Sunday, April 08, 2007

ತೇಜಸ್ವಿಯವರಿಗೊಂದು ಭಾವಪೂರ್ಣ ಶ್ರಧ್ದಾಂಜಲಿ........

ಮಾಯಾಲೋಕದ ಕಿಂದರಜೋಗಿ
ಸಹಜಕೃಷಿಯ ಹಠಯೋಗಿ
ನಿಗೂಡ ಜಗತ್ತಿನ ಮಾಯಾವಿ
ನಮ್ಮೆಲ್ಲರ ಪ್ರೀತಿಯ ಸಾರ್ ,ತೇಜಸ್ವಿ

ಅಡು ಮುಟ್ಟದ ಸೊಪ್ಪಿಲ್ಲ
ತೇಜಸ್ವಿ ಬರೆಯದ ವಿಷಯವಿಲ್ಲ
ಪಶ್ಚಿಮ ಘಟ್ಟದಲ್ಲಿ ತಿರುಗದ ಜಾಗವಿಲ್ಲ
ಸಿದ್ದರೀತಿಯ ಮಾದರಿಯಲ್ಲಿ ಬರೆಯಲಿಲ್ಲ

ಹುಚ್ಚು ಹಿಡಿಸಿದ ಕರ್ವಾಲೋ
ನೀವು ಹಿಡಸದಿದ್ದರೆ ನ್ಯಾಸ್ಟಿಪೇಲೋ
ಕೋಲಾಜ್ ಮೂಲಕ ಮಾಯಾಲೋಕ ತೋರಿದ ಚಿತ್ರಗಾರ
ಕಾಡು,ನಾಡಿನ ಹಕ್ಕಿಗಳ ಪರಿಚಯಿಸಿದ ಪೊಟೊಗ್ರಾಪರ

ಏಲಕ್ಕಿಯ ಕಾಳಸಂತೆಯ ಜುಗಾರಿಕ್ರಾಸ್
ತಬರನ ಕತೆ, ಅಬಚೂರಿನ ಪೊಸ್ಟಾಪಿಸ್
ಘಾಟಿಯ ರಗಳೆಯ ಖುದ್ದೂಸ್ ಎಕ್ಸಪ್ರೆಸ್
ಅಣ್ಣನ ನೆನಪಿನಲ್ಲಿ ಹಾಸುಹೊಕ್ಕಾಗಿರುವ ಶಾಮಣ್ಣನ ಬೈಕು ಪ್ರಿನ್ಸ್

ಹಾರುವ ಓತಿ ಬೆನ್ನು ಹತ್ತಿದ ಮಂದಣ್ಣ
ಹಲವಾರು ವೃತ್ತಿ ಮಾಡಿದ ಕರಾಟೆ ಮಂಜಣ್ಣ
ಜೀವದ ಗೆಳಯರಾದ ರಾಮದಾಸ್,ಶಾಮಣ್ಣ
ಎಲ್ಲಾ ಬಿಟ್ಟು ಮೌನವಾಗಿ ಎಲ್ಲಿ ನಡೆದಿರೇಣ್ಣ?

ಮೂಡಿಗೇರೆ ತೋಟವೀಗ ಅಕ್ಷರಶ್:ನಿರುತ್ತರ
ಅಲ್ಲೀಗ ,ಮೌನವಂದೇ ನಿರಂತರ!
ಕುವೆಂಪು,ಕಾರಂತರ ಕಲಾಸಂಗಮವಾಗಿರುವ ಪೂರ್ಣಚಂದಿರ
ತೇಜಸ್ವಿಯವರ ಲೇಖನ,ಕೃತಿಗಳೆಲ್ಲ ಅಜರಾಮರ!

5 comments:

Parisarapremi said...

tejaswi na chennaagi nenesikondiddeera....

illi nannadondu shradhdhaanjali idhe nodi...

http://speaktonature.blogspot.com

Shiv said...

ಮಹಾಂತೇಶ್,

ತೇಜಸ್ವಿಯವರ ಬಗ್ಗೆ ಎಲ್ಲವನ್ನೂ ನಿನ್ನ ಈ ಒಂದು ಕವನ ಸಮಗ್ರವಾಗಿ ಹೇಳುತ್ತೆ..

ನಿಜ..ಅವರ ಕೃತಿಗಳು ಅಜರಾಮರ..

Sushrutha Dodderi said...

ಅವರು ಇಲ್ಲವಾಗಿ ಮೂರು ದಿನವಾಯಿತು.. ಇನ್ನೂ ಆ ಬೇಸರದಿಂದ ಹೊರಬರಲು ಆಗುತ್ತಿಲ್ಲ...

ರಾಜೇಶ್ ನಾಯ್ಕ said...

ಮಹಾಂತೇಶ್,

ವ್ಹಾವ್. ತೇಜಸ್ವಿಯವರ ಕಟ್ಟಾ ಅಭಿಮಾನಿಯಿರಬೇಕು ನೀವು.
ಶ್ರದ್ಧಾಂಜಲಿ 'ಬಹಳ' ಭಾವಪೂರ್ಣ ಮತ್ತು ಅರ್ಥಪೂರ್ಣವೂ ಆಗಿದೆ.

MD said...

ಮಹಾಂತೇಶರೆ,
ನಿಮ್ಮ ಬ್ಲಾಗ್ ಜೀವ ಸ್ಪೂರ್ತಿಯಿಂದ ತುಂಬಿ ತುಳುಕುತ್ತಿರುವುದನ್ನು ಕಂಡು ತುಂಬ ಖುಶಿಯಾಗಿದೆ.
ಚಿಕ್ಕ ಕವಿತೆಯಲ್ಲಿ ತೇಜಸ್ವಿಯವರನ್ನು ಸರಿಯಾಗಿಯೇ ಬಿಂಬಿಸಿದ್ದೀರಾ.
ತೇಜಸ್ವಿ ಅಗಲಿಕೆ ನಿಜವಾಗ್ಲೂ ಮನಸ್ಸಿಗೆ ಬೇಸರ ಮೂಡಿಸಿದೆ.
ನಿಮ್ಮ ಹವ್ಯಾಸಗಳಿಗೆ ಬ್ರೇಕ್ ಹಾಕದಿರಿ.
ಆದಷ್ಟು ಬೇಗನೆ ಒಂದು ಪ್ರವಾಸ ಹೊರಡೋಣ, ತುಂಬ ದಿನಗಳಾದವು ಜಗಳ ಮಾಡದೆ :-)

--ಎಮ್.ಡಿ