Tuesday, January 11, 2011

ನಿಸರ್ಗದ ಮಡಿಲಲ್ಲಿ - ಭಾಗ 3

ದಿನ 4 ಕಾಲೂರನಿಂದ ವನಚಲುವರಗೆ,ಅಜ್ಜಿ ಮೊಟ್ಟೆ ಬೆಟ್ಟದ ಮೂಲಕ.


ಚಾರಣ ಶುರುವಾದದ್ದು ಬೆಳಿಗ್ಗೆ ೯.೦೦.ಈವತ್ತು ನಮ್ಮ ಮೊದಲಿನ ಗೈಡಾದ ರಮೇಶನಿಗೆ ವಿದಾಯ ಹೇಳಿ ,ಹೊಸ ಗೈಡಾದ ಎ.ನಾರಯಣಪ್ಪನ ಜೊತೆ,ಬೆಟ್ಟವನ್ನು ನಿಧಾನವಾಗಿ ಮುನ್ನೆಡೆದವು.ನಡುವೆ ಬರುವ ಅಜ್ಜಿ ಮೊಟ್ಟೆವನ್ನು ಹತ್ತಿ,ಅತ್ಯಂತ ದೂರದಲ್ಲಿ ಕಾಣುವ ಕುಮಾರ ಪರ್ವತವನ್ನು,ಅದರ ಸುತ್ತಲಿನ ಅನೇಕ ಪರ್ವತಗಳನ್ನು,ವಿಶಾಲವಾಗಿ ಕಣಿವೆಗಳಲ್ಲಿ ಹರಡಿರುವ ದಟ್ಟ ಕಾಡನ್ನು ನೋಡಿ ಮುಂದೆ ಸಾಗಿದೆವು.ದಾರಿಯಲ್ಲಿ ಬರುವ 3-4 ಹಳ್ಳ ಹೊಳೆಗಳನ್ನು ದಾಟುವಾಗ ಅಸಂಖ್ಯಾತ ಜಿಗಣೆಗಳ ಕಾಟದಿಂದ ತಪ್ಪಿಸಿಕೊಂಡು ಬೆಟ್ಟದ ಮೇಲೆ ಊಟಕ್ಕೆ ನಿಂತಾಗ ಸಮಯ 1.೦೦.
ಊಟದ ನಂತರ ಸ್ವಲ್ಪ ವಿಶ್ರಮಿಸಿ,ಹಾಗೆ ಮುಂದೆ ನಡೆದಾಗ ,ಒಂದು ಬೆಟ್ಟದ ಮೇಲೆ ದೂರದಲ್ಲಿ 3-4 ಕಾಟಿಗಳನ್ನ್ದ್(ಕಾಡೆಮ್ಮೆ)ಕಂಡವು. ಮುಂದೆ 7 ಕಿ,ಮೀ ನಡೆದು ವನಚಲು ಕ್ಯಾಂಪ್ ತಲುಪಿದಾಗ ಸಮಯ ಸಂಜೆ5.30.ಈಲ್ಲಿ ಅರ್ಧ ಶಾಲೆಯಲ್ಲಿ,ಅರ್ಧ ಟೆಂಟಗಳಲ್ಲಿ ಕ್ಯಾಂಪಗಳಿದ್ದುವು.

ದಿನ 5 ವನಚಲು ಕ್ಯಾಂಪನಿಂದ ಮಡಿಕೇರಿ ಬೆಸ್-ಕ್ಯಾಂಪವರಗೆ ,ನಿಶಾನೆಬೆಟ್ಟದ ಮೂಲಕ

ಈವತ್ತು ಕೊನೆಯ ದಿನದ ಚಾರಣ. ದಿನ ಆಲಸಿಯಾಗಿ ಶುರುವಾಗಿ ಸುಮಾರು 9.15ಕೊನೆಯ ಚಾರಣ ಆರಂಭವಾಯಿತು.ಮೊದಲುನಿಶಾನೆ ಬೆಟ್ಟವನ್ನು ನೋಡಿ,ಅಲ್ಲಿಂದ ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಹೆದ್ದಾರಿಯನ್ನು , ಸಂಪಾಜೆ ಗ್ರಾಮವನ್ನು ,ಅದರ ಹಿಂದುಗಡೆ ಹಬ್ಬಿರುವ ಕಾಡನ್ನು ವಿಕ್ಷಿಸಿದೆವು.ಮೊದಲಿನ ಕಾಲದಲ್ಲಿ ನಿಶಾನೆ/ಗುರಿಯನ್ನು ನೋಡಲು ಈ ಬೆಟ್ಟವನ್ನು ಬಳಸುತ್ತಿದ್ದರಿಂದ ಈ ಬೆಟ್ಟಕ್ಕೆ ನಿಶಾನೆಬೆಟ್ಟವೆಂದು ಹೆಸರು. ಇಲ್ಲಿಂದ ಕೆಳಗೆ ಇಳಿಯುತ್ತ ಮಡಿಕೇರಿ ಪಟ್ಟಣದ ರಾಜಾ ಸೀಟ್ ತಲುಪಿದಾಗ ಸಮಯ 3.3೦ ಮತ್ತು ಕ್ರಮಿಸಿದ್ದು 15-16 ಕಿ.ಮೀ.


