ಕಾಗಿ ಉತ್ತರಭಾರತಕ್ಕೆ ಹೊದಾಗ ಅಲ್ಲಿಯ ಹೊಳಿ ನೊಡಲು ಅವಕಾಶ ಸಿಕ್ಕಿತು... ಹಿರಿಕಿರಿಯರು ಎನ್ನದೇ,ಅಲ್ಲಿ ಎಲ್ಲರೂ ಓಕುಳಿಯಾಡಿ,ನಂತರ ಸಿಹಿ,ಬಾಂಗ್, ಕುಡಿತ ಅಲ್ಲಿ ಸರ್ವೆಸಾಮನ್ಯ.೨೦೦೪ರಲ್ಲಿ ಹೋಳಿಯ ಕಾಟ ಬೇಡವೆಂದು ನೈನಿತಾಲಗೆ ಹೊಗಿದ್ದವು.ಅಲ್ಲಿ ಹೊದ್ರು ಬಣ್ಣದಾಟ ತಪ್ಪಲಿಲ್ಲ..ಹೋಳಿಯ ದಿನಾ ಇಡಿ ಉತ್ತರ ಭಾರತ ಒಂಡು ತರಾ ಅಘೊಷಿತ ಬಂದ್ ಇದ್ದ ಹಾಗೆ..ಹೊರಗಡೆ ನಿಮಗೆ ಎನೂ ಸಿಗುವದಿಲ್ಲಾ.ಈ ದಿನ ತಿರುಗಿ ಬರುವಾಗ ಇದು ನಮ್ಮ ಅನುಭವಕ್ಕೆ ಬಂತು.ಸುಮಾರು ೩೦೦ ಕಿ.ಮೀವರಗೆ ಒಂದೇ ಒಂದು ತಗಿದಿರೊ ಧಾಬಾ ಸಿಗಲಿಲ್ಲ. ಅಂತು ಹೇಗೊ ಒಂದು ಧಾಬದವನ್ನು ಒಪ್ಪಿಸಿ ತುತ್ತಿನ ಚೀಲ ಭರ್ತಿ ಮಾಡಿ ಮುಂದುವರಿದೆವು.ಕಳೆದ ವರ್ಷದ ಹೋಳಿಯಲ್ಲಿ ಸೆಕ್ಟರ್ ೧೪ ಗುರಂಗಾವ ತುಂಬಾ ನಮ್ಮದೇ ಗದ್ದಲ.ಇರೊ ಬರೊರಿಗೆ ಬಣ್ಣ ಬಳಿದು ಬಂದಾಗ ಮತ್ತೆ ಅದೇ ಊಟದ ಸಮಸ್ಯೆ.ಬಾರಗಳು ಮಾತ್ರ ಅರ್ಧ ತೆರದಿದ್ದು ಬಿಟ್ರೆ ಬೇರೆ ಗತಿನೇ ಇಲ್ಲಾ.ಮನೆಯಲ್ಲಿ ಮಾಡೊಣ ಅಂದ್ರೆ ಬೇಕಾದ ಸಾಮಾಗ್ರಿಗಳೇ ಇಲ್ಲಾ..೪-೫ ಘಂಟೆಗೆ ಹೇಗೊ ಒಂದು ಧಾಬದ ನಂಬರ ಪತ್ತೆ ಮಾಡಿ ಊಟ ತರಿಸಿದೆವು ತೄಪ್ತಿ ಫಟ್ಟೆವು.
ಈ ಸಲದ ಹೋಳಿ ಬೈಲಹೊಂಗಲದಲ್ಲಿ... ಈ ಊರಿನ ಹೋಳಿ ತುಂಬಾ ವಿಶಷ್ಟತೆಯಿಂದ ಕೂಡಿದೆ.. ಬಣ್ಣದ ಹಿಂದಿನ ದಿನ ಓಣಿಯ ಸಣ್ಣಪುಟ್ಟ ದಹನವಾಗುವವು. ಮರುದಿನ ಬಣ್ಣವಾದ ಮೇಲೆ ಊರ ಚಾವಡಿಯ ಕಾಮಣ್ಣ ದಹನಕ್ಕೆ ಸಿದ್ದಪಡಿಸುತ್ತಾರೆ. ಈ ಕಾಮಣ್ಣನ ದಹನಕ್ಕೆ ಊರ ಹೊರಗಿರುವ ಹೊಲೆಯರ ಬೆಂಕಿಯೇ ಬೇಕು....ಅದು ಕೂಡ ಸುಲಭವಾಗಿ ಸಿಗುವದಿಲ್ಲ. ಸ್ವಲ್ಪ ಕಾದಾಟ,ಬಡೆದಾಟವಾದ ನಂತರ ಅಲ್ಲಿಂದ ಬೆಂಕಿ ಸಿಕ್ಕ ಮೇಲೆ, ಆ ಇಬ್ಬರೂ ಬೆಂಕಿ ಕೊಡುವವರು ಸುಮಾರು ೧.೫ ಕಿ.ಮಿ, ಬರಿಗಾಲಲ್ಲಿ ಕಾಮಣ್ಣವರಗೆ ಓಡಿ ಬಂದು ಬೆಂಕಿ ಕೋಡುತ್ತಾರೆ. ಕಾಮಣ್ಣ ಮುಖ ಯಾವ ದಿಕ್ಕಿಗೆ ಬಿಳ್ಳೊತ್ತೋ ಆ ಕಡೆ ಜಾಸ್ತಿ ಮಳೆ ಬೆಳೆ ಅಂತಾ ತಲತಲಾಂತರದ ನಂಬಿಕೆ..


