Tuesday, December 31, 2013

ನಾಟಕದ ಗೀಳು ಮತ್ತು ಪ್ರದೀಪ ನಾಡಿಗೇರ.



"ಲೇ ಮಾಂತ್ಯಾ ನಾಳೆ ನಮ್ಮ ನಾಟಕ ರಂಗಶಂಕರ/ರವೀಂದ್ರ ಕಲಾಕ್ಷೇತ್ರದಲ್ಲಿದೆ,ತಪ್ಪದೇ ಬಾ." ಅಂತ ನನಗೆ ಪ್ರದೀಪ(ಪದ್ಯಾ) ಹೇಳುವುದು ಮಾಮೂಲು. ಹಾಗೆ ನೋಡಿದರೆ,ನನಗೆ ನಾಟಕದ ಗೀಳು ಹಿಡಿಸಿದ್ದೇ ಪ್ರದೀಪ ನಾಡಿಗೇರ ಅನ್ನುವ ಶಿವಮೊಗ್ಗೆಯ ಕನಸುಗಣ್ಣಿನ ಹುಡುಗ.
೨೦೦೨, ನಮ್ಮ ಇಂಜಿನೀಯರಿಂಗನ ಕೊನಯ ವರ್ಷದ ದಿನಗಳು. ಕೆ.ಎಲ್.ಇ ಬೆಳಗಾಂವಿ ಇಂಜಿನೀಯರಿಂಗನ ಪ್ರಿನ್ಸಿಪಾಲರು ತಮ್ಮ ತಂದೆ/ಅಜ್ಜನ ನೆನಪಿಗೊಸ್ಕರ ನಾಟಕೊತ್ಸವವನ್ನು ಉತ್ತರ ಕರ್ನಾಟಕದ ಇಂಜಿನೀಯರಿಂಗ ಕಾಲೇಜುಗಳಿಗಾಗಿ ಎರ್ಪಡಿಸಿದ್ದರು.ನಾನು ಅಲ್ಲಿ ಕೊನಯ ವರ್ಷದ ಪ್ರೊಜಕ್ಟಗಾಗಿ ಬೆಳಗಾಂವಿಲ್ಲಿದ್ದಾಗ,ಪ್ರದೀಪ ತನ್ನ ತಂಡ (ಸ್ನೇಹಿತರು,ಕಾಲೇಜು ಜ್ಯೂನಿಯರ್ಸ) ಕಟ್ಟಿಕೊಂಡು ಬಂದಿದ್ದ. ಮೊದಲು ಎರಡು ಮೂರು ನಾಟಕಗಳು ಹಿಂದಿ ಮತ್ತು ಇಂಗ್ಲಿಷನಲ್ಲಿದ್ದ ಹಾಗೆ ನೆನಪು.ಪ್ರದೀಪನ ತಂಡದ "ಆಕಸ್ಮಿಕ" ನಾಟಕ ಶುರುವಾದಾಗ ಗೌಜು ಗದ್ದಲ,ಕನ್ನಡ ನಾಟಕವೆನ್ನುವ ಅಲಕ್ಷ್ಯ ಬೇರೆ.ಅದಿದ್ದದ್ದು ಕೆಲವೇ ಕ್ಷಣ. ನಾಟಕ ಮುಂದುವರದಂತೆ,ಇನ್ನು ಆಳಕ್ಕೆ ಇಳಿದಂತೆ ನೆರದಿದ್ದ ಪ್ರೇಕ್ಷಕರೆಲ್ಲರೂ ಮಂತ್ರಮುಗ್ದ.ನಾಟಕ ಮುಗಿಯುವರಗೆ ತಮ್ಮ ಸ್ಥಳ ಬಿಟ್ಟು ಕದಲಲಿಲ್ಲ.ಪ್ರದೀಪನು ಮುಖ್ಯ ಪಾತ್ರದಲ್ಲಿದ್ದು,ನಿರ್ಧೇಶನ ,ರಂಗ ಸಜ್ಜಿಕೆ ,ಪ್ರಸಾಧನ ಮತ್ತು ಹಿನ್ನಲೆ ಸಂಗೀತದ ಹೊಣೆ ಹೊತ್ತಿದ್ದ.ಆ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ.ನಾಟಕ ಶುರುವಾದಗಿನ ಟೆಂಪೊ ,ನಾಟಕ ಮುಗಿಯುವವರಗೆ ಹಿಡಿದು ,ನಾಟಕವವನ್ನು ಯಶಸ್ವಿಯಾಗಿಸಿದ.ಯಾವದೇ ಅನುಭವಗಳಿಲ್ಲದ ಪ್ರಸಾದ, ಅರವಿಂದ, ಸಿದ್ದಾರ್ಥ ಭಟ ಮತ್ತಿತ್ತರ ಜೊತೆಯಲ್ಲಿ ಕಟ್ಟಿಕೊಟ್ಟ ’ಆಕಸ್ಮಿಕ’ ಪ್ರೇಕ್ಷಕರಿಗೆಲ್ಲ ಮೋಡಿ ಮಾಡಿತು.ನಾಟಕದಲ್ಲಿ ಕನಸು ಬೀಳುವ ಬಗೆ ತೋರಿ,ಮುಂದೆ ಎನಾಗುತ್ತೆ ಎನ್ನುವ ಕುತೂಹಲ ಕೊನೆಯವರಗೆ ಉಳಿಸಿಕೋಂಡ "ಆಕಸ್ಮಿಕಕ್ಕೆ" ಪ್ರಥಮ ಬಹುಮಾನ ಸಿಗುವಂತೆ ಮಾಡಿದವು.ಎಲ್ಲರ ನಿರೀಕ್ಷೆಯಂತೆ ಪ್ರದೀಪಗೆ ಅತ್ತ್ಯತ್ತಮ ನಟ ಹಾಗು ಇನ್ನು ಹಲವಾರು ಪ್ರಶಸ್ತಿಗಳ ಸುರಿಮಳೆಯಾಯಿತು. ಮುಂದೆ ಇದೇ ನಾಟಕವನ್ನು ನಮ್ಮ ಕಾಲೇಜಿನ (ಬಸವೇಶ್ವರ ಇಂಜಿನೀಯರಿಂಗ ಕಾಲೇಜು) ಆನ್ಯುವಲ್ ಡೇನಲ್ಲಿ ಆಡಿಸಿ ಎಲ್ಲರಿಂದ ಸೈ ಅನ್ನಿಸಿಕೊಂಡ.
ಮುಂದಿನ ವರ್ಷ(೨೦೦೩) ಪ್ರದೀಪನ ಇಂಜಿನೀಯರಿಂಗನ ಕೊನೆ ವರ್ಷ, ಮತ್ತೆ ಕೆ.ಎಲ್.ಇ ಬೆಳಗಾಂವಿ ಪ್ರದೀಪ ಮತ್ತು ತಂಡ ’ಮಳೆ ನಿಲ್ಲುವವರಗೆ’ ಅನ್ನುವ ನಾಟಕ. ಮುಖ್ಯ ಪಾತ್ರಧಾರಿಯಾಗಿ ಸೇಲ್ಸಮನನಾಗಿ,ನಿರ್ಧೇಶನ,ರಂಗ ಸಜ್ಜಿಕೆ,ಪ್ರಸಾಧನ ಮತ್ತು ಹಿನ್ನಲೆ ಸಂಗೀತದಲ್ಲಿ ಪ್ರದೀಪ ಮತ್ತೊಮ್ಮೆ ಯಶಸ್ವಿಯಾದ.ಮಳೆ ಹನಿ ಬೀಳುವ ಟಪ್ ಟಪನ ಹಿನ್ನಲೆ ಸಂಗೀತ, ಪ್ರದೀಪನ ಅತ್ತುತ್ತ್ಯಮ ಅಭಿನಯ ಪ್ರಸಾದ,ಸಿದ್ದಾರ್ಥ ಭಟರ ಲವಲವಿಕೆಯ ಅಭಿನಯ ,ಮತ್ತೆ ಪ್ರದೀಪ ತಂಡಕ್ಕೆ ಪ್ರಥಮ ಬಹುಮಾನ.ಮೂರನೇ ವರ್ಷ ಭಾಗವಹಿಸಿದ್ದರೇ, ಹ್ಯಾಟ್ರಿಕ್ ಸಾಧನೆ ಮಾಡುವದರಲ್ಲಿ ಯಾವದೇ ಸಂಶಯವಿರಲಿಲ್ಲ.

