Thursday, July 20, 2006

ಮನಾಲಿಯಲ್ಲಿ ಮಹಾಂತೇಶ


ಬಾಳ ದಿನ್ಳಿಂದ ಮನಾಲಿ ಬಗ್ಗೆ ಬರೀಲಿ ಅಂತ ಮನಸ್ಸಿನಾಗ ಇತ್ತು.ಅಂತು ಕೊನೆಗೂ ಅದಕ್ಕ ಕಾಲ ಕೂಡಿ ಬಂತ ಅನ್ನಿ....ಇದು ಸರಿ ಸುಮಾರು 2ವರ್ಷದ ಹಿಂದಿನ ಮಾತು..ನಾನು justಅವಾಗ ತಾನೆ ನಾರ್ತ ಇಂಡಿಯಾಗೆ ಕಾಲಿಟ್ಟಿದ್ದೆ.ಚಂಡಿಗಢನಲ್ಲಿ ವರ್ಕ ಮಾಡ್ತಾ ಇರೋವಾಗ ಮನಾಲಿಗೇ ಹೊಗೊ ಪ್ಲಾನ ಮಾಡಿದ್ವಿ.ಅದು ಎನೋ ಒಂದು ಕಾರಣಕ್ಕೆ ಮುಂದು ಹೊಗ್ತಾ ಇತ್ತು..."ಅಂತು ಇಂತು ಕುಂತೀ ಮಕ್ಕಳಿಗೆ ರಾಜ್ಯ ಸಿಕ್ತು" ಅನ್ನೊ ಹಾಂಗ ನಾವು ಮನಾಲಿಗೆ ಹೊಗೊ ದಿನ ಬಂದೇ ಬಿಡ್ತು.ನಮ್ಮದು ನಾಲ್ಕು ಜನರ ಗ್ರುಫ,ಇಲಕಲ್ಲದ ರಫೀ,ಬಿಜಾಪುರದ ವಿಶ್ವ,ಸಾಂಗ್ಲಿಯಿಂದ ಅಭಯಎಲ್ಲಾ ಸೇರಿ ರಾತ್ರಿ 9.೦೦ ಘಂಟೆಗೆಹೊರಟ್ವಿ.ನಮಗೆ ಶಿವು (Ref:http://chittey.blogspot.com/)ತರಾ ಫ್ರೀ ವೇ ಎನೂ ಸಿಗದ ಕಾರಣ ಇರೋ ರಸ್ತೆಯಲ್ಲಿ ನಮ್ಮ ಪ್ರಯಾಣ ಶುರು ಅಯಿತು.
ಡಿಶೆಂಬರ ತಿಂಗ್ಳು,ಹೊರಗಡೆ ಕೊರೆಯುವ ಥಂಡಿ....ಕಾರನಲ್ಲಿ ನಾವು ಬೆಚ್ಚಗೆ ನಿದ್ದೆಯಲ್ಲಿ.ಮೋದಲೇ ನಿರ್ಧಾರದಂತೆ ಸರಿತಿಗಿಬ್ಬರು ಎಚ್ಚರ ಇರೊದು.ಮೊದ್ಲು ಪಾಳಿ ರಫಿ ಮತ್ತೆ ವಿಶ್ವ. 2 ತಾಸು ಪ್ರಯಾಣ ಆದ ಮೇಲೆ ಯಾವದೋ ಒಂದು ಧಾಬದಲ್ಲಿ ಕಾರ ನಿಲ್ಲಿಸಿದ್ರು ಊಟಕ್ಕೆ.( ಧಾಬಗಳ ಬಗ್ಗೆ ಒಂದು ಸವಿವರವಾದ ಬ್ಲಾಗ ಬರ್ರಿಬಹುದು ನೊಡ್ರಿ)ಕಾರಿನಿಂದ ಕಾಲಿಟ್ಟ ತಕ್ಷಣ ಎಲ್ಲಾರಿಗೂ ಥಂಡಿ ಅನುಭವಕ್ಕೆ ಬಂತು ನೋಡಿ,ಆವಾಗ ನಮಗೇಲ್ಲಾ ಗೊತ್ತು ಇದು ಪ್ರಯಾಣ ನಾವು ಅಂದುಕೊಂಡಿದ್ದಕ್ಕಿಂತಾ ಬಾಳ ತ್ರಾಸ ಇದೆ ಅಂತ.