Monday, November 12, 2018

ಬೈಲಹೊಂಗಲವೆಂದರೇ.......................

ಬೈಲಹೊಂಗಲವೆಂದರೇ,ನಮ್ಮ ಅಜ್ಜನ ಊರು, ನಮ್ಮ ಅವ್ವನ ತವರುಮನೆ ,ನಾನು ಚಿಕ್ಕವನಿರುವಾಗ ಹೋಗುತ್ತಿದ್ದ ರಾಜ ದಿನದ ಮೋಜಿನ ಊರು, ನಮ್ಮ ಮಾವಂದಿರ ಮದುವೆಗಳು,ಶಿಸ್ತಿನ ವಕೀಲ ಮಾವ,ಎಲ್ಲದಕ್ಕೂ ಬೆಂಬಲ ಮತ್ತು  ಪ್ರೋತ್ಸಾಹ ಕೊಟ್ಟ ಮಹಾಂತೇಶ  ಮಾವ.
              ಬೈಲಹೊಂಗಲವೆಂದರೇ, ಕಲ್ಮಠ ಗಲ್ಲಿ,ಚನ್ನಮ್ಮ ಸಮಾಧಿ,ರಾಣಿ ಚೆನ್ನಮ್ಮ ಇಟ್ಟಿದ್ದ  ಹಳೆ ಜೈಲು,ಹಾಲು ಬಿದ್ದಿರುವ ಕಲ್ಮಠ ಬಾಂವಿ,ಮೂರು ಸಾವಿರದ ಮಠದ ಗಂಗಾಧರ ಸ್ವಾಮಿಗಳು ,ಗಂಡು ಮೆಟ್ಟ್ಟಿದ ನಾಡು ,ಸಂಗೊಳ್ಳಿ ರಾಯಣ್ಣ ಕೂಟ,ಗೊಂಬಿ ಗುಡಿ,ಶುಕ್ರವಾರದ ಸಂತೆ,"ಲೇ ಮಾವ " ,ಎನ್ನುವ ಪ್ರೀತಿಯ ಕರೆ,"ನಿನ್ನ ಹಿರಾ....." ಎನ್ನುವ ಸಾಮಾನ್ಯ ಬೈಗುಳ.
                  ಬೈಲಹೊಂಗಲವೆಂದರೇ, ಎಂ.ಜೆ. ಹೈಸ್ಕೂಲ,ಆ ಸ್ಕೂಲನ ಮೈದಾನದಲ್ಲಿ ಬೊಂಗಾಳೆ ಹುಡಗರ ಜೊತೆ ಆಡಿದ ಕ್ರಿಕೆಟ್ ಮ್ಯಾಚುಗಳು,ಜವಳಿಕೂಟ ,ಮಡ್ಡಿ ಬಸವಣ್ಣ ಜಾತ್ರಿ,ಡಮ್ಮನಗಿ,ಮಾಳೋದೆ ,ಬಾಗೇವಾಡಿ ಅವರ ಅಂಗಡಿಗಳು,ಸಂಗಮ ಕ್ಯಾಂಟೀನಿನ ಮಿರ್ಚಿ ಬಜಿ,ಅಶ್ವಿನಿ ಟೀ ಬಾರನ ಪುರಿ ಬಾಜಿ ಮತ್ತು ಚಾ, ನಮ್ಮ ಅಜ್ಜನ ಎಲ್ಲಾ ಮಕ್ಕಳ ಮದುವೆಗಳಾದ ಪುಣ್ಯಕ್ಷೇತ್ರ ಮೌನೇಶ್ವರ ಗುಡಿ,ಶನಿವಾರಕೊಮ್ಮೆ ಭೇಟಿ ಕೊಡುತ್ತಿದ್ದ ಹನುಮಂತ ದೇವರ ಗುಡಿ, ಅದರ ಹಿಂದಿನ ಕೇರಿ,ತಾಲೂಕ ಗ್ರಂಥಾಲಯ,ಬೆಳಗಾವಿ ರೋಡು.
                     ಸಣ್ಣನಿರುವಾಗ ಆದ ಮಾವನ ಜೊತೆ ಆದ ಚರ್ಚೆಗಳು,ನಮ್ಮ ಅಜ್ಜನ ಮುನ್ನವಳ್ಳಿಯ ಮತ್ತು ಗದಗದ ಹೋರಾಟದ ಬದುಕು,ಅವನಿಗೆ ಬದುಕು ಕಟ್ಟಿಕೊಟ್ಟ ಬೈಲಹೊಂಗಲ,ಚಿಕ್ಕೊಪ್ಪದ ಅವನ ಹೊಲಗಳು,ನಮ್ಮ ಅಜ್ಜಿಯ ಕಾಶವ್ವನ ಹೆಸರು ಬೇಳೆಯ "ದ್ವಾಸಿ", ದಿನ ಬೆಳಿಗ್ಗೆ ಸೈಕಲ್ ಮೇಲೆ ಬರುತ್ತಿದ ಕರಿಕೊಪ್ಪದ ಅಜ್ಜ,ಸಂಜೆ ತಪ್ಪದೇ ಬರುತ್ತಿದ್ದ ತಟವಟಿ ಅಜ್ಜ ಎಲ್ಲವೂ ನೆನಪಿಗೆ ಬರುವವು.
  ಚಿಕ್ಕವನಿರುವಾಗ ನಾನು ಸೈಕಲನಲ್ಲಿ ಗುದ್ದಿ ತೆಲೆ ಓಡಿಸಿಕೊಂಡ ಹುಡುಗ,ಪೊಲೀಸನಾಗಿದ್ದ ಅವರಪ್ಪ ನನ್ನ ಸೈಕಲ್ ಕಸಿದುಕೊಂಡದ್ದು,ನಾನು ಹುಟ್ಟಿದ ಸರಕಾರಿ ದವಾಖಾನೆ,ಹಣಮಂತಗಡ ಹಾಸ್ಪಿಟಲ, ೫ ರೂಪಾಯಿಗೆ ನೋಡುತ್ತಿದ್ದ ಖಾಸನೀಶ ಡಾಕ್ಟರು .
          ಬೈಲಹೊಂಗಲವೆಂದರೇ, ನಾನು ಓದಿದ ಮ್ಯಾಗಿನ ಕಾಲೇಜು,ಕಾಲೇಜು ಪಾಸ್ಸು,ಆರ್ಡಿನರಿ ಬಸ್ಸಿನ ತುಂಬಕೊಂಡಿರುವ ಹುಡುಗ-ಹುಡುಗಿಯರು.physicನ ಪಾಟೀಲ ,ರೇವಣಕರ್ ,ಕೆಮೆಸ್ಟ್ರಿಯ ಶರಣಪ್ಪವನರ,ಸರೂರ್,ಪಟ್ಟಣಶೆಟ್ಟಿ ಗುರುಗಳೆಲ್ಲ ನೆನಪಿಗೆ ಬರುತ್ತಾರೆ.ರೇವಣಕರ ಸರ ಅತ್ಯಂತ ಸರಳವಾಗಿ ವಿವರಿಸಿದ ಅಣುವಿನ ಸಮ್ಮಿಲನ(Fusion) ಮತ್ತು ವಿದಳನ  (Fission) ವಿವರಣೆ,ಲ್ಯಾಬಗಳು,ರವಿವಾರದ N.C.C ಕ್ಲಾಸಗಳು,ಬಾಬು ಜೊತೆ ಹೋಗಿದ್ದ ಹುಲಕೋಟಿಯ national integration camp,ಗಿರೀಶ, ಕಮ್ಮಾರ,ಬಾಬು ಅವರ ಗುಂಪು,ಬೈಕ ವೀರರಾದ ಸಾಲಿಮಠ,ಮಾಳೋದೆ,ಕಿರಣ,ಗದಗ ಮತ್ತೀತ್ತರು.ದೊಡ್ಡಮನಿ ಸರ ಟ್ಯೂಷನ,ಜಗದೀಶ ತಟವಟಿ ಪವಾಡ ಸದ್ರಶವಾಗಿ ಲಾರಿ ಮತ್ತು ಬೈಕ ಅಪಘಾತದಲ್ಲಿ ಪಾರು ಆಗಿದ್ದು,ಹೊಸೂರಿನ ಬಸು ಮತ್ತು ಗೆಳಯರು,ಗಿರೀಶ್ ಮನೆ, ಹಲಸಗಿ ,ಮತ್ತು ದೇಶನೂರ ಸರ ಜೊತೆ ಮಾತುಕತೆಗಳು ನೆನಪಿಗೆ ಬರುತ್ತವೆ.
                          ಕೊನೆಯದಾಗಿ ನನ್ನ ಆಪ್ತ ಮಿತ್ರ ಮಂಜುನಾಥ ಸೂರಿ,ಅವನ ಜೊತೆ ಓದಿದ ಓದು,ಅವನ ಲೂನಾ,ಬಸ್ ನಿಲುಗಡೆ ಹಿಂದುಗಡೆ ಇರುವ ಬಾಗವಾನ್ ಚಾಲನಲ್ಲಿದ್ದ ಅವರ ಮನೆ ನೆನೆಪಿಗೆ ಬಂದು ಮನಸ್ಸು ಭಾರವಾಗುತ್ತದೆ. ಬೈಲಹೊಂಗಲನಲ್ಲಿ ಓದು ಮುಗಿಸಿ ನಿಡಸೋಸಿನಲ್ಲಿ ಎಂಜಿನಿಯರ ಓದಿ,ಪುಣೆಯಲ್ಲಿ ಸುಮಾರು ವರ್ಷ ಕೆಲಸ ಮಾಡಿ,ಬೆಂಗಳೂರಿಗೆ ಬಂದಿದ್ದ ಮಂಜು ಜೊತೆ ನೋಡಿದ ನಾಲ್ಕಾರು ನಾಟಕಗಳು,ಸಿನೆಮಾಗಳು ವಿಷಾದದ ಛಾಯೆ ಬರುತ್ತದೆ.ಆ ದಿನಗಳಲ್ಲಿ ನಿಶ್ಚಿತಾಥವಾಗಿದ್ದ ಅವನ  ಅಪೇಂಡಿಸ್ಕ ಬರ್ಸ್ಟ್(apendix burst) ಆಗಿ ಮಣಿಪಾಲನಲ್ಲಿ ಅಡ್ಮಿಟ್ ಮಾಡಿದ್ದು,ಉದಯ ತುಂಬಾ ಓಡಾಡಿದ್ದು,blood transfusion) ಮಾಡಿ ಕೂಡ ಉಳಿಯಲಾರದ.
                                       ಅತಿ ಚಿಕ್ಕ ವಯಸ್ಸಿನಲ್ಲಿ(೨೯) ಬದುಕಿಗೆ ವಿದಾಯ ಹೇಳಿದ ಮಂಜು,ಅವನ ತಾಯಿ,ಈಶ್ವರ,ಆದಾಯ ಮಾಳೋದೆ ಜೊತೆ ಅತಿ ಜೋರಾಗಿ ದುಃಖ ತೋಡಿಕೊಂಡಿದ್ದು,ಅವನ ಸಹೋದರರ ಮತ್ತೆ ತಂದೆ ಹತಾಶ ನೋಟ ನೆನಪಿಗೆ ಬಂದು ಹೃದಯ ಭಾರವಾಗುತ್ತದೆ.

(ಪ್ರೇರಣೆ: ಜಯಂತ ಕಾಯ್ಕಣಿ ಅವರ ಆಂಕೋಲೆಂದರೆ ಲೇಖನ )



Saturday, March 28, 2015

ಕಡಲು


ಕಡಲಿನ ಅಲೆಗಳ ಮೊರೆತ
ಮನಸಿನ ವಿಚಾರಗಳ ಭೊರ್ಗರಿತ
ಸಾಗರ ಕಾಣಿಸಿದೆ ಉಲ್ಲಾಸ
ಮನ ತುಂಬಿ ಬಂದಿದೆ ಸಂತಸ

ತುಂಬಿದೆ ಭೂಮಿಯ ಒಡಲು
ನಾ ದೊಡ್ಡವ ಅನ್ನುವ ತೇವಲು
ಸಾಗರದ ಎದರು ನಾವೆಷ್ಟು ಕೇವಲು
ಸ್ಠಿತಿಪ್ರಜ್ಞೆಯಂತೆ ಅನವರತ ಕಡಲು

ಸಿದ್ದಾರ್ಥ ಬುದ್ದನೇಕೆ ಆದ ?
ಅವನಿಗೆ ಬೇಕಿತ್ತೆ ಸಂಸಾರದ ಮೊಕ್ಷ್ಯ ?
ಕಳೆದುಕೊಂಡ ಪರಿವಾರದ ಸಖ್ಯ
ಎಲ್ಲ ಬುದ್ದನಂತರಾದರೆ ಬೆಳೆಯುವದೇ ಜಗತ್ತು?

ಯಾರಾದರೂ ಪಾರಾಗುವುದೇ ಸಂಸಾರದ ಚಿಂತೆ?
ಅನಿಸುವುದು ಇರಬೇಕು ಬಹುಬಲಿಯ ಹಾಗೆ...
ಹಮ್ಮು ಬಿಮ್ಮುಗಳನು ಬಿಸಾಕಿ ಆಚೆ
ನಿರ್ಗವ ಶಾಂತ ಮಂದಸ್ಮಿತನಂತೆ.....

Sunday, February 22, 2015

ಸಿಡ್ನಿ ಮತ್ತು ಮಳೆ

ಸಿಡ್ನಿ ವಲಸೆ ಬಂದೂರು
 ಹೊರಗಡೆ ಬಿಸಿಲು ಜೋರು
 ಮೊದಲ ದಿನಗಳು ಕಡು ಬೋರು
 ಅವಕಾಶದ ಹುಡುಕಾಟದ ಕಾರುಬಾರು  !1!

 ಸೆಂಟ್ರ್ ಲಿಂಕ್,ಬ್ಯಾಂಕ್,ಮೆದಿಕೆರನಲ್ಲಿ ಮೊದಲ ವಾರ
ಸಂಜೆ ಸೀಕ್.ಕಾಮನಲ್ಲಿ ಜಾತಕದ ಪ್ರವರ
 ಯಾರಾದರೂ ಕರೆ ಮಾಡುವವರೇ? ಎಂಬ ಕಾತುರ
 ಮುಗಿದಿದ್ದು ತಿಳಯಲಿಲ್ಲ ಮೊದಲ ವಾರ   !2!

 ಮಗಳು,ಮಡದಿ ಬೆಂಗಳೂರಿಗೆ ಪಯಣ
ಅನಿಸಿತಿಲ್ಲಿ ಮಾಡವದು ಸಂಸಾರ ಕಠಿಣ
ಕೆಲಸದ ಅಲೆದಾಟ ನಿತ್ಯ ನವನವೀನ
ಬ್ರೆಡ್ಡ್ಡು,ಅನ್ನ,ಉಪ್ಪನಿಕಾಯಿಯೇ ನನ್ನ ಜೀವನ   !3!

 ಮಳೆ ಮತ್ತೆ ಬರುತಿದೆ,
 ಹಳೆಯದೆಯಲ್ಲ ನೆನಪಿಸುತಿದೆ
 ಮಳೆಯ ಶಕ್ತಿ ಅಪಾರ
 ಮಗಳ ನೆನಪು ನಿರಂತರ   !4!

 ಇರುವದೆಲ್ಲವ ಬಿಟ್ಟು ಇರದುದಕಡೆ ತುಡಿಯುವದೆ ಜೀವನ
 ಕವಿ ಅಡಿಗರ ಸಾಲು ನಿರಂತರ ಸತ್ಯ
ಹೊಂದಿಕೊಂಡು ಬೇಗ,ಸಂಸಾರ ಕರೆಸುವಲ್ಲಿ ಗಮನ
ತಲುಪುವನೇ ನಾನು ನಿರ್ಧರಿಸಿದ ಗಮ್ಯ???   !5!

Tuesday, December 31, 2013

ನಾಟಕದ ಗೀಳು ಮತ್ತು ಪ್ರದೀಪ ನಾಡಿಗೇರ.



