( ಸುನಂದಾವರ ಬೆಟ್ಟಸಾಲು ಪುಸ್ತಕದಿಂದ)
ನಾವೆಲ್ಲರೂ ಒಂದೇ. ನಮ್ಮದು ಕೂಡು ಕುಟಂಬ.ಯಾವುದೇ ಜಂಜಾಟವಿಲ್ಲ...ಜಗಳವಿಲ್ಲ.. ಮನುಷ್ಯರಂತೆ ಅತ್ಯಾಸೆ ಹೊಂದಿದವರಲ್ಲ.ಅದ್ರೂ ಮನುಷ್ಯರೂ ನಮ್ಮಲ್ಲೇ ಭೇದ-ಬಾವ ಮಾಡಿ ಅವಳು ಮೊದ್ಲು ,ಇವಳು ದ್ವಿತಿಯ ಅಂತಾ ಬಹುಮಾನ ಕೊಡುತ್ತಾರೆ. ನಾವೆಲ್ಲ ಒಂದೊಂದು ಥರಾ ಚೆನ್ನಾಗಿದ್ದೇವೆ.ನಾವೇಲ್ಲಾ ಒಟ್ಟಾಗಿ ಸೇರೊದು ಅಗಸ್ಟ್ ೧೫ ,ಜನವರಿ ೨೬ ರಂದು. ಅ ದಿನ ನಮ್ಮನೆಲ್ಲಾ ಬೇರೆ ಬೇರೆ ಪ್ರದೇಶಗಳಿಂದ ತಂದು ಲಾಲಭಾಗನಲ್ಲಿ ಪ್ರದರ್ಶನಕ್ಕೆ ಇಡುತ್ತಾರೆ. ಆ ದಿನ ನಾವೆಲ್ಲ ಜೊತೆಯಾಗಿದ್ದು ನಮ್ಮ ಕಸ್ಟ-ಸುಖಗಳನ್ನು ಹಂಚಿಕೊಳ್ಳುತ್ತೆವೆ. ಮೊದ್ಲಿನ ದಿನಗಳಲ್ಲಿ ಆ ಎರಡು ಸಂಧರ್ಭಗಳಲ್ಲಿ ಇಲ್ಲಿ ಭಯಂಕರ ರಶ್ಶು..ಇತ್ತಿಚಿನ ದಿನಗಳಲ್ಲಿ ಮೊದ್ಲಿನ ರಶ್ಶು,ಈಗ ಕಾಣೆಯಾಗಿದೆ.
ನಾವೆಂದರೆ ನಾಡಿಮಿಡಿತ,ನಾವೆಂದರ್‍ಎ ಎಂಥದೋ ಒಂದು ತುಡಿತ,ನಾವೆಂದರೆ ಈ ಜೀವ ಪ್ರತೀಕ. ನಾವ್ವೆಂದರೆ ಒಂದು ರೂಪಕ ಅಂತ ಹಲವಾರು ಕವಿಗಳು ಹಾಡಿ ಹೊಗಳಿದ್ದಾರೆ. ಅಚ್ಚ ಬಿಳಿಯದಕ್ಕೆಲ್ಲಾ ನಮ್ಮ ಮಲ್ಲಿಗೆಯದೇ ಉಪಮೆ.ಇನ್ನು ಸುಂದರವಾದ ಹುಡಗಿಯನ್ನು ವರ್ಣಿಸುವಾಗ ನಮ್ಮ ಪರಿವಾರದೇ ಸಿಂಹಪಾಲು.'ಹೂವ್ವೇ ಹೂವ್ವೇ','ಹೂವು ಚಲುವೆಲ್ಲಾ ನಂದೆದಿತು' ಅನ್ನುವ ಚಿತ್ರಗೀತೆಗಳಿಂದ ಹಿಡಿದು ಬೇಂದ್ರೆ ಮಾಸ್ತರ 'ಘಮ್ಮ ಘಮ್ಮಡಾಸತಾವ ಮಲ್ಲಿಗೆ, ನೀನು ಹೊರಟಿ ಈಗ ಎಲ್ಲಿಗೆ?' ಅನ್ನೊ ಕವಿತೆಗಳಲ್ಲಿ ಎಲ್ಲಾ ಕಡೆ ನಾವ್ವೇ ಸರ್ವಂತ್ರಾಯಾಮಿ. ಇನ್ನು ಪ್ರೇಮ ಕವಿ ಕೆ.ಎಸ್.ಎನ್ ಅವರ ಕೃತಿಯ ಮಲ್ಲಿಗೆ ಪರಿಮಳದ ಹಾಗೆ ಎಲ್ಲಾ ಕಡೆ ಹರಡಿದೆ. ನಾವೇಂದರೆ ಹೆಣ್ಣ ಬದುಕಿನ ಅವಿಬಾಜ್ಯ ಅಂಗ...
