Friday, July 21, 2006

ಚಾಲುಕ್ಯರ ಬೀಡಿನಲ್ಲಿ, ಗಂಡುಮೆಟ್ಟಿದ ನಾಡಿನಲ್ಲಿ.




1) "ಹುಲಿಯು ಹುಟ್ಟಿತ್ತು ಕಿತ್ತೂರ ನಾಡ್ಯಾಗ
ಅಣ್ಣ ರಾಯಣ್ಣನೆಂಬ ಹುಲಿ ಸಂಗೋಳ್ಳಿ ಊರಾಗ"
.............................................................

2) "ಮಂಗ್ಯನ ಕುಲದವ ಸಂಗೋಳ್ಳಿ ರಾಯಣ್ಣ
ಟೊಂಗಿ ಟೊಂಗಿ ಜಿಗದ್ಯಾನ..............."
.................................................

ಮೇಲಿನ ಗೀಗೀ ಪದ(ಲಾವಣಿ)ಗಳಿಂದ ನಮ್ಮ ಸಂಗೋಳ್ಳಿ ರಾಯಣ್ಣನ ಬೆಳಗಾಂವ ಜಿಲ್ಲೆಯಾದಂತ್ಯ ಪ್ರಸಿದ್ದ. ಮೊದಲನೆ ಗೀಗೀ ಪದ ರಾಯಣ್ಣನ ಹಿರಿಮೆ ಹೇಳಿದರೆ,ಎರಡನೆಯದು ಆತನ ಗೆರಿಲ್ಲಾ ಯುದ್ಡ ತಂತ್ರಗಳ ಬಗ್ಗೆ.(ನನಗೆ ಪೂರ್ತಿಯಾಗಿ ಯಾವ ಗೀಗೀ ಪದಗಳು ಈಗ ನೆನಪಿರದ ಕಾರಣ,ಗೊತ್ತಿರುವದನ್ನೇ ಬರದಿದ್ದಿನಿ).ಗಂಡು ಮೆಟ್ಟಿನ ಸ್ಥಳವಾದ ಬೈಲಹೊಂಗಲ ತಾಲ್ಕು, ಚಾಲುಕ್ಯರ ಬೀಡಾದ ಬದಾಮಿ ನನಗೆ ಯಾವಗಲೂ ಇಷ್ಟವಾದ ಸ್ಥಳಗಳೇ.ನನ್ನ ತಾಯಿಯ ತವರುಮನೆ ಬೈಲಹೊಂಗಲ.ಎಲ್ಲಾ ಮಕ್ಕಳಂತೆ ನಮ್ಮ ಬೇಸಿಗೆಯ ರಜಗಳು ಕಳೆಯುತ್ತಿದ್ದು ಇಲ್ಲೆ.ಹುಟ್ಟಿದ್ದು ಮತ್ತೆ ಕಾಲೇಜು ಕಲಿತಿದ್ದು ಬೈಲಹೊಂಗಲದಲ್ಲಿ ಆದ ಕಾರಣ ಈ ಸ್ಥಳಕ್ಕೂ ನನಗೂ ಭಾರಿ ನಂಟು.ಕಲ್ಮಠಗಲ್ಲಿಯಲ್ಲಿ ನಮ್ಮ ಅಜ್ಜನ ಮನೆ.ಕಲ್ಮಠರು ಚೆನ್ನಮ್ಮಾಳ ಗುರುಗಳು. ಪ್ರಾಯಶಃ ಯುದ್ದದ ತಂತ್ರಗಳು,ಕತ್ತಿವರಸೆ,ಕುದರೆ ಸವಾರಿ ಕಲಿತಿದ್ದು ಇಲ್ಲೆ ಅನ್ಸುತ್ತೆ. ಇದೇ ಕಾರಣಕ್ಕಾಗಿ ಎನೋ ಕಲ್ಮಠ ಓಣಿಯಲ್ಲೆ, ಚೆನ್ನಮ್ಮ ಸಮಾದಿ ಪಾರ್ಕ್ ಇರುವುದು.