"ಲೇ ಮಾಂತ್ಯಾ ನಾಳೆ ನಮ್ಮ ನಾಟಕ ರಂಗಶಂಕರ/ರವೀಂದ್ರ ಕಲಾಕ್ಷೇತ್ರದಲ್ಲಿದೆ,ತಪ್ಪದೇ ಬಾ." ಅಂತ ನನಗೆ ಪ್ರದೀಪ(ಪದ್ಯಾ) ಹೇಳುವುದು ಮಾಮೂಲು. ಹಾಗೆ ನೋಡಿದರೆ,ನನಗೆ ನಾಟಕದ ಗೀಳು ಹಿಡಿಸಿದ್ದೇ ಪ್ರದೀಪ ನಾಡಿಗೇರ ಅನ್ನುವ ಶಿವಮೊಗ್ಗೆಯ ಕನಸುಗಣ್ಣಿನ ಹುಡುಗ.
೨೦೦೨, ನಮ್ಮ ಇಂಜಿನೀಯರಿಂಗನ ಕೊನಯ ವರ್ಷದ ದಿನಗಳು. ಕೆ.ಎಲ್.ಇ ಬೆಳಗಾಂವಿ ಇಂಜಿನೀಯರಿಂಗನ ಪ್ರಿನ್ಸಿಪಾಲರು ತಮ್ಮ ತಂದೆ/ಅಜ್ಜನ ನೆನಪಿಗೊಸ್ಕರ ನಾಟಕೊತ್ಸವವನ್ನು ಉತ್ತರ ಕರ್ನಾಟಕದ ಇಂಜಿನೀಯರಿಂಗ ಕಾಲೇಜುಗಳಿಗಾಗಿ ಎರ್ಪಡಿಸಿದ್ದರು.ನಾನು ಅಲ್ಲಿ ಕೊನಯ ವರ್ಷದ ಪ್ರೊಜಕ್ಟಗಾಗಿ ಬೆಳಗಾಂವಿಲ್ಲಿದ್ದಾಗ,ಪ್ರದೀಪ ತನ್ನ ತಂಡ (ಸ್ನೇಹಿತರು,ಕಾಲೇಜು ಜ್ಯೂನಿಯರ್ಸ) ಕಟ್ಟಿಕೊಂಡು ಬಂದಿದ್ದ. ಮೊದಲು ಎರಡು ಮೂರು ನಾಟಕಗಳು ಹಿಂದಿ ಮತ್ತು ಇಂಗ್ಲಿಷನಲ್ಲಿದ್ದ ಹಾಗೆ ನೆನಪು.ಪ್ರದೀಪನ ತಂಡದ "ಆಕಸ್ಮಿಕ" ನಾಟಕ ಶುರುವಾದಾಗ ಗೌಜು ಗದ್ದಲ,ಕನ್ನಡ ನಾಟಕವೆನ್ನುವ ಅಲಕ್ಷ್ಯ ಬೇರೆ.ಅದಿದ್ದದ್ದು ಕೆಲವೇ ಕ್ಷಣ. ನಾಟಕ ಮುಂದುವರದಂತೆ,ಇನ್ನು ಆಳಕ್ಕೆ ಇಳಿದಂತೆ ನೆರದಿದ್ದ ಪ್ರೇಕ್ಷಕರೆಲ್ಲರೂ ಮಂತ್ರಮುಗ್ದ.ನಾಟಕ ಮುಗಿಯುವರಗೆ ತಮ್ಮ ಸ್ಥಳ ಬಿಟ್ಟು ಕದಲಲಿಲ್ಲ.ಪ್ರದೀಪನು ಮುಖ್ಯ ಪಾತ್ರದಲ್ಲಿದ್ದು,ನಿರ್ಧೇಶನ ,ರಂಗ ಸಜ್ಜಿಕೆ ,ಪ್ರಸಾಧನ ಮತ್ತು ಹಿನ್ನಲೆ ಸಂಗೀತದ ಹೊಣೆ ಹೊತ್ತಿದ್ದ.ಆ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ.ನಾಟಕ ಶುರುವಾದಗಿನ ಟೆಂಪೊ ,ನಾಟಕ ಮುಗಿಯುವವರಗೆ ಹಿಡಿದು ,ನಾಟಕವವನ್ನು ಯಶಸ್ವಿಯಾಗಿಸಿದ.ಯಾವದೇ ಅನುಭವಗಳಿಲ್ಲದ ಪ್ರಸಾದ, ಅರವಿಂದ, ಸಿದ್ದಾರ್ಥ ಭಟ ಮತ್ತಿತ್ತರ ಜೊತೆಯಲ್ಲಿ ಕಟ್ಟಿಕೊಟ್ಟ ’ಆಕಸ್ಮಿಕ’ ಪ್ರೇಕ್ಷಕರಿಗೆಲ್ಲ ಮೋಡಿ ಮಾಡಿತು.ನಾಟಕದಲ್ಲಿ ಕನಸು ಬೀಳುವ ಬಗೆ ತೋರಿ,ಮುಂದೆ ಎನಾಗುತ್ತೆ ಎನ್ನುವ ಕುತೂಹಲ ಕೊನೆಯವರಗೆ ಉಳಿಸಿಕೋಂಡ "ಆಕಸ್ಮಿಕಕ್ಕೆ" ಪ್ರಥಮ ಬಹುಮಾನ ಸಿಗುವಂತೆ ಮಾಡಿದವು.ಎಲ್ಲರ ನಿರೀಕ್ಷೆಯಂತೆ ಪ್ರದೀಪಗೆ ಅತ್ತ್ಯತ್ತಮ ನಟ ಹಾಗು ಇನ್ನು ಹಲವಾರು ಪ್ರಶಸ್ತಿಗಳ ಸುರಿಮಳೆಯಾಯಿತು. ಮುಂದೆ ಇದೇ ನಾಟಕವನ್ನು ನಮ್ಮ ಕಾಲೇಜಿನ (ಬಸವೇಶ್ವರ ಇಂಜಿನೀಯರಿಂಗ ಕಾಲೇಜು) ಆನ್ಯುವಲ್ ಡೇನಲ್ಲಿ ಆಡಿಸಿ ಎಲ್ಲರಿಂದ ಸೈ ಅನ್ನಿಸಿಕೊಂಡ.
ಮುಂದಿನ ವರ್ಷ(೨೦೦೩) ಪ್ರದೀಪನ ಇಂಜಿನೀಯರಿಂಗನ ಕೊನೆ ವರ್ಷ, ಮತ್ತೆ ಕೆ.ಎಲ್.ಇ ಬೆಳಗಾಂವಿ ಪ್ರದೀಪ ಮತ್ತು ತಂಡ ’ಮಳೆ ನಿಲ್ಲುವವರಗೆ’ ಅನ್ನುವ ನಾಟಕ. ಮುಖ್ಯ ಪಾತ್ರಧಾರಿಯಾಗಿ ಸೇಲ್ಸಮನನಾಗಿ,ನಿರ್ಧೇಶನ,ರಂಗ ಸಜ್ಜಿಕೆ,ಪ್ರಸಾಧನ ಮತ್ತು ಹಿನ್ನಲೆ ಸಂಗೀತದಲ್ಲಿ ಪ್ರದೀಪ ಮತ್ತೊಮ್ಮೆ ಯಶಸ್ವಿಯಾದ.ಮಳೆ ಹನಿ ಬೀಳುವ ಟಪ್ ಟಪನ ಹಿನ್ನಲೆ ಸಂಗೀತ, ಪ್ರದೀಪನ ಅತ್ತುತ್ತ್ಯಮ ಅಭಿನಯ ಪ್ರಸಾದ,ಸಿದ್ದಾರ್ಥ ಭಟರ ಲವಲವಿಕೆಯ ಅಭಿನಯ ,ಮತ್ತೆ ಪ್ರದೀಪ ತಂಡಕ್ಕೆ ಪ್ರಥಮ ಬಹುಮಾನ.ಮೂರನೇ ವರ್ಷ ಭಾಗವಹಿಸಿದ್ದರೇ, ಹ್ಯಾಟ್ರಿಕ್ ಸಾಧನೆ ಮಾಡುವದರಲ್ಲಿ ಯಾವದೇ ಸಂಶಯವಿರಲಿಲ್ಲ.

ಬೆಂಗಳೂರಿಗೆ ಬಂದ ಮೇಲೆ, ಸಾಪ್ಟವೇರನಲ್ಲಿ ಬದುಕು ಕಟ್ಟಿಕೊಂಡ ಮೇಲೆ, ಮತ್ತೆ ಪ್ರದೀಪಗೆ ಹವ್ಯಾಸಿ ರಂಗಭೂಮಿಯ ಸೆಳತ. ಕಲಾ ಗಂಗೋತ್ರಿ ಹವ್ಯಾಸಿ ರಂಗತಂಡದೊಡನೆ ನಂಟು. ಕಲಾ ಗಂಗೋತ್ರಿ ನಾಟಕಗಳಾದ, ಮೈಸೂರು ಮಲ್ಲಿಗೆಯ ಮೊದಲಿನ ಪ್ರದರ್ಶನಗಳಲ್ಲಿ ಯುವ ಪ್ರೇಮ ಕವಿಯಾಗಿ,ಇತ್ತಿಚೀನ ದಿನಗಳ ಪ್ರದರ್ಶನಗಳಲ್ಲಿ ಬಳೆಗಾರ ಚೆನ್ನಯ್ಯನಾಗಿ,ಕನ್ನಂಬಾಡಿ ಕಟ್ಟದಿದ್ದರೆಯಲ್ಲಿ ಮೈಸೂರು ಮಹರಾಜನಾಗಿ, ಮಂದ್ರದಲ್ಲಿ ಸಂಗೀತಗಾರನಾಗಿ, ಮೂಕಜ್ಜಿಯ ಕನಸುಗಳಲ್ಲಿ ನಾರಯಣನಾಗಿ ರಂಗಭೂಮಿಯಲ್ಲಿ ಸಕ್ರೀಯ.    



೨೦೧೨ರಲ್ಲಿ ೮-೧೦ ಹವ್ಯಾಸಿ ಕಲಾವಿದರು ಸೇರಿ ರಚಿಸಿದ ’ಯುವಶ್ರೀ’ ತಂಡದ ಸೂತ್ರದಾರ.ವಿಜಯ ಕರ್ನಾಟಕದ ಯುವ ಘರ್ಜನೆ ನಾಟಕ ಉತ್ಸವದಲ್ಲಿ,ಡಾ.ಚಂದ್ರಶೇಖರ ಕಂಬಾರ ರಚಿತ "ಹರಕೆಯ ಕುರಿ" ನಾಟಕದ ನಿರ್ದೇಶನ ಮತ್ತು ದ್ವೀತಿಯ ಸ್ಥಾನ.

ಕಂಡ ಕನಸು ಬೆನ್ನು ಹತ್ತಿ,ಅದನ್ನು ಸಾದ್ಯವಾಗಿಸಿಕೊಂಡು,ಹವ್ಯಾಸಿ ರಂಗಭೂಮಿಯಲ್ಲಿ ತಲ್ಲೀನ.೨೦೧೩ ವರ್ಷದ ಕೊನೆ ದಿನ(೩೧/೧೨/೨೦೧೩) ಪ್ರದೀಪ ನಿರ್ದೇಶನ ಹರಕೆಯ ಕುರಿ ರಂಗಶಂಕರದಲ್ಲಿ ಯಶಸ್ವಿಯಾಗಿ(ಫ಼ುಲ್ ಹೌಸ್) ಪ್ರದರ್ಶನ ಕಂಡದ್ದನ್ನು ನೋಡಿ ತುಂಬಾ ಸಂತಸಪಟ್ಟವರಲ್ಲಿ ನಾನೊಬ್ಬ.

ನನಗೆ ನಾಟಕದಲ್ಲಿ ಆಸಕ್ತಿ ಮೂಡಿಸಿ, ಅದ್ದನ್ನೇ ಗೀಳಾಗಿಸಿದ ಪ್ರದೀಪ ಹವ್ಯಾಸಿ ರಂಗಭೂಮಿಯಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳಯಲಿ ಎಂದು ಹಾರೈಸುವ,

ಮಹಾಂತೇಶ.

Wednesday, April 06, 2011

ಗೋವಾದ ಚಾರಣ ಚಿತ್ರಗಳು 2009-2010


ಚಿಕ್ಕದಾದ -ಚೊಕ್ಕವಾದ ರಸ್ತೆಗಳು,ಬೈಕನಲ್ಲಿ ಓಡಾಡುತ್ತಿರುವ ಪ್ರಣಯಜೋಡಿಗಳು,ದಾರಿಯುದ್ದಕ್ಕೂ ಒಂದು ಕಡೆ ಕಾಣುತ್ತಿರುವ ಸಮುದ್ರ,ಕೊಂಕಣಿ ಮತ್ತು ಮರಾಠಿ ಮಿಶ್ರಿತ ಭಾಷೆಗಳಲ್ಲವೂ ಕಂಡು ಬಂದದ್ದು ಗೋವಾದ ಪಣಜಿಯಲ್ಲಿ.ನಾನು ನನ್ನ ಹೆಂಡತಿ ಗೌರಿ ಡಿಸೆಂಬರ್ ೨೦೦೯ರ ಯೂತ್ ಹಾಸ್ಟೆಲ್ ಗೋವಾದ 7 ದಿನದ ಚಾರಣಕ್ಕೆ ರವಿವಾರ ಪಣಜಿಯ ಬೆಸ್ ಕ್ಯಾಂಪ್ ಸ್ಪೋರ್ಟ್ ಅಥಾರಿಟಿ ಮೈದಾನ ತಲುಪಿದಾಗ ನೋಡಿದ್ದು,ಸಾಲಾಗಿ ನಿಂತ ಸೈಕಲಗಳು,ಗಡಿಬಿಡಿಯಲ್ಲಿರುವ ಯೂತ್ ಹಾಸ್ಟೇಲನ ಸಿಬ್ಬಂದಿಗಳು,ಮೊಬಲ್ ಚಾರ್ಜಿಂಗ ಪಾಯಿಂಟನಲ್ಲಿ ನೋಣಗಳ ಹಾಗೆ ಮುಕ್ಕಿರುವ ಜನಗಳು,ಅಲ್ಲಿ ಹಾಕಿರುವ ಟೆಂಟಗಳು,ರಾತ್ರಿ ಅಡುಗೆಗಾಗಿ ತರಾವರಿಯಿಂದ ಒಡಾಡುತ್ತಿರುವ ಅಡುಗೆಯವರು, ಚಾರಣ ಮುಗಿಸಿ ಸುಸ್ತಾಗಿ ಬಂದ ಸುಸ್ತಾದ ಮುಖಗಳು,ನಾಳೆ ಚಾರಣಕ್ಕೆ ಕಾತುರದಿಂದ ಕಾಯಿತ್ತಿರುವ ಹೊಸ ಮುಖಗಳು.ನಾವು ನೋಂದಣಿ ಮಾಡಿ, ಮರುದಿನ ಮಾಹಿತಿ ಕೇಳಿ ನಮ್ಮ ತಂಡದ ಪರಿಚಯ ಮಾಡಿಕೊಂಡು,ಸ್ವಲ್ಪ ಹೊತ್ತು ತಿರುಗಿ ನಿದ್ದೆಗೆ ಶರಣು.
ನಮ್ಮದು ಚಾರಣದಲ್ಲಿ 13ನೇ ತಂಡ. ನಮ್ಮ ತಂಡದಲ್ಲಿ ಕೇವಲ 20 ಜನ. ಅದಂತೂ ನನಗೆ ತುಂಬಾ ಅನಕೂಲವಾಯಿತು. ತುಂಬಾ ಜನವಿದ್ದಷ್ಟು ಗೌಜು ಗದ್ದಲ ಜಾಸ್ತಿ. ತಂಡದಲ್ಲಿ 5 ಜನ ಮರಾಠಿ ಅಂಕಲಗಳು ಮುಂಭೈನಿಂದ.ಈ ಜನಗಳು ಮೂಡನಂಬಿಕೆಗಳ ವಿರುದ್ದ ಹೊರಾಡುವ ಸಂಘಟನೆಯ ಸದಸ್ಯರು. ಆರ್ಕಿಟೆಕ್ಟಗಳಾದ ಮೇಘಾ ಮತ್ತು ನಿಶ್ಚಿತಾ ಅನ್ನೊ ಬೆಂಗಳೂರಿನ ಮಾಡ್ ಹುಡಗಿಯರು,ಮೂರು ಜನ ಡೆಲ್ಲಿಯಿಂದ,ಅನುರಾಧ ಮತ್ತು ಸಂಗೀತಾ ಅನ್ನೊ ಅಂಟಿಯರು ಮುಂಬೈನಿಂದ ,ಮೂರು ಜೋಡಿಗಳು ಕರ್ನಾಟಕ, ಆಂದ್ರಪ್ರದೇಶ ಮತ್ತು ನಾಸಿಕನಿಂದ.
ಮರುದಿನ (ಸೋಮವಾರ) ಬೆಳಿಗ್ಗೆ 6.೦೦ ಘಂಟೆಗೆ ರಾಪಲ್ಲಿಂಗ್(Rapelling). ಕೆಲವು ಜನ ಆರಾಮವಾಗಿ ಮಂಗನ ಹಾಗೆ ಮೇಲೆ ತಲುಪಿದರೆ,ಕೆಲವು ಜನ ಒದ್ದಾಡುತ್ತ, ತೇಕುತ್ತಾ,ಉಸಿರು ಹಾಕುತ್ತ ಮೇಲೆ ತಲುಪಿದ್ದು ನೋಡಕ್ಕೆ ತಮಾಷೆಯಾಗಿತ್ತು. ನಂತರ 1 ಘಂಟೆ ವಿರಾಮದ ನಂತರ ವಾರ್ಮ್-ಅಪ್ ಅಂತ ಮಿರಾಮರ್ ಬೀಚಗೆ ಪಯಣ.ಪಣಜಿಯ ಯೂತ್ ಹಾಸ್ಟೇಲ್ ಹಿಂಭಾಗದಿಂದ ದೊನಾಪೂಲ್ ಬೀಚವರಗೆ 5K.Mವರಗೆ ಬೀಚ ಚಾರಣ.ಸಮುದ್ರ ದಂಟೆಗುಂಟ ಮರಳಿನಲ್ಲಿ ಬರೆಗಾಲನಲ್ಲಿ ನಡೆಯುದು ಅಪರೂಪದ ಅನುಭವ.
ತುಂಬಾ ಜನ,ತುಂಡು ಲಂಗದ ಲಲನೆಯರು,ಕೆಂಪು ಚಾಕೆಟ್ ತೊಟ್ಟ ಲೈಪ್ ಗಾರ್ಡಗಳು,ಭಯಂಕರ ಜನಂಗುಳಿ,ಅಲ್ಲೊ ಇಲ್ಲೊ ಹೋಗುತ್ತಿರುವ ಚಿಕ್ಕ ದೋನಿಗಳು,ನೀರಿನ ಬಾಟಲಗಾಗಿ ಮುಗಿಬಿದ್ದ ಡೊಳ್ಳು ಹೊಟ್ಟೆಯ ಅಂಕಲಗಳು,ಫೊಟೊ ತಗಿಸಿಕೋಳ್ಳುತ್ತಿರುವ ನವ ವಿವಾಹಿತರು,ಎಲ್ಲೆ ಹೋದರು ಶಾಪ್ಪಿಂಗ್ ಮಾಡೊ ಹೆಂಗಸರು,ಇವೆಲ್ಲಾ ಕಂಡು ಬಂದದ್ದು ದೊನಾಪೊಲಾ ಬೀಚನಲ್ಲಿ. ನಾವು ಒಂದು ಘಂಟೆ ತಿರುಗಾಡಿ ನಂತರ ಬಸ್ಸಿನಲ್ಲಿ ಮರಳಿ ಬೆಸ್-ಕ್ಯಾಂಪಗೆ.
ಮದ್ಯಾಹ್ನ ಚಾರಣದ ಬಗ್ಗೆ ಮಾಹಿತಿ ಮನೊಜ ಜೋಶಿಯವರಿಂದ.ಜೋಶಿಯವರು,ಗೋವಾದ ಸಂಸ್ಕ್ರಿತಿಯ ಬಗ್ಗೆ,ಚಾರಣದ ದಾರಿಯ ಬಗ್ಗೆ,ಚಾರಣದ ಮುಂಜಾಗ್ರತೆಗಳ ಬಗ್ಗೆ,ಮಹಾವೀರ ಜೈನ್ ರಾಷ್ಟ್ರೀಯ ಅಭಯಾರಣ್ಯದ ಬಗ್ಗೆ,ಕಾಡಿನಲ್ಲಿರುವ ಮರ ಗಿಡಗಳ ಬಗ್ಗೆ ,ಮತ್ತು ಚಾರಣಕ್ಕೆ ಮಾರ್ಗದರ್ಶಕವಿರುವದಿಲ್ಲ ಎನ್ನುದರ ಬಗ್ಗೆ ವಿವರವಾಗಿ ವಿವರಿಸಿದರು.
ಮೂರನೇ ದಿನ,ನಮ್ಮ ಅಧಿಕ್ರತ ಚಾರಣ ಶುರುವಾಯಿತು ಎನ್ನಬಹುದು.ಬೆಸ್-ಕ್ಯಾಂಪನಿಂದ ಬಾಗಮೊಲ್ ಬೀಚಗೆ ಬಸ್ಸಿನಲ್ಲಿ 1 ಘಂಟೆ ಪ್ರಯಾಣ ಮತ್ತು ಅಲ್ಲಿ 1 ಘಂಟೆವರಗೆ ಆಟೋಟಗಳು.ಬೀಚನ ಪಕ್ಕದಲ್ಲಿರುವ ದೊಡ್ಡದಾದ ಕಲ್ಲುಗಳನ್ನು ದಾಟಿ,ಹಾಗೆ ಸಮುದ್ರದಂಡೆಯಲ್ಲಿ ನಡೆಯುತ್ತಾ ವೆಲಸೋವಾ ಬೀಚ ತಲಪುವದು ನಮ್ಮ ಗುರಿ.ನಮ್ಮ ಏಡಗಡೆ ತೆಂಗಿನ ಮರಗಳ ಸಾಲು,ನಮ್ಮ ಮುಂದೆ ಅಕ್ಷಯವಾಗಿ ಬಿದ್ದಿರುವ ಮರಳು,ಬಲಗಡೆ ಕಣ್ಣೂ ಹಾಯಿಸದಷ್ಟು ದೂರ ಕಾಣುವ ಸಾಗರ ,ಸಾಗರ ತೆರೆಗಳ ನರ್ತನ, ಮೇಲೆ ಸುರಿಯುತ್ತಿರುವ ಬಿಸಿಲು,ಎಷ್ಟು ದೂರ ನೋಡಿದರೂ ಯಾವ ಮನುಷ್ಯ ಕಾಣದೇ ಇರುವುದು, ಈ ಚಾರಣ ಹಾದಿಯ್ ವೈಶಿಷ್ಟವಾಗಿತ್ತು.ಗೋವಾದಲ್ಲಿ ಈ ಥರಾ ನಿಬಿಡ ,ನಿರ್ಜನ ಬೀಚವಿರುವುದು ತುಂಬ ಆಶ್ಚರ್ಯವೇನಿಸಿತು ಈ ದಾರಿಯಲ್ಲಿ ಚಾರಣ ಏರ್ಪಡಿಸಿದ್ದಕ್ಕೆ ಯೂತ್-ಹಾಸ್ಟಲಗೆ ಮತ್ತೋಮ್ಮೆ ಹೆಮ್ಮೆ ಎನಿಸಿತು.