ಈ ಹಾಳು ಡಿಶೆಂಬರನಲ್ಲಿ ಯಾಕದ್ರು ಹೊಂಟ್ವಿ ಅಂತ ಯೋಚನೆ ಮನದಲ್ಲಿ ಬಂತು ಅನ್ನಿ.ಇನ್ನು ನನ್ನ ಸರ್ತಿ ಎಚ್ಚರ ಇರೊದು.ಮಂಡಿಯಿಂದ ಶುರು ಅಯಿತು ನೋಡಿ ರಸ್ತೆ,ಭಯಂಕರ ಹೈರ್ ಪಿನ ಕರ್ವಗಳು,singleರಸ್ತೆ,ರಾತ್ರಿ ಚೆಕ್ಕಿಂಗಗಳು,ಘಾಟ್ ರಸ್ತೆಗಳು ಪೂರ್ತಿ ಮನಾಲಿವರಗೆ ಇದೆ ತರಾ ರಸ್ತೆ ಗೊಳು.ಸುಮಾರ್ರು 10 ಘಂಟೆಗೆ ಪ್ರಯಾಣದ ನಂತರ ನಮ್ಮ ಗುರಿ ಮುಟ್ಟಿದೆವು.ನಮ್ಮಲ್ಲಿ ಈ ಮೊದಲು ಯಾರು ಹಿಮಾಲಯದ ತಪ್ಪಲ್ಲಲಿ ಇರೋ ಗಿರಿಧಾಮಗಳನ್ನು ನೋಡ್ರಿದ್ದ ಕಾರಣ ,ನಾವೆಲ್ಲರೋ ಬಾರಿ ಉತ್ಸಾಹಗೊಂಡೆವು.ದೂರದಲ್ಲಿ ಕಾಣ್ಸಿತ್ತಿದ್ದ ಗಿರಿಗಳ ಮೇಲಿನ ಬೆಳಗಿನ ಮಂಜು ನಮ್ಮನೆಲ್ಲಾ ಬೇರೆ ಲೋಕಕ್ಕೆ ಕರೀತಾ ಇದೆ ಅನ್ನೊ ಭಾವನೆ ಸಹಾ ಬಂತು.ನಮ್ಮ ದಕ್ಷಿಣ ಭಾರತದಲ್ಲಿ ಇರೋಗಿರಿಧಾಮಗಳಿಗೆ ಹೊಲಿಸಿದರೆ ಮನಾಲಿ ತುಂಬಾ ಬಿನ್ನವಾಗಿ ಇದೆ. ಸದಾ ಮಂಜು ಮುಸುಕಿರೋ ಬೆಟ್ಟಗಳು ,ತಣ್ಣನೆಯ ಗಾಳಿ ಎಲ್ಲಾ ಸೇರಿ ರಫಿಗೆ ಮೋಡಿ ಮಾಡಿ ಬಿಟ್ಟಿದ್ದವು.
ಗೆಸ್ಟಹೌಸ ಬುಕ ಮಾಡಿದರಿಂದ ಅಲ್ಲಿ ಎನು ಪ್ರಾಮ್ಲಂ ಅಗಲಿಲ್ಲಾ.ಬೆಳಿಗ್ಗೆ ನಾಷ್ಟ ಮಾಡಿ,ಎಲ್ಲಿ ಮತ್ತೆ ಏನನ್ನು ನೋಡಬೇಕು ಅನ್ನೋದನ್ನ ನೀರ್ಧರಿಸಿದೆವು.ನಮ್ಮ ಪ್ರಯಾಣ ಮೊದ್ಲಿಗೆ ಗುಲಾಬ ಅನ್ನೊ ಸ್ಥಳಕ್ಕೆ ಹೊರಟೆವು.ದಾರಿಯಲ್ಲಿ ಮೇಲೆ ಹೊಗಲು ಬೇಕಾದ ಓವರಕೋಟು,ಬೂಡ್ಸು, ಸ್ಟೀಕ್ಸಗಳನೇಲ್ಲಾ ರೆಂಟಗೆ ತೊಗಂಡು,ಧರಿಸಿದ ಮೇಲೆ ಓಳ್ಳೆ ಸ್ಪೇಸ ಯಾತ್ರಿಗಳ ತರಾ ಅಗಿ ನಮ್ಮ ಪ್ರಯಾಣ ಮುಂದುವರೆಸಿದೆವು.