ಚೆನ್ನಮ್ಮಾ ಮದ್ವೆಯಾದದ್ದು ಮಲ್ಲಸರ್ಜನೆಂಬ ಕಿತ್ತೂರ ಸಂಸ್ಥಾನದ ದೊರೆಯನ್ನ.ಮಲ್ಲಸರ್ಜನು 1818ರಲ್ಲಿ ತೀರಿಕೊಂಡನು. ಈ ದಂಪತಿಗಳ ಒಬ್ಬನೆ ಮಗ 1824ರಲ್ಲಿ ಅಕಾಲ ಮರಣಕ್ಕೆ ತುತ್ತಾದಗ, ಚೆನ್ನಮ್ಮಳು ಶಿವಲಿಂಗಪ್ಪ ಎಂಬುವನನ್ನು ದತ್ತಕಕ್ಕೆ ತಗೆದುಕೊಂಡು ಸಿಂಹಾಸನದ ಮೇಲೆ ಕುರಿಸಿದಳು.ಈದಕ್ಕೆ ಅಗಿನ ಬ್ರಿಟಿಷ್ ಸರ್ಕಾರ ಒಪ್ಪದ ಕಾರಣ,ರಾಣಿ ಚೆನ್ನಮ್ಮಾ ಮತ್ತು ಬ್ರಿಟಿಷ್ ನಡುವೆ ಯುದ್ದ ಫ್ರಾರಂಭವಾಯಿತು.ಸಂಗೋಳ್ಳಿ ರಾಯಣ್ಣ ಈ ಯುದ್ದದಲ್ಲಿ ಚೆನ್ನಮ್ಮಳಿಗೆ ಜೊತೆಯಾದನು. ಗೆರಿಲ್ಲಾ ತಂತ್ರದಲ್ಲಿ ನಿಪುಣನಾದ ಈತನ ಸಹಾಯದಿಂದ ಬ್ರಿಟಿಷರನ್ನು ಸೋಲಿಸಿ ,ಥ್ಯಾಕರೆ ಎಂಬ ಅಧಿಕಾರಿಯ ಹತ್ಯೆಯಾಗಿ ಚೆನ್ನಮ್ಮಾಳಿಗೆ ಜಯವಾಯಿತು.ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಮತ್ತೊಮ್ಮೆ ಕಿತ್ತೂರನ ಮೇಲೆ ದಾಳಿ ಮಾಡಿದರು.ಮಲ್ಲಶೆಟ್ಟಿ ಮೊಸತನದಿಂದ ಚೆನ್ನಮ್ಮಳನ್ನು ಬಂಧಿಸಿ ಬೈಲಹೊಂಗಲದ ಜೈಲನಲ್ಲಿಟ್ರು.ಆವಾಗ ರಾಯಣ್ಣನು ಚೆನ್ನಮ್ಮಾಳನ್ನು ಜೈಲನಲ್ಲಿ ಭೇಟಿಯಾಗಿ ಬ್ರಿಟಿಷರ ವಿರುದ್ದ ಹೋರಾಟವನ್ನು ಮುಂದುವರೆಸಿದನು. ಬ್ರಿಟಿಷರ ವಿರುದ್ದ ಹೋರಾಡಿದ ಫ್ರಥಮ ಮಹಿಳೆಯಾದ ಚೆನ್ನಮ್ಮಾ ಸಮಾದಿ/ಪಾರ್ಕ್ ,ಕಿತ್ತೂರನಲ್ಲಿರುವ ಕೊಟೆ,ಸಂಗೋಳ್ಳಿ ರ್‍ಆಯಣ್ಣನ ಊರುಗಳ ಬಗ್ಗೆ ನಮ್ಮ ಸರ್ಕಾರ ಇನ್ನಸ್ಟು ಕಾಳಜಿ ವಹಿಸಬೇಕು ಅನ್ನೊ ಭಾವನೆ ಮನದಲ್ಲಿ ಬರುತ್ತೆ.
ನನ್ನ ತಂದೆ ಕರ್ನಾಟಕ ಸರ್ಕಾರದ ನೌಕರರು ಆದಕಾರಣ 3 ವರ್ಷಕ್ಕೆ ಗಂಟುಮೂಟೆ ಕಟ್ಟುವುದು ಗ್ಯಾರೆಂಟಿಯಾಗಿತ್ತು.ರ್ಕಾರದ ಕೃಪೆಯಿಂದ 1987ರಲ್ಲಿ ತಂದೆಗೆ ಬದಾಮಿಗೆ ಟ್ರಾನ್ಸಪರವಾಯಿತು.