Tuesday, January 11, 2011

ನಿಸರ್ಗದ ಮಡಿಲಲ್ಲಿ - ಭಾಗ 3

ದಿನ 4 ಕಾಲೂರನಿಂದ ವನಚಲುವರಗೆ,ಅಜ್ಜಿ ಮೊಟ್ಟೆ ಬೆಟ್ಟದ ಮೂಲಕ.


ಚಾರಣ ಶುರುವಾದದ್ದು ಬೆಳಿಗ್ಗೆ ೯.೦೦.ಈವತ್ತು ನಮ್ಮ ಮೊದಲಿನ ಗೈಡಾದ ರಮೇಶನಿಗೆ ವಿದಾಯ ಹೇಳಿ ,ಹೊಸ ಗೈಡಾದ ಎ.ನಾರಯಣಪ್ಪನ ಜೊತೆ,ಬೆಟ್ಟವನ್ನು ನಿಧಾನವಾಗಿ ಮುನ್ನೆಡೆದವು.ನಡುವೆ ಬರುವ ಅಜ್ಜಿ ಮೊಟ್ಟೆವನ್ನು ಹತ್ತಿ,ಅತ್ಯಂತ ದೂರದಲ್ಲಿ ಕಾಣುವ ಕುಮಾರ ಪರ್ವತವನ್ನು,ಅದರ ಸುತ್ತಲಿನ ಅನೇಕ ಪರ್ವತಗಳನ್ನು,ವಿಶಾಲವಾಗಿ ಕಣಿವೆಗಳಲ್ಲಿ ಹರಡಿರುವ ದಟ್ಟ ಕಾಡನ್ನು ನೋಡಿ ಮುಂದೆ ಸಾಗಿದೆವು.ದಾರಿಯಲ್ಲಿ ಬರುವ 3-4 ಹಳ್ಳ ಹೊಳೆಗಳನ್ನು ದಾಟುವಾಗ ಅಸಂಖ್ಯಾತ ಜಿಗಣೆಗಳ ಕಾಟದಿಂದ ತಪ್ಪಿಸಿಕೊಂಡು ಬೆಟ್ಟದ ಮೇಲೆ ಊಟಕ್ಕೆ ನಿಂತಾಗ ಸಮಯ 1.೦೦.
ಊಟದ ನಂತರ ಸ್ವಲ್ಪ ವಿಶ್ರಮಿಸಿ,ಹಾಗೆ ಮುಂದೆ ನಡೆದಾಗ ,ಒಂದು ಬೆಟ್ಟದ ಮೇಲೆ ದೂರದಲ್ಲಿ 3-4 ಕಾಟಿಗಳನ್ನ್ದ್(ಕಾಡೆಮ್ಮೆ)ಕಂಡವು. ಮುಂದೆ 7 ಕಿ,ಮೀ ನಡೆದು ವನಚಲು ಕ್ಯಾಂಪ್ ತಲುಪಿದಾಗ ಸಮಯ ಸಂಜೆ5.30.ಈಲ್ಲಿ ಅರ್ಧ ಶಾಲೆಯಲ್ಲಿ,ಅರ್ಧ ಟೆಂಟಗಳಲ್ಲಿ ಕ್ಯಾಂಪಗಳಿದ್ದುವು.

ದಿನ 5 ವನಚಲು ಕ್ಯಾಂಪನಿಂದ ಮಡಿಕೇರಿ ಬೆಸ್-ಕ್ಯಾಂಪವರಗೆ ,ನಿಶಾನೆಬೆಟ್ಟದ ಮೂಲಕ

ಈವತ್ತು ಕೊನೆಯ ದಿನದ ಚಾರಣ. ದಿನ ಆಲಸಿಯಾಗಿ ಶುರುವಾಗಿ ಸುಮಾರು 9.15ಕೊನೆಯ ಚಾರಣ ಆರಂಭವಾಯಿತು.ಮೊದಲುನಿಶಾನೆ ಬೆಟ್ಟವನ್ನು ನೋಡಿ,ಅಲ್ಲಿಂದ ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಹೆದ್ದಾರಿಯನ್ನು , ಸಂಪಾಜೆ ಗ್ರಾಮವನ್ನು ,ಅದರ ಹಿಂದುಗಡೆ ಹಬ್ಬಿರುವ ಕಾಡನ್ನು ವಿಕ್ಷಿಸಿದೆವು.ಮೊದಲಿನ ಕಾಲದಲ್ಲಿ ನಿಶಾನೆ/ಗುರಿಯನ್ನು ನೋಡಲು ಈ ಬೆಟ್ಟವನ್ನು ಬಳಸುತ್ತಿದ್ದರಿಂದ ಈ ಬೆಟ್ಟಕ್ಕೆ ನಿಶಾನೆಬೆಟ್ಟವೆಂದು ಹೆಸರು. ಇಲ್ಲಿಂದ ಕೆಳಗೆ ಇಳಿಯುತ್ತ ಮಡಿಕೇರಿ ಪಟ್ಟಣದ ರಾಜಾ ಸೀಟ್ ತಲುಪಿದಾಗ ಸಮಯ 3.3೦ ಮತ್ತು ಕ್ರಮಿಸಿದ್ದು 15-16 ಕಿ.ಮೀ.


ಚಾರಣ ತಂಡ 6


ತಂಡ 5ರಲ್ಲಿ 18 ಜನ ಮತ್ತು ತಂಡ 6ರಲ್ಲಿ 13ಜನರನ್ನು ಒಳಗೊಂಡ ಈ ತಂಡದಲ್ಲಿ ದೇಶದ ಎಲ್ಲಾ ಭಾಗಗಳಿಂದ ಎಲ್ಲಾ ವಯೋಮಾನದವರಿದ್ದರು.13ವಯಸ್ಸಿನ ಬೆಂಗಳೂರಿನ ಚಿದು, ಪಿ.ಯು.ಸಿ ಒಡುತ್ತಿರುವ ಅವರಣ್ಣ ಗಗನ,8ಗುಜರಾತಿ ಬೆಹನಗಳು,3-4 ಗುಜ್ಜುಗಳು,ಡೆಲ್ಲಿಯಿಂದ 66 ವರ್ಷದ ಪ್ರಕಾಶ,58 ವರ್ಷದ ಪುರಿ,ನಮ್ಮ ತಂಡದ ನಾಯಕ, ಮಹಾರಾಷ್ಟ್ರದ 5-6 ಯುವಕರು,ಆಂಧ್ರಪ್ರದೇಶದ ಮೂರು ಜನ ಮತ್ತು ಕರ್ನಾಟಕದ 8 ಜನ ರೋಹಿತ್(Fidleity),ಗಗನ,ಚಿದು,ಸಿದ್ದು(mindtech),ಅಜಯ(NDTV)ಮತ್ತು ವಿಜಯ(HP)ರಿದ್ದರು.ಈ ಗ್ರುಪನಲ್ಲಿರುವ ರಾಮದಾಸ ರಾವಂಡೆ ಕತೆ ಕೂತಹಲವಾಗಿದೆ. ವಯಸ್ಸು 63, ಮಹಾರಾಷ್ಟ್ರದ ಜಲಗಾಂವದವರು. ಈಗ ವಿಶ್ರಾಂತ ಜೀವನ.ಈವರಿಗೆ 1998ರಲ್ಲಿ ಪಾರ್ಶ್ವವಾಯುವಾಗಿ,ಕೇವಲ ನೋಟ ಮತ್ತು ಸ್ಪರ್ಶ ಗ್ರಹಿಸಬಲ್ಲವರಾಗಿದ್ದರು.ಬೆಂಗಳೂರಿನ ನಿಮ್ಹಾನ್ಸನಲ್ಲಿ 6ತಿಂಗಳು ಕಾಲ ಚಿಕಿತ್ಸೆಗೆ ಭರ್ತಿಯಾಗಿ ಪಿಜಿಯೊಥೆರಪಿ(Physiotheropy) ಮೂಲಕ ಮೊದಲಿನ ಹಾಗೆ ಒಡಾಡಬಲ್ಲವರಾದರು. ಅವರು ಕೂಡ ಈ ಚಾರಣವನ್ನು ಯಶಸ್ವಿಯಾಗಿ ಮುಗಿಸಿದ್ದನ್ನು ನೋಡಿದರೆ ,ಮನುಷ್ಯ ಮನಸ್ಸು ಮಾಡಿದರೇ,ಎನೆಲ್ಲಾ ಸಾಧಿಸಬಹುದು ಎಂದುದಕ್ಕೆ ಒಳ್ಳೆ ಊದಾಹರಣೆ.


ಈತ ರಮೇಶ H ಮಂದ್ರಾರ.62ವಯಸ್ಸಿನ ಈತ ಕರ್ವಾಲೊ ಕಾದಂಬರಿಯಲ್ಲಿ ಬರುವ ಮಂದಣ್ಣನ ಶಿಷ್ಯನೋ,ಇಲ್ಲಾ ಅವನ ಅಪರಾವತಾರೋ ದೇವರೇ ಬಲ್ಲ. ಈತ ಮೊದಲು 3ದಿನಕ್ಕೆ ಮಾರ್ಗದರ್ಶಕ.ಕನ್ನಡ,ಕೂರ್ಗಿ ಮತ್ತು ತುಳು ಭಾಷೆ ಬಲ್ಲವನಾಗಿದ್ದು ಯಾವಗಲೂ ಕಿವಿಯಿಂದ ಕಿವಿಯವರಗೆ ಹಲ್ಲು ಕಿರಿದುಕೊಂದಿರವನು.ಕಾಡಿನಲ್ಲಿ ಸಕ್ಕರೆ ರೋಗಕ್ಕೆ ಯಾವ ಬಳ್ಳಿ ಕಷಾಯ ಒಳ್ಳೆಯದು,ಯಾವ ಹಣ್ಣು,ಯಾವಾಗ ಬಿಡುವುದು,ಕಾಡಿನಲ್ಲಿರುವ ತರಾವರಿ ಬಳ್ಳಿಗಳು,ಅವುಗಳ ಉಪಯೋಗ,ಪ್ರಸವವಾದ ಹೆಂಗಸರಿಗೆ ಯಾವ ಗಿಡಮೂಲಿಕೆ ಔಷಧಿ ಒಳ್ಳೆಯದು, ಕಾಡು ಅನಾನಸ್ಸುಹಣ್ಣು,ಕಾಡು ಯಾಲಕ್ಕಿ,ಯಾಲಕ್ಕಿ ಬಗೆಗಳು,ರೊಬಸ್ಟಾ ಮತ್ತುಅರೇಬಿಕಾ ಕಾಫಿ ತಳಿಗಳಿಗಿರುವ ವ್ಯತ್ಯಾಸ,ಜೇನು ಸಾಕಣೆ ಪೆಟ್ಟಿಗೆಗಳು,ಹುಲಿ ಜೇನು(ಹೆಜ್ಜೇನು),ಅವುಗಳು ದಾಳಿ ಮಾಡಿದರೆ ತಪ್ಪಿಸಿಕೊಳ್ಳಲಾಗುವದಿಲ್ಲ,ಮುಜಂಟೆ ಜೇನುಗಳು,ಅವುಗಳು ಕೇವಲ ತೆಂಗಿನಮರದ ಹೂವಿನ ಮಕರಂದದಿಂದ ಜೇನು ಮಾಡುವುದು,ಯಾಲಕ್ಕಿ ಬಳ್ಳಿಗಳು,ಮೆಣಸು ಬಳ್ಳಿಗಳು,ಮೆಣಸ್ಸಿಗೆ ಹೂಗಳೀರುವದಿಲ್ಲಾ,ಅವುಗಳಲ್ಲಿ ಬೆಳಿಗ್ಗೆ ಬೀಳುವ ಮಂಜಿನ ಹನಿಯಿಂದ ಪರಾಗಸ್ಪರ್ಶವಾಗಿ,ಮೆಣಸ್ಸಾವುಗುವುದು,ಅದು ನಾವು ನೀವು ಮಾಡುವ ಪರಾಗಸ್ಪರ್ಶದ ತರಾ ಅಲ್ಲಾ ಅನ್ನೊ ಒಗ್ಗರಣೆ ಬೇರೆ,ರಾತ್ರಿ ಶೆಂದಿಗೆ ವ್ಯವಸ್ಠೆ ಮಾಡಬೇಕಾ? "ನಮ್ಮೂರು ಚಂದವೊ,ನಿಮ್ಮೂರು ಚಂದವೊ"ಅನ್ನುವ ಕೆ.ಎಸ್.ಎನ್. ಕವಿತೆ ಹಾಡುತ್ತ ಎಲ್ಲರನ್ನು ನಗಿಸುತ್ತಾ ಮುಂದೆ ಕರೆದೊಯ್ಯುತ್ತಿದ್ದ.
ಮಂಡೆಮುಕ್ರ ಹೇಗೆ ಕೂಗುತ್ತದೆ,ಭೀಮರಾಜ ಪಕ್ಷಿ ಹೇಗೆ ಬೇರೆ ಬೇರೆ ಪಕ್ಷಿಗಳ ,ಮನುಷ್ಯರ ಸಿಳ್ಳೆಯನ್ನು ಅನುಕರಿಸುತ್ತದೆ ಅನ್ನೊದನ್ನ ಕೇಳಿಸಿದ್ದು ರಮೇಶನೇ."ನಾಯಿ ಇದ್ದವನಿಗೆ ಬೇಟೆ,ಬಾಯಿ ಇದ್ದವನಿಗೆ ಬೊಟ್ಟು,"ಕೊಡಗಿನ ಗಾದೆಗಳನ್ನು ಹೇಳುತ್ತ ಚಾರಣ ಹಾದಿ ಸುಲಭಗೊಳಿಸುತ್ತಿದ್ದ.ಎಲಕ್ಕಿ 3ವರ್ಷಗಳ ಹಿಂದೆ ತುಂಬಾ ಬೆಳೆದ್ದಿದ್ದರು,ಆಗ ಬೆಲೆ ಇರಲಿಲ್ಲ,ಈಗ ಸಿಕ್ಕಾಪಟ್ಟೆ ಬೆಲೆ, ಅದಕ್ಕೆ ಕಡಿಮೆ ಬೆಲೆಗೆ ಸಿಗ್ತಾ ಇಲ್ಲಾ,ಮರ ಅಣಬೆ,ತೋಟದಲ್ಲಿ ಕೆಲಸಗಾರರ ಸಮಸ್ಯೆ,ಇಲ್ಲಿರುವರೆಲ್ಲಾ ಬೆಂಗಳೂರು ಇಲ್ಲಾ ಮೈಸೂರು ಸೇರಿ ಹೋಟಲ್ಲೊ,ಬಾರನಲ್ಲಿ ಸ್ಯೆಕುರಿಟಿಗಾರ್ಡಗಳಾಗಿ ಸೇರಿ,ಒಂದು ಕೈಯಲ್ಲಿ ಗನ್ನು,ಇನ್ನೊಂದು ಕೈಯಲ್ಲಿ ******* ಹಿಡದುಕೊಂಡು ಕೆಲಸ ಮಾಡ್ತಾ ಇದಾರೆ ಅನ್ನೊ ವಿಷಯಗಳು ತಿಳಿದುಬಂದುದ್ದು ಈತನಿಂದ.
ಮೊದಲಿನೇ ಬಾರಿ 31ಜನಕ್ಕೆ ಮಾರ್ಗದರ್ಶಕನಾಗಿ ಮತ್ತು ಗುಂಪಿನಲ್ಲಿರುವ ಅರ್ಧ ಜನಕ್ಕೆ ಕನ್ನಡ ಬರುತ್ತಿರವಾದರಿಂದ ಗೊಪಿನಲ್ಲಿರುವ ಜನಕ್ಕೂ ಈತನಿಗೂ ಜಗಳ,ವಾದ-ವಿವಾದ ,Idiotಅನ್ನೊ ಬೈಗುಳಗಳು,ಅದರೂ ಅದೆನ್ನೆಲ್ಲಾ ಲೆಕ್ಕಕ್ಕೆ ತಗೆದುಕೊಳ್ಳದೇ,ಯಾವಗಲೂ ನಗುತ್ತ ಮುಂದೆ ಬನ್ನಿ,ಕಮ್ ಪಾಸ್ಟ್(come fast)ಅನ್ನುತ್ತ ,ಹಲ್ಲಿ ಚಿಲುಯುತ್ತಾ ಮಜಾ ಮಾಡುತ್ತ ನಮಗೆ ಜೊತೆ ನೀಡಿದ.
ಕೊನೆಯದಾಗಿದುಡ್ಡು ಕೊಟ್ಟು ಗುಡ್ಡ ಸುತ್ತೊಕೊ ಯಾಕೆ ಹೋಗತಿಯಾ? ಏನು ಸಿಗುತ್ತೆ ಅನ್ನೋವರಿಗೆ ಹೇಗೆ ಊತ್ತರಿಸುವುದು ತಿಳಿಯದು.5-6 ದಿನ ನಿಸರ್ಗದ ಮಡಲಲ್ಲಿ,ಎಲ್ಲಾ ಮರೆತು,ಚಾರಣ ಮಾಡುವದು ಒಂದು ವಿಶಿಷ್ಟ ಅನುಭವ. ಬೆಳಿಗ್ಗೆ ಎದ್ದು,ಸುಮ್ಮನೆ ಕಾಡು ಸುತ್ತಿ,ಹಣ್ಣಾಗಿ ಹಸಿದು ಕ್ಯಾಂಪಗೆ ಬಂದು ಬೀಳುವುದು ಒಂದು ಮರೆಯಲಾರದ ಅನುಭವ. ಕಡೇಪಕ್ಷ ನಮಗೆ ನೋಡಲು ಕಾಡು, ಕೊಂಚ ಪ್ರಾಣಿಗಳು,ಪಕ್ಷಿಗಳಿರುವುದು ನಮ್ಮ ಸುದೈವ,ಮುಂದಿನ ಪೀಳಿಗೆಗೆ ಇವೆಲ್ಲಾ ಇರುವದಿಲ್ಲ ಅನ್ನೊದು ದುರ್ದೈವ :(-.