ಚಾರಣ ತಂಡ 6


ತಂಡ 5ರಲ್ಲಿ 18 ಜನ ಮತ್ತು ತಂಡ 6ರಲ್ಲಿ 13ಜನರನ್ನು ಒಳಗೊಂಡ ಈ ತಂಡದಲ್ಲಿ ದೇಶದ ಎಲ್ಲಾ ಭಾಗಗಳಿಂದ ಎಲ್ಲಾ ವಯೋಮಾನದವರಿದ್ದರು.13ವಯಸ್ಸಿನ ಬೆಂಗಳೂರಿನ ಚಿದು, ಪಿ.ಯು.ಸಿ ಒಡುತ್ತಿರುವ ಅವರಣ್ಣ ಗಗನ,8ಗುಜರಾತಿ ಬೆಹನಗಳು,3-4 ಗುಜ್ಜುಗಳು,ಡೆಲ್ಲಿಯಿಂದ 66 ವರ್ಷದ ಪ್ರಕಾಶ,58 ವರ್ಷದ ಪುರಿ,ನಮ್ಮ ತಂಡದ ನಾಯಕ, ಮಹಾರಾಷ್ಟ್ರದ 5-6 ಯುವಕರು,ಆಂಧ್ರಪ್ರದೇಶದ ಮೂರು ಜನ ಮತ್ತು ಕರ್ನಾಟಕದ 8 ಜನ ರೋಹಿತ್(Fidleity),ಗಗನ,ಚಿದು,ಸಿದ್ದು(mindtech),ಅಜಯ(NDTV)ಮತ್ತು ವಿಜಯ(HP)ರಿದ್ದರು.ಈ ಗ್ರುಪನಲ್ಲಿರುವ ರಾಮದಾಸ ರಾವಂಡೆ ಕತೆ ಕೂತಹಲವಾಗಿದೆ. ವಯಸ್ಸು 63, ಮಹಾರಾಷ್ಟ್ರದ ಜಲಗಾಂವದವರು. ಈಗ ವಿಶ್ರಾಂತ ಜೀವನ.ಈವರಿಗೆ 1998ರಲ್ಲಿ ಪಾರ್ಶ್ವವಾಯುವಾಗಿ,ಕೇವಲ ನೋಟ ಮತ್ತು ಸ್ಪರ್ಶ ಗ್ರಹಿಸಬಲ್ಲವರಾಗಿದ್ದರು.ಬೆಂಗಳೂರಿನ ನಿಮ್ಹಾನ್ಸನಲ್ಲಿ 6ತಿಂಗಳು ಕಾಲ ಚಿಕಿತ್ಸೆಗೆ ಭರ್ತಿಯಾಗಿ ಪಿಜಿಯೊಥೆರಪಿ(Physiotheropy) ಮೂಲಕ ಮೊದಲಿನ ಹಾಗೆ ಒಡಾಡಬಲ್ಲವರಾದರು. ಅವರು ಕೂಡ ಈ ಚಾರಣವನ್ನು ಯಶಸ್ವಿಯಾಗಿ ಮುಗಿಸಿದ್ದನ್ನು ನೋಡಿದರೆ ,ಮನುಷ್ಯ ಮನಸ್ಸು ಮಾಡಿದರೇ,ಎನೆಲ್ಲಾ ಸಾಧಿಸಬಹುದು ಎಂದುದಕ್ಕೆ ಒಳ್ಳೆ ಊದಾಹರಣೆ.