ಮುಗಿಸುವ ಮುನ್ನ:
"ಬಿಸೋ ಗಾಳಿ ಬದಲಾಗಿಲ್ಲ,ಹರಿಯೋ ನೀರು ಬದಲಾಗಿಲ್ಲ,ಹೂವು ಬದಲಾಗಲ್ಲ,ಈ ಮನುಷ್ಯ ಮಾತ್ರ ಈ ಪಾಟಿ ಬದಲಾಗಿದ್ದಾನೆ" ಅನ್ನೊ ಬಳೆಗಾರ ಚೆನ್ನಯ್ಯನ ಮಾತಿನಿಂದ ಶುರುವಾಗೋ 'ಮೈಸೂರು ಮಲ್ಲಿಗೆ' ಗೀತನಾಟಕ ನೋಡೊ ಅವಕಾಶ ಮೊನ್ನೆ ಶನಿವಾರದಂದು ಸಿಕ್ಕಿತ್ತು. ಸುಮಾರು ೨೦ ಜನ ರಂಗ ಕಲಾವಿದರು , ೨ ಗಾಯಕ/ಗಾಯಕಿಯರು ೯೦ ನಿಮಿಷಗಳಲ್ಲಿ ಅದ್ಬುತ ಮಾಯಾಲೋಕ ಸೃಷ್ಟಿಸಿಕೊಡುತ್ತಾರೆ. ಕಲಾಗಂಗೋತ್ರಿಯಿಂದ ಪ್ರದರ್ಶಿತವಾಗುತ್ತಿರುವ ಈ ಗೀತನಾಟಕ, ಡಾ. ಬಿ.ವಿ. ರಾಜರಾಂವರ ನಿರ್ದೇಶನ.ರಾಜೇಂದ್ರ ಕಾರಂತ ಕಲ್ಪನಾ ಶಕ್ತಿಯಲ್ಲಿ ಅರಳಿರುವ ಈ ಗೀತನಾಟಕ ಒಂದು ಅನ್ಯನ್ಯ ಪ್ರಯೋಗ.
ನಾಟಕ ಪೂರ್ತಿ ಸೂತ್ರದಾರ ಬಳೆಗಾರ್‍ಅ ಚೆನ್ನಯ್ಯ...ನಿಜ ಆತನಿಗೆ ವಯಸ್ಸಾಗಿದೆ. ಬೆನ್ನು ಬಾಗಿದೆ. ಶಾನುಭೋಗರ ಮಗಳು ಸೀತಮ್ಮಳ ಮರಿಮೊಗಳನ್ನು ಬೇಟಿ ಮಾಡುವ ಈತನಿಗೆ ಅಧುನಿಕತೆಯ ಅರಿವಾದ ನಂತರ ನಿಮ್ಮನ್ನು ಹಳೆಯ ಕಾಲಕ್ಕೆ ಕರೆದೊಯ್ಯುತ್ತಾನೆ. ಪ್ರೇಮ ಕವಿ ಕೆ.ಎಸ್.ನರಸಿಂಹ ಅವರ ಮೈಸೂರು ಮಲ್ಲಿಗೆಯ ಕವನ ಸಂಕಲನದ ಕವನಗಳನ್ನು ಕವಿಯೊಬ್ಬರ ಜೀವನಕ್ರಮಕ್ಕೆ ಅಳವಡಸಿ,ಪಾತ್ರಗಳನ್ನು ಕವನದಲ್ಲೇ ನಿರೂಪಿಸುವುದು ಈ ಪ್ರಯೋಗದ ವೈಶಿಷ್ಟ... "ಮನೆಯಲ್ಲೊಂದು ಮಲ್ಲಿಗೆ ಹೂ ಗಿಡ ನೆಟ್ಟು ಕನ್ನಡದ ಕಂಪನ್ನು ಹರಿಸಿರಿ..." ಎಂದು ಕಡೆಯಲ್ಲಿ ಸಂದೇಶ ಮೆಚ್ಚುಗೆ ಗಳಿಸುತ್ತದೆ...