ಮುಗಿಸುವ ಮುನ್ನ: ಮೊನ್ನೆ ಕೆಲಸದ ನಿಮಿತ್ತ ಬೈಲಹೊಂಗಲದ ನಮ್ಮ ಸೋದರ ಮಾವನ ಮನೆಯಲ್ಲಿದ್ದಾಗ, ಬಣ್ಣವಾಡಬಾರದೆಂದು ನೀರ್ಧರಿಸಿ ಮನೆಯಲ್ಲಿ ೮ ವರ್ಷದ ನಮ್ಮ ಮಾವನ ಮಗನ ಸವಾಲು " ಗಂಡಿಸ ಅಗಿದ್ಡರ ಬಂದು ಬಣ್ಣ ಆಡು ಮಾಮಾ"....ಸವಾಲಿನ ಆಳ,ಮಹತ್ವ ಎಲ್ಲಾ ನೀವ್ವೆ ಯೋಚಿಸಿ.

[ಹಲವಾರು ಕಾರಣಗಳಿಂದ ನನ್ನ ಬ್ಲಾಗ್ ಒಣಗಿದ ಮರವಾಗಿತ್ತು. ಅದನ್ನು ಮತ್ತೆ ಪೊಷಿಸಲು ಉತ್ತೇಜನ ಕೊಟ್ಟ ಪ್ರೇಮಿ ಶಿವ, ಅನ್ವೇಷಿ,ಹಿರಿಯರಾದ ಶ್ರೀಗಳಿಗೆ ಮತ್ತು ಹಲವು ಮಿತ್ರರಿಗೆ ಧನ್ಯವಾದಗಳು.]

8 comments:

Anveshi said...

ಮಹಾಂತೇಶರೆ,
ಕೊನೆಗೂ ಬ್ಲಾಗಿನಲ್ಲಿ ಬಣ್ಣ ತುಂಬಿ ಕಳೆ ಏರಿಸಿದ್ರಿ.

ಹೋಳಿಯ ರಂಗು ತೊಳೆದುಕೊಳ್ಳಲು ಹೊಳಿಗೆ ಹೋಗಿ ಹೋಳಿಗೆ ಎಷ್ಟು ಲಪಟಾಯಿಸಿದ್ರಿ? ನಮ್ಮ ನೆನಪಾಗಲಿಲ್ಲವಾ?

ಮತ್ತೆ, ಹೋಳಿ ಆಚರಿಸುವ ವಾರ ಪೂರ್ತಿ ಜಳಕ ಮಾಡದಿದ್ದರೂ ನಡೆಯುತ್ತದೆಯಲ್ವಾ?

ಗುರಗಾಂವ್ ನಲ್ಲಿ ಹೋಳಿ ಮುಗಿಸಿದಾಗ ಬಾರುಗಳು ಮಾತ್ರ ತೆರೆದಿದ್ದವಲ್ವಾ... ಹಾಗಿದ್ರೆ ಶರೀರಕ್ಕೆ ಬಣ್ಣದಓಕುಳಿ, ಹೊಟ್ಟೆಗೆ ಯಾವ ಓಕುಳಿ ಬಿದ್ದಿತು ಅಂತ ನಾನಂತೂ ಯೋಚನೆ ಮಾಡುವ ಗೋಜಿಗೇ ಹೋಗುವುದಿಲ್ಲ !!!!

Shiv said...

ಮಹಾಂತೇಶ್,

ಯಾಪ್ಪಾ ಧಣಿ.. ಕೊನೆಗೂ ಬ್ಲಾಗ್‍ನಲ್ಲಿ ಮತ್ತೆ ಬರೆಯೋಕೆ ಶುರುಮಾಡಿದಿರಲ್ಲಾ..

