Thursday, April 12, 2007

ಹನಿಗವನಗಳು

ಅರಳು-ಮರಳು

ಅರವತ್ತರ ಅರಳು ಮರಳಿನ ಮೂರ್ತಿ
ಇವರಿಗೇ ಗೊತ್ತಿಲ್ಲವೇ ರಾಷ್ಟ್ರಗೀತೆಯ ಕೀರ್ತಿ ?
ಬೆಳಿಸಿಕೊಳ್ಳಿ ,ನಾಡಿನ ನೆಲ-ಜಲದ ಬಗ್ಗೆ ಪ್ರೀತಿ....


ಗೊಸುಂಬೆಗಳು....

ನಮಗೆಕಪ್ಪಾ ಕಾವೇರಿ ನೀರು
ನಾವು ಕುಡಿಯೋದು ಬೀಸಿಲೇರಿ ನೀರು/ಬೀರು
ಅನ್ನೊ ಗೊಸುಂಬೆಗಳ ನಡುವೆ
ನ್ಯಾಯ ಅನ್ನೊದು ಮರೀಚಿಕೆಯೇ!!!!!!

ಮಳಿ.....

ಎಲ್ಲಿ ಹೋಗಿದಿ ಮಳಿ
ಒಣಗ್ಯಾವ ಹೊಲದಾನ ಬೆಳಿ
ಬತ್ತ್ಯಾವ ಊರಿನ ಹೊಳಿ
ತಪ್ಪ್ಯಾವ ರೈತರ ಜೀವನದ ಹಳಿ
ಅಡು ಭೂತಾಯಿ ಜೊತೆ ಓಕುಳಿ
ಆಗ ನೋಡು ಎಲ್ಲಾರ ಮಕದ್ಯಾಗ ಕಳಿ.....

7 comments:

Sushrutha Dodderi said...

ಲಾಸ್ಟ್ ವನ್ ಚನಾಗಿದೆ. ಫಸ್ಟ್ ಟೂಅಲ್ಲಿ ಕಾಳಜಿ ಇದೆ.

ರಾಜೇಶ್ ನಾಯ್ಕ said...

ಮಹಾಂತೇಶ್,

ಮಸ್ತ್ ಆಗಿದೆ ಮುರೂ ಹನಿಗಳು. ಕಡೆದಂತೂ ಭಾರೀ ಮಸ್ತ್ ಐತ್ ನೋಡ್ರಿ.

Shiv said...

ಇನ್ನೂ ಉಗೀರಿ ರಾಷ್ಟ್ರಗೀತೆ ಬಗ್ಗೆ ಹಾಗೆ ಮಾತಾಡೋದರಿಗೆ..

GuruBhai said...

Too Good sir.. keep writing such hanigalanna ...

Iranna Shettar said...

ಕವಿತಾ ಚಲೋ ಅದಾವರ್‍ಯಪಾ, ಕಡೆದ್ದಂತೂ ಬಾಳ ಮನಸಿಗೆ ಹತ್ತೀತು..

ಹಿಂಗ ಬರಿತಿರ್ರಿ ಮತ್ತ ಬರ್ತೆನ್ರೀ

Mahantesh said...

ಸುಶ್ರುತ
ಪ್ರತಿಕ್ರಿಯೆಗೆ ಧನ್ಯವಾದಗಳು.

ರಾಜೇಶ್,
ನಿಮಗೆ ಮಸ್ತ ಅನ್ನಿಸಿದ್ದು ಕೇಳಿ ಮಸ್ತ ಅನ್ನಿಸಿತು.

ಶಿವ,
ಉಗಿತ ನಡೀತಾನೆ ಇದೆ.

ಗುರು,
ಪ್ರತಿಕ್ರಿಯೆಗೆ ಧನ್ಯವಾದಗಳು.


shettare,
ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು.ಹೀಗೆ ಬರ್ತಾ ಇರಿ

Naveen said...

wonder ಅಯ್ತ್ರಿ