ಈತ ರಮೇಶ H ಮಂದ್ರಾರ.62ವಯಸ್ಸಿನ ಈತ ಕರ್ವಾಲೊ ಕಾದಂಬರಿಯಲ್ಲಿ ಬರುವ ಮಂದಣ್ಣನ ಶಿಷ್ಯನೋ,ಇಲ್ಲಾ ಅವನ ಅಪರಾವತಾರೋ ದೇವರೇ ಬಲ್ಲ. ಈತ ಮೊದಲು 3ದಿನಕ್ಕೆ ಮಾರ್ಗದರ್ಶಕ.ಕನ್ನಡ,ಕೂರ್ಗಿ ಮತ್ತು ತುಳು ಭಾಷೆ ಬಲ್ಲವನಾಗಿದ್ದು ಯಾವಗಲೂ ಕಿವಿಯಿಂದ ಕಿವಿಯವರಗೆ ಹಲ್ಲು ಕಿರಿದುಕೊಂದಿರವನು.ಕಾಡಿನಲ್ಲಿ ಸಕ್ಕರೆ ರೋಗಕ್ಕೆ ಯಾವ ಬಳ್ಳಿ ಕಷಾಯ ಒಳ್ಳೆಯದು,ಯಾವ ಹಣ್ಣು,ಯಾವಾಗ ಬಿಡುವುದು,ಕಾಡಿನಲ್ಲಿರುವ ತರಾವರಿ ಬಳ್ಳಿಗಳು,ಅವುಗಳ ಉಪಯೋಗ,ಪ್ರಸವವಾದ ಹೆಂಗಸರಿಗೆ ಯಾವ ಗಿಡಮೂಲಿಕೆ ಔಷಧಿ ಒಳ್ಳೆಯದು, ಕಾಡು ಅನಾನಸ್ಸುಹಣ್ಣು,ಕಾಡು ಯಾಲಕ್ಕಿ,ಯಾಲಕ್ಕಿ ಬಗೆಗಳು,ರೊಬಸ್ಟಾ ಮತ್ತುಅರೇಬಿಕಾ ಕಾಫಿ ತಳಿಗಳಿಗಿರುವ ವ್ಯತ್ಯಾಸ,ಜೇನು ಸಾಕಣೆ ಪೆಟ್ಟಿಗೆಗಳು,ಹುಲಿ ಜೇನು(ಹೆಜ್ಜೇನು),ಅವುಗಳು ದಾಳಿ ಮಾಡಿದರೆ ತಪ್ಪಿಸಿಕೊಳ್ಳಲಾಗುವದಿಲ್ಲ,ಮುಜಂಟೆ ಜೇನುಗಳು,ಅವುಗಳು ಕೇವಲ ತೆಂಗಿನಮರದ ಹೂವಿನ ಮಕರಂದದಿಂದ ಜೇನು ಮಾಡುವುದು,ಯಾಲಕ್ಕಿ ಬಳ್ಳಿಗಳು,ಮೆಣಸು ಬಳ್ಳಿಗಳು,ಮೆಣಸ್ಸಿಗೆ ಹೂಗಳೀರುವದಿಲ್ಲಾ,ಅವುಗಳಲ್ಲಿ ಬೆಳಿಗ್ಗೆ ಬೀಳುವ ಮಂಜಿನ ಹನಿಯಿಂದ ಪರಾಗಸ್ಪರ್ಶವಾಗಿ,ಮೆಣಸ್ಸಾವುಗುವುದು,ಅದು ನಾವು ನೀವು ಮಾಡುವ ಪರಾಗಸ್ಪರ್ಶದ ತರಾ ಅಲ್ಲಾ ಅನ್ನೊ ಒಗ್ಗರಣೆ ಬೇರೆ,ರಾತ್ರಿ ಶೆಂದಿಗೆ ವ್ಯವಸ್ಠೆ ಮಾಡಬೇಕಾ? "ನಮ್ಮೂರು ಚಂದವೊ,ನಿಮ್ಮೂರು ಚಂದವೊ"ಅನ್ನುವ ಕೆ.ಎಸ್.ಎನ್. ಕವಿತೆ ಹಾಡುತ್ತ ಎಲ್ಲರನ್ನು ನಗಿಸುತ್ತಾ ಮುಂದೆ ಕರೆದೊಯ್ಯುತ್ತಿದ್ದ.