ಬದಾಮಿಗೆ ಹಲವಾರು ಶತಮಾನಗಳ ಇತಿಹಾಸವಿದೆ.ಆಗಸ್ತ್ಯ ಕಾಲದಲ್ಲಿ ಬದಾಮಿಯ ಉಲ್ಲೇಖವಿದೆ.ಬಾದಾಮಿಗೆ ಮೊದ್ಲು ವಾತಪಿ ಎಂಬ ಹೆಸರಿತ್ತು. ಜನಪದ ಕತೆಯ ಪ್ರಕಾರ ಇಲ್ಲಿ ಮೊದ್ಲು ಯಕ್ಷಣಿ ವಿದ್ಯೆ ಗೊತ್ತಿರುವ ಇಲಲ್ವ ಮತ್ತು ವಾತಪಿ ಎಂಬ ಅಸುರ ಸಹೋದರರು ಇಲ್ಲಿರುವ ಗುಡ್ಡ ಬೆಟ್ಟಗಳ ವಾಸವಾಗಿದ್ದರು.ಅಗಿರುವ ಮುನಿಗಳನ್ನು ಹತ್ಯೆಗಯೈಲು ಒಂದು ಸುಲಭ ಉಪಾಯ ಕಂಡುಕೊಂಡಿದ್ದರು. ಯಕ್ಷಣಿ ವಿದ್ಯೆಯಿಂದ ಇಲಲ್ವ ವಾತಪಿಯನ್ನು ಮೇಕೆಯನ್ನಾಗಿ ಪರಿವರ್ತಿಸುತ್ತಿದ್ದ.ನಂತರ ಇಲಲ್ವ ಯಾವುದೇ ಮುನಿಗಳನ್ನು ಕರ್ಕೋಂಡು ಬಂದು,ಆ ಮೇಕೆಯನ್ನೆ ಮಾಂಸದ ಊಟವನ್ನೇ ಬಡಿಸುತ್ತಿದ್ದ.ನಂತರ ಇಲಲ್ವ ವತಾಪಿಯನ್ನು ಹೊರಗೆ ಕರೆಯುತ್ತಿದ್ದ.ವಾತಾಪಿ ಹೊಟ್ಟೆ ಬಗೆದು ಹೊರಗೆ ಬರುತ್ತಿದ್ದ.ಹೀಗೆ ಹಲವಾರು ಮುನಿಗಳ ಹತ್ಯೆಗಳಾದ ಮೇಲೆ ಎಲ್ಲಾ ಕಥೆಯಲ್ಲಿ ಬರುವಂತೆ ದುಷ್ಟ ಸಂಹಾರಕ್ಕೆ ಅಗಸ್ತ್ಯ ಮುನಿಗಳು ಆಗಮಿಸಿದರು. ಊಟವಾದ ನಂತರ ವಾತಪಿ ಜೀರ್ಣವಾಗೆಂದು ಹೇಳಿತ್ತಾರೆ.ಇಲಲ್ವ ವಾತಪಿಯನ್ನು ಹೊರಗೆ ಬಾ ಎಂದಾಗ ಆತ ಜೀರ್ಣವಾದ ಕಾರಣ ಹೊರಗೆ ಬರಲು ಅಗುವದಿಲ್ಲ.ಹೀಗೆ ವಾತಪಿ ಕಥೆ ಮುಗಿಯುತ್ತದೆ.ವಾತಪಿ ಇದ್ದನೆಂಬ ಕಾರಣಕ್ಕಾಗಿ ವಾತಪಿವೆಂಬ ಹೆಸ್ರು ಬಂದಿರಬೇಕು...
ಬಾಗಲಕೋಟಯಿಂದ 40-50 ಕಿ.ಮೀ ದೂರದಲ್ಲಿ ಇರೋ ಬದಾಮಿ ಬೆಟ್ಟಗುಡ್ಡಗಳ ನಡುವೆ ಊರು. ಉತ್ತರಕ್ಕೆ ಬೆಟ್ಟ, ದಕ್ಷಿಣಕ್ಕೆ ಮೇಣಬಸದಿಯ ಬೆಟ್ಟಗಳು, ಈ ಎರಡು ಬೇರ್ಪಡಿಸುವ ಅಗಸ್ತ್ಯ ಹೊಂಡ (ಕೆರೆ) ಪಶ್ಚಿಮಕ್ಕೆದ್ದರೆ, ಬದಾಮಿಯ ಊರು ಪೂರ್ವಕ್ಕೆ ಇದೆ. ಉತ್ತರ ಬೆಟ್ಟಗಳ ಬಾಜುವಿನಿಂದ ಮಹಾಕೂಟಕ್ಕೆ 5 ಕಿ.ಮೀ ದಾರಿ. ಇಲ್ಲಿಂದ ಹೊಗುವಾಗ ಒಂದು ಕಡೆ ಹಳದಿ ಸೆರಗು ಅನ್ನೊ ಜಾಗ ಬರುತ್ತೆ. ಸುಮಾರ್ರು 5೦೦ ಮೀಟ್ರುರೋ ಈ ಜಾಗದಲ್ಲಿ ನಡೆದಾಡುವರಿಗೆ ಎಲ್ಲವು ಹಳದಿ ಬಣ್ಣವಾಗಿ ಕಾಣುತ್ತೆ(ಕಾಮಲೆ ಕಣ್ಣಲ್ಲಾ ಸ್ವಾಮಿ,ನಿಜವಾಗಿಲು ಹಳದಿನೇ ಕಾಣೊದು). ಇದರ ಹಿಂದೆ ಎನೋ ಒಂದು ಕತೆಯಿದೆ. ಸದ್ಯಕ್ಕೆ ಅದು ನನೆಪಿಗೆ ಬರದ ಕಾರಣ ಹಾಗೆ ಮುಂದುವರಿತಾ ಇದೀನಿ.