ಬೆಂಗಳೂರಿಗೆ ಬಂದ ಮೇಲೆ, ಸಾಪ್ಟವೇರನಲ್ಲಿ ಬದುಕು ಕಟ್ಟಿಕೊಂಡ ಮೇಲೆ, ಮತ್ತೆ ಪ್ರದೀಪಗೆ ಹವ್ಯಾಸಿ ರಂಗಭೂಮಿಯ ಸೆಳತ. ಕಲಾ ಗಂಗೋತ್ರಿ ಹವ್ಯಾಸಿ ರಂಗತಂಡದೊಡನೆ ನಂಟು. ಕಲಾ ಗಂಗೋತ್ರಿ ನಾಟಕಗಳಾದ, ಮೈಸೂರು ಮಲ್ಲಿಗೆಯ ಮೊದಲಿನ ಪ್ರದರ್ಶನಗಳಲ್ಲಿ ಯುವ ಪ್ರೇಮ ಕವಿಯಾಗಿ,ಇತ್ತಿಚೀನ ದಿನಗಳ ಪ್ರದರ್ಶನಗಳಲ್ಲಿ ಬಳೆಗಾರ ಚೆನ್ನಯ್ಯನಾಗಿ,ಕನ್ನಂಬಾಡಿ ಕಟ್ಟದಿದ್ದರೆಯಲ್ಲಿ ಮೈಸೂರು ಮಹರಾಜನಾಗಿ, ಮಂದ್ರದಲ್ಲಿ ಸಂಗೀತಗಾರನಾಗಿ, ಮೂಕಜ್ಜಿಯ ಕನಸುಗಳಲ್ಲಿ ನಾರಯಣನಾಗಿ ರಂಗಭೂಮಿಯಲ್ಲಿ ಸಕ್ರೀಯ.    