ಈ ರೋಡು ಮೋದಲಿನಗಿಂತಾ ಭೀಕರವಾಗಿತ್ತು. ಸ್ಟೀಫ ಕರ್ವಗಳು,ಇಕ್ಕಟಾದ ರಸ್ತೆ ಜೊತೆ ಮಂಜು ಸಹಾ ದಾರಿ ತುಂಬ.ನಮ್ಮ ಡ್ರೈವರ ಪೂರ್ತಿ ಹುಷಾರಾಗಿ ಕಾರ ಒಡಿಸತೊಡಗಿದ.ಈದೆ ರಸ್ತೆ ಮುಂದು ಹೋಗಿ Rotangpass ಮೂಲಕ ಲೇಹ,ಲಡಾಕಗೆ ಹೊಗುತ್ತೆ.ವರ್ಷದ್ಯಾಗ 6 ತಿಂಗ್ಳು ಮಾತ್ರ ಈ ರಸ್ತೆ ಓಪೆನ ಅಗಿ ಇರ್ರುತ್ತ.ನಾವು ಹೋದಾಗ ಈ ರಸ್ತೆ ಗುಲಾಬವರಗೆ ಮಾತ್ರ ಇತ್ತು.ಮುಂದೆ ಸಿಕ್ಕಾಪಟ್ಟೆ ಹಿಮ ರಸ್ತೆ ಮೇಲೆ ಇರೋ ಕಾರಣ ಮುಂದುವರಿವುದು ಅಸಾಧ್ಯವಾಗಿತ್ತು. ಗುಲಾಬದವರಗೆ ದಾರ್ರಿನು ಅಸ್ಟು ಸರಿ ಇರಲಿಲ್ಲಾ.ಕಾರು ಒಂದು ಮೀಟ್ರು ದೂರ ಹೊದ್ರೆ ಎರಡು ಮೀಟ್ರು ಹಿಂದಕ್ಕೆ ಜರಿಯುತಿತ್ತು ಈ ಹಾಳು ಮಂಜಿನ ಕಾರಣಕ್ಕೆ.ಆ ದಾರಿ ಇಸ್ಟು ಭಯಾನಕವಾಗಿತ್ತು ಅಂದ್ರೆ ನಾವು ಸುತ್ತು ಮುತ್ತ ಇರೋ ಬೆಟ್ಟಗುಡ್ಡಗಳನ್ನೆ ಮರತು ಮುಂದೆ ಇರೊ ದಾರಿನ್ನೆ ನೊಡ್ತಾ ಇದ್ದೇವು.ಕೊನಗೂ ತೆವಳುತ್ತಾ ಗುಲಾಬ ತಲುಫಿದೆವು.16 ಕಿ.ಮೀ.ಗೆ ಸುಮಾರು 1 ಘಂಟೆಗಿಂತಾ ಜಾಸ್ತಿ ಟೈಮ ಹಾಳು ಮಾಡಿ ಅಲ್ಲಿ ಮುಟ್ಟಿದೆವು.ಆವಾಗ ನಮಗೆ ಗೊತ್ತು ಸುತ್ತು ಮುತ್ತಲು ಇರೊ ನಿಸರ್ಗದ ಚಮತ್ಕಾರವನ್ನು ನೋಡತೊಡಗಿದೆವು. ನಾವು ಹಾಕ್ಕೋಂಡಿರೋ ಓವರಕೋಟ,ಬೂಡ್ಸಗಳ ಮಹಿಮೆ ಈಗ ಅರ್ಥವಾಗತೊಡಗಿತು. ಅಲ್ಲಿ ಇರೊ ಅಸಾದ್ಯ ಚಳಿಯನ್ನು ತಡೆಯಲು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡದವನ್ನಿ.