ಮಂಡೆಮುಕ್ರ ಹೇಗೆ ಕೂಗುತ್ತದೆ,ಭೀಮರಾಜ ಪಕ್ಷಿ ಹೇಗೆ ಬೇರೆ ಬೇರೆ ಪಕ್ಷಿಗಳ ,ಮನುಷ್ಯರ ಸಿಳ್ಳೆಯನ್ನು ಅನುಕರಿಸುತ್ತದೆ ಅನ್ನೊದನ್ನ ಕೇಳಿಸಿದ್ದು ರಮೇಶನೇ."ನಾಯಿ ಇದ್ದವನಿಗೆ ಬೇಟೆ,ಬಾಯಿ ಇದ್ದವನಿಗೆ ಬೊಟ್ಟು,"ಕೊಡಗಿನ ಗಾದೆಗಳನ್ನು ಹೇಳುತ್ತ ಚಾರಣ ಹಾದಿ ಸುಲಭಗೊಳಿಸುತ್ತಿದ್ದ.ಎಲಕ್ಕಿ 3ವರ್ಷಗಳ ಹಿಂದೆ ತುಂಬಾ ಬೆಳೆದ್ದಿದ್ದರು,ಆಗ ಬೆಲೆ ಇರಲಿಲ್ಲ,ಈಗ ಸಿಕ್ಕಾಪಟ್ಟೆ ಬೆಲೆ, ಅದಕ್ಕೆ ಕಡಿಮೆ ಬೆಲೆಗೆ ಸಿಗ್ತಾ ಇಲ್ಲಾ,ಮರ ಅಣಬೆ,ತೋಟದಲ್ಲಿ ಕೆಲಸಗಾರರ ಸಮಸ್ಯೆ,ಇಲ್ಲಿರುವರೆಲ್ಲಾ ಬೆಂಗಳೂರು ಇಲ್ಲಾ ಮೈಸೂರು ಸೇರಿ ಹೋಟಲ್ಲೊ,ಬಾರನಲ್ಲಿ ಸ್ಯೆಕುರಿಟಿಗಾರ್ಡಗಳಾಗಿ ಸೇರಿ,ಒಂದು ಕೈಯಲ್ಲಿ ಗನ್ನು,ಇನ್ನೊಂದು ಕೈಯಲ್ಲಿ ******* ಹಿಡದುಕೊಂಡು ಕೆಲಸ ಮಾಡ್ತಾ ಇದಾರೆ ಅನ್ನೊ ವಿಷಯಗಳು ತಿಳಿದುಬಂದುದ್ದು ಈತನಿಂದ.
ಮೊದಲಿನೇ ಬಾರಿ 31ಜನಕ್ಕೆ ಮಾರ್ಗದರ್ಶಕನಾಗಿ ಮತ್ತು ಗುಂಪಿನಲ್ಲಿರುವ ಅರ್ಧ ಜನಕ್ಕೆ ಕನ್ನಡ ಬರುತ್ತಿರವಾದರಿಂದ ಗೊಪಿನಲ್ಲಿರುವ ಜನಕ್ಕೂ ಈತನಿಗೂ ಜಗಳ,ವಾದ-ವಿವಾದ ,Idiotಅನ್ನೊ ಬೈಗುಳಗಳು,ಅದರೂ ಅದೆನ್ನೆಲ್ಲಾ ಲೆಕ್ಕಕ್ಕೆ ತಗೆದುಕೊಳ್ಳದೇ,ಯಾವಗಲೂ ನಗುತ್ತ ಮುಂದೆ ಬನ್ನಿ,ಕಮ್ ಪಾಸ್ಟ್(come fast)ಅನ್ನುತ್ತ ,ಹಲ್ಲಿ ಚಿಲುಯುತ್ತಾ ಮಜಾ ಮಾಡುತ್ತ ನಮಗೆ ಜೊತೆ ನೀಡಿದ.
ಕೊನೆಯದಾಗಿದುಡ್ಡು ಕೊಟ್ಟು ಗುಡ್ಡ ಸುತ್ತೊಕೊ ಯಾಕೆ ಹೋಗತಿಯಾ? ಏನು ಸಿಗುತ್ತೆ ಅನ್ನೋವರಿಗೆ ಹೇಗೆ ಊತ್ತರಿಸುವುದು ತಿಳಿಯದು.5-6 ದಿನ ನಿಸರ್ಗದ ಮಡಲಲ್ಲಿ,ಎಲ್ಲಾ ಮರೆತು,ಚಾರಣ ಮಾಡುವದು ಒಂದು ವಿಶಿಷ್ಟ ಅನುಭವ. ಬೆಳಿಗ್ಗೆ ಎದ್ದು,ಸುಮ್ಮನೆ ಕಾಡು ಸುತ್ತಿ,ಹಣ್ಣಾಗಿ ಹಸಿದು ಕ್ಯಾಂಪಗೆ ಬಂದು ಬೀಳುವುದು ಒಂದು ಮರೆಯಲಾರದ ಅನುಭವ. ಕಡೇಪಕ್ಷ ನಮಗೆ ನೋಡಲು ಕಾಡು, ಕೊಂಚ ಪ್ರಾಣಿಗಳು,ಪಕ್ಷಿಗಳಿರುವುದು ನಮ್ಮ ಸುದೈವ,ಮುಂದಿನ ಪೀಳಿಗೆಗೆ ಇವೆಲ್ಲಾ ಇರುವದಿಲ್ಲ ಅನ್ನೊದು ದುರ್ದೈವ :(-.