ಯುತ್ ಹಾಸ್ಟೆಲ್ ಅಸ್ಸೊಸಿಯನ್ ಅಪ್ ಇಂಡಿಯಾ (Youth Hostel Assocation of India)

ವರ್ಷದ ಕೊನೆಯಲ್ಲಿ ಮತ್ತು ಎಪ್ರಿಲ್ ಮತ್ತು ಮೇನಲ್ಲಿ ದೇಶದ ವಿವಿಧ ಭಾಗಗಗಲ್ಲಿ YHAI ಚಾರಣ ಎರ್ಪಡಿಸುತ್ತಾರೆ.ಆಸಕ್ತರು http://www.yhaindia.org/ ಲಿಂಕನಲ್ಲಿ ಹೆಚ್ಚಿನ ಮಾಹಿತಿ ನೋಡಬಹುದು.
YHAI ಕರ್ನಾಟಕದವರು ಕೊಡಗನಲ್ಲಿ ಕಳಿದ 8ವರ್ಷಗಳಿಂದ ಚಾರಣ ಎರ್ಪಡಿಸುತ್ತಾರೆ.6-7 ಚಾರಣಕ್ಕೆ ಪೂರ್ತಿ ತಂಡ ಅಪಾರ ಶ್ರಮ, ತಾಳ್ಮೆ,ಅರ್ಪಣಾ ಮನೊಭಾವ,ಚಾರಣದ ದಾರಿಗಳನ್ನು ನಿರ್ಧರಿಸುತ್ತಾರೆ. ಈ ಪೂರ್ತಿ ಚಾರಣವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಧಾರವಾಡದ YHAI ಡಾಕ್ಟರ್ ಸತೀಶ ಕನ್ನಯ್ಯ,ಬೆಂಗಳೂರಿನ ಶ್ರೀರಂಗಯ್ಯ, ಕ್ಯಾಂಪ ಲೀಡರಗಳಾದ ಅನ್ನಪೂರ್ಣಮ್ಮ, ಅಂಬಿಕಾ, ಅಭಿಷೇಕ,ಹಿರೇಮಠ, ಕೊಡಗು ಯುತ್ ಹಾಸ್ಟೆಲ ಸಿಬ್ಬಂದಿಗಳು ಮತ್ತು ರುಚಿಕಟ್ಟಾಗಿ ಅಡುಗೆ ಬಡಸಿದ ಅಡುಗೆಯವರಿಗೆ ನಮ್ಮೆಲ್ಲರ ಅನಂತ ನಮನಗಳು.

ಮುಗಿಯಿತು.....

Monday, January 03, 2011

ನಿಸರ್ಗದ ಮಡಿಲಲ್ಲಿ - ಕೊಡಗು ಚಾರಣ-ಭಾಗ 2

ದಿನ 2- 26/12/2010 ತಂತಿಪಾಲನಿಂದ ಮುಕ್ಲೊಡು, ಕೊಟೆ ಬೆಟ್ಟದ ಮೂಲಕ
ನಿಸ್ಸಂಶಯವಾಗಿ ಈ ಚಾರಣದ ಕಠಿಣ ಹಾದಿ. ಮೊದಲು 25 ಡಿಗ್ರಿನಲ್ಲಿ ಟಾರ್ ರೋಡ, ನಂತರ ಕಚ್ಚಾ ಜೀಪ ರೋಡ (೪ Wheel Drive) ,ಅಮೇಲೆ 40 ಡಿಗ್ರಿನಲ್ಲಿ ದನಕರುಗಳು ಹೋಗುವ ಹಾದಿಯಲ್ಲಿ ಚಾರಣ.ಗುಂಪಿನಲ್ಲಿರುವ ಅರ್ಧ ಜನಕ್ಕೆ ಆಗಲೇ ಸುಸ್ತು. ಕಠಿಣವಾದ ಹಾದಿ ,ಮಣಭಾರದ ನಮ್ಮ ಬ್ಯಾಗಗಳು,ಖಾಲಿಯಾದ ನೀರಿನ ಬಾಟಲಗಳು, ಅಲ್ಲಿ ಗುಡ್ಡ ಬೆಟ್ಟದಲ್ಲಿ ಹರಿವು ನೀರು ಯಾವ ಮಿನರಲ್ ವಾಟರಗಿಂತ ಕಡಿಮೆಯಿಲ್ಲ, ಕುಡಿಯಿರಿ ಅಂತ ಹೇಳಿದರು ಕೇಳದ ಮೂರ್ಖ ಜನಗಳ ಜೊತೆ 6 ಕಿ.ಮೀ ಕ್ರಮಿಸಿದಾಗ ಕಂಡಿತು ಕೊಟೆ ಬೆಟ್ಟ. ಕೊಡಗಿನ ಎರಡನೇ ದೊಡ್ಡಬೆಟ್ಟ (ಮೊದಲನೆಯದು ತಡಿಯನಮೊಳ್).ನಂತರ ತುಂಬಾ ಕಡಿಡಾದ ದಾರಿ.5ನಿಮಿಷಕ್ಕೆ ವಿರಾಮ ತಗೆದುಕೊಳ್ಳತ್ತಾ 65 ಡಿಗ್ರಿನಲ್ಲಿ ಕೊನೆಯ ದಾರಿ ಕ್ರಮಿಸಿ, ಉಸ್ಸಪ್ಪ ಎಂದು ಬೆಟ್ಟದ ಮೇಲೆ ತಲುಪಿದಾಗ ಮದ್ಯಾಹ್ನ 1ಘಂಟೆ. ಬೆಟ್ಟದ ಮೇಲಿಂದ ಪಶ್ಮಿಮ ಘಟ್ಟಗಳ ವಿಹಂಗಮ ನೋಟ, ಕಣ್ಣು ಹಾಯಿಸದಷ್ಟು ದೂರ ಕಾಣುವ ಪರ್ವತಗಿರಿಗಳು,ಕಣಿವೆಗಳಲ್ಲಿ ಹರಡಿರುವ ದಟ್ಟಕಾಡುಗಳು,ಬೆಟ್ಟದ ಮೇಲೊಂದು ಪುಟ್-ಬಾಲ್ ಮೈದಾನದಷ್ಟು ವಿಸ್ತಾರವಾದ ಜಾಗ, ಅಲ್ಲೊಂದು ಪುಟ್ಟದಾದ ಶಿವನ ದೇವಾಲಯ,ಅದರ ಹಿಂದುಗಡೆ ಎರಡು ಚಿಕ್ಕದಾದ ಹೊಂಡಗಳು,ಮೇಲ್ಗಡೆಯಿಂದ ಪ್ರಖರವಾಗಿ ಹೊಡೆಯುತ್ತಿದ್ದ ಬಿಸಿಲು. ಇಲ್ಲಿ ಊಟಕ್ಕೆ 45 ವಿಶ್ರಾಂತಿ
ನಂತರ ಬೆಟ್ಟದ ಇನ್ನೊಂದು ಕಡೆಯಿಂದ ಇಳಿತ. ತುಂಬಾ ಕಷ್ಟಕರವಾದ ಹಾದಿ. ಸುಮಾರು 80 ಡಿಗ್ರಿನಲ್ಲಿ ಇರುವ ಬೆಟ್ಟವನ್ನು 25ಮೀಟರನಷ್ಟು ಅಳದ ಬೆಟ್ಟವನ್ನು ಇಳಿಯಲು ಒಬ್ಬ ವ್ಯಕ್ತಿಗೆ ಹಗ್ಗದ ಸಹಾಯದಿಂದ ಇಳಿಯಲು 25- 30 ನಿಮಿಷವಾದರೂ ಬೇಕು.ಅಲ್ಲಿಂದ ಕೆಳಗೆ ಇಳಿದು ,ಮೂರು -ನಾಲ್ಕು ಬೆಟ್ಟಗಳನ್ನು ಸುತ್ತು- ಬಳಸಿ 9-10 ಕಿ.ಮೀ. ಚಾರಣ ಮಾಡಿ ಹೊಳೆ ಪಕ್ಕ ಇರುವ ಮುಕ್ಲೊಡು ಕ್ಯಾಂಪ್ ತಲುಪಿದಾಗ ತಂಡದಲ್ಲಿರುವ ಅರ್ಧಕ್ಕಿಂತ ಜಾಸ್ತಿ ಜನ ಅರ್ಧಸತ್ತವರಾಗಿದ್ದರು. ಅಲ್ಲಿರುವ ಹೊಳೆಯಲ್ಲಿ ಜಳಕ ಮಾಡಿ ಊಟ ಮಾಡಿ ರಾತ್ರಿ 10ಘಂಟೆಗೆ ಎಲ್ಲರೂ ಗಾಡನಿದ್ದೆಯಲ್ಲಿ.

ದಿನ 3 -27/12/2010 ಮುಕ್ಲೊಡುವಿನಿಂದ ಕಾಲೂರು , ಮಂದಲಪಟ್ಟಿಯ ಮೂಲಕ -

ಬೆಳಿಗ್ಗೆ 8.30 ಚಾರಣ ಶುರು. ಮೊದಲು 45 ನಿಮಿಷದವರಗೆ ಕಾಡಿನ,ಬೆಟ್ಟದ ಕಡಿದಾದ ಹಾದಿ.ನಂತರ ಸಿಗುವುದು ಟಾರ್ ರಸ್ತೆ. .ಈ ರಸ್ತೆ ಮುಂದೆ ಪುಷ್ಪಗಿರಿ ನಾಷನಲ್ ಪಾರ್ಕಗೆ ತಲುಪುವುದು .ಈ ಪ್ರದೇಶದ ಪಶ್ಮಿಮ ಘಟ್ಟಗಳ ವಿಹಂಗಮ ನೋಟ.ಈ ಪ್ರದೇಶಕ್ಕೆ ಮಂದಲಪಟ್ಟಿ ಪ್ರದೇಶವೆನ್ನುವರು. ಈ ದಿನದ ಚಾರಣದಲ್ಲ ಹಳ್ಳ-ಕೊಳ್ಳಗಳನ್ನು ದಾಟುತ್ತ,ಒಮ್ಮೆ ಕಾಡಿನಲ್ಲಿ,ಒಮ್ಮೆ ಬೆಟ್ಟದ ಮೇಲೆ,ನಂತರ ಕಾಫಿ ತೋಟಗಳ ಮಜವನ್ನು ಸವಿಯುತ್ತಾ ಕಾಲೂರು ಕ್ಯಾಂಪ್ ತಲುಪಿದಾಗ ಸಮಯ 3.30. ಕಾಲೂರು ಕ್ಯಾಂಪ್ ಸಹಿತ ಹೊಳೆ ಪಕ್ಕದಲ್ಲಿದ್ದು, ದಾರಿಯುದ್ದಕ್ಕೂ ಅನೆಗಳ ಹೋದ ಹಾದಿ ಕಂಡು ಬಂದವು. ಈ ಗ್ರಾಮದಲ್ಲಿ ವರ್ಷವಿಡಿ ಆನೆ ಕಾಟ ಹಂದಿ ಕಾಟ ಸರ್ವೆಸಾಮಾನ್ಯ.ಅದಕ್ಕೆ ಇಲ್ಲಿ ಅಪರೂಪಕ್ಕೆ ಕಾಣುವ ಜನರು ,ಕೋವಿ ಹಿಡಿದುಕೊಂದು ತಿರುಗುವುದು ಸಾಮಾನ್ಯ.

.ನದಿ ಪಕ್ಕ ಇರುವ ಕ್ಯಾಂಪ್ ಸೈಟ್,ನದಿಯ ಜುಳು ಜುಳು ನಿನಾದ, ಅದರಲ್ಲಿ ಹರಿಯುತ್ತಿರುವ ಝಳ ಝಳ ನೀರು,ಹಕ್ಕಿಗಳ ಚಿಲಿಪಿಲಿ ,ಮೋಡದಿಂದ ಸುತ್ತುವರೆದ ಪರ್ವತಗಳು,ಒಂದು ಅದ್ಬುತ ದ್ರಶ್ಯವನ್ನು ಕಟ್ಟಿಕೊಡುತ್ತವೆ.ರಾತ್ರಿ ಕ್ಯಾಂಪ್-ಪೈರನಲ್ಲಿ ಚಳಿ ಕಾಯಿಸುವುದು ಒಳ್ಳೆಯ ಅನುಭವ.ಬೆಳೆಗ್ಗೆ ಎದ್ದಾಗ,ಚುಮು ಚುಮು ಚಳಿ,ಮರದ ಮೇಲಿನ ತುಂತುರು ಹನಿಗಳು,ಇಬ್ಬನಿಯಿಂದ ಆರ್ವತವಾದ ಪರ್ವತಗಳು,ನದಿಯ ನೀರಿನ ಮೇಲಿಂದ ಬರುತ್ತಿವ ಮಂಜಿನ ಹೊಗೆ,ಈ ಸಮಯದಲ್ಲಿ ಚಳಿಯಿಂದ ನಡುಗುತ್ತ ತಿರುಗುವ ಮಜವನ್ನು ವರ್ಣಿಸಲಸಾದ್ಯ.

ಮುಂದುವರೆವುದು...

Saturday, January 01, 2011

ನಿಸರ್ಗದ ಮಡಿಲಲ್ಲಿ - ಕೊಡಗು ಚಾರಣ

ಪ್ರೇರಣೆ ಮತ್ತು ಅರ್ಪಣೆ - ಪೂರ್ಣಚಂದ್ರ ತೇಜಸ್ವಿಯವರಿಗೆ.



ನಿಸರ್ಗದ ಚಲುವಿನ ಖಣಿ,ಚಾರಣಿಗರ ಕಣ್ಮಣಿಯಾದ ಕೊಡಗಿನಲ್ಲಿ YHAI(youth Hostel Assocation of India)ಎರ್ಪಡಿಸಿದ ಆರು ದಿನದ ಚಾರಣಕ್ಕೆ ಜನರಲ್ ತಿಮ್ಮಯ್ಯ ಸ್ಟೇಡಿಯಮಗೆ ಬಂದಿಳಿದಾಗ ಸಮಯ ರಾತ್ರಿ 8.15. ಅದಾಗಲೇ ಚಾರಣದ ಕುರಿತು ಮಾಹಿತಿಯನ್ನು ಡಾಸತೀಶ ಕನ್ನಯ್ಯ ನೀಡುತ್ತಿದ್ದರು.
ಕೊಡಗು ಪಶ್ಮಿಮ ಘಟ್ಟಗಳಲ್ಲಿ ಪ್ರಮುಖವಾಗಿದ್ದು, ಉತ್ತರ ರೇಖಾಂಶ 11 ಡಿ 56’ದಿಂದ 12 ಡಿ 57'ವರಗೆ, ಪೂರ್ವದಲ್ಲಿ ಅಕ್ಷಾಂಶ 75 ಡಿ 22’ ದಿಂದ 76 ಡಿ 12’ವರಗೆ ಈ ಭೌಗಳಿಕ ಪ್ರದೇಶವಿದೆ. ದಕ್ಷಿಣಕ್ಕೆ 96 ಕಿ.ಮೀ ದೂರದಲ್ಲಿ ಬ್ರಹ್ಮಗಿರಿ ಪರ್ವತಗಳಿದ್ದು,ಅಲ್ಲಿಯೇ ಕನ್ನಡಿಗರ ತಾಯಿಯಾದ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿದ್ದು, ಉತ್ತರದ್ದಲ್ಲಿ ಹೇಮಾವತಿ ಮಂದವಾಗಿ ಹರಿಯುತ್ತಾಳೆ. ಪಶ್ಮಿಮದ ಕಡೆ,ಸಂಪಾಜೆಯಿಂದ ಪೂರ್ವದ ಕುಶಾಲನಗರದವರಗೆ 64 ಕಿ.ಮೀವರಗೆ ಕೊಡಗು ಜೆಲ್ಲೆ ಹಬ್ಬಿದೆ. ಕೂರ್ಗ, ಕೊಡಗಿನ ಆಂಗ್ಲಿಕರಣವಾಗಿದ್ದು, ಕೊಡಗು ಅನ್ನೊ ಹೆಸರು, ಕೂಡಿ ಮಲೆನಾಡು ಎಂಬ ಹೆಸರಿನಿಂದ ಬಂದಿದೆ. ಕೂಡಿ ಮಲೆನಾಡೆಂದರೆ, ಕಡಿದಾದ ಪ್ರಪಾತಗಳುಳ್ಳ ದಟ್ಟವಾದ ಕಾಡಿನಿಂದ ಕೂಡಿದ ಪ್ರದೇಶ.ಭಾರತದ ಸ್ವಿಜ್ಜರಲ್ಯಾಂಡ, ದಕ್ಷಿಣ ಭಾರತದ ಕಾಶ್ಮೀರ ಎಂದೇಲ್ಲಾ ಬಿರುದುಗಳುಳ್ಳ ಕೊಡಗು ಚಾರಣಿಗರ ಸ್ವರ್ಗವಾಗಿದೆ.

ದಿನ 1- 25/12/2010 ಗಾಳಿಬೀಡುವಿನಿಂದ ತಂತಿಪಾಲ

ಬೆಸಕ್ಯಾಂಪ ಮಡಿಕೇರಿಯಿಂದ ಗಾಳಿಬೀಡು ಕ್ಯಾಂಪಗೆ ಜೀಪನಲ್ಲಿ. ಗಾಳಿಬೀಡುವಿನಿಂದ ತಂತಿಪಾಲ ಕ್ಯಾಂಪವರಗೆ ಕ್ಯಾಂಪ ಲೀಡರ ಪ್ರಕಾರ 14ಕಿ.ಮೀ ಚಾರಣ. ಆದರೆ ಅದು 17-18 ಕಿ.ಮೀವರಗೆ ಇದ್ದು,ಬೆಳಿಗ್ಗೆ ಅಬ್ಬಿ ಫಾಲ್ಸ್ ಮೂಲಕ ಕಾಡು ಹಾದಿ,ಜೀಪ್ ಹಾದಿ, ಕಾಫಿ ಪ್ಲಾಂಟೇಶನನಲ್ಲಿ ಚಾರಣ ಗೈಡ ರಮೇಶ ಜೊತೆ. ಚಾರಣದ್ದಕ್ಕೂ ಮೊದಲು ಅಬ್ಬಿ ಹಳ್ಳ ,ನಂತರ ಇನ್ನೊಂದು ಹಳ್ಳ ನಮ್ಮ ೩೧ ಜನರ ತಂಡಕ್ಕೆ ಜೊತೆ ನೀಡಿತು.