ಸ್ಠಳಕ್ಕೆ ಗುಲಾಬ ಅಂತ ಯಾಕೆ ಹೆಸ್ರು ಬಂತು ಅಂದ್ರೆ, ಬೇಸಿಗೆ ಕಾಲದಲ್ಲಿ ಇಲ್ಲಿ ಸಿಕ್ಕಾಪಟ್ಟೆ ಗುಲಾಬಿ ಬೆಳಿತಾರೆ ಅನ್ನೊ ಊತ್ತರ ಬಂತು.ಗುಲಾಬ ಒಂದು ಸಮತಾಟ್ಟಗಿರೊ ಪ್ರದೇಶ. ಇಲ್ಲಿ ಹಲವಾರು ಮಂಜಿನ ಮೇಲೆ ಅಡೋ ಅಟಗಳೀಗೆ ಅವಕಾಶ ಇರ್ರುತ್ತೆ.ಸ್ಕೆಟಿಂಗ್,ಮೋಟರ ಡ್ರೈವಿಂಗು,ಟೈರ ಮೇಲೆ ಕುಳಿತು ಮೇಲಿನಿಂದ ಜಾರುವದು ಮುಂತಾದವುಗಳು.ನಾವೆಲ್ಲ ಮೊದ್ಲು ಸ್ಕೆಟಿಂಗ ಟ್ರೈ ಮಾಡೋಣ ಅಂತಾ ನಿರ್ದರಿಸಿ ಶುರು ಮಾಡಿದೆವು.ಈ ಸ್ಕೇಟಿಂಗ ಸಿಕ್ಕಾಪಟ್ಟೆ ತರ್ಲೆ ಆಟ.Bodyನ ಸರಿಯಾಗಿ ಬಾಲೆನ್ಸ ಮಾಡಿ,ಸ್ಟಿಕ್ಸ ಸಹಾಯದಿಂದ ಮುಂದೆ ಹೋಗಬೇಕು.ಇ ಜಾಗದಲ್ಲಿ ನಿಮಗೆ ಸ್ಕೆಟಿಂಗ ಕಲಿಸಿಕೊಡೆಕೆ ಸುಮಾರು ಬಾಯ್ಸಗಳು ಸಿಗತಾರೆ. ನಮಗೆಲ್ಲಾ ಒಬ್ಬ ಬಾಯ ಸ್ಕೇಟಿಂಗ ಬಗ್ಗೆ ಹೇಳಿಕೊಟ್ಟ.ಆಗ ಶುರುವಾಯಿತು ನೋಡ್ರಿ ಅಸಲಿ ತಮಾಶಿ..... ನಾನು ಆ ಹುಡಗನ ಸಫ್ಫೋರ್ಟ್ ಇರೋವಾಗ ಸರಿಯಾಗಿ ಇರ್ತಿದ್ದಿನಿ. ಆವನ್ನು ನನ್ನ ಕೈ ಬಿಟ್ಟ ತಕ್ಷಣ ನನ್ನ ಬಾಲೆನ್ಸ ಮಾಯಾಅಗಿ ಬಿದ್ದುಬಿಡತ್ತೀದ್ದೆ.ಒಮ್ಮೆ ಚಿತ್ತ ,ಒಮ್ಮೆ ಬೋರಲು,ಒಮ್ಮೆ ಎರಡು ಕಾಲಗಳು ಗಾಳಿಯಲ್ಲಿ..ಹೀಗೆ ಸುಮಾರು ಆಂಗ್ಯಲನಲ್ಲಿ ಬಿಳ್ತಾ ಇದ್ದೆ.ಇದು ತುಂಬಾ ಹೊತ್ತು ನಡೆಯಿತು. ಆ ಹುಡಗನ ಇವನು ಈ ಜನ್ಮದಲ್ಲಿ ಸ್ಕೆಟಿಂಗ ಕಲಿಯೊಲ್ಲಾ ಅಂದುಕೊಂಡು ಸುಮ್ನಾಗಿಬಿಟ್ಟ್.ಸುಮಾರು 1 ಘಂಟೆ ನಿರಂತರ ಪ್ರಯತ್ನ ನಂತ್ರ ನಾನು ಹೇಗೊ ಬಾಲೆನ್ಸ ಮಾಡಿ ಸ್ಕೆಟಿಂಗ ಕಲಿತುಬಿಟ್ಟೆ. ಅವಾಗ ಎನೊ ಒಂದು ಮಹತ್ತರವನ್ನ ಸಾಧಿಸಿದಂತೆ ಅಯಿತು.