ಯುತ್ ಹಾಸ್ಟೆಲ್ ಅಸ್ಸೊಸಿಯನ್ ಅಪ್ ಇಂಡಿಯಾ (Youth Hostel Assocation of India)

ವರ್ಷದ ಕೊನೆಯಲ್ಲಿ ಮತ್ತು ಎಪ್ರಿಲ್ ಮತ್ತು ಮೇನಲ್ಲಿ ದೇಶದ ವಿವಿಧ ಭಾಗಗಗಲ್ಲಿ YHAI ಚಾರಣ ಎರ್ಪಡಿಸುತ್ತಾರೆ.ಆಸಕ್ತರು http://www.yhaindia.org/ ಲಿಂಕನಲ್ಲಿ ಹೆಚ್ಚಿನ ಮಾಹಿತಿ ನೋಡಬಹುದು.
YHAI ಕರ್ನಾಟಕದವರು ಕೊಡಗನಲ್ಲಿ ಕಳಿದ 8ವರ್ಷಗಳಿಂದ ಚಾರಣ ಎರ್ಪಡಿಸುತ್ತಾರೆ.6-7 ಚಾರಣಕ್ಕೆ ಪೂರ್ತಿ ತಂಡ ಅಪಾರ ಶ್ರಮ, ತಾಳ್ಮೆ,ಅರ್ಪಣಾ ಮನೊಭಾವ,ಚಾರಣದ ದಾರಿಗಳನ್ನು ನಿರ್ಧರಿಸುತ್ತಾರೆ. ಈ ಪೂರ್ತಿ ಚಾರಣವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಧಾರವಾಡದ YHAI ಡಾಕ್ಟರ್ ಸತೀಶ ಕನ್ನಯ್ಯ,ಬೆಂಗಳೂರಿನ ಶ್ರೀರಂಗಯ್ಯ, ಕ್ಯಾಂಪ ಲೀಡರಗಳಾದ ಅನ್ನಪೂರ್ಣಮ್ಮ, ಅಂಬಿಕಾ, ಅಭಿಷೇಕ,ಹಿರೇಮಠ, ಕೊಡಗು ಯುತ್ ಹಾಸ್ಟೆಲ ಸಿಬ್ಬಂದಿಗಳು ಮತ್ತು ರುಚಿಕಟ್ಟಾಗಿ ಅಡುಗೆ ಬಡಸಿದ ಅಡುಗೆಯವರಿಗೆ ನಮ್ಮೆಲ್ಲರ ಅನಂತ ನಮನಗಳು.

ಮುಗಿಯಿತು.....

Monday, January 03, 2011

ನಿಸರ್ಗದ ಮಡಿಲಲ್ಲಿ - ಕೊಡಗು ಚಾರಣ-ಭಾಗ 2

ದಿನ 2- 26/12/2010 ತಂತಿಪಾಲನಿಂದ ಮುಕ್ಲೊಡು, ಕೊಟೆ ಬೆಟ್ಟದ ಮೂಲಕ
ನಿಸ್ಸಂಶಯವಾಗಿ ಈ ಚಾರಣದ ಕಠಿಣ ಹಾದಿ. ಮೊದಲು 25 ಡಿಗ್ರಿನಲ್ಲಿ ಟಾರ್ ರೋಡ, ನಂತರ ಕಚ್ಚಾ ಜೀಪ ರೋಡ (೪ Wheel Drive) ,ಅಮೇಲೆ 40 ಡಿಗ್ರಿನಲ್ಲಿ ದನಕರುಗಳು ಹೋಗುವ ಹಾದಿಯಲ್ಲಿ ಚಾರಣ.ಗುಂಪಿನಲ್ಲಿರುವ ಅರ್ಧ ಜನಕ್ಕೆ ಆಗಲೇ ಸುಸ್ತು. ಕಠಿಣವಾದ ಹಾದಿ ,ಮಣಭಾರದ ನಮ್ಮ ಬ್ಯಾಗಗಳು,ಖಾಲಿಯಾದ ನೀರಿನ ಬಾಟಲಗಳು, ಅಲ್ಲಿ ಗುಡ್ಡ ಬೆಟ್ಟದಲ್ಲಿ ಹರಿವು ನೀರು ಯಾವ ಮಿನರಲ್ ವಾಟರಗಿಂತ ಕಡಿಮೆಯಿಲ್ಲ, ಕುಡಿಯಿರಿ ಅಂತ ಹೇಳಿದರು ಕೇಳದ ಮೂರ್ಖ ಜನಗಳ ಜೊತೆ 6 ಕಿ.ಮೀ ಕ್ರಮಿಸಿದಾಗ ಕಂಡಿತು ಕೊಟೆ ಬೆಟ್ಟ. ಕೊಡಗಿನ ಎರಡನೇ ದೊಡ್ಡಬೆಟ್ಟ (ಮೊದಲನೆಯದು ತಡಿಯನಮೊಳ್).ನಂತರ ತುಂಬಾ ಕಡಿಡಾದ ದಾರಿ.5ನಿಮಿಷಕ್ಕೆ ವಿರಾಮ ತಗೆದುಕೊಳ್ಳತ್ತಾ 65 ಡಿಗ್ರಿನಲ್ಲಿ ಕೊನೆಯ ದಾರಿ ಕ್ರಮಿಸಿ, ಉಸ್ಸಪ್ಪ ಎಂದು ಬೆಟ್ಟದ ಮೇಲೆ ತಲುಪಿದಾಗ ಮದ್ಯಾಹ್ನ 1ಘಂಟೆ. ಬೆಟ್ಟದ ಮೇಲಿಂದ ಪಶ್ಮಿಮ ಘಟ್ಟಗಳ ವಿಹಂಗಮ ನೋಟ, ಕಣ್ಣು ಹಾಯಿಸದಷ್ಟು ದೂರ ಕಾಣುವ ಪರ್ವತಗಿರಿಗಳು,ಕಣಿವೆಗಳಲ್ಲಿ ಹರಡಿರುವ ದಟ್ಟಕಾಡುಗಳು,ಬೆಟ್ಟದ ಮೇಲೊಂದು ಪುಟ್-ಬಾಲ್ ಮೈದಾನದಷ್ಟು ವಿಸ್ತಾರವಾದ ಜಾಗ, ಅಲ್ಲೊಂದು ಪುಟ್ಟದಾದ ಶಿವನ ದೇವಾಲಯ,ಅದರ ಹಿಂದುಗಡೆ ಎರಡು ಚಿಕ್ಕದಾದ ಹೊಂಡಗಳು,ಮೇಲ್ಗಡೆಯಿಂದ ಪ್ರಖರವಾಗಿ ಹೊಡೆಯುತ್ತಿದ್ದ ಬಿಸಿಲು. ಇಲ್ಲಿ ಊಟಕ್ಕೆ 45 ವಿಶ್ರಾಂತಿ
ನಂತರ ಬೆಟ್ಟದ ಇನ್ನೊಂದು ಕಡೆಯಿಂದ ಇಳಿತ. ತುಂಬಾ ಕಷ್ಟಕರವಾದ ಹಾದಿ. ಸುಮಾರು 80 ಡಿಗ್ರಿನಲ್ಲಿ ಇರುವ ಬೆಟ್ಟವನ್ನು 25ಮೀಟರನಷ್ಟು ಅಳದ ಬೆಟ್ಟವನ್ನು ಇಳಿಯಲು ಒಬ್ಬ ವ್ಯಕ್ತಿಗೆ ಹಗ್ಗದ ಸಹಾಯದಿಂದ ಇಳಿಯಲು 25- 30 ನಿಮಿಷವಾದರೂ ಬೇಕು.ಅಲ್ಲಿಂದ ಕೆಳಗೆ ಇಳಿದು ,ಮೂರು -ನಾಲ್ಕು ಬೆಟ್ಟಗಳನ್ನು ಸುತ್ತು- ಬಳಸಿ 9-10 ಕಿ.ಮೀ. ಚಾರಣ ಮಾಡಿ ಹೊಳೆ ಪಕ್ಕ ಇರುವ ಮುಕ್ಲೊಡು ಕ್ಯಾಂಪ್ ತಲುಪಿದಾಗ ತಂಡದಲ್ಲಿರುವ ಅರ್ಧಕ್ಕಿಂತ ಜಾಸ್ತಿ ಜನ ಅರ್ಧಸತ್ತವರಾಗಿದ್ದರು. ಅಲ್ಲಿರುವ ಹೊಳೆಯಲ್ಲಿ ಜಳಕ ಮಾಡಿ ಊಟ ಮಾಡಿ ರಾತ್ರಿ 10ಘಂಟೆಗೆ ಎಲ್ಲರೂ ಗಾಡನಿದ್ದೆಯಲ್ಲಿ.

