Saturday, March 28, 2015

ಕಡಲು


ಕಡಲಿನ ಅಲೆಗಳ ಮೊರೆತ
ಮನಸಿನ ವಿಚಾರಗಳ ಭೊರ್ಗರಿತ
ಸಾಗರ ಕಾಣಿಸಿದೆ ಉಲ್ಲಾಸ
ಮನ ತುಂಬಿ ಬಂದಿದೆ ಸಂತಸ

ತುಂಬಿದೆ ಭೂಮಿಯ ಒಡಲು
ನಾ ದೊಡ್ಡವ ಅನ್ನುವ ತೇವಲು
ಸಾಗರದ ಎದರು ನಾವೆಷ್ಟು ಕೇವಲು
ಸ್ಠಿತಿಪ್ರಜ್ಞೆಯಂತೆ ಅನವರತ ಕಡಲು

ಸಿದ್ದಾರ್ಥ ಬುದ್ದನೇಕೆ ಆದ ?
ಅವನಿಗೆ ಬೇಕಿತ್ತೆ ಸಂಸಾರದ ಮೊಕ್ಷ್ಯ ?
ಕಳೆದುಕೊಂಡ ಪರಿವಾರದ ಸಖ್ಯ
ಎಲ್ಲ ಬುದ್ದನಂತರಾದರೆ ಬೆಳೆಯುವದೇ ಜಗತ್ತು?

ಯಾರಾದರೂ ಪಾರಾಗುವುದೇ ಸಂಸಾರದ ಚಿಂತೆ?
ಅನಿಸುವುದು ಇರಬೇಕು ಬಹುಬಲಿಯ ಹಾಗೆ...
ಹಮ್ಮು ಬಿಮ್ಮುಗಳನು ಬಿಸಾಕಿ ಆಚೆ
ನಿರ್ಗವ ಶಾಂತ ಮಂದಸ್ಮಿತನಂತೆ.....

1 comment:

sunaath said...

ಕಡಲಿನ ಅಗಾಧತೆ ತಾತ್ವಿಕ ಚಿಂತನೆಯನ್ನು ಮೂಡಿಸುವುದು ಸಹಜ. ಆ ಚಿಂತನೆ ನಿಮ್ಮಲ್ಲಿ ಕಡಲಿನಂತೆಯೇ ಉಕ್ಕಿದೆ.