ನಿಸರ್ಗದ ಚಲುವಿನ ಖಣಿ,ಚಾರಣಿಗರ ಕಣ್ಮಣಿಯಾದ ಕೊಡಗಿನಲ್ಲಿ YHAI(youth Hostel Assocation of India)ಎರ್ಪಡಿಸಿದ ಆರು ದಿನದ ಚಾರಣಕ್ಕೆ ಜನರಲ್ ತಿಮ್ಮಯ್ಯ ಸ್ಟೇಡಿಯಮಗೆ ಬಂದಿಳಿದಾಗ ಸಮಯ ರಾತ್ರಿ 8.15. ಅದಾಗಲೇ ಚಾರಣದ ಕುರಿತು ಮಾಹಿತಿಯನ್ನು ಡಾಸತೀಶ ಕನ್ನಯ್ಯ ನೀಡುತ್ತಿದ್ದರು.
ಕೊಡಗು ಪಶ್ಮಿಮ ಘಟ್ಟಗಳಲ್ಲಿ ಪ್ರಮುಖವಾಗಿದ್ದು, ಉತ್ತರ ರೇಖಾಂಶ 11 ಡಿ 56’ದಿಂದ 12 ಡಿ 57'ವರಗೆ, ಪೂರ್ವದಲ್ಲಿ ಅಕ್ಷಾಂಶ 75 ಡಿ 22’ ದಿಂದ 76 ಡಿ 12’ವರಗೆ ಈ ಭೌಗಳಿಕ ಪ್ರದೇಶವಿದೆ. ದಕ್ಷಿಣಕ್ಕೆ 96 ಕಿ.ಮೀ ದೂರದಲ್ಲಿ ಬ್ರಹ್ಮಗಿರಿ ಪರ್ವತಗಳಿದ್ದು,ಅಲ್ಲಿಯೇ ಕನ್ನಡಿಗರ ತಾಯಿಯಾದ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿದ್ದು, ಉತ್ತರದ್ದಲ್ಲಿ ಹೇಮಾವತಿ ಮಂದವಾಗಿ ಹರಿಯುತ್ತಾಳೆ. ಪಶ್ಮಿಮದ ಕಡೆ,ಸಂಪಾಜೆಯಿಂದ ಪೂರ್ವದ ಕುಶಾಲನಗರದವರಗೆ 64 ಕಿ.ಮೀವರಗೆ ಕೊಡಗು ಜೆಲ್ಲೆ ಹಬ್ಬಿದೆ. ಕೂರ್ಗ, ಕೊಡಗಿನ ಆಂಗ್ಲಿಕರಣವಾಗಿದ್ದು, ಕೊಡಗು ಅನ್ನೊ ಹೆಸರು, ಕೂಡಿ ಮಲೆನಾಡು ಎಂಬ ಹೆಸರಿನಿಂದ ಬಂದಿದೆ. ಕೂಡಿ ಮಲೆನಾಡೆಂದರೆ, ಕಡಿದಾದ ಪ್ರಪಾತಗಳುಳ್ಳ ದಟ್ಟವಾದ ಕಾಡಿನಿಂದ ಕೂಡಿದ ಪ್ರದೇಶ.ಭಾರತದ ಸ್ವಿಜ್ಜರಲ್ಯಾಂಡ, ದಕ್ಷಿಣ ಭಾರತದ ಕಾಶ್ಮೀರ ಎಂದೇಲ್ಲಾ ಬಿರುದುಗಳುಳ್ಳ ಕೊಡಗು ಚಾರಣಿಗರ ಸ್ವರ್ಗವಾಗಿದೆ.
ದಿನ 1- 25/12/2010 ಗಾಳಿಬೀಡುವಿನಿಂದ ತಂತಿಪಾಲ
ಬೆಸಕ್ಯಾಂಪ ಮಡಿಕೇರಿಯಿಂದ ಗಾಳಿಬೀಡು ಕ್ಯಾಂಪಗೆ ಜೀಪನಲ್ಲಿ. ಗಾಳಿಬೀಡುವಿನಿಂದ ತಂತಿಪಾಲ ಕ್ಯಾಂಪವರಗೆ ಕ್ಯಾಂಪ ಲೀಡರ ಪ್ರಕಾರ 14ಕಿ.ಮೀ ಚಾರಣ. ಆದರೆ ಅದು 17-18 ಕಿ.ಮೀವರಗೆ ಇದ್ದು,ಬೆಳಿಗ್ಗೆ ಅಬ್ಬಿ ಫಾಲ್ಸ್ ಮೂಲಕ ಕಾಡು ಹಾದಿ,ಜೀಪ್ ಹಾದಿ, ಕಾಫಿ ಪ್ಲಾಂಟೇಶನನಲ್ಲಿ ಚಾರಣ ಗೈಡ ರಮೇಶ ಜೊತೆ. ಚಾರಣದ್ದಕ್ಕೂ ಮೊದಲು ಅಬ್ಬಿ ಹಳ್ಳ ,ನಂತರ ಇನ್ನೊಂದು ಹಳ್ಳ ನಮ್ಮ ೩೧ ಜನರ ತಂಡಕ್ಕೆ ಜೊತೆ ನೀಡಿತು.
ಮುಂದವರಿಯುದು...
2 comments:
ಮಹಾಂತೇಶ,
ನೀವು ಹೇಳುತ್ತಿರುವದು ವಾಸ್ತವವಾಗಿದೆ. ಚಾರಣದ ಸೊಬಗು ಸಿಗುವದು ನಿಶ್ಶಬ್ದ ವಾತಾವರಣದಲ್ಲಿಯೇ.
ಮುಂದಿನ ಕಂತಿಗಾಗಿ ಕಾಯುತ್ತೇನೆ.
ಸುನಾಥ ಕಾಕಾ,
ಪ್ರತಿಕ್ರಿಯೆಗೆ ಧನ್ಯವಾದಗಳು.ತುಂಬಾ ಜನಕ್ಕೆ ಈ ವಿಷಯ ತಿಳಕೊಳ್ಳದೇ ಇಲ್ಲಾ.
Post a Comment