ದಿನ 3 -27/12/2010 ಮುಕ್ಲೊಡುವಿನಿಂದ ಕಾಲೂರು , ಮಂದಲಪಟ್ಟಿಯ ಮೂಲಕ -

ಬೆಳಿಗ್ಗೆ 8.30 ಚಾರಣ ಶುರು. ಮೊದಲು 45 ನಿಮಿಷದವರಗೆ ಕಾಡಿನ,ಬೆಟ್ಟದ ಕಡಿದಾದ ಹಾದಿ.ನಂತರ ಸಿಗುವುದು ಟಾರ್ ರಸ್ತೆ. .ಈ ರಸ್ತೆ ಮುಂದೆ ಪುಷ್ಪಗಿರಿ ನಾಷನಲ್ ಪಾರ್ಕಗೆ ತಲುಪುವುದು .ಈ ಪ್ರದೇಶದ ಪಶ್ಮಿಮ ಘಟ್ಟಗಳ ವಿಹಂಗಮ ನೋಟ.ಈ ಪ್ರದೇಶಕ್ಕೆ ಮಂದಲಪಟ್ಟಿ ಪ್ರದೇಶವೆನ್ನುವರು. ಈ ದಿನದ ಚಾರಣದಲ್ಲ ಹಳ್ಳ-ಕೊಳ್ಳಗಳನ್ನು ದಾಟುತ್ತ,ಒಮ್ಮೆ ಕಾಡಿನಲ್ಲಿ,ಒಮ್ಮೆ ಬೆಟ್ಟದ ಮೇಲೆ,ನಂತರ ಕಾಫಿ ತೋಟಗಳ ಮಜವನ್ನು ಸವಿಯುತ್ತಾ ಕಾಲೂರು ಕ್ಯಾಂಪ್ ತಲುಪಿದಾಗ ಸಮಯ 3.30. ಕಾಲೂರು ಕ್ಯಾಂಪ್ ಸಹಿತ ಹೊಳೆ ಪಕ್ಕದಲ್ಲಿದ್ದು, ದಾರಿಯುದ್ದಕ್ಕೂ ಅನೆಗಳ ಹೋದ ಹಾದಿ ಕಂಡು ಬಂದವು. ಈ ಗ್ರಾಮದಲ್ಲಿ ವರ್ಷವಿಡಿ ಆನೆ ಕಾಟ ಹಂದಿ ಕಾಟ ಸರ್ವೆಸಾಮಾನ್ಯ.ಅದಕ್ಕೆ ಇಲ್ಲಿ ಅಪರೂಪಕ್ಕೆ ಕಾಣುವ ಜನರು ,ಕೋವಿ ಹಿಡಿದುಕೊಂದು ತಿರುಗುವುದು ಸಾಮಾನ್ಯ.