೨೦೧೨ರಲ್ಲಿ ೮-೧೦ ಹವ್ಯಾಸಿ ಕಲಾವಿದರು ಸೇರಿ ರಚಿಸಿದ ’ಯುವಶ್ರೀ’ ತಂಡದ ಸೂತ್ರದಾರ.ವಿಜಯ ಕರ್ನಾಟಕದ ಯುವ ಘರ್ಜನೆ ನಾಟಕ ಉತ್ಸವದಲ್ಲಿ,ಡಾ.ಚಂದ್ರಶೇಖರ ಕಂಬಾರ ರಚಿತ "ಹರಕೆಯ ಕುರಿ" ನಾಟಕದ ನಿರ್ದೇಶನ ಮತ್ತು ದ್ವೀತಿಯ ಸ್ಥಾನ.

ಕಂಡ ಕನಸು ಬೆನ್ನು ಹತ್ತಿ,ಅದನ್ನು ಸಾದ್ಯವಾಗಿಸಿಕೊಂಡು,ಹವ್ಯಾಸಿ ರಂಗಭೂಮಿಯಲ್ಲಿ ತಲ್ಲೀನ.೨೦೧೩ ವರ್ಷದ ಕೊನೆ ದಿನ(೩೧/೧೨/೨೦೧೩) ಪ್ರದೀಪ ನಿರ್ದೇಶನ ಹರಕೆಯ ಕುರಿ ರಂಗಶಂಕರದಲ್ಲಿ ಯಶಸ್ವಿಯಾಗಿ(ಫ಼ುಲ್ ಹೌಸ್) ಪ್ರದರ್ಶನ ಕಂಡದ್ದನ್ನು ನೋಡಿ ತುಂಬಾ ಸಂತಸಪಟ್ಟವರಲ್ಲಿ ನಾನೊಬ್ಬ.

ನನಗೆ ನಾಟಕದಲ್ಲಿ ಆಸಕ್ತಿ ಮೂಡಿಸಿ, ಅದ್ದನ್ನೇ ಗೀಳಾಗಿಸಿದ ಪ್ರದೀಪ ಹವ್ಯಾಸಿ ರಂಗಭೂಮಿಯಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳಯಲಿ ಎಂದು ಹಾರೈಸುವ,

ಮಹಾಂತೇಶ.

4 comments:

Vinod M said...

Padya rocks..salute to his talent

Prashant Patil said...

ನಮಸ್ಕಾರಾ,

ಹಳೆ ನೆನಪು ಕೆದಕಿದ್ದಕ್ಕ ಧನ್ಯವಾದ. ನೀ ಹೇಳೋದು ಖರೆ ಆದ. ಪ್ರದೀಪ್ ಭಾಳ ಪ್ರತಿಭೆ ಇರೋ ಮನುಷ್ಯ. 2002 ರಾಗ ಆಡಿದ ನಾಟಕದ ಹೆಸರು ನನಗ ಅನಿಸೋ ಮಟ್ಟಿಗೆ "ಅನಿರೀಕ್ಷಿತಗಳು" ಅಂತ. ದೇವರು ಅವಂಗ ಒಳ್ಳೆದು ಮಾಡ್ಲಿ.

sunaath said...

ಇಷ್ಟೆಲ್ಲಾ ಟ್ಯಾಲೆಂಟ್ ಇರೋ ಯುವಕನ ಬಗೆಗೆ ಓದಿ ಭಾಳಾ ಸಂತೋಷ ಆತು. ಅವರಿಗೆ ಹೆಚ್ಚೆಚ್ಚೆ ಯಶಸ್ಸು ಸಿಗಲಿ. ನಿಮಗೆಲ್ಲರಿಗೂ ಹೊಸ ವರ್ಷದ ಹಾರೈಕೆಗಳು.

Hi said...

Nice to see pradeep pursuing his interest...I miss the Literary environment of Kannada a lot...Nice to see Mahantesh's blogs...:-)