ಈ ಆಟದ ಗೊಂದಲನಲ್ಲಿ ಟೈಮ್ ಪಾಸ್ಸದ್ದೆ ತಿಳಿಲಿಲ್ಲಾ.ನಂತರ ಟೈರನಿಂದಾ ಸುಮಾರು ಎತ್ತರಿಂದಾ ಸ್ಲೈಡ ಅಗ್ತಾ ಕೆಳಗಡೆ ಬಂದ್ವಿ.ಸುಮಾರ್ರು ದೂರ ಮೇಲ್ಗೆಡೆ ಚಾರಣ ಮಾಡಿದೇವು. ಸಮುದ್ರ ಮಟ್ಟದಿಂದಾ ಮೇಲೆ ಹೊದಂತೆ ಪ್ರಾಣವಾಯು(Oxygen)ಕಡಿಮೆ ಅಗ್ತಾ ಬಂತು.ಮೇಲಗಡೆಯಿಂದ ಅದ್ಬುತ ನಿಸರ್ಗದ್ರಶ್ಯಗಳನ್ನ ನೋಡಿ ಮನಸ್ಸಿಗೇಲ್ಲಾ ಖುಶಿ ಅಯಿತು.ಇಸ್ಟೇಲ್ಲಾ ಅಗೊ ಹೊತ್ತಿಗೆ ಸಾಯಂಕಲ ಆಗಿ ಹೊಗಿತ್ತು.ಈ ಜಾಗದ್ಯಾಗ ಚಾ ,ಟೀ (ಸ್ನಾಕ್ಸ) ಬಿಟ್ಟರೆ ಬೇರೆ ಎನು ಗತಿ ಇರಲಿಲ್ಲಾ. ಅದಕ್ಕ ಇರೋ ಸ್ನಾಕ್ಸ ತಿಂದು ,ಚಾ ಕುಡಿದು ಸೊಲನವ್ಯಾಲಿ ಹೊರಟ್ವಿ.ಸೊಲನವ್ಯಾಲಿ ಮನಾಲಿಯಿಂದ 3-4 ಕಿ.ಮೀ.ದೂರದಲ್ಲಿ ಇರೋ ಜಾಗ.ಇಲ್ಲಿ ಸ್ಕೇಟಿಂಗ ಕಾಂಫೀಟೆಶನಗಳು ನಡಿತಾ ಇರತಾವ.ಹೊಟ್ಟೆಗೆ ಇನ್ನಸ್ಟು ಟೀ ಹಾಕಿ ನಮ್ಮ ಗ್ರುಫ ಸ್ಕೇಟಿಂಗ ಅಡಲು ರೆಡಿ ಅಯಿತು....ಮೇಲೆ ಕಲಿತುಬೇರೆ ಬಂದಿದ್ಚಿ.ಇಲ್ಲಿ ಗುಲಾಬಗೆ ಹೊಲಿಸಿದರೆ ಸ್ಕೇಟಿಂಗ ತುಂಬಾ ಸರಳವಾಗಿತ್ತು,ಕಾರಣ ಇಲ್ಲಿ ಜಾಗ ತುಂಬಾ ಸಮತಟ್ಟಾಗಿತ್ತು.ಈ ಆಟಗಳ ಗೊಂದಲದಲ್ಲಿ ನನ್ನ ಬೂಡ್ಸವಳಗೆ ಮಂಜು ಹೊಗಿದ್ದನ್ನಾ ನಾನು ಗಮನಸಿಲಿಲ್ಲಾ. ಅದ್ರ ಪರಿಣಾಮ ಒಂದು ತಾಸು ಆದ ಮೇಲೆ ಶುರು ಅಯಿತು ನೋಡಿ ನನ್ನ ಕಾಲೆಲ್ಲಾ ಹಿಮದ ಕಾರಣ ರಕ್ತ ಸಂಚಲನೆಯೆ ನಿಂತು ಹೊಯಿತು.ಸಿಕ್ಕಾಫಟ್ಟೆ ಥಂಡಿನೂ ಹತ್ತಾಕ್ಕತ್ತು.ಬೂಡ್ಸ ತಗದು ಮಂಜು ತಗದ್ರು ಎನು ಅಸರ ಆಗಲ್ಲಿಲ್ಲಾ.ರಫಿ ಸಹಾಯದಿಂದ ಹೇಗೂ ಕಾರ ತಲುಫಿದೆ.ಎನೇನೋ ಮಡಿದರೂ ಥಂಡಿ ಮಾತ್ರ ಕಡಿಮಿ ಅಗಲಿಲ್ಲ.ಅಲ್ಲೇ ಒಂದು ಹೊಟ್ಲುನಲ್ಲಿ ಊಟ ಮಾಡಿ ರೂಮಗೆ ಓಡಿದವು.roomನಲ್ಲಿ ಹೋಗಿ ಸುಡು ಸುಡು ನೀರಿನಲ್ಲಿ ಜಳಕ ಮಾಡಿ,ನಂತರ ಹೀಟರ ಮುಂದೆ ಕುಳಿತಾಗ್ಲೆ ನನಗೆ ಸಮಾಧಾನವಾದದ್ದು.ಇದೆಲ್ಲಾ ಆಗುವರಗೆ ರಾತ್ರಿ 8 ಹೊಡದಿತ್ತು.ನನ್ನ ಬಿಟ್ಟು ಬೇರೆಯರಲ್ಲಾ ಮಾಲ್ ರೋಡ ತಿರಗಿ ಬರತಿವಿ ಅಂತಾ ಹೊದ್ರು.ನಾನು ಚಳಿ ಕಾರಣ ಹೊರಗಡೆ ಬರೊಲ್ಲಾ ಅಂತ ಹೆಳ್ದೆ. ರಾತ್ರಿ ಭರ್ಜರಿ ಊಟ ಮಾಡಿ ಹಾಸಿಗೆ ತೆಲೆ ಇಟ್ಟದ್ದೆಷ್ಟು ನೆನಪು....