.ನದಿ ಪಕ್ಕ ಇರುವ ಕ್ಯಾಂಪ್ ಸೈಟ್,ನದಿಯ ಜುಳು ಜುಳು ನಿನಾದ, ಅದರಲ್ಲಿ ಹರಿಯುತ್ತಿರುವ ಝಳ ಝಳ ನೀರು,ಹಕ್ಕಿಗಳ ಚಿಲಿಪಿಲಿ ,ಮೋಡದಿಂದ ಸುತ್ತುವರೆದ ಪರ್ವತಗಳು,ಒಂದು ಅದ್ಬುತ ದ್ರಶ್ಯವನ್ನು ಕಟ್ಟಿಕೊಡುತ್ತವೆ.ರಾತ್ರಿ ಕ್ಯಾಂಪ್-ಪೈರನಲ್ಲಿ ಚಳಿ ಕಾಯಿಸುವುದು ಒಳ್ಳೆಯ ಅನುಭವ.ಬೆಳೆಗ್ಗೆ ಎದ್ದಾಗ,ಚುಮು ಚುಮು ಚಳಿ,ಮರದ ಮೇಲಿನ ತುಂತುರು ಹನಿಗಳು,ಇಬ್ಬನಿಯಿಂದ ಆರ್ವತವಾದ ಪರ್ವತಗಳು,ನದಿಯ ನೀರಿನ ಮೇಲಿಂದ ಬರುತ್ತಿವ ಮಂಜಿನ ಹೊಗೆ,ಈ ಸಮಯದಲ್ಲಿ ಚಳಿಯಿಂದ ನಡುಗುತ್ತ ತಿರುಗುವ ಮಜವನ್ನು ವರ್ಣಿಸಲಸಾದ್ಯ.

ಮುಂದುವರೆವುದು...

Saturday, January 01, 2011

ನಿಸರ್ಗದ ಮಡಿಲಲ್ಲಿ - ಕೊಡಗು ಚಾರಣ

ಪ್ರೇರಣೆ ಮತ್ತು ಅರ್ಪಣೆ - ಪೂರ್ಣಚಂದ್ರ ತೇಜಸ್ವಿಯವರಿಗೆ.ನಿಸರ್ಗದ ಚಲುವಿನ ಖಣಿ,ಚಾರಣಿಗರ ಕಣ್ಮಣಿಯಾದ ಕೊಡಗಿನಲ್ಲಿ YHAI(youth Hostel Assocation of India)ಎರ್ಪಡಿಸಿದ ಆರು ದಿನದ ಚಾರಣಕ್ಕೆ ಜನರಲ್ ತಿಮ್ಮಯ್ಯ ಸ್ಟೇಡಿಯಮಗೆ ಬಂದಿಳಿದಾಗ ಸಮಯ ರಾತ್ರಿ 8.15. ಅದಾಗಲೇ ಚಾರಣದ ಕುರಿತು ಮಾಹಿತಿಯನ್ನು ಡಾಸತೀಶ ಕನ್ನಯ್ಯ ನೀಡುತ್ತಿದ್ದರು.
ಕೊಡಗು ಪಶ್ಮಿಮ ಘಟ್ಟಗಳಲ್ಲಿ ಪ್ರಮುಖವಾಗಿದ್ದು, ಉತ್ತರ ರೇಖಾಂಶ 11 ಡಿ 56’ದಿಂದ 12 ಡಿ 57'ವರಗೆ, ಪೂರ್ವದಲ್ಲಿ ಅಕ್ಷಾಂಶ 75 ಡಿ 22’ ದಿಂದ 76 ಡಿ 12’ವರಗೆ ಈ ಭೌಗಳಿಕ ಪ್ರದೇಶವಿದೆ. ದಕ್ಷಿಣಕ್ಕೆ 96 ಕಿ.ಮೀ ದೂರದಲ್ಲಿ ಬ್ರಹ್ಮಗಿರಿ ಪರ್ವತಗಳಿದ್ದು,ಅಲ್ಲಿಯೇ ಕನ್ನಡಿಗರ ತಾಯಿಯಾದ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿದ್ದು, ಉತ್ತರದ್ದಲ್ಲಿ ಹೇಮಾವತಿ ಮಂದವಾಗಿ ಹರಿಯುತ್ತಾಳೆ. ಪಶ್ಮಿಮದ ಕಡೆ,ಸಂಪಾಜೆಯಿಂದ ಪೂರ್ವದ ಕುಶಾಲನಗರದವರಗೆ 64 ಕಿ.ಮೀವರಗೆ ಕೊಡಗು ಜೆಲ್ಲೆ ಹಬ್ಬಿದೆ. ಕೂರ್ಗ, ಕೊಡಗಿನ ಆಂಗ್ಲಿಕರಣವಾಗಿದ್ದು, ಕೊಡಗು ಅನ್ನೊ ಹೆಸರು, ಕೂಡಿ ಮಲೆನಾಡು ಎಂಬ ಹೆಸರಿನಿಂದ ಬಂದಿದೆ. ಕೂಡಿ ಮಲೆನಾಡೆಂದರೆ, ಕಡಿದಾದ ಪ್ರಪಾತಗಳುಳ್ಳ ದಟ್ಟವಾದ ಕಾಡಿನಿಂದ ಕೂಡಿದ ಪ್ರದೇಶ.ಭಾರತದ ಸ್ವಿಜ್ಜರಲ್ಯಾಂಡ, ದಕ್ಷಿಣ ಭಾರತದ ಕಾಶ್ಮೀರ ಎಂದೇಲ್ಲಾ ಬಿರುದುಗಳುಳ್ಳ ಕೊಡಗು ಚಾರಣಿಗರ ಸ್ವರ್ಗವಾಗಿದೆ.

