Friday, September 24, 2010

ಜೋಡಿ!!!

ಬಲು ಅಪರೂಪ ಈ ಜೋಡಿ
ನೋಡಲು ಬಂದರು ಎಲ್ಲಾರೂ ಓಡಿ
ಚಿಕ್ಕವಳಾದ ಚೊಟಿ ಕಿಲಾಡಿ
ದೊಡ್ದವಳಾದ ಸೋನಿ ಮೂಡಿ !!1!!

ಅಜ್ಜಿಯು ಜೊಗುಳ ಹಾಡಿ
ಮಲಗಿಸುವ ಪ್ರಯತ್ನ ನೊಡಿ
ನಗತಾವ ಅಮ್ಮನ ಕಾಡಿ
ಈವುಗಳ ಅಟಕೆ ಅಜ್ಜ ಅಜ್ಜಿ ಮೋಡಿ !!2!!

ರಚ್ಚೆ ಹಿಡದರೆ ಸೋನಿ ಚಂಡಿ ಚಾಮುಂಡಿ
ಸಮಾದನಿಸಬೇಕಾದರೆ ಆಗುವುದು ಚಾರಣ ಚಾರ್ಮುಡಿ
ಎಲ್ಲಾರ ಹತ್ತಿರ ಹೋಗುವ ಚೊಟಿ ಉಂಡಾಡಿ
ಮುಖದಲ್ಲಿ ಹರ್ಷದ ಹೊನುಲು ಹರಸುವ ಸೊಗುಲಾಡಿ !!3!!

ಸೋನಿಯ ಕಾಟ, ಚೊಟಿಯ ಪಾಠ ನೋಡಿ
ಹೋಗಿದ್ದೇ ಗೊತ್ತಾಗೋಲ್ಲ ಸಮಯದ ಬಂಡಿ
ಅಜ್ಜ -ಅಜ್ಜಿಯ ಪ್ರೀತಿಯ ಗಂಡಾಗುಂಡಿ
ತೋರುವರು ಎಲ್ಲರಿಗೂ ಪ್ರೇಮದ ಕಿಂಡಿ !!4!!


ಟಿಪ್ಪಣೆ: ಸೋನು ಮತ್ತು ಚೊಟು (ಅನುಶ್ರೀ ಮತ್ತು ತನುಶ್ರೀ) ನನ್ನ ಹೆಂಡತಿಯ ಅಕ್ಕನ ಅವಳಿ ಮಕ್ಕಳು

4 comments:

sunaath said...

ಮಹಾಂತೇಶ,
ಅಪರೂಪದ ಜೋಡಿಯ ಬಗೆಗೆ ಅಪರೂಪದ ಕವನ ಹೆಣೆದಿದ್ದೀರಿ.
Very interesting.

Mahantesh said...

ಸುನಾಥ ಕಾಕಾ,
ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು....
ನಾನು ಹುಬ್ಬಳ್ಳಿಗೆ ಬರುವುದು ಅವರನ್ನ ನೋಡಕ್ಕೆ ಅಂತ )-

ಅಪ್ಪ-ಅಮ್ಮ(Appa-Amma) said...

ಮಹಾಂತೇಶ್,
ಸುಂದರ ಕವನ ಬರೆದಿದ್ದೀರಿ !
ಸೋನು ಮತ್ತು ಚೊಟುಗೆ ನಮ್ಮ ಶುಭಾಶಯಗಳು

ಗುರು ಸೌರಭ said...

ಮಹಾಂತ
ಸು೦ದರವಾದ ಕವನದೊ೦ದಿಗೆ
ಅಪೂ೯ವ ಜೋಡಿ ಅವಳಿ ಮಕ್ಕಳನ್ನು ನೋಡಿ ಅತ್ಯಾನ೦ದವಾಯಿತು. ವ೦ದನೆಗಳು