ಈ ವಾರದ ಶನಿವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ಪುನ್: ಪ್ರದರ್ಶಿತವಾಗುತ್ತಿರುವ ಮೈಸೂರು ಮಲ್ಲಿಗೆಯನ್ನು ತಪ್ಪದೇ ವಿಕ್ಷಿಸಿ.ಕೊನೆ ಕ್ಷಣದಲ್ಲಿ ಟಿಕೇಟ್ಟು ಖಂಡಿತಾ ಸಿಗೋದಿಲ್ಲಾ. ಮೊದ್ಲೇ ಬುಕ್ ಮಾಡಿ ಹೋಗಿ..
ಯಶವಂತ ಸರದೇಶಪಾಂಡೆಯ 'ಸಹಿ ರೀ ಸಹಿ' ಮತ್ತು 'ಆಲ್ ದಿ ಬೆಸ್ಟ್' ಎಂಬ ಸುಂದರ ನಗೆ ನಾಟಕಗಳು ವಾರಂತ್ಯದಲ್ಲಿ ಎಚ್.ಎನ್.ಕಲಾಕ್ಷೇತ್ರ ,ಜಯನಗರದಲ್ಲಿ ಪ್ರದರ್ಶಿತವಾಗುತ್ತಿವೆ...
(ಚಿತ್ರಗಳು: ಲಾಲಭಾಗ ಫಲ-ಪುಷ್ಪ ಪ್ರದರ್ಶನ ೨೦೦೭)
5 comments:
ಕಳೆದ ಆದಿತ್ಯವಾರ ನಾನು 'ಮೈಸೂರು ಮಲ್ಲಿಗೆ' ನಾಟಕ ನೋಡಲು ಹೋಗಿದ್ದೆ..ನಮ್ಮ ಜನಪ್ರಿಯ ಕವಿಯೊಬ್ಬರು ತಮ್ಮ ಕೊನೆಗಾಲದಲ್ಲಿ ಅಷ್ಟೊಂದು ಕಷ್ಟದಲ್ಲಿದ್ದರಾ? :-(
ಕವಿ ಬಳೆಗಾರ ಚೆನ್ನಯ್ಯನಿಗೆ 'ನೊಂದ್ಕೊಳ್ಳದಿದ್ರೆ ಕವಿತೆ ಹುಟ್ಟುತೇನಯ್ಯ' ಎನ್ನುವ ಸನ್ನಿವೇಶ, ಕವಿ ತನ್ನ ಪತ್ನಿಗೆ 'ನೆಮ್ಮದಿಯಿದ್ರೆ ಆತ ಕವಿತೆ ಹೇಗೆ ಬರಿಯುತ್ತಾನೆ' ಎನ್ನುವುದು - ಇವೆಲ್ಲವೂ ಮನೆಗೆ ಬಂದ ಮೇಲೂ ನಮ್ಮನ್ನು ಕಾಡುತ್ತಿರುತ್ತದೆ..ಮೈಸೂರು ಮಲ್ಲಿಗೆಯ ಹಾಡುಗಳು ಬೋನಸ್..
ಇತ್ತೇಚೆಗೆ ರಂಗಶಂಕರದಲ್ಲಿ ತೇಜಸ್ವಿಯ 'ಜುಗಾರಿ ಕ್ರಾಸ್' ಮತ್ತು 'ಚಿದಂಬರ ರಹಸ್ಯ' ನಾಟಕಗಳ ಪ್ರದರ್ಶನವಿತ್ತು..ನೋಡಿದ್ದೀರ? ಪ್ರಕಾಶ್ ಬೆಳವಾಡಿ ನಿರ್ದೇಶನದ 'ಚಿದಂಬರ ರಹಸ್ಯ' ಚೆನ್ನಾಗಿತ್ತು..