ನಿನ್ನ ಹೋಳಿ ಬರಹ ಓದುತ್ತಾ ಇದ್ದರೆ ಮನಸ್ಸು ಬಾಲ್ಯದ ದಿನಗಳತ್ತ ಓಡಿಹೋಗಿಬಿಡ್ತು..

ಆ ಗೆಳೆಯರೊಡನೆ ಪುಲ್-ಟೈಮ್ ಮಸ್ತಿ,ಸಿಕ್ಕಸಿಕ್ಕೋರಿಗೆ ಬಣ್ಣ ಬಳಿಯೋದು, ಕೊನೆಗೆ ತುಂಗಾಭದ್ರೆಯಲಿ ಮುಳುಗಿಬರೋದು..ನಿಜವಾಗಲೂ ಅವು ಮರೆಯಲಾರದ ದಿನಗಳು

ಅವನ್ನು ನೆನಪುಮಾಡಿಕೊಟ್ಟಿದ್ದಕ್ಕೆ ವಂದನೆಗಳು..

ಇನ್ಮೇಲಾದರೂ ವಾರವಾರ ಬರಿತೀಯಾಲ್ವಾ !??

-ಪ್ರೇಮಿ ಶಿವ್ :)

MD said...

ಮಸ್ತ್ ಅಂದ್ರ ಮಸ್ತ್ ಬರಿದೀರಿ ನೋಡ್ರಿ ಮಹಾಂತೇಶ..

ನಿಮ್ಮ ಬರಹ ಒದ್ತಾ ಒದ್ತಾ ನನಗೆ ನನ್ನ ಬಾಲ್ಯದ ಹೋಳಿ ದಿನಗಳೂ ನೆನಪಿಗೆ ಬಂದ್ವು

ನಮ್ಮ ಊರಾಗ ೨ ದಿನ ಹೋಳಿ ಹಬ್ಬ. ಮೊದಲನೆ ದಿನ ಚಿಕ್ಕ ಮಕ್ಕಳು ಅಡೋದು, ಮರುದಿನ ದೊಡ್ದವರ ಬಣ್ಣ.

ಆಹಾ... ನಮಗೆ ಎಸ್,ಎಸ್,ಎಲ್,ಸಿ ವರೆಗೂ ಮೊದಲನೆ ದಿನ ಮಾತ್ರ ಮನೆಯಲ್ಲಿ ಪರ್ಮಿಷನ್.. ಯಾವಾಗ ಪಿ.ಯು.ಸಿ ಫಸ್ಟ್ ಇಯರ್ ಗೆ ಬಂದ್ವಿ.. ನಾವೂ ದೊಡ್ದವರ ಲಿಸ್ಟನಲ್ಲಿ ಸೇರಿಬಿಟ್ಟ್ವಿ.

ಇನ್ನೂ ಎಷ್ಟೊಂದು ನೆನಪುಗಳು.. ಆಗ ದೊಡ್ದವರ ಲಿಸ್ಟ್ ನಲ್ಲಿ ಸೇರಿದ್ದಕ್ಕೆ ಖುಶಿಯಾಗಿತ್ತು...ಇವತ್ತು ಚಿಕ್ಕ್ ಮಕ್ಕಳ ಲಿಸ್ಟನಿಂದ ಹೊರಗೆ ಬಿದ್ದಿದ್ದಕ್ಕೆ ಮನಸ್ಸಿಗೆ ಬೆಜಾರೂ :-(

Mahantesh said...

anweShigaLe,
hoLiya hOLigeya gammatte gammattu..
next time khaMdita karitini....

Mahantesh said...

Shiva,
kaLakaLige dhanyawAdagaLu....
baalya baalyanee!!!! enu mAdidru vaapassu barolla....

Mahantesh said...

Rafi,
pratikiyege dhanyawaadgaLu...bagalkot jelle hoLi nimagU kuDa chennagi gottide...
neevu heLiddu nija...
doddavarAda mele manassu saMkuchitavagata hogatade...yAkadru doddavaradave?

bhadra said...

ಮಹಂತೇಶ ಬ್ಲಾಗಿನ ಗಿಡಗಳೆಲ್ಲಾ ನಳ ನಳಿಸುತ್ತಿವೆ.

ಹೋಳಿ ಬಗೆಗಿನ ಲೇಖನವಂತೂ ಸೂಪರ್

Unknown said...

Super memories mantesh..and nothing replace our DAM kingdom...