Monday, August 07, 2006

ಉತ್ತರ ಭಾರತದ ಬವಣೆಗಳು-2

ಎಲ್ಲಾ ಕಡೆ ಮಳೆಗಾಲ,ಚಳಿಗಾಲ,ಬೇಸಿಗೆ ಕಾಲಗಳು ಇದ್ರ ಇಲ್ಲಿ ಇರೋದು ಬೇಸಿಗೆ ಕಾಲ ಮತ್ತು ಚಳಿಗಾಲ.ಇಲ್ಲಿ ಜನಕ್ಕ ಮಳೆಗಾಲ ಅಂದ್ರ ಗೊತ್ತ ಇಲ್ಲ.2-3 ಮೂರು ದಿನ ಯಾರೊ ಅತ್ತಾರಂಗ ಇಲ್ಲಿ ಮಳಿ ಅಗುತ್ತ.ಅದನ್ನ ನೋಡಿ ಇಲ್ಲಿ ಜನ ಭಾರಿ ಮಳೆಯಾಯಿತು ಅನ್ನುಹಾಂಗ ಮಾತಡತಾರ. ಇವರನ್ನ ನಮ್ಮ ಕಡೆ ಇರೊ ಸಿರ್ಸಿ,ಖಾನಪುರ ಕಡಿಗ ಬಿಟ್ಟ್ರ ಮಳೆ ಎನು ಅಂಥ ಅರ್ಥ ಅಗುತ್ತ್ಯ. ಇನ್ನು ಬ್ಯಾಸಗ A/C ಇಲ್ಲಾ ಅಂದ್ರ ಇಲ್ಲಿ ಕೆಲ್ಸಾನ ನಡಿಯೊಲ್ಲ. ಅದು ಅಲ್ದ ಸಿಕ್ಕಾಂಗ Powercut ಬೇರೆ. Power backup ಎಸ್ಟು ಘಂಟೆ ಕೆಲ್ಸಾ ಮಾಡುತ್ತ??ಕಳೆದ ವರುಷ ನಮ್ಮ ಪ್ರದೀಪ ರಾತ್ರಿಯಲ್ಲಾ ಯಾವ ಪಾರ್ಕನಲ್ಲಿ ಚಲೊ ಗಾಳಿ ಬರುತ್ತ,ಎಲ್ಲಿ ಮಲಗಿದರ ಅನಕೂಲ ಅನ್ನೊದನ್ನ PhD ತರಾ ಸಂಶೋದನೆ ಮಾಡಿದ್ದ.ಮೊದ್ಲು ಬಂದಾಗ ಇಲ್ಲಿ ನಾನು ನನ್ನ ದೊಸ್ತ ಒಬ್ಬ ಸೇರಿ ಬರಿ ಬನಿಯನ ಮೇಲೆ ಅಟೊನಲ್ಲಿ ಪೂರ್ತಿ ದೆಲ್ಲಿಯ ಗಲ್ಲಿ ಗಲ್ಲಿ ಸುತ್ತಹಾಕಿದಿವಿ ಇಲ್ಲಿ ಇರೊ ಸೆಖೆ ತಾಳಲಾರದ.ಇನ್ನು ಈ ವರುಷ ಅಂತು Heat waves ಸಿಕ್ಕಾಪಟ್ಟೆ ತ್ರಾಸ ಕೊಟ್ತು.45-47 Cನ್ಯಾಗ ಬಿಸಿಗಾಳಿ ಬರ್ರ ಅಂತ ಬಿಸಿದರ ಎಂತಾ ಗಟ್ಟಿ ಮನಶ್ಯಾ ಅದರು ಗ್ಯಾರೆಂಟಿಯಾಗಿ ತೆಲೆ ತಿರುಗಿ ಬಿಳತಾನ.ಇಂತಾ ಬಿಸ್ಲ ತಡಿಯ್ಯಾಕ ಸಿಗೊದು ಕೂಲ್ಡ್ರಿಂಕ್ಸು ಅದು ಬಿಟ್ಟ್ರ ಲಸ್ಸಿ.ಲಸ್ಸಿ ಸ್ವಾದ ಸವಿಬೇಕು ಅಂದ್ರ ನೀವು ಪಂಜಾಬಗೆ ಹೊಗಬೇಕು ನೋಡಿ. ಈ ಸುಡಗಾಡ ಬಿಸ್ಲ್ಯಾಗ ಲಸ್ಸಿ ಅಮೃತದಂತೆ ಇಲ್ಲಿ ಕೆಲ್ಸಾ ಮಾಡುತ್ತ. ಅದ್ರೆ ಇಲ್ಲಿ ತಿಳಿಮಜ್ಜಿಗಿ, ಎಳನೀರು ಸಿಗೋದು ಇಲ್ಲಾ ಅನ್ನೊದು ತುಂಬಾ ಬ್ಯಾಸರದ ವಿಚಾರ.45-47 C ಬಿಸ್ಲು ,Heat waves,ಬೇಸಿಗೆಯಲ್ಲಿ ಇರದ ವಿದ್ಯುತ್ತು ,ವಿದ್ಯುತ್ತ ಕದಿಯುವ ಚೋರರು,ಮೈಯಲ್ಲಾ ಸುರಿಯುವ ಬೆವರು ಎಲ್ಲಾ ಸೇರಿ ನಿಮಗೆ ಉತ್ತರಭಾರತವೆಂದರೆ ಯಾಕಪ್ಪ ಇಲ್ಲಿ ಬಂದ್ವಿ ಅನಸುತ್ತ.