ಹೂವಿನ ಘಮ್ಮತ್ತು ಬಹಳ ಸೊಗಸಾಗಿದೆ. ಸುಮಧುರ ಸುಗಂಧ ಮೂಗಿನ ಹೊಳ್ಳೆಗಳನ್ನು ಅರಳಿಸಿವೆ. ಹಾಗೆಯೇ ಲೇಖನ ಮನದ ಬಾಗಿಲನ್ನು ತೆರೆಸಿದೆ.
ಮಹಾಂತೇಶರೇ,
ನಿಮ್ಮ ಬ್ಲಾಗಿನ ಪರಿಮಳ ನಮ್ಮ ಬೊಗಳೆವರೆಗೂ ಬಂದು ಮುಟ್ಟಿತ್ತು... ಎಚ್ಚೆತ್ತುಕೊಂಡು ಇಲ್ಲಿಗೆ ಬಂದಾಗ ವಿಷಯ ಗೊತ್ತಾಯಿತು.
ಎಷ್ಟು ಹೂವನ್ನು ಯಾರಿಗೆ ಕೊಡಲು ಎತ್ತಿಕೊಂಡಿರಿ?
ಮಹಾಂತೇಶ್,
ಹೂವಿನ ಪರಿಮಳದಲ್ಲಿ ಮನಸ್ಸು ಹೇಗೆ ಉಲ್ಲಾಸಿತವಾಗುತ್ತೆ ಅಲ್ವಾ..
ಮೈಸೂರು ಮಲ್ಲಿಗೆ ಗೀತನಾಟಕದ ಬಗ್ಗೆ ವಿಕ್ರಾಂತದಲ್ಲಿ ಓದಿದ್ದೆ.ತುಂಬಾ ಚೆನ್ನಾಗಿ ಹೆಣೆದಿದಾರೆ ಕವನಗಳನ್ನು ಅಂತಾ.
ಶಿವ,
ನಮ್ಮ ಜನಪ್ರಿಯ ಕವಿ ಕೊನೆ ಕಾಲದಲ್ಲಿ ಕಷ್ಟದಲ್ಲಿ ಇದ್ದದ್ದು ನನಗೆ ತಿಳಿದಿದ್ದು ನಾಟಕ ನೋಡಿದ ಮೇಲೆ..ಕವಿತೆಗಳನ್ನು ಬಳಕೆ ಮಾಡಿ ರಂಗಕಥೆ ಬರ್‍ಒದು ತುಂಬಾ ಕಷ್ಟ....
ಬಳೆಗಾರ ಚೆನ್ನಯ್ಯನ ಮಾತುಗಳು ಚಿಂತನಗೆ ಊಂಟುಮಾಡಿತ್ತವೆ......
ಜುಗಾರಿ ಕ್ರಾಸ್ ಮತ್ತು ಚಿದಂಬರ ರಹಸ್ಯ ಇನ್ನು ನೊಡಿಲ್ಲಾ... ಈ ನಾಟಕಗಳು ವಾರಂತ್ಯದಲ್ಲಿ ಬರೋದೆ ಇಲ್ಲಾ......ಖಂಡಿತವಾಗಿ ನೊಡ್ಲೆಬೇಕಾದ ನಾಟಕಗಳು.......
ಶ್ರೀಗಳೇ,
ಹೂವಿನ ಘಮ್ಮತ್ತುನ್ನು ಆಘ್ರಾಣಿಸಿದಕ್ಕೆ ಧನ್ಯವಾದಗಳು........
ಅಸತ್ಯಿಗಳೇ,
ಪರಿಮಳ ಅಲ್ಲಿಯವರಗೆ ಹರಡಲು ನಮ್ಮದೇನು ಕೈವಾಡ ಇಲ್ಲವೇಂದು ಸ್ಪಷ್ಟಿಕರಿಸುತ್ತವೆ.....
ಹೂವು ಮಾತ್ರ ಸಾಕಷ್ಟು ಇದಾವೆ...ತಗೇದುಕೋಳ್ಳವರು ಮಾತ್ರ ಇಲ್ಲಾ :(-
ಶಿವ,
ನಾಟಕ ನೋಡೊ ಅವಕಾಶ ಸಿಕ್ರೇ ಮಾತ್ರ ತಪ್ಪಿಸಿಕೋಳ್ಳಬೇಡಿ.....
Post a Comment