ಕಾಡಿನಲ್ಲಿ ಚಿತ್ರ-ವಿಚಿತ್ರ ಚಿಟ್ಟೆಗಳು,ಸಣ್ಣ ಮರಗಳು,ದೊಡ್ಡ ಮರಗಳು,ಗಿಡಗಂಟಿಗಳು,ಭೂತಾಕಾರದ ಮರಗಳು,ಪಕ್ಷಿಗಳ ಚಿಲಿಪಿಲಿ,ತರಾವರಿ ಗುಬ್ಬಿಗಳು,ಚಿಂ,ಚಿಂ ಅನ್ನುವ ಗಿಳಿಗಳು,ಕೊಟ್-ಕೊಟರ್ ಅನ್ನುವ ಮರಕುಟಿಕಗಳು,ಕಾಡಿನ ತುಂಬಾ ಕೇಳಿ ಬರುವ ಜೀಯ್ ಅನ್ನುವ ಜಿರುಂಡೆ ನಿನಾದ,ಮಂಡೆಮುಕ್ರ ,ವಿವಿಧ ತರದ ಗಿಡಮೂಲಿಕೆಗಳನ್ನು ನೋಡಿ ಆನಂದಿಸಬೇಕಾದರೇ,ನೀವು ಚಾರಣದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ನಿಶಬ್ದವಾಗಿ ಚಾರಣ ಮಾಡಬೇಕು. ನೀವು ಗುಂಪಿನಲ್ಲಿ ಜನರೊಂದಿಗೆ ಹರಟೆ ಹೊಡೆಯುತ್ತಾ ಬಂದರೋ,ನೀವು ಯಾವುದೋ ಮಾರ್ಕೆಟನಲ್ಲಿ ಇಲ್ಲಾ ಸಂತೆಯಲ್ಲಿ ನಡೆದ ಹಾಗಿರುತ್ತದೆ. ಈ ಸಂಗತಿ ತುಂಬಾ ಜನ ಅರ್ಥ ಮಾಡಿಕೊಳ್ಳಲ್ಲಾ ಅನ್ನೊದು ಮಾತ್ರ ಬೇಸರದ ಸಂಗತಿ :(

ಮುಂದವರಿಯುದು...

Tuesday, October 26, 2010

ಬಸವೇಶ್ವರ ಇಂಜನಿಯರಿಂಗ್ ಕಾಲೇಜು'ಗಳು'


ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಡಿಪಾರ್ಟಮೆಂಟ್ ಗಳು,ಅಲ್ಲಿ ನಡೆಯುವ ಕ್ಲಾಸಗಳು,ಮೊದಲನೇ ವರ್ಷ ಅನುಭವಿಸಿದ ragging‌ಗಳು ,ಅಮೇಲೆ ನಾವೇ ಮಾಡಿದ ragging‌ಗಳು,V-ಬ್ಲಾಕಗಳು,N-ಬ್ಲಾಕಗಳು, ಗರ್ಲ್ ಹಾಸ್ಟೆಲಗಳು,ಅಲ್ಲಿರುವ ಹುಡಗಿಯರಗಳು,ಅವರ ಬಗ್ಗೆ ಇರುವ ಕೂತಹಲಗಳು,ತಿಂಗಳಿಗೊಮ್ಮೆ ನಡೆಯುವ Internalಗಳು,ಬ್ಲೂ ಬುಕಗಳು,ನಾಲ್ಕು ತಿಂಗಳಿಗೊಮ್ಮೆ ನಡೆಯುವ ಸೆಮೆಸ್ಟರ ಎಕ್ಸಾಮಗಳು,ನಾರ್ಥ- ಇಂಡಿಯನ್ನರ ನಖರಾಗಳು ,ಅವರ ಹೋಡೆದಾಟಗಳು, ಹಾಸ್ಟೆಲ Vs ಸಿಟಿಯ ಕಾದಾಟಗಳು ,ಹಾಸ್ಟೆಲನ ರವಿವಾರದ ಸ್ಪೇಷಲ ಊಟಗಳು,ಹಾಸ್ಟೆಲಗೇ ಬರುವ ಗೆಸ್ಟಗಳು,ಬ್ಲೂ-ಬೆಲ್ (Blue Bell)ಪಾರ್ಟಿಗಳು, ಮೂನಲೈಟನ(Moonlight) ಕಾಕ-ಟೈಲಗಳು,ಸುಬ್ಬು ಮೆಸ್ಸಗಳು,ಗದ್ದನಕೇರಿ ಕ್ರಾಸಿನ ಸೆಲೆಬ್ರೇಶನಗಳು,ಸಾವಜಿ ಖಾನವಳಿಗಳು,ಶ್ರೀಪಾದ ಕೊಲ್ಡ-ಡ್ರಿಂಕ್ಸನ ಲಸ್ಸಿಗಳು,ವಿದ್ಯಾಗಿರಿಯ ಸಂಗಮೇಶ ಚಾದಗಂಡಿಯ ಬಿಸಿ ಬಿಸಿ ಬಜ್ಜಿಗಳು,ಮೆಕ್ಯಾನಿಕಲ್ Vs Compಸೈನ್ಸ ಡಿಪಾರ್ಟಮೆಂಟ್ ಕ್ರಿಕೇಟ ಮ್ಯಾಚಗಳು,ಬಾಗಲಕೊಟೆ ನಗರದಲ್ಲಿ ನಡೆಯುವ ಇಂಟರ್-ಸಿಟಿಯ ಕ್ರಿಕೇಟ ಮ್ಯಾಚಗಳು, ಜನರಲ್ ಸೆಕ್ರಟಿಯ ಎಲೆಕ್ಶನಗಳು ,ಕಾಲೇಜು ಡೇಗಳು,ಕಾಲೇಜ್ ಪ0ಕ್ಷನಗಳು,ಲೆಕ್ಚರಗಳ ರೋಚಕ ಪ್ರಣಯ ಕಥೆಗಳು(ಇಲ್ಲಿ ಯಾರ ಹೆಸರು ಬೇಡ),ಮಾಸ್ತರ ಕ್ರಿಕೇಟ ಅಟದ ಜಗಳಗಳು,ಪಿಂಕ ಹೌಸನಿಂದ ಹುಡಗಿಯರಿಗೆ ಕಾಡುವ ಕಾಟಗಳು,ವೆಂಕಣ್ಣ ಬಿಲ್ಡಿಂಗಗಳು ,ತಪಶೆಟ್ಟಿ ಬಿಲ್ಡಿಂಗಗಳು ,ಹಾಸ್ಟೆಲ ಬಾತರೂಮನಲ್ಲಿ ನಡೆಯುವ ನಡೆಯುವ ನಿತ್ಯ ಮೋಕ್ಷ-ಗುಂಡಗಳು,ಕಾಕನ ಕಿವಿ ತೂತು ಬಿಳ್ಳೋ ಕೊರತಗಳು ,ವಿನೋದ ಮಾರಂಗಪ್ಪನ್ನವರನ ಸ್ಕಿಮಗಳು, ಹಾಸ್ಟೆಲನ ಗೋಲಮಾಲ ಲೆಕ್ಕಾಚಾರಗಳು,ಗುರುರಾಜ ತುಪ್ಪದನ ಬೊಗಳೆಗಳು,ಡಿ.ಎನ್.ಪಾಟೀಲನ ರಗಳೆಗಳು,ಶಾಯರಿಗಳು,ಕುಮ್ಮಾನ ಹುಡಗಿಯರ ಕಾಟಗಳು,ಎಕ್ಸಾಮ ಟೈಮಗಳು,ಆವಾಗಿನ ನೈಟ್-ಔಟಗಳು,ಹಂಚಿಕೊಂಡ ಸಿಗರೇಟಗಳು,V.T.U ಪುಸ್ತಕಗಳು,ಅರ್ಥವೇ ಆಗದ SOM(Streangth of Materail)ಗಳು,ಮೆಕ್ಯಾನಿಕ್ಸ(Mechanics)ಗಳು,ತೆಲೆಬುಡ ತಿಳಿಯದ ಎಲೆಕ್ಟ್ರಿಕಲ ವಿಷಯಗಳು,ಬೋರು ಹೊಡೆಸುವ ಶಿಪರಮಟ್ಟಿಯ M.P 8085,8086 ಕ್ಲಾಸಗಳು,ಅಟೋಮೋಬೈಲ HOD ಬ್ಲೇಡಗಳು ,ಕೋನೆಯ ವರ್ಷದ ಸೆಮಿನಾರಗಳು,ಪ್ರೋಜೆಕ್ಟ್ ರಿಪೋರ್ಟಗಳು, ಸೆಮೆಸ್ಟರ ಎಕ್ಸಾಮಗಳು,ಡಿಪಾರ್ಟಮೆಂಟ್ ಪ0ಕ್ಷನಗಳು,ಉಳಿದ ಬ್ಯಾಕಾಲ್ಯಾಗಗಳು ಎಕ್ಸ್ (X)(Retain)ಆಗೋ ಆತಂಕಗಳು,ಪೇಪರ ಚೆನ್ನಾಗಿ ಬರದೇ ಅನ್ನೋ ಸಮಾಧನಗಳು, Re-valuationಗಳು,ಅಪರೂಪಕೊಮ್ಮೆ ಅಲ್ಲೋ -ಇಲ್ಲೊ ನಡೆಯುವ ಲವ ಸ್ತೋರಿ(Love Story)ಗಳು, ಅದರ ಗಾಸ್ಸಿಪ್ಪುಗಳು,ನವನಗರ (ಲೇಡಿಜ ಹಾಸ್ಟಿಲ) ಕಡಿಗಿನ ಸಂಜೆ ವಾಕಗಳು..........

ಈ ಎಲ್ಲಾ ಈಗಲೂ ನೆನಪಿಸಿಕೊಂಡರೆ ಮುಖದಲ್ಲಿ ಬರುವ ಮoದಹಾಸಗಳು, ನಗುಗಳು ,ನಮ್ಮ ಜೀವನ ಸಂತಸದ ಕ್ಷಣಗಳು........
ನೀವೆoತೀರಾ ?????


ಇಂತಿ ನಿಮ್ಮ ಪ್ರೀತಿಯ,
ಮಹಾoತೇಶ

ಪ್ರೇರಣೆ : ಪಂಚರಂಗಿ ಸಿನಿಮಾದ "ಗಳು" ಡೈಲಾಗಗಳು
ಸೂಚನೆ :ಇಲ್ಲಿರುವ ಎಲ್ಲಾ ವಿಷಯಗಳು, ಯಾವದೇ ಇಂಜನಿಯರಿಂಗ್ ಇಂಜನಿಯರಿಂಗ್ ಕಾಲೇಜುಗಳು ಅನ್ವವಾಗುತ್ತವೆ. ಸ್ಥಳ ಮತ್ತು ವ್ಯಕ್ತಿಗಳ ಹೆಸರು ಮಾತ್ರ ಬದಲಾಗಬಹುದು

Friday, September 24, 2010

ಜೋಡಿ!!!

ಬಲು ಅಪರೂಪ ಈ ಜೋಡಿ
ನೋಡಲು ಬಂದರು ಎಲ್ಲಾರೂ ಓಡಿ
ಚಿಕ್ಕವಳಾದ ಚೊಟಿ ಕಿಲಾಡಿ
ದೊಡ್ದವಳಾದ ಸೋನಿ ಮೂಡಿ !!1!!

ಅಜ್ಜಿಯು ಜೊಗುಳ ಹಾಡಿ
ಮಲಗಿಸುವ ಪ್ರಯತ್ನ ನೊಡಿ
ನಗತಾವ ಅಮ್ಮನ ಕಾಡಿ
ಈವುಗಳ ಅಟಕೆ ಅಜ್ಜ ಅಜ್ಜಿ ಮೋಡಿ !!2!!

ರಚ್ಚೆ ಹಿಡದರೆ ಸೋನಿ ಚಂಡಿ ಚಾಮುಂಡಿ
ಸಮಾದನಿಸಬೇಕಾದರೆ ಆಗುವುದು ಚಾರಣ ಚಾರ್ಮುಡಿ
ಎಲ್ಲಾರ ಹತ್ತಿರ ಹೋಗುವ ಚೊಟಿ ಉಂಡಾಡಿ
ಮುಖದಲ್ಲಿ ಹರ್ಷದ ಹೊನುಲು ಹರಸುವ ಸೊಗುಲಾಡಿ !!3!!

ಸೋನಿಯ ಕಾಟ, ಚೊಟಿಯ ಪಾಠ ನೋಡಿ
ಹೋಗಿದ್ದೇ ಗೊತ್ತಾಗೋಲ್ಲ ಸಮಯದ ಬಂಡಿ
ಅಜ್ಜ -ಅಜ್ಜಿಯ ಪ್ರೀತಿಯ ಗಂಡಾಗುಂಡಿ
ತೋರುವರು ಎಲ್ಲರಿಗೂ ಪ್ರೇಮದ ಕಿಂಡಿ !!4!!


ಟಿಪ್ಪಣೆ: ಸೋನು ಮತ್ತು ಚೊಟು (ಅನುಶ್ರೀ ಮತ್ತು ತನುಶ್ರೀ) ನನ್ನ ಹೆಂಡತಿಯ ಅಕ್ಕನ ಅವಳಿ ಮಕ್ಕಳು

Tuesday, August 31, 2010

ಗೌರಿ ಎಂದರೆ!!

ಗೌರಿ ಎಂದರೆ ಗೌರಿ,
ಗೌರಿ ಎಂದರೆ ಜಗತ್ತಿಗೆ ಕೈ ಮುರಿದುಕೊಂಡು ಬಂದ ಕೂಸು,
ಗೌರಿ ಎಂದರೆ ಅವರಪ್ಪನ ಮುದ್ದಿನ ಅಪ್ಪಿ,
ಗೌರಿ ಎಂದರೆ ಅವರ ಅಮ್ಮನ ಗೌರಾ,
ಗೌರಿ ಎಂದರೆ ಅವರಕ್ಕನ ಮುದ್ದಿನ ಚುನ್ನಿ,
ಗೌರಿ ಎಂದರೆ ಲೊಟ್ಟೆ ಹೊಡೆದು ಪು೦ಡಿ ಪಲ್ಯೆ ತಿನ್ನೋ ಹುಡಗಿ,
ಗೌರಿ ಎಂದರೆ ನನ್ನ ಮುದ್ದಿನ ಹೆಂಡತಿ,
ಗೌರಿ ಎಂದರೆ ನನ್ನ ಮಗುವಿನ ತಾಯಿಯಾಗವಳು,
ಗೌರಿ ಎಂದರೇ ತುಂಬಾ tension ತಗೊಳ್ಳೊ party,
ಗೌರಿ ಎಂದರೇ ಯಾವದೋ ಹಳೇ ಹಾಡಿಗೆ ನಲಿಡಾಡೋ ನವಿಲು,
೨ ಅಂಕಗಳಿಂದ S.S.L.C rank ತಪ್ಪಿದ ಅಡ್ರಷ್ಟವಂತೆ,
ಗೌರಿ ಎಂದರೆ ಎಲ್ಲಾದಕ್ಕೂ ಪಪ್ಪ ಮತ್ತು ಅಕ್ಕನ ಮಾತನ್ನು ಪರಿಪಾಲಿಸುವ ಬಾಲೆ,
ಗೌರಿ ಎಂದರೆ ,ಮುಖ ತುಂಬಾ ನಗುವನ್ನು ಹರಡೊ ಸೊಗಸುಗಾರ್ತಿ,
ಗೌರಿ ಎಂದರೆ ,ಅವರ ಪಪ್ಪನ ಎಲ್ಲಾದಕ್ಕೂ ತೆಲೆ ತಿನ್ನೋ ಮಗಳು,
ಯಾವತ್ತೂ ಏನಾದರೂ ತಪ್ಪಾಗಿದ್ದರೆ ತಕ್ಷಣ ಕ್ಷೆಮೆ ಕೇಳೊ ಪೋರಿ,
ಎಲ್ಲಾದರಲ್ಲೂ ಪ್ರಶ್ನೆ ಕೇಳೋ ಚೊರಿ,
ಪ್ರೀತಿಯ ಮಾವ್ಯರ ಸೊಸೆ,ಪುಟು ಪುಟು ಈಜಾಡುವ ಗೋರಿ,
ರಾತ್ರಿ ತಡ ಹೊತ್ತಿನವರಿಗೆ ಹರಟೆಯಲ್ಲಿ ಸೊಲದ ಹುಡಗಿ,
ಅತ್ತೆಯ ಮಾತನ್ನು ಪರಿಪಾಲಿಸುವ ಸೊಸೆ,
ಬೇರೆಯವರ ಕಷ್ಟ -ಸುಖ ಕೇಳೊ ತಾಳ್ಮೆ ಇರೋ ಬೆಡಗಿ,


ಸದ್ಯ ಗೌರಿ ತಾಯಿಯಾಗೋದಕ್ಕೆ ಕಾಯುತ್ತಿರುವ ,

ಗೌರಿ ಗಂಡ
ಮಹಾ0ತೇಶ

(ಜಯಂತ ಕಾಯ್ಕಿಣಿಯವರ ಶಬ್ದ ತೀರದ ಅಂಕೋಲೆ ಎಂಬ ಲೇಖನದಿಂದ ಪ್ರೇರಿತ)

Monday, May 18, 2009

ನನ್ನವಳು

ಜಿಪುಣ ನನ್ನ ಹುಡಗಿ
ಗೌರಿ ಎಂಬ ಬೆಡಗಿ
ಓದುವ ಹುಚ್ಚಿರುವ ಕುಡಮಿ
ನನ್ನ ಹ್ಱದಯದ ಓಡತಿ

ಮಾತಿಗೊಮ್ಮೆ ನಗುವ ಸರಸಿ
ಬಂದಳು ನನ್ನ ಬಾಳಲಿ ಅರಸಿ
ಬರುವಳು ಮನೆಗೆ ಲಕುಮಿ
ತರುವಳು ಹರುಷವ ಸೊಗಸಿ

Sunday, December 02, 2007

ಸಾಪ್ಟವೇರ್ ಇಂಜಿನೀಯರನ ಕಥೆ-ವ್ಯಥೆ.