5 comments:

ಮನಸ್ವಿನಿ said...

ಬರಿಯ ರೀತಿ ಭಾಳ ಚಲೊ ಅದ. ಮುಂದ್ವರಿಲಿ ;)

Anveshi said...

ಹೋಗ್ಲಿ ಬಿಡ್ರಿ....

ಹೆಂಗಾದ್ರಾಗ್ಲಿ ಮೇಲಿಂದ ಕೆಳ್ಗೇ ಇಳಿದು ಬೆಂದಕಾಳೂರ್ನಾಗೆ ಠಿಕಾಣಿ ಹೂಡಿದ್ರಲ್ಲಾ... ಆಮ್ಯಾಕೆ ಈಗ ಶ್ಯಾಣೆ ಚಳಿ-ಬಿಸಿ ಇರೋ ಕ್ಲಿಂಟನ್-ಬುಷ್ ಊರ್ಗೆ ಹಾರೋಕೆ ಹತ್ರೀಯಲ್ಲಪ್ಪಾ...

best of luck ರೀ..

ಪಬ್ said...

ತುಂಬ ಸೆಖೆಯಾದ್ರೆ ಪಬ್ ಒಳಿಕ್ಕೆ ಕುಂತ್‌ಕೊಂಡ್ ಒದೆರಡು ಮಗ್ ಬಿಯರ್ ಹಾಕ್ರಲ್ಲ

-ಪಬ್

bhadra said...

ಗತಕಾಲದ ಕಷ್ಟ ಕಾರ್ಪಣ್ಯಗಳನ್ನು ಬಹಳ ಚೆನ್ನಾಗಿ ನಿರೂಪಿಸಿರುವಿ. ಈಗ ಬೆಂಗಳೂರಿನ ಉತ್ತಮ ಹವೆಯನ್ನು ಸವಿದಾಗ ಮನದಲ್ಲಿ ಎಂತಹ ಮುದ ಉಂಟಾಗುತ್ತದಲ್ವೇ?

ಪುಟ್ಟ ಬರಹ ಬಹಳ ಚೆನ್ನಾಗಿ ಮೂಡಿ ಬಂದಿದೆ.

Mahantesh said...

manshini,
pratikiyege dhanyawAdagalu...
barita iratini...

Anvishigale,
haLeyadannalla hege mariyokke agutte ....neeve heLi>?
nimma hAriakege dhanyawAdagalu..

Pub!!!
sakege beera hakona aMdre adu agolla...beera cold illa aMdre ......hAge irrutte aMta nimage gottalla...

TaviSrigale,
bengaLuru have ellu sigolla.. adu visheshavAgi DelhiniMda baMdu ille Airportnalli iLitA irovaga ago anubhava ide alla, adanna nanage vivarishuke sadyavilla ansutte..
anbhavisi tiLayabeku... adre eg bengaluru bALa beLadu biTTide..elli noDidaru janajaarte...kalayatasme namah! aMdukondu summanagabeku...