ಬೆಳಿಗ್ಗೆ ಕಣ್ಣು ಬಿಟ್ಟಾಗ ಮೊದ್ಲು ಎಲ್ಲಿದ್ದಿವಿ ಅನ್ನೊದೆ ಮರೆತು ಹೊಗಿತ್ತು.ಈ ದಿನ ಮನಾಲಿಯಲ್ಲಿ ಇರೊ ಗುಡಿಗಳನ್ನ ನೋಡೊದು, ಅಮೇಲೆ ಕುಲ್ಲು,ಮಣಿಕನ್ನನ ನೋಡಿ ಮರಳಿ ಗೂಡಿಗೆ ಹೋಗೊದು ಅಂತಾ ನೀರ್ಧಾರ ಮಾಡಿದೇವು .ಮೊದಲು ಆಗಸ್ತ್ಯ ದೇವಾಲಯಕ್ಕೆ ಭೇಟಿ.ನಂತರ ವಶಿಸ್ಟ ದೇವಾಲಯ ನೋಡಿದೇವು.ಏರಡು ದೇವಾಲಯಗಳು ಸರಿ ಸುಮಾರ್ರಿಗಿದ್ವು.ಮುಂದೆ ಹಿಡಂಬಾ ದೇವಾಲಯಕ್ಕೆ ಭೇಟಿ.ಅಶ್ಚರ್ಯವಾಗಬೇಡಿ!!! ಹಿಡಂಬೆ ಯಾರು ಅಂತಾ.
ಮಹಾಭಾರತದಲ್ಲಿ ಭೀಮನೀಗೆ ಮನಸೊತು (ಲವ ಅಗಿ) ಮದ್ವೆ ಆದ ರಾಕ್ಷಷಿಯೇ.ಭೀಮ ಮನಾಲಿಯಲ್ಲಿ ಮದ್ವೆ ಆದ ಕಾರಣಕ್ಕೆ ಇಲ್ಲಿ ಅವಳ ಹೆಸ್ರನಲ್ಲಿ ದೇವಾಲಯ ಇದೆ.ಇದು ತುಂಬಾ ಹಳೇ ಕಾಲದ ದೇವಾಲಯ. ಅರ್ಧಕ್ಕಿಂತಾ ಜಾಸ್ತಿ ಮರದಲ್ಲಿ ಕಟ್ಟಿದ್ದು.ಕೊನಯದಾಗಿ ನಾವು ಭೇಟಿ ಕೊಟ್ಟದ್ದು "ಬುದ್ದಂ ಶರಣಂ ಗಚ್ಚಾಮಿ!"ಅಂತಾ ಜಗತ್ತಿಗೆ ಶಾಂತಿ ಮಂತ್ರ ಹೇಳಿದ ಬುದ್ದನ ದೇವಾಲಯಕ್ಕೆ.ನಾನು ಈ ಮೊದ್ಲು ಬುದ್ದ ಮಂದಿರ ನೋಡಿರದ ಕಾರಣ ನನಗೆ ಈ ಮಂದಿರ ತುಂಬಾನೇ ಇಸ್ಟ ಅಯಿತು.
ನಮ್ಮ ಮುಂದಿನ ಪ್ರಯಾಣ,ಮನಿಕನ್ನನಗೆ.ಈ ಜಾಗದ ವಿಶೇಷತೆ ಎನೇಂದ್ರೆ,ಎಲ್ಲಿ ನಮ್ಮ ಶಿವಪ್ಪನದು ಒಂದು ಮಂದಿರವಿದೆ.ಇಲ್ಲಿ ಹಾಟ್ ಸಲ್ಫರ್ ಸ್ಪ್ರಿಂಗ (Hot sulfer Spring)ಬೇರೆ ಇದೆ.ನಾರ್ತಇಂಡಿಯಾದಲ್ಲಿ ಇ ತರಾ ಸಲ್ಫರ್ ಸ್ಪ್ರಿಂಗ ಬೇಕಾದಷ್ಟು ಸೀಗತಾವೆ.365 ದಿನ ಇಲ್ಲಿ ನೆಲದಿಂದ ಬಿಸಿ ನೀರು ಸದಾ ಬರ್ತಾ ಇರುತ್ತೆ.ಹಾಗೆ ಒಂದು ಗುರುದ್ವಾರನು ಇದೆ.ಗುರುದ್ವಾರದ ಲಂಗರನಲ್ಲಿ ಒಂದು ಸಕ್ಕತಾದ ಊಟ ಮಾಡಿ ನೋಡಿ ನಾವು ಚಂಡಿಗಢಕ್ಕೆ ಮರಳಿ ಹೊರಟೆವು.