ದೆವ್ವದಂತೆ ಬೀಕರವಾಗಿ ನಿಂತಿರುವ ಬಹುಮಹಡಿ ಕಟ್ಟಡ,ಒಳಗಡೆ ಕೇಳಿಬರುತ್ತಿರುವ ಕಂಪ್ಯೂಟರನ ಕೀ-ಬೋರ್ಡನ ಸದ್ದು,ಹೊರಗಡೆ ಇರುವೆ ಸಾಲುಗಳಂತೆ ನಿಂತಿರುವ ಕಂಪನಿಯ ಕ್ಯಾಬುಗಳು,ಹದ್ದಿನ ಕಣ್ಣಿನಂತೆ ಟ್ಯಾಗುಗಳನ್ನು ವಿಕ್ಷಿಸಿಸುತ್ತಿರುವ ಸೆಕ್ಯುರೇಟಿ ಗಾರ್ಡುಗಳು ಮತ್ತು ರೆಸೆಪಿನಿಸ್ಟಗಳು, ಕಾಫಿ-ಬ್ರೇಕ್ ಏರಿಯದಲ್ಲಿ ಮೀನಿನ ಮಾರ್ಕೆಟನಂತೆ ಕೇಳಿಬರುತ್ತಿರುವ ಗದ್ದಲಗಳು,ಹರಟೆಗಳು,ಮೀಟಿಂಗ-ರೂಮನಲ್ಲಿ ನಡೆಯುತ್ತಿರುವ ಸತ್ವಹೀನ ಮೀಟಿಂಗಳೆಲ್ಲವೂ ಸೇರಿ ಒಂದು ಬಹುರಾಷ್ಟೀಯ ಕಂಪನಿಯ(MNC)ಚಿತ್ರಣವನ್ನು ಕಟ್ಟಿಕೊಡುತ್ತವೆ.ಇಂತಹ ಒಂದು ಬೆಂಗಳೂರಿನ ಕಂಪನಿಯಲ್ಲಿ ತುಂಬ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ರಾಹುಲ ಮದ್ಯಾಹ್ನವಿರುವ ತನ್ನ ಅಪ್ರೈಸಲಗಾಗಿ ಕಾತುರದಿಂದ ಕಾಯುತ್ತ ಯೊಚನೆ ಮಾಡುತ್ತಿದ್ದಾನೆ. ವರ್ಷಕ್ಕೆ ಎರಡು ಸಾರಿ ಬರುವ ಈ ಅಪ್ರೈಸಲಗಾಗಿ ಬಹುತೇಕ ಎಲ್ಲರೂ ಶಬರಿ ರಾಮನಿಗೆ ಕಾಯ್ದಂತೆ ಕಾಯುತ್ತಾರೆ ಎನ್ನುವ ಸಂಗತಿ ಈತನಿಗೂ ಸಹ ಗೊತ್ತು.
ಕಳೆದ ೫ ವರ್ಷಗಳಿಂದ ಸಾಪ್ಟವೇರನಲ್ಲಿರುವ ರಾಹುಲನಿಗೆ ,ಉಳ್ಳವರಿಗೆ ಇನ್ನುಷ್ಟನ್ನು ನೀಡುವ ಮ್ಯಾನೆಜುಮೆಂಟು,ಒಂದು ವರ್ಷದ ಕೆಲಸವನ್ನು ಅರ್ಧ ಘಂಟೆಯಲ್ಲಿ ಪರಾಮರ್ಶಿಸುವ ಮ್ಯಾನೇಜರ್ರು ,ಎಲ್ಲಾ ಒಂದು ತರದಲ್ಲಿ ಅರ್ಥಹೀನ ಎಂಬ ಸಣ್ಣ ಸಂಶಯದ ಸುಳಿಯೊಂದು ಮನದಲ್ಲಿ ಬಂದು ಮಾಯವಾಯಿತು.ಮೀಟಿಂಗನಲ್ಲಿ ಪ್ರತಿ ಸರ್ತಿ ಹೇಳುವಂತೆ "You have done good job,you need to improve,their is scope of improvement" ಎನ್ನುವ ಗಿಣಿಪಾಠಕ್ಕೆ ನಾನೇನು ಹೇಳಲಿ? ಎಂಬುದನ್ನು ಚಿಂತಿಸುತ್ತ, ರಾಹುಲ ತನ್ನ ಕಂಪನಿಯ ಬಗ್ಗೆ ,ಸಾಪ್ಟವೇರ ಇಂಡಸ್ಟ್ರಿಯ ಬಗ್ಗೆ ದೀರ್ಘವಾಗಿ ಯೋಚಿಸತೊಡಗಿದ.
"ನೀನೇನು ಬಿಡಪ್ಪ, ಸಾಪ್ಟವೇರನಲ್ಲಿ ಇದ್ದಿಯ,ಕೈತುಂಬ ಸಂಬಳ,ಆಫೀಸ ತುಂಬ ಹುಡಿಗಿಯರು, ನೀನಗೇನು ಚಿಂತೆ" ಎನ್ನುವ ಜನಗಳಿಗೆ ,ನಾನು ಆಫೀಸನಲ್ಲಿ ಕ್ಲೈಂಟ ಕಾಲನಲ್ಲಿ ಉತ್ತರಿಸಲು ಒದ್ದಾಡುವದು,ಮುಗಿಯಲಾರದ ಡೆಡ್-ಲೈನಗಾಗಿ ಕೆಲಸ ಮಾಡುತ್ತ ನಾನೇ ಡೆಡ್ ಆಗ್ತಾ ಇರೋದು,ಬೆಳಿಗ್ಗೆಯಿಂದ ರಾತ್ರಿವರಗೆ ಒಂದೇ ಕುರ್ಚಿಯಲ್ಲಿ ಕುಳಿತು ,ಸ್ಕ್ರೀನ ನೊಡುತ್ತ ,ದಿನೆ ದಿನೆ ಬೊಜ್ಜು ಬೆಳಿಸಿಕೊಳ್ಳುತ್ತ ,ರಾತ್ರಿ ಉಸ್ಸಪ್ಪ ಎಂದು ಮನಗೆ ಬಂದು ಬೀಳುವದು, ರಾತ್ರಿ ನಿದ್ದೆಯಲ್ಲೂ ಸಹ ಅಫೀಸನ ಕೆಲಸ ಬಗ್ಗೆ ಕನಸುಗಳು, ಮತ್ತೆ ಮರುದಿನ ಅದೇ ದಿನಚರಿ,ಯಾರೋ ಶಾಸನ ಬರೆದಿಟ್ಟ ಹಾಗೆ! ಹೀಗೆ ಹಣದ ಹಿಂದೆ ಬಿದ್ದು ಜೀವನವನ್ನು ಪೂರ್ತಿಯಾಗಿ ಅನುಭವಿಸದೇ ಇರೊದು, ಜನಗಳಿಗೆ ಅರ್ಥವಾಗುದು ಹೇಗೆ? ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ತಾನೆ?? ಅಫೀಸನಲ್ಲಿ ಯಾರದೊ ಸಿಟ್ಟನ್ನ ಬಹಳ ಜನ ತಮ್ಮ ಹೆಂಡತಿ-ಮಕ್ಕಳ ಮೇಲೋ ,ಇಲ್ಲಾ ತಂದೆ ತಾಯಿಗಳ ಮೇಲೆ ತೋರಿಸಿಕೊಳ್ಳುವದು ಇಲ್ಲಿಯ ಟ್ರೇಡಮಾರ್ಕ್.
Higher managementನಲ್ಲಿ ಅಗುತ್ತಿರುವ ಬದಲಾವಣೆಗಳಿಂದ ಇರುಸು-ಮುರುಸು ಆಗುತ್ತಿರುವ ಕಂಪನಿಯ ಸಹೋದ್ಯೋಗಿಗಳು,ನಾನು ಬದಲಾವಣೆ ಕೇಳಿದರೆ ತಿಪ್ಪೆ ಸಾರುವ ಮ್ಯಾನೆಜಮೆಂಟು, ಮೇಲಿನಿಂದ ಕೆಳಗಿನವರಗೆ Ego problems, team issues,ಹೀಗಾದರೆ ಕೆಳಗಿರುವ ಜನ ಮೇಲಕ್ಕೆ ಬರುವುದು ಹೇಗೆ? "ಮೇಲಿನವರು ಇನ್ನುಸ್ಟು ಮೇಲೆರಿದಂತೆ, ಕೇಳಗಿನವರು ಇನ್ನುಸ್ಟು ಕೇಳಗಿಳಿವವುರು " ಎಂಬ ಹೊಸ ತರ್ಕ ರಾಹುಲನ ಮನದಲ್ಲಿ ಮೂಡತೊಡಗಿತು.ಡಾಲರ್ ಬೆಲೆ ಕುಸಿದರೆ ಭಯಬೀಳುವ ಈಲ್ಲಿಯ ಜನ,ರೂಪಾಯಿಯ ಬೆಲೆ ಬಲಗೊಂಡಂತೆ,ನಮ್ಮ ದೇಶದ ಹಣಕಾಸು ಸ್ಥಿತಿ ಉತ್ತಮಗೊಂಡಿದೆ ಎನ್ನುವದರ ಬಗ್ಗೆ ಹೆಮ್ಮೆ ಪಡುವದರ ಬದಲು ,ನಾಳಿನ ಭವಿಷ್ಯದ ಬಗ್ಗೆ ಅತಂಕಪಡುವ ಇಲ್ಲಿಯ ಕೆಲವು ಜನಗಳು ಚಿತ್ರ ಮೂಡಿಬಂತು.ಬ್ರಿಟಿಷರ ರಾಜಕೀಯ ಗುಲಾಮಗಿರಿಂದ ,ನಾವೆಲ್ಲ ಅಮೆರಿಕನ್ನರ ಅರ್ಥಿಕ ಗುಲಾಮರಾಗುತ್ತಿದ್ದೆವೆ ಎಂಬ ಭಾವನೆ ತೀವ್ರವಾಗತೊಡಗಿತು. ಹಾಗೆ ಮೊನ್ನೆ ಡಾಲರ ಬೆಲೆ ನಲವತ್ತಿಕ್ಕಿಂತ ಕೆಳಗೆ ಕುಸಿದಾಗ, ಸಹೋದ್ಯೊಗಿ ನೀಡಿದ ಹೇಳಿಕೆ " ಅಮೆರಿಕ್ಕನ್ನರು ಮತ್ತು ಅವರ Ecomony ಚೆನ್ನಾಗಿದ್ದರೆ ಮಾತ್ರ ನಾವು ನೆಮ್ಮದಿಯಾಗಿರಲು ಸಾದ್ಯ " ಎನ್ನುದು ಎಷ್ಟು ಸರಿ ? ತಪ್ಪು ? ಅನ್ನೊದನ್ನ ರಾಹುಲನ ಮನಸ್ಸು ಯೊಚಿಸತೊಡಗಿತು.ಎಲ್ಲಾ ಜಾಗತಿಕರಣದ ಮಾಯೆ.ಒಂದು 30X40ಸೈಟ ಕೊಂಡು,ಒಂದು ಮನೆ ಕಟ್ಟಿಸಿ, ಸಾಯೋವರಗೆ EMI ಕಟ್ಟುತ್ತ ತಂಮ ಜೇವನದ ಸಾರ್ಥಕತೆ ಕಂಡುಕೊಂಡಿರುವ ಸಹೋದ್ಯೋಗಿಗಳಂತೆ ನಾನು ಆಗಬೇಕಂದರೆ ಈಸಲ ಒಳ್ಳೆ ರೇಟಿಂಗ ಮತ್ತು ಪ್ರಮೋಶನಗಾಗಿ ಪ್ರಯತ್ನಿಸಬೇಕು, ಆದರೆ ಇಲ್ಲಿ ಹೊಸದಾಗಿ ಬಂದವರಿಗೆ ಮಣೆ ಹಾಕುತ್ತ ,ಹಳಬರನ್ನು ಕಡೆಗಣಿಸುತ್ತ ,ನಾವು ಕೊಟ್ಟಿದನ್ನು ತಗೊಂಡು ಮುಚ್ಚಕೊಂಡು ಇರು ಅನ್ನೊ ಈ ಕಂಪನಿಯಲ್ಲಿ ನನ್ನಾಸೆ ಕೈಗೂಡುವಂತಿಲ್ಲ ಎನಿಸಿ,ಬೇರೆ ಕಂಪನಿಗೆ ಹೊಸಬನಾಗಿ ಹೋಗಿ,ಹೆಚ್ಚು ಹಣ, ಅಧಿಕಾರ ಪಡೆಯಿಲೆ? ಅನ್ನುವ ಜಿಜ್ಘಾಸೆ ಶುರುವಾಯಿತು.ಬುದ್ದನಂತೆ " ಆಸೆಯೆ ದು:ಖಕ್ಕೆ ಮೂಲ" ಎಂಬ ನುಡಿಯನ್ನು ಅನುಸರಿಸಿ ನಿರ್ಲಿಪ್ತವಾಗಿರೋಣ ಎನ್ನುವದಕ್ಕೆ ಮನಸ್ಸು ಒಪ್ಪಲಿಲ್ಲ.
ಸಾಫ್ಟವೇರ ಬಂದದ್ದರಿಂದಲೇ, ಬೆಂಗಳೂರಿನ ರಿಯಲ ಎಸ್ಟೇಟ, ಮಧ್ಯಮ ವರ್ಗದ ಜನರಿಗೆ ಗಗನಕುಸುಮವಾಯಿತು ಎನ್ನುವ ಯೊಚನೆಯಿಂದ ಹಿಡಿದು ನಾನು ಸಾಫ್ಟವರನಲ್ಲಿ ಇರದಿದ್ದರೆ ಎನು ಮಾಡುತ್ತಿದ್ದೆ? ಮೆಕ್ಯಾನಿಕಲ ಇಂಜಿನಿಯರ ಓದಿದರಿಂದ ಯಾವುದೊ ಕಂಪನಿಯಲ್ಲಿ ಡಿಸೈನ ಅಥವಾ ಪ್ರೊಡಕ್ಷನ ಇಂಜಿನಯರ್ರೊ ,ಇನ್ನೆನೋ ಆಗಿರುತ್ತಿದ್ದೆ.ಯಾರು ಎನೇ ಹೇಳಲಿ ಸಾಫ್ಟವೇರ ಇಂಡಿಸ್ಟ್ರಿಯಿಂದ ಸಾವಿರಾರು ಜನಗಳ ಜೀವನ ಪಾವನವಾಗಿರೊದು ಸುಳ್ಳಲ್ಲ,ಎಷ್ಟೊ ಜನರಿಗೆ ನೇರ ಪರೋಕ್ಷ ಉದ್ಯೋಗಗಳನ್ನು ಕಲ್ಪಿಸಿರುವ ಸಾಫ್ಟವೇರನ್ನು ತೆಗಳುವುದು ಎಷ್ಟು ಅರ್ಥಪೂರ್ಣ? ನಿರೋದ್ಯೊಗ ಸಮಸ್ಯೆಯನ್ನು ನಮ್ಮ ಘನ ಭಾರತ ಸರ್ಕಾರ ಕಳೆದ ೬೦ ವರ್ಷಗಳಲ್ಲಿ ,ಎಷ್ಟು ಪರಿಹರಿಸಿದೆ ? ಅದಕ್ಕಿಂತ ಹೆಚ್ಚು ಜಾಬ್ಸಗಳನ್ನ ಸಾಫ್ಟವೇರ ಕಂಪನಿಗಳು ನೀಡಿವೆ.ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಬ್ರಷ್ಟಾಚರ ,ಲಂಚಗುಳಿತನವಿಲ್ಲ,ಗುಂಪುಗಾರಿಕೆವಿದ್ದರೂ ಸಹ ಪ್ರತಿಭೆಯೊಂದೇ ಮೂಲವಾಗಿ ಬೇಕಾಗಿರುವದು ಎಂಬ ಇತ್ಯಾದಿ ಯೊಚನೆಗಳು ಮನದಲ್ಲಿ ಬಂದು ,ಗೀತೆಯ ಉಪದೇಶದಂತೆ "ಕರ್ಮ ಮಾಡು ಫಲ ಮಾತ್ರ ನಿರಕ್ಷೀಸಬೇಡ" ಎಂದುದನ್ನ ಅನುಷ್ಠಾನಕ್ಕೆ ಇಲ್ಲಿಯೂ ತರಬೇಕಂದು ನಿರಾಳಾಗಿ ತನ್ನ ಕೆಲಸದಲ್ಲಿ ಗಮನಹರಿಸಿದ.

Monday, October 01, 2007

ಬೇಲೂರಿನ ಚನ್ನಕೇಶವ ದೇವಾಲಯ


ಮೊನ್ನೆ ಪ್ರವಾಸದಲ್ಲಿ, ಬೇಲೂರಿನ ಚನ್ನಕೇಶವ ದೇವಾಲಯ ಗೆಳಯ ಶಿವನ ಕ್ಯಾಮರಾ ಕಣ್ಣಿಗೆ ಬಿದ್ದದ್ದು ಹೀಗೆ......

Tuesday, July 03, 2007

ಜೋಕರ...ಬ್ರೋಕರ....ಬ‌ಕ‌ರಾ

ಮೊನ್ನೆ ಪೇಪರನಲ್ಲಿ ಮಾಜಿ ನಿದಾನಿಗಳ ಉವಾಚ "ಕಾ0ಗ್ರೇಸ್ಸಿನ ನಾಯಕರೆಲ್ಲಾ ಜೋಕರಗಳು " ಅ0ತ ಹೇಳಿ ತಮ್ಮ ಗದ್ಲವನ್ನು ಮು0ದುವರಿಸಿದ್ದಾರೆ. ಸನ್ಮಾನ್ಯರ ಕಣ್ಣು ಕೆಸರಿನ ಕಮಲದಿ0ದ ಮೇಡ0ನ ಹಸ್ತದತ್ತ ಏಕೆ ಹೊರಳಿತು ಅನ್ನೊದೇ ಯಕ್ಷಪ್ರಶ್ನೆ..ಕಳೆದ ಚುನಾವಣೆಯಲ್ಲಿ ಚಲಾಯಿಸಿದ ಮತಗಳಲ್ಲಿ ಕೇವಲ 4%ಕ್ಕಿ0ತ ಸ್ವಲ್ಪ ಮತ ಪಡೆದು ಆಳುತ್ತಿರುವ ಜೆಡಿಎಸ್,ಕರ್ನಾಟಕವೆ0ದರೆ ಕೇವಲ ಹಾಸನ ,ರಾಮನಗರ ಅ0ದುಕೊ0ಡು ಅಲ್ಲಿ ಮಾತ್ರ ಯೋಜನಗಳನ್ನ ಜಾರಿ ಮಾಡ್ತಾ ಇರೋದು ಎಳ್ಳಷ್ಟೂ ಸರಿಯಲ್ಲ.
ಮೇಲಿನ ಹೇಳಿಕೆಗೆ ಕಾ0ಗ್ರೇಸ್ಸ್ ನಾಯಕರ ಜವಾಬು " ಸಿ.ಎಮ್. ಕುಟ0ಬದವರೆಲ್ಲಾ ಲ್ಯಾ0ಡ್ ಬ್ರೋಕರಗಳು"ಬಹುಶ್: ಅದಕ್ಕೆ ಇರಬಹುದು ನಮ್ಮ ಮುಖ್ಯಮ0ತ್ರಿಗಳು ಆಸ್ತಿ ವಿವರ ಸಲ್ಲಿಸಲು ಸಮಯ ಕೇಳಿದ್ದಾರೆ. ಪ್ರಾಯಶ್: ಎಲ್ಲಿಲ್ಲಿ ,ಎಷ್ಟೇಷ್ಟು ಇದೆ (ಅದಿಕ್ಱತ,ಅನಿಧೀಕ್ಱತ) ಅನ್ನೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಇನ್ನು ಕಾ0ಗ್ರೇಸ್ಸ್ ನಾಯಕರಿಗೆ ಮೇಡಮ್ ಹೇಳಿದ್ದೇ ವೇದವಾಕ್ಯ. "ಸೂರ್ಯ ಪಶ್ಛಿಮದಲ್ಲಿ ಹುಟ್ಟತಾನೆ" ಅ0ತ ಮೇಡ0 ಹೇಳಿದ್ದರೇ ಒಪ್ಪೋ ಜನ ಇವರು. ಈಗ‌ ನೋಡಿ ಯಾವೋದೋ ಮೂಲೆಯ‌ಲ್ಲಿದ್ದ ಪ್ರತಿಭಾ ಪಾಟೀಲ‌ರ‌ನ್ನ ತ‌0ದಿದ್ದಾರೆ. ಅದ‌ಕ್ಕೆ ನ‌ಮ್ಮ ಕಾ0ಗ್ರೇಸ್ಸ್ ನಾಯಕರುಕ‌ಮ‌ಕ್ ಕಿಮ‌ಕ್ ಎನ್ನದೇ ಒಪ್ಪಿಕೊ0ಡಿದ್ದಾರೆ. ಅಲ್ಲಿಗೆ ಬ‌ಲ‌ಹ‌ಸ್ತದ‌ಲ್ಲಿ ಪ್ರಧಾನಿಯ‌ವ‌ರ‌ನ್ನ ಎಡ‌ಹ‌ಸ್ತದ‌ಲ್ಲಿ ರಾಷ್ಟ್ರಪ‌ತಿಯ‌ವ‌ರ‌ನ್ನ ಕುಣಿಸ‌ಬ‌ಹುದು. ಮೇಲಿನ ಎರಡು ಹೇಳಿಕೆಗೆ ಪೂರ‌ಕ‌ವಾದ‌ ಹೇಳಿಕೆ "ನಿಮ್ಮನ್ನ ಓಟು ಕೊಟ್ಟು ಅರಿಸಿತ‌0ದ‌ ಮ‌ತ‌ದಾರ‌ರು ಬ‌ಕ‌ರಾಗಳು".ಅಲ್ಲಿಗೇ,