ದಿನ 1- 25/12/2010 ಗಾಳಿಬೀಡುವಿನಿಂದ ತಂತಿಪಾಲ

ಬೆಸಕ್ಯಾಂಪ ಮಡಿಕೇರಿಯಿಂದ ಗಾಳಿಬೀಡು ಕ್ಯಾಂಪಗೆ ಜೀಪನಲ್ಲಿ. ಗಾಳಿಬೀಡುವಿನಿಂದ ತಂತಿಪಾಲ ಕ್ಯಾಂಪವರಗೆ ಕ್ಯಾಂಪ ಲೀಡರ ಪ್ರಕಾರ 14ಕಿ.ಮೀ ಚಾರಣ. ಆದರೆ ಅದು 17-18 ಕಿ.ಮೀವರಗೆ ಇದ್ದು,ಬೆಳಿಗ್ಗೆ ಅಬ್ಬಿ ಫಾಲ್ಸ್ ಮೂಲಕ ಕಾಡು ಹಾದಿ,ಜೀಪ್ ಹಾದಿ, ಕಾಫಿ ಪ್ಲಾಂಟೇಶನನಲ್ಲಿ ಚಾರಣ ಗೈಡ ರಮೇಶ ಜೊತೆ. ಚಾರಣದ್ದಕ್ಕೂ ಮೊದಲು ಅಬ್ಬಿ ಹಳ್ಳ ,ನಂತರ ಇನ್ನೊಂದು ಹಳ್ಳ ನಮ್ಮ ೩೧ ಜನರ ತಂಡಕ್ಕೆ ಜೊತೆ ನೀಡಿತು.

ಕಾಡಿನಲ್ಲಿ ಚಿತ್ರ-ವಿಚಿತ್ರ ಚಿಟ್ಟೆಗಳು,ಸಣ್ಣ ಮರಗಳು,ದೊಡ್ಡ ಮರಗಳು,ಗಿಡಗಂಟಿಗಳು,ಭೂತಾಕಾರದ ಮರಗಳು,ಪಕ್ಷಿಗಳ ಚಿಲಿಪಿಲಿ,ತರಾವರಿ ಗುಬ್ಬಿಗಳು,ಚಿಂ,ಚಿಂ ಅನ್ನುವ ಗಿಳಿಗಳು,ಕೊಟ್-ಕೊಟರ್ ಅನ್ನುವ ಮರಕುಟಿಕಗಳು,ಕಾಡಿನ ತುಂಬಾ ಕೇಳಿ ಬರುವ ಜೀಯ್ ಅನ್ನುವ ಜಿರುಂಡೆ ನಿನಾದ,ಮಂಡೆಮುಕ್ರ ,ವಿವಿಧ ತರದ ಗಿಡಮೂಲಿಕೆಗಳನ್ನು ನೋಡಿ ಆನಂದಿಸಬೇಕಾದರೇ,ನೀವು ಚಾರಣದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ನಿಶಬ್ದವಾಗಿ ಚಾರಣ ಮಾಡಬೇಕು. ನೀವು ಗುಂಪಿನಲ್ಲಿ ಜನರೊಂದಿಗೆ ಹರಟೆ ಹೊಡೆಯುತ್ತಾ ಬಂದರೋ,ನೀವು ಯಾವುದೋ ಮಾರ್ಕೆಟನಲ್ಲಿ ಇಲ್ಲಾ ಸಂತೆಯಲ್ಲಿ ನಡೆದ ಹಾಗಿರುತ್ತದೆ. ಈ ಸಂಗತಿ ತುಂಬಾ ಜನ ಅರ್ಥ ಮಾಡಿಕೊಳ್ಳಲ್ಲಾ ಅನ್ನೊದು ಮಾತ್ರ ಬೇಸರದ ಸಂಗತಿ :(

ಮುಂದವರಿಯುದು...