12 comments:

bhadra said...

ವಾಹ್ ವಾಹ್! ಬಹಳ ಸುಂದರವಾದ ಸಚಿತ್ರ ಲೇಖನ. ಮನ ತಣಿಯಿತು. ಅದರಲ್ಲೂ ಕನ್ನಡದಲ್ಲಿ ಬರೆದಿರುವ ಲೇಖನ ಬಹಳ ಮುದ್ದಾಗಿ ಕಾಣುತ್ತಿದೆ.

ಇನ್ನೂ ಹೆಚ್ಚು ಹೆಚ್ಚು ಲೇಖನಗಳು, ಅನುಭವಗಳು, ಚಿತ್ರಗಳು, ನಿಮ್ಮ ಬ್ಲಾಗಿನಲ್ಲಿ ಮೂಡಲಿ.


ಒಳ್ಳೆಯದಾಗಲಿ.

Mahantesh said...

ಮಾವಿನರಸರೇ,
ಇದು ನನ್ನ ಮೊದ್ಲ ಬ್ಲಾಗದರಿಂದ ಹೇಗೆ ಇರೋತ್ತೊ ಅನ್ನೊ ಆತಂಕ ಇತ್ತು.ಪೂರ್ತಿಯಾಗಿ ಊತ್ತರ ಕನ್ನಡದ ಭಾಷನ್ಯಾಗ ಬರ್ರಿ ಬೇಕು ಅಂತಾ ಇತ್ತು. ಹಾಸ್ಯನು ಬ್ಲಾಗ ತುಂಬ ಇಲ್ರಿ ಅಂತ ಟ್ರೈ ಮಾಡ್ದೆ..ಅದು ಸಾದ್ಯವಾಗಲಿಲ್ಲಾ...ಅನುಭವದ ಕೊರತೆ ಅನ್ಸುತ್ತೆ :(....ಖಂಡಿತವಾಗಿ ಇನ್ನಸ್ಟು ಬ್ಲಾಗ ಬರೇತಿನ್ರಿ...

ನಿಮ್ಮ ಉತ್ತೇಜನ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.

Anveshi said...

ವಾಹ್,
ಮನಾಲಿಯಲ್ಲಿ ಕುಲುಕುಲು ಅಂತ ನಲಿಯಾಕ ಹೋಗಿದ್ರಾ ಮಹಾನ್‌ತೇಶ್ ಅವರೇ!!!!

ಅಲ್ಲಿ ಸ್ನೇಕ್ ಕೂಡಾ ತಿಂದ್ರಿ ಅಂತ ಕೇಳಿ ಭಯವಾಯಿತು.!
:)

ಆಮೇಲೆ ಬೂಟ್ಸ್ ಒಳಗೆ ಮಂಜುವನ್ನು ಇರಿಸಿಕೊಂಡಿದ್ದೇಕೆ ಅನ್ನೋದು ಗೊತ್ತಾಗಿಲ್ಲ. ಆಕೆ ಏನಾದ್ರೂ ಕಿತಾಪತಿ ಮಾಡಿದ್ಳಾ?

Mahantesh said...

ಅಸತ್ಯಿಗಳೆ,
ನೀವು ತಿಳಿದಿರೋ ಮಂಜು ನನ್ನ ಜೊತೆ ಇದ್ರೆ ಅದರ ಕಥೆನೇ ಬೇರೆ ತರಾ ಇರೊದು.....:))

Soni said...

Namaskara Mahantesh avre,

Heege blgos nodthirbekadre nim blogigoo kannu haisidhe.

Anthu Manali ge hogdhe idru nimma post and photos nodi khushi anasthu

Very nice pics! and I luv snow!!

Mahantesh said...

ನಮಸ್ಕಾರ ಸೋನಿಯವರೇ,
ಹಿಂಗ ನನ್ನ ಬ್ಲಾಗಿಗೂ ಕಣ್ಣು ಹಾಯಿಸದಕ್ಕ DVಗಳು. ನಿಮಗೆ ಖುಷಿಯಾದನ್ನ ಕೇಳಿ, ತುಂಬಾ ಸಂತೋಷವಾಯಿತು.

Anonymous said...

ನಮಸ್ಕಾರ ಮಹಂತೇಶ್,

ಚೆನ್ನಾಗಿದೆ..ಮನಾಲಿಯಲ್ಲಿ ಹಿಡಿಂಬೆಯ ದೇವಾಲಯ? ಅಲ್ಲಿ ಏನು ಪ್ರಾರ್ಥನೆ ಸಲ್ಲಿಸುತ್ತಾರೋ?