ಕಾ0ಗ್ರೇಸ್ಸಿನ ನಾಯಕರೆಲ್ಲಾ ಜೋಕರಗಳು
ಸಿ.ಎಮ್. ಕುಟ0ಬದವರೆಲ್ಲಾ ಲ್ಯಾ0ಡ್ ಬ್ರೋಕರಗಳು
ಓಟು ಕೊಟ್ಟು ಅರಿಸಿತ‌0ದ‌ ಮ‌ತ‌ದಾರ‌ರು ಬ‌ಕ‌ರಾಗಳು

Wednesday, June 13, 2007

ಅವರಣದ ಚರ್ಚೆ

Newspaper ನೋಡಿ, ಅವರಣ ಕೃತಿಯ ಬಗ್ಗೆ ಏನಾದರೂ ಇದ್ದೇ ಇರುತ್ತೆ. TV on ಮಾಡಿ ಅಲ್ಲೂ ಕೂಡಾ ಅದರ ಬಗ್ಗೆ ಚರ್ಚೆ.ಸಪ್ನ bookstall ಇತ್ತಿಚಿಗೆ ಸುಮಾರು 2000 ಪ್ರತಿಗಳಿಗೆ Order ಮಾಡಿದೆ ಅನ್ನೋ ಸುದ್ದಿ,ಹತ್ತನೆ ಮುದ್ರಣ ಈ ಕೃತಿಯ ಜನಪ್ರಿಯತೆಯನ್ನು ತೋರಿಸುತ್ತದೆ.ಏನೇ ಅನ್ನಿ ಮೂರ್ತಿಗಳು ಪರೋಕ್ಷವಾಗಿ ಈ ಜನಪ್ರಿಯತೆಯೇಗೆ ಸಾಕ್ಷಿ. ಕನ್ನಡ ಸಾಹಿತ್ಯ ಜಗತ್ತು 'ಅವರಣ ಮಾಯಾ'ವಾಗಿಬಿಟ್ಟಿದೆ. ಗೆಳೆಯ ಪ್ರಸನ್ನ ಕಳಿಸಿರುವ ಸಾಲುಗಳು,

"ಒಂದು ಕೃತಿ ನಮ್ಮ ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಹೋಗಳುವ ನಾವು , ಮತ್ತೊಂದು ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಈ ಭಾವನೆ ಏಕೆ ? ಆವರಣ ಕಾದಂಬರಿ ಓದುಗನಿಗೆ , ನಮಗೆ ಗೊತ್ತಿರದ ಎಷ್ಟೋ ಹೊಸ ವಿಷಯ ತೆರೆದು ಇಡುತ್ತೆ. ಈ ಕೃತಿ ಯಲ್ಲಿ ಬರುವ ವಿಷಯದ ಸತ್ಯ ಅಸತ್ಯ ಚರ್ಚೆ ಮಾಡಲು ತೊಡಗದೆ ನಿಂದನೆ ಮಾಡುವುದು ಎಷ್ಟು ಸರಿ. ಆವರಣ ಕಾದಂಬರಿಯಲ್ಲಿ ಯಾವ ಸತ್ಯ ಇಲ್ಲವೇ ? ಬರಿ ಊಹೆ, ಕಲ್ಪನೆ ಕಾದಂಬರಿಗಳ ಜೊತೆ ಅಂಕಿ ಅಂಶ ಇರುವ ಕಾದಂಬರಿ ಬರೆಯುವ ಬಗೆ ತಪ್ಪೇ. ಈ ತೀರ್ಮಾನ ಕೊಡುವರು ಯಾರು ? ಆವರಣಾವನ್ನು ಒಬ್ಬ ಅನಾಮಿಕ ಬರೆದಿರುವ ಕೃತಿ ಎಂದು ಓದಿ ಅದರ ಚರ್ಚೆ ಮಾಡಿ ನಂತರ ಲೇಖಕನನ್ನು ಸಂವಾದಕ್ಕೆ ಕರೆದು ಚರ್ಚೆ ಮಾಡಲಿ . ಇದಕ್ಕೆ ಮೂರ್ತಿ , ಬೈರಪ್ಪ ನವರು ಸಿದ್ದವ್ವೇ ???"

ನೀವು ಏನಂತೀರಾ???

Sunday, April 29, 2007

ಚಪ್ಪಲಿಯ ಪ್ರಹಸನ

(ಹಿನ್ನಲೆ:ನಾನು, ಮೈಸೂರಿನವರಾದ ಗಿರಿ ಅವಿನಾಶ ಮತ್ತು ಗುರಂಗಾವದ ರಿಷಿ ಜೊತೆ ಮೈಸೂರ ಸುತ್ತಾಡುತ್ತಾ ಇದ್ದೆವು. ಮೈಸೂರ ಅರಮನೆ ಅವರಣದಲ್ಲಿರುವ ಚಪ್ಪಲಿ ಸ್ಟ್ಯಾಂಡಿನ ಸ್ಠಳ... ಅರಮನೆ ಒಳಭಾಗವೆಲ್ಲಾ ನೋಡಿ ಈ ಸ್ಥಳಕ್ಕೆ ಬಂದೆವು.)

'ಎಲ್ಲಯ್ಯಾ ನನ್ನ ಚಪ್ಪಲಿ? ನಾವು ನಾಲ್ಕು ಜೊತೆ ಚಪ್ಪಲಿಗೆ ಟೊಕನ್ ತಗೊಂಡಿದ್ವಿ.ಈಗ ನೋಡಿದರೇ ಮೂರು ಜೊತೆ ವಾಪಸ್ಸು ಕೊಡ್ತಾ ಇದೀಯಾ.ಇಲ್ಲಿ ಯಾಕೆ ಕೆಲ್ಸಾ ಮಾಡ್ತಾ ಇದೀಯಾ?' ಅಂತ ಅವಿನಾಶ ಚಪ್ಪಲಿ ಕಾಯುವವನ ಜೊತೆ ವಾದ ಮಾಡ್ತಾ ಇದ್ದ.ಚಪ್ಪಲಿ ಕಾಯುವವನ 'ಸೋಮಿ, ನಿಮ್ಮ ಕಾಲು ಹಿಡಕೋತಿನಿ, ಹೆಂಗಾರ ಅಡ್ಜುಸ್ಟ್ ಮಾಡಿಕೊಳ್ಳಿ' 'ಅಡ್ಜುಸ್ಟ್ ಹೇಗೆ ಮಾಡಕೊಳ್ಳೊದು? ನೀ ಇರ್‍ಓದೇ ಯಾಕೆ ಇಲ್ಲಿ? ನಿನಗೆ ಕಾಸು ಕೊಡದು ಚಪ್ಪಲಿ ಕಾಯೊಕೆ ತಾನೆ? ನಾಲ್ಕು ಜೊತೆಯಲ್ಲಿ ಕಾಸ್ಟ್ಲಿಯಿರೋ ನಂದೇ ಚಪ್ಪಲಿ ಯಾಕೆ ಕಳಿಬೇಕು...ಕಳದರೇ ಎಲ್ಲಾ ಜೊತೆ ಕಳಿಬೇಕು' 'ಇಲ್ಲೇ ಮೇಲಿನ ಸಾಲಿನಲ್ಲಿ ಇಟ್ಟಿದ್ದೆ. ಯಾರೋ ಹುಡಗರು ಎತ್ಕೊಂಡು ಹೋದ್ರು....'
ಅವಿನಾಶ ಒಳಗಡೆ ಹೋಗಿ ಚಪ್ಪಲಿಗಳ ಸಾಗರದಲ್ಲಿ ತನ್ನ ಚಪ್ಪಲಿ ಹುಡಕಲು ಶುರು ಮಾಡಿದ... ಜೊತಗೆ ಇದ್ದ ನಾವು ಅವನಿಗೆ ಸಹಾಯ ಮಾಡತೊಡಗಿದೆವು. ನನಗೆ ಮತ್ತು ಗಿರಿಗೆ ಚಪ್ಪಲಿ ಮಾತ್ರ ಕದ್ದೊದಿದಾರೆ ಅಂತ ಖಂಡಿತವಾಗಿ ಅನಿಸತೊಡಗಿತು.ಇದೇ ಸಮಯದಲ್ಲಿ ಒಂದು ಅಂಧ್ರದ ಗ್ಯಾಂಗು ತಮ್ಮ ಎರಡು ಜೊತೆ ನೈಕೆ ಶೊಸ್ ಕಾಣ್ತಾ ಇಲ್ಲಾ ಅಂತ ಹುಡಕಲು ಶುರು ಮಾಡಿದಾಗ,ಅವಿ ಅವರ ಜೊತೆ ಸೇರಿ ಮತ್ತೆ ಗಲಾಟೆ ಶುರು ಮಾಡಿದ.ಆಗ ಅಲ್ಲಿದ್ದ ಒಬ್ಬ ಖಾಕಿ ಮೀಸೆ ಬಂದು 'ಗಲಾಟೆ ಯಾಕೆ? ' ಅಂದದೇ ತಡ,ಚಪ್ಪಲಿ ಕಳೆದುಕೊಂಡು ಸಿಟ್ಟಿನಲ್ಲಿ ಇದ್ದ ಅವಿ,'ಇಲ್ಲೇನು ನೀವು ಅಲ್ಲಾಡಸಕೊಂಡು ಡ್ಯೂಟಿ ಮಾಡ್ತಾ ಇರೋದು? ಅಂತ ಮರ್ಮಕ್ಕೆ ತಾಗುವಂತೆ ಮಾತಾಡಿ,'ನಾನು ಬೇರೆಯವರ ಚಪ್ಪಲಿ ಎತ್ಕೋಂಡು ಹೋಗತೀನಿ.' ಮೀಸೆ,'ಆದೇಗೆ ಎತ್ಕೋಂಡು ಹೊಯಿತೀಯಾ? ನೀನು ಯಾರು?,ಎತ್ತ ಅಂತ?' ಕುಲಗೋತ್ರ ವಿಚಾರಿಸೋಕೆ ಬಂದ. ಅದಕ್ಕೆ ಸೊಪ್ಪು ಅವಿ ಸೊಪ್ಪು ಹಾಕದೇ ನಾನು ಮೈಸೂರಿನವನೇ ಅಂತ ಗುರುಗುಟ್ಟಿ ಗಲಾಟೆ ಮುಂದುವರಿಸಿದ. 'ಇಲ್ಲಿ ಗಲಾಟೆ ಮಾಡಬೇಡಿ.ನಮ್ಮ ಸಾರ್ ಹತ್ರ ಕರೆದುಕೊಂಡು ಹೋಗತಿನಿ, ಅಲ್ಲಿ ಕಂಪ್ಲೇಂಟ ಕೊಡಿ' ಅಂತ ಮೀಸೆ ಹೇಳಿ ಅಲ್ಲಿಗೆ ಕರೆದುಕೊಂಡು ಹೊದಾಗ, ಆ ಮೀಸೆಯ ಸಾರ್, ಅರಮನೆ ಕಚೇರಿಯಲ್ಲಿ ದೂರು ಕೊಡಿ, ಅವರು ಆ ಕೆಲಸದವನನ್ನ ವಿಚಾರಿಸಿಕೊಳ್ಳತಾರೆ ಅಂತ ನಮ್ಮನೆಲ್ಲಾ ಸಾಗಹಾಕಿದ. ಕಚೇರಿಯಲ್ಲಿ ಅಂಧ್ರದ ಗ್ಯಾಂಗನಲ್ಲಿರುವ ಅಮ್ಮಾಯಿ ಅಲ್ಲಿರುವ ಅಫೀಸಿರ್ ಜೊತೆ ಸಿಕ್ಕಾಪಟ್ಟೆ ವಾದ ಮಾಡಿ ಅವಿನಾಶಗೆ ಪೈಪೋಟಿ ಕೊಟ್ಟಳು. ಅಧಿಕಾರಿ ಆ ಕೆಲಸಗಾರನನ್ನು ಕರೆಸಿ, 'ನಿನ್ನನ್ನು ಡಿಸಮಿಸ್ ಮಾಡಿಸಿತೀನಿ,ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಿದರೂ ಮತ್ತೆ ಇಲ್ಲೆ ಬಂದು ಸೇರಿ ನನ್ನ ಪ್ರಾಣ ಇಂತೀರಾ. ಸರಿಯಾಗಿ ಕೆಲ್ಸ ಮಾಡೋಕೆ ಬರೊಲ್ವಾ? ಕೌಂಟರನಲ್ಲಿ ಕತ್ತೆ ಕಾಯಿತಾ ಇರತಿಯಾ? ಬೊ.... ಮಗನೇ' ಅಂತಾ ತನ್ನ ಬಿ.ಪಿ. ಬೇರೆ ರೈಸ್ ಮಾಡ್ಕೋಂಡ ಉಗಿತ ಮುಂದುವರಿಸಿದ. ಇದೇ ಸಮಯದಲ್ಲಿ ಈ ಪ್ರಹಸನಕ್ಕೆ ಮಂಗಳೂರಿನ ಕಡೆ ಮಾಣಿ ಎಂಟ್ರಿ ಕೊಟ್ಟು,'ಎಂಥ ಮಾರಾಯ,ಎಂಥ ಕೆಲಸ ಅಗೊಹೊಯಿತು,ಶೂಸ್ ತಕ್ಕೊಂಡು ೨ ವಾರ ಬೇರೆ ಅಗಿರಲಿಲ್ಲ...ಕದ್ದುಕೊಂಡು ಹೋಗಿದ್ದಾರೆ,ಇವರದೇಲ್ಲಾ ಇಲ್ಲೊಂದು ಗ್ಯಾಂಗು ಇದೆ,ಇದೇನು ಅರಮನೆ ಅವರಣವಾ? ಇಲ್ಲಾ ಕಳ್ಳರ ಮನೇನಾ? ಬರೆಗಾಲಲ್ಲಿ ನಡೆಯುಂತೆ ಅಯಿತಲ್ಲಾ' ಅಂತ ಒಂದೇ ಸಮನೆ ಪಿರಿಪಿರಿಯಾಗಿ ಅಧಿಕಾರಿಗೆ ಹೇಳತೊಡಗಿದ. ನಾವೆಲ್ಲ ಸೇರಿದರಿಂದ ಅಧಿಕಾರಿ ಕೊಣೆ ತುಂಬಿ ಹೋಗಿ,ಅಧಿಕಾರಿ ಆ ಕೆಲಸದವನಿಗೆ 'ನಿನ್ನ ೨ ವರ್ಷದ ಸಂಬ್ಳ ಕಟ್ ಮಾಡಿದ್ರು ಆ ಕಾಸು ಗಿಟ್ಟೊಲ್ಲಾ, ಯಾರಿಗೆ ಕೊಟ್ಟಿದೀಯಾ ಹೇಳು'ಅಂದಾಗ ಆತ ಕಪ್ಪೆ ವಟಗುಟ್ಟುವಂತೆ ' ಯಾರ್ರೊ ಹುಡಗರು ಎತ್ತ್ಕೊಂಡರು,ಎನೋ ಅಗಿಬಿಟ್ಟಿತ್ತು 'ಎಂದು ಹಳೇ ಪ್ಲೇಟ ಹಾಕತೊಡಗಿದ. ಹಿಂದಿನ ದಿನ ಜಾತ್ರೆಯ ಕಾರಣದಿಂದ ಮೇಲುಕೋಟಯ ಚಲುವನರಸಿಂಹ ದರ್ಶನವಾಗದ ಹತಾಶೆ,ಬಲಮುರಿಯಲ್ಲಿ ಅಟ್-ಲಿಸ್ಟ ಈಜು ಮಾಡಲು ಇರದಷ್ಟು ಇಲ್ಲದ ನೀರಿನ ಮೇಲಿನ ತಾಪ, ಕೆಅರ್ ಎಸ್ ಗೆ ಕಳೆದ ೫೧ ದಿನಗಳಿಂದ ಬಂದ್ ಮಾಡಿದ ಕೋಪ,ಎಲ್ಲ ಸೆರಿ ಅವಿಗೆ ಪಿತ್ತ ನೆತ್ತಿಗೆ ಏರಿ, 'ಮಗನೇ,ಸಾವಿರಾರು ರೂಪಾಯಿ ಚಪ್ಪಲ್ಲು/ಶೂಸ್ ಮಾತ್ರ ಹೇಗೆ ಕದ್ದುಹೊಯಿತು? ಬಾಕಿ ಎಲ್ಲಾ ಯಾಕೆ ಕಳೇದಿಲ್ಲಾ... ನೀವೆಲ್ಲಾ ಸೇರಿ ಚೊರ-ಬಜಾರನಲ್ಲಿ ಮಾರಿ ಕಾಸು ಮಾಡತಾ ಇದೀರಾ...ನಿನ್ನ ಸುಮ್ನೆ ಬಿಡಬಾರದು' ಅಂತ ಎನೇನು ಸೇರಿಸಿ ಭಾವಗೀತೆಯಂತೆ ಆತನಿಗೆ ಸರಿಯಾಗಿ ಇನ್ನೊಮ್ಮೆ ಉಗಿದ...ಈ ಬಯ್ಗುಳದ ಭಾವಗೀತೆಗೆ ಕೊರಸ್ ಆಗಿ ಆಂದ್ರದ ಅಮ್ಮಾಯಿ ಮತ್ತು ಮಂಗಳೂರಿನ ಮಾಣಿ ಜೊತೆ ಕೊಟ್ಟರು.
ಇಂತಿಪ್ಪ ಘಟನೆಗಳು ನಡೆದ ಮೇಲೆ ,ಅಲ್ಲಿರುವ ಅಧಿಕಾರಿ 'ನೀವೆಲ್ಲಾ ಒಂದು ಅರ್ಜಿ ಬರೆದುಕೊಡಿ,ನಾವು ಅದರೆ ಮೇಲೆ ವಿಚಾರಣೆ ಮಾಡಿ ,ಆತನ ಸಂಬಳದಿಂದ ಕಾಸು ಕಟ್ ಮಾಡಿ ನಿಮಗೆ ಪೊಸ್ಟ್ ಮೂಲಕ ಕಳಿಸಿಕೋಡುತ್ತೆವೆ'ಅಂತ ಹೇಳಿದಾಗ ಆಂದ್ರದ ಅಮ್ಮಾಯಿ "How much time it will take?" ಕೇಳಿದಕ್ಕೆ ಒಂದು ವಾರ ಅಗುತ್ತೆ ಅಂದಾಗ ,ಸರ್ಕಾರಿ ಕೆಲಸ ದೇವರ ಕೆಲಸ...ದೇವರ ಕೆಲಸ ನೈವದ್ಯ ಕೊಟ್ಟು ಮೇಲೂ ಬಸವನಹುಳು ತರಾ ಸಾಗುವದನ್ನ ಕಂಡುದನ್ನ ಕಂಡಿದ್ದ ನನಗೆ ,ಗಿರಿಗೆ ಚಪ್ಪಲಿಯಂತು ಹೋಯಿತು...ಇನ್ನು ನಮ್ಮ ದುರ್ವಾಸಿ ಮುನಿಗಳ ಅಪರಾವತಾರದಂತಿರುವ ಯಾವಗಲಾದರೂ ಬರ್ಲಿ ಅಂತ ಹೊರಗಡೆ ಕಾಯಿತಾ ನಿಂತೆವು...೧೦-೧೫ ಅವಿ ಬಂದು " we should teach him a lesson " ಮುಂದೆ ಬರುವವರಿಗೆ ತೊಂದರೆ ಅನುಭವಿಸಬಾರದು ,ನಮ್ಮ ಮೈಸೂರಿಗೆ ಕೆಟ್ಟ ಹೆಸ್ರು ಬರಬಾರದು' ಅಂತ ಹೇಳಿ ಕಾರಿನತ್ತ ನಡೆಯುತ್ತಾ.. " Mostly ಚಪ್ಪಲಿ ಸ್ಟಾಂಡಿನಲ್ಲಿ ಚಪ್ಪಲಿ ಕಳೆದುಕೊಂಡ ಮೊದಲ ಬಕರಾ ನಾನೇ ಇರಬೇಕು ಅಂತ ಹೇಳಿ ಗಿರಿ ಮನೆಯತ್ತ ಕಾರು ನಡೆಸಿದ... ಕಾರಿನಲ್ಲಿ ಅವಿ " Aisa pehle baar huwa hain 17-18 saalo mein....." ಅಂತ ಗುನಗುನಿಸುತ್ತಾ ಕಾರು ಮನೆಯತ್ತ ಚಲಾಯಿಸಿದ.
ಆವಿ ಇನ್ನುವರಗೆ ತನ್ನ ಚಪ್ಪಲಿಯ ಕಾಸು ಯಾವಗ ಬರುತ್ತೆ ಅಂತ ಕಾಯಿತಿದಾನೆ.

Thursday, April 12, 2007

ಹನಿಗವನಗಳು

ಅರಳು-ಮರಳು

ಅರವತ್ತರ ಅರಳು ಮರಳಿನ ಮೂರ್ತಿ
ಇವರಿಗೇ ಗೊತ್ತಿಲ್ಲವೇ ರಾಷ್ಟ್ರಗೀತೆಯ ಕೀರ್ತಿ ?
ಬೆಳಿಸಿಕೊಳ್ಳಿ ,ನಾಡಿನ ನೆಲ-ಜಲದ ಬಗ್ಗೆ ಪ್ರೀತಿ....


ಗೊಸುಂಬೆಗಳು....

ನಮಗೆಕಪ್ಪಾ ಕಾವೇರಿ ನೀರು
ನಾವು ಕುಡಿಯೋದು ಬೀಸಿಲೇರಿ ನೀರು/ಬೀರು
ಅನ್ನೊ ಗೊಸುಂಬೆಗಳ ನಡುವೆ
ನ್ಯಾಯ ಅನ್ನೊದು ಮರೀಚಿಕೆಯೇ!!!!!!

ಮಳಿ.....

ಎಲ್ಲಿ ಹೋಗಿದಿ ಮಳಿ
ಒಣಗ್ಯಾವ ಹೊಲದಾನ ಬೆಳಿ
ಬತ್ತ್ಯಾವ ಊರಿನ ಹೊಳಿ
ತಪ್ಪ್ಯಾವ ರೈತರ ಜೀವನದ ಹಳಿ
ಅಡು ಭೂತಾಯಿ ಜೊತೆ ಓಕುಳಿ
ಆಗ ನೋಡು ಎಲ್ಲಾರ ಮಕದ್ಯಾಗ ಕಳಿ.....

Sunday, April 08, 2007

ತೇಜಸ್ವಿಯವರಿಗೊಂದು ಭಾವಪೂರ್ಣ ಶ್ರಧ್ದಾಂಜಲಿ........

ಮಾಯಾಲೋಕದ ಕಿಂದರಜೋಗಿ
ಸಹಜಕೃಷಿಯ ಹಠಯೋಗಿ
ನಿಗೂಡ ಜಗತ್ತಿನ ಮಾಯಾವಿ
ನಮ್ಮೆಲ್ಲರ ಪ್ರೀತಿಯ ಸಾರ್ ,ತೇಜಸ್ವಿ

ಅಡು ಮುಟ್ಟದ ಸೊಪ್ಪಿಲ್ಲ
ತೇಜಸ್ವಿ ಬರೆಯದ ವಿಷಯವಿಲ್ಲ
ಪಶ್ಚಿಮ ಘಟ್ಟದಲ್ಲಿ ತಿರುಗದ ಜಾಗವಿಲ್ಲ
ಸಿದ್ದರೀತಿಯ ಮಾದರಿಯಲ್ಲಿ ಬರೆಯಲಿಲ್ಲ

ಹುಚ್ಚು ಹಿಡಿಸಿದ ಕರ್ವಾಲೋ
ನೀವು ಹಿಡಸದಿದ್ದರೆ ನ್ಯಾಸ್ಟಿಪೇಲೋ
ಕೋಲಾಜ್ ಮೂಲಕ ಮಾಯಾಲೋಕ ತೋರಿದ ಚಿತ್ರಗಾರ
ಕಾಡು,ನಾಡಿನ ಹಕ್ಕಿಗಳ ಪರಿಚಯಿಸಿದ ಪೊಟೊಗ್ರಾಪರ

ಏಲಕ್ಕಿಯ ಕಾಳಸಂತೆಯ ಜುಗಾರಿಕ್ರಾಸ್
ತಬರನ ಕತೆ, ಅಬಚೂರಿನ ಪೊಸ್ಟಾಪಿಸ್
ಘಾಟಿಯ ರಗಳೆಯ ಖುದ್ದೂಸ್ ಎಕ್ಸಪ್ರೆಸ್
ಅಣ್ಣನ ನೆನಪಿನಲ್ಲಿ ಹಾಸುಹೊಕ್ಕಾಗಿರುವ ಶಾಮಣ್ಣನ ಬೈಕು ಪ್ರಿನ್ಸ್

ಹಾರುವ ಓತಿ ಬೆನ್ನು ಹತ್ತಿದ ಮಂದಣ್ಣ
ಹಲವಾರು ವೃತ್ತಿ ಮಾಡಿದ ಕರಾಟೆ ಮಂಜಣ್ಣ
ಜೀವದ ಗೆಳಯರಾದ ರಾಮದಾಸ್,ಶಾಮಣ್ಣ
ಎಲ್ಲಾ ಬಿಟ್ಟು ಮೌನವಾಗಿ ಎಲ್ಲಿ ನಡೆದಿರೇಣ್ಣ?

ಮೂಡಿಗೇರೆ ತೋಟವೀಗ ಅಕ್ಷರಶ್:ನಿರುತ್ತರ
ಅಲ್ಲೀಗ ,ಮೌನವಂದೇ ನಿರಂತರ!
ಕುವೆಂಪು,ಕಾರಂತರ ಕಲಾಸಂಗಮವಾಗಿರುವ ಪೂರ್ಣಚಂದಿರ
ತೇಜಸ್ವಿಯವರ ಲೇಖನ,ಕೃತಿಗಳೆಲ್ಲ ಅಜರಾಮರ!

Wednesday, March 28, 2007

ಹೂವಿನ ಘಮ್ಮತ್ತು.....

"ಹೂವಿಲ್ಲದೆ ಬದುಕಿಲ್ಲ. ಹೂ ಅರಳದ ದಿನವಿಲ್ಲ. ಇಡೀ ಭೂಮಂಡಲವನ್ನೇ ಬೇಸೆಗೆ ಆಳುತ್ತಿರುವ ಸಂದರ್ಭದಲ್ಲೂ,ನಾಡನ್ನು ಬರಗಾಲ ಕಾಡುವ ಕ್ಷಣದಲ್ಲೂ ಅದು ಹೇಗೋ ಹೂವು ಅರಳುತ್ತದೆ! ದೇವರ ಸನ್ನಧಿ ಸೇರಿ ಧನ್ಯವಾಗುತ್ತದೆ.ಹೂವಿಲ್ಲದೆ ಯಾವುದಾದರು ಹಬ್ಬ ನಡೆದಿದೆಯೇ ಹೇಳಿ? ಹುಟ್ಟಿದ ಕ್ಷಣ, ಮದುವೆಯಾದ ಸಂದರ್ಭ, ಪ್ರಸ್ತದ ಅಮಲಿನ ವೇಳೆಯಲ್ಲಿ ಮಾತ್ರವಲ್ಲ,ಮನುಷ್ಯನ ಕೊನೆಯುಸಿರು ಎಳೆದ ಘಳಿಗೆಯಲ್ಲೂ ಹೂವು ಜತಗೇ ಇರುತ್ತದೆ".
( ಸುನಂದಾವರ ಬೆಟ್ಟಸಾಲು ಪುಸ್ತಕದಿಂದ)

ನಾವೆಲ್ಲರೂ ಒಂದೇ. ನಮ್ಮದು ಕೂಡು ಕುಟಂಬ.ಯಾವುದೇ ಜಂಜಾಟವಿಲ್ಲ...ಜಗಳವಿಲ್ಲ.. ಮನುಷ್ಯರಂತೆ ಅತ್ಯಾಸೆ ಹೊಂದಿದವರಲ್ಲ.ಅದ್ರೂ ಮನುಷ್ಯರೂ ನಮ್ಮಲ್ಲೇ ಭೇದ-ಬಾವ ಮಾಡಿ ಅವಳು ಮೊದ್ಲು ,ಇವಳು ದ್ವಿತಿಯ ಅಂತಾ ಬಹುಮಾನ ಕೊಡುತ್ತಾರೆ. ನಾವೆಲ್ಲ ಒಂದೊಂದು ಥರಾ ಚೆನ್ನಾಗಿದ್ದೇವೆ.ನಾವೇಲ್ಲಾ ಒಟ್ಟಾಗಿ ಸೇರೊದು ಅಗಸ್ಟ್ ೧೫ ,ಜನವರಿ ೨೬ ರಂದು. ಅ ದಿನ ನಮ್ಮನೆಲ್ಲಾ ಬೇರೆ ಬೇರೆ ಪ್ರದೇಶಗಳಿಂದ ತಂದು ಲಾಲಭಾಗನಲ್ಲಿ ಪ್ರದರ್ಶನಕ್ಕೆ ಇಡುತ್ತಾರೆ. ಆ ದಿನ ನಾವೆಲ್ಲ ಜೊತೆಯಾಗಿದ್ದು ನಮ್ಮ ಕಸ್ಟ-ಸುಖಗಳನ್ನು ಹಂಚಿಕೊಳ್ಳುತ್ತೆವೆ. ಮೊದ್ಲಿನ ದಿನಗಳಲ್ಲಿ ಆ ಎರಡು ಸಂಧರ್ಭಗಳಲ್ಲಿ ಇಲ್ಲಿ ಭಯಂಕರ ರಶ್ಶು..ಇತ್ತಿಚಿನ ದಿನಗಳಲ್ಲಿ ಮೊದ್ಲಿನ ರಶ್ಶು,ಈಗ ಕಾಣೆಯಾಗಿದೆ.
ನಾವೆಂದರೆ ನಾಡಿಮಿಡಿತ,ನಾವೆಂದರ್‍ಎ ಎಂಥದೋ ಒಂದು ತುಡಿತ,ನಾವೆಂದರೆ ಈ ಜೀವ ಪ್ರತೀಕ. ನಾವ್ವೆಂದರೆ ಒಂದು ರೂಪಕ ಅಂತ ಹಲವಾರು ಕವಿಗಳು ಹಾಡಿ ಹೊಗಳಿದ್ದಾರೆ. ಅಚ್ಚ ಬಿಳಿಯದಕ್ಕೆಲ್ಲಾ ನಮ್ಮ ಮಲ್ಲಿಗೆಯದೇ ಉಪಮೆ.ಇನ್ನು ಸುಂದರವಾದ ಹುಡಗಿಯನ್ನು ವರ್ಣಿಸುವಾಗ ನಮ್ಮ ಪರಿವಾರದೇ ಸಿಂಹಪಾಲು.'ಹೂವ್ವೇ ಹೂವ್ವೇ','ಹೂವು ಚಲುವೆಲ್ಲಾ ನಂದೆದಿತು' ಅನ್ನುವ ಚಿತ್ರಗೀತೆಗಳಿಂದ ಹಿಡಿದು ಬೇಂದ್ರೆ ಮಾಸ್ತರ 'ಘಮ್ಮ ಘಮ್ಮಡಾಸತಾವ ಮಲ್ಲಿಗೆ, ನೀನು ಹೊರಟಿ ಈಗ ಎಲ್ಲಿಗೆ?' ಅನ್ನೊ ಕವಿತೆಗಳಲ್ಲಿ ಎಲ್ಲಾ ಕಡೆ ನಾವ್ವೇ ಸರ್ವಂತ್ರಾಯಾಮಿ. ಇನ್ನು ಪ್ರೇಮ ಕವಿ ಕೆ.ಎಸ್.ಎನ್ ಅವರ ಕೃತಿಯ ಮಲ್ಲಿಗೆ ಪರಿಮಳದ ಹಾಗೆ ಎಲ್ಲಾ ಕಡೆ ಹರಡಿದೆ. ನಾವೇಂದರೆ ಹೆಣ್ಣ ಬದುಕಿನ ಅವಿಬಾಜ್ಯ ಅಂಗ...

ಮುಗಿಸುವ ಮುನ್ನ:
"ಬಿಸೋ ಗಾಳಿ ಬದಲಾಗಿಲ್ಲ,ಹರಿಯೋ ನೀರು ಬದಲಾಗಿಲ್ಲ,ಹೂವು ಬದಲಾಗಲ್ಲ,ಈ ಮನುಷ್ಯ ಮಾತ್ರ ಈ ಪಾಟಿ ಬದಲಾಗಿದ್ದಾನೆ" ಅನ್ನೊ ಬಳೆಗಾರ ಚೆನ್ನಯ್ಯನ ಮಾತಿನಿಂದ ಶುರುವಾಗೋ 'ಮೈಸೂರು ಮಲ್ಲಿಗೆ' ಗೀತನಾಟಕ ನೋಡೊ ಅವಕಾಶ ಮೊನ್ನೆ ಶನಿವಾರದಂದು ಸಿಕ್ಕಿತ್ತು. ಸುಮಾರು ೨೦ ಜನ ರಂಗ ಕಲಾವಿದರು , ೨ ಗಾಯಕ/ಗಾಯಕಿಯರು ೯೦ ನಿಮಿಷಗಳಲ್ಲಿ ಅದ್ಬುತ ಮಾಯಾಲೋಕ ಸೃಷ್ಟಿಸಿಕೊಡುತ್ತಾರೆ. ಕಲಾಗಂಗೋತ್ರಿಯಿಂದ ಪ್ರದರ್ಶಿತವಾಗುತ್ತಿರುವ ಈ ಗೀತನಾಟಕ, ಡಾ. ಬಿ.ವಿ. ರಾಜರಾಂವರ ನಿರ್ದೇಶನ.ರಾಜೇಂದ್ರ ಕಾರಂತ ಕಲ್ಪನಾ ಶಕ್ತಿಯಲ್ಲಿ ಅರಳಿರುವ ಈ ಗೀತನಾಟಕ ಒಂದು ಅನ್ಯನ್ಯ ಪ್ರಯೋಗ.
ನಾಟಕ ಪೂರ್ತಿ ಸೂತ್ರದಾರ ಬಳೆಗಾರ್‍ಅ ಚೆನ್ನಯ್ಯ...ನಿಜ ಆತನಿಗೆ ವಯಸ್ಸಾಗಿದೆ. ಬೆನ್ನು ಬಾಗಿದೆ. ಶಾನುಭೋಗರ ಮಗಳು ಸೀತಮ್ಮಳ ಮರಿಮೊಗಳನ್ನು ಬೇಟಿ ಮಾಡುವ ಈತನಿಗೆ ಅಧುನಿಕತೆಯ ಅರಿವಾದ ನಂತರ ನಿಮ್ಮನ್ನು ಹಳೆಯ ಕಾಲಕ್ಕೆ ಕರೆದೊಯ್ಯುತ್ತಾನೆ. ಪ್ರೇಮ ಕವಿ ಕೆ.ಎಸ್.ನರಸಿಂಹ ಅವರ ಮೈಸೂರು ಮಲ್ಲಿಗೆಯ ಕವನ ಸಂಕಲನದ ಕವನಗಳನ್ನು ಕವಿಯೊಬ್ಬರ ಜೀವನಕ್ರಮಕ್ಕೆ ಅಳವಡಸಿ,ಪಾತ್ರಗಳನ್ನು ಕವನದಲ್ಲೇ ನಿರೂಪಿಸುವುದು ಈ ಪ್ರಯೋಗದ ವೈಶಿಷ್ಟ... "ಮನೆಯಲ್ಲೊಂದು ಮಲ್ಲಿಗೆ ಹೂ ಗಿಡ ನೆಟ್ಟು ಕನ್ನಡದ ಕಂಪನ್ನು ಹರಿಸಿರಿ..." ಎಂದು ಕಡೆಯಲ್ಲಿ ಸಂದೇಶ ಮೆಚ್ಚುಗೆ ಗಳಿಸುತ್ತದೆ...
ಈ ವಾರದ ಶನಿವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ಪುನ್: ಪ್ರದರ್ಶಿತವಾಗುತ್ತಿರುವ ಮೈಸೂರು ಮಲ್ಲಿಗೆಯನ್ನು ತಪ್ಪದೇ ವಿಕ್ಷಿಸಿ.ಕೊನೆ ಕ್ಷಣದಲ್ಲಿ ಟಿಕೇಟ್ಟು ಖಂಡಿತಾ ಸಿಗೋದಿಲ್ಲಾ. ಮೊದ್ಲೇ ಬುಕ್ ಮಾಡಿ ಹೋಗಿ..
ಯಶವಂತ ಸರದೇಶಪಾಂಡೆಯ 'ಸಹಿ ರೀ ಸಹಿ' ಮತ್ತು 'ಆಲ್ ದಿ ಬೆಸ್ಟ್' ಎಂಬ ಸುಂದರ ನಗೆ ನಾಟಕಗಳು ವಾರಂತ್ಯದಲ್ಲಿ ಎಚ್.ಎನ್.ಕಲಾಕ್ಷೇತ್ರ ,ಜಯನಗರದಲ್ಲಿ ಪ್ರದರ್ಶಿತವಾಗುತ್ತಿವೆ...


(ಚಿತ್ರಗಳು: ಲಾಲಭಾಗ ಫಲ-ಪುಷ್ಪ ಪ್ರದರ್ಶನ ೨೦೦೭)