ಬರಿತಾ ಇರಿ!
ಶಿವ

Shiv said...

ಮಹಾಂತೇಶ್,
ಮನಾಲಿ ಬಗ್ಗೆ ಚಲೋ ಬರಿದೀರಿ..ಉತ್ತರ ಕನ್ನಡದ ಭಾಷಾ ಕೇಳಿ-ಓದಿ ಯಾ ಕಾಲ ಆಗಿತ್ತಾ ಎನಾ..ಖುಷಿ ಆತು ನೋಡಪಾ..

ಒಂದು ಸಲಹೆ ನಿಮ್ಮ ಬ್ಲಾಗ್‍ನ ಫಾಂಟ್ ಆಕಾರ ಸ್ಪಲ್ಪ ದೊಡ್ಡದು ಮಾಡಿದರೆ ಚಲೋ ಇರ್ತದಾ..ಬೇರೆಯವರಿಗೆ ಗೊತ್ತಿಲ್ಲ ನನಗಂತೂ ಭಾರಿ ಸಣ್ಣ ಫಾಂಟ್ ಅನಿಸ್ತು.

ನಿಮ್ಮ ಬ್ಲಾಗ್ ಹಿಂಗ್ ಬರ್ತಾ ಇರಲಿ..

ಫ್ರೀ ವೇ ಸಿಗದಿದ್ದರೆ ಎನಾತು..ನಮ್ಮ ಹೆದ್ದಾರಿಗಳು ಎನ್ ಕಡಿಮೆ ಇವೆ ಎನ್ರೀ?

ಅಂದಂಗಾ ನೀವು ಸಿಮ್ಲಾ ಕಡಿ ಹೋಗಲಿಲ್ಲ ಎನ್ರೀ?

Mahantesh said...

ಶಿವ,
ನಿಮ್ಮ ಸಲಹೆಗಳಿಗೆ ಧನ್ಯವಾದಗಳು. ಮುಂದೆ font ಸರ್ರಿಯಾಗಿರುತ್ತೆ........
ಸಿಮ್ಲಾ ಕಡಿಗೂ ಭೇಟಿ ಕೊಟ್ಟಿದ್ದೆರೀ..... ಸದ್ಯದಾಗ ಅದರ ಬಗ್ಗೆನೂ ಬರ್ರಿತೀನ್ರಿ.

ಶ್ರೀನಿವಾಸರೇ,
ಮುಂದಿನ ಲೇಖನದ ಬಗ್ಗೆ ಯೋಚನೆ ಮಾಡ್ತಾ ಇದೀನಿ....:)-

bhadra said...

ಯೋಚಿನಿ ಆಯ್ತೇ? ಲೇಖನ ಬರ್ಲಿ. ಅನ್ನಿಸಿದ್ದನ್ನು ಬರೆಯಿರಿ. ಆದರೆ ಒಂದು ಮಾತು ನೆನಪಿರಲಿ. ಬ್ಲಾಗು ಮುಖ್ಯವಲ್ಲ. ಕೆಲಸ ಮುಖ್ಯ. ಅನ್ನದಾತನಿಗೆ ಮೊದಲ ಆದ್ಯತೆ. ಬ್ಲಾಗೇನಿದ್ದರೂ ಕಾಲಹರಣಕ್ಕೆ, ಕೆಲಸವಿಲ್ಲದಿದ್ದಾಗ ತಪ್ಪು ಹಾದಿ ತುಳಿಯದೇ ಇರಲು ಅಷ್ಟೇ.

ಇದನ್ನು ನನ್ನ ಕಳಕಳಿ ಎಂದು ತಿಳಿಯಬೇಕು.

ಒಳ್ಳೆಯದಾಗಲಿ

Mahantesh said...

ನಿಮ್ಮ ಕಳಕಳಿಗೆ ಧನ್ಯವಾದಗಳು.ನಾನು ಬೆಂಗಳೂರಿಗೆ ಹೋದ ಮೇಲೆ ಬರಿಯುತ್ತೆನೆಂಬ ನಂಬಿಕೆ ನನಗಿಲ್ಲ.
ಸದ್ಯ ಇಲ್ಲಿ ಕೆಲ್ಸವಿಲ್ಲದ ಕಾರಣ ಇದನ್ನು ಮಡ್ತಾ ಇರೊದು.

Anonymous said...

Chirantimath sahebre.... north karnataka basha odi barobbari khushi aaithu nodri.... Good job keep it up... Yen madodri IT olaga band myale kannada bariyoda marthangagagaithi