6-8 ನೇ ಶತಮಾನದಲ್ಲಿ ಅತ್ಯಂತ ವೈಭವದ ದಿನಗಳನ್ನು ಕಂಡ ಬದಾಮಿಯಲ್ಲಿ ಈಗಲೂ ಸಹ ಚಾಲುಕ್ಯರ ಶಿಲ್ಪಕಲೆಯ ವೈಭವ ನೋಡಬಹುದು. 2ನೇ ಪುಲಕೇಶಿ ಚಾಲುಕ್ಯರ ಹೆಸರುವಾಸಿ ದೊರೆ. ಈತನ ಕಾಲದಲ್ಲಿ ಚಾಲುಕ್ಯರ ಸಾಮ್ರಾಜ್ಯ ನರ್ಮದಾ ನದಿ ತೀರದವರೆಗೆ ಹಬ್ಬಿತ್ತು. ಪುಲಕೇಶಿಗೂ ಮತ್ತೆ ಹರ್ಷವರ್ದನಿಗೆ ಘೋರ ಕಾಳಗವಾಯಿತು. ಇದರಲ್ಲಿ, ಪುಲಕೇಶಿಗೆ ಜಯವಾಗಿ, "ದಕ್ಷಣಾಪಥೇಶ್ವರ" ಎಂಬ ಬಿರುದನ್ನ ಸ್ವತಃ ಹರ್ಷವರ್ದನನೇ ದಯಪಾಲಿಸಿದನು. ಚಾಲುಕ್ಯರ ವೈಭವವನ್ನು ಇಲ್ಲಿರುವ ಮೇಣಬಸದಿಯಲ್ಲಿ,ಪಟ್ಟದಕಲ್ಲಿನಲ್ಲಿ ಮತ್ತು ಐಹೊಳೆಯಲ್ಲಿ ನೀವು ಕಾಣಬಹುದು.
ಮೊದ್ಲೆ ಹಳಿದಂತೆ, ದಕ್ಷಿಣದಲ್ಲಿರುವ ಬೆಟ್ಟಗಳಲ್ಲಿ ಮೇಣಬಸದಿಯಿದೆ.ಇದರಲ್ಲಿ 4 ಗುಹೆಗಳಿವೆ.ಗುಹೆ 1 ಮಹಾದೇವ(ಶಿವ)ನಿಗೆ ಅರ್ಪಿತವಾಗಿದೆ.ಇಲ್ಲಿ ನಟರಾಜನ ಒಂದು ಅದ್ಬುತವಾದ ನಾಟ್ಯದ ಭಂಗಿಯಿದೆ. ಅರ್ಧನಾರಿಶ್ವರನ ವಿಗ್ರಹ, ನಂದಿ,ದುರ್ಗ,ಗಣಪತಿ ಮತ್ತು ದೊಡ್ದದಾದ ಹಾವಿನ ಕೆಳಗಡೆರುವ ಶಿವ ,ಮುಂತಾದ ಸೊಗಸಾದ ಕೆತ್ತನೆಗಳನ್ನು ನೀವಿಲ್ಲಿ ಕಾಣಬಹುದು. ಈ ಗುಹೆ ವಿರಶೈವರಿಗೆ ಅರ್ಪಿತವಾಗಿದೆ. 2 ಮತ್ತು 3ನೇ ಗುಹೆಗಳು ವಿಷ್ಣುವಿಗೆ ಸರ್ಪಿತವಾಗಿವೆ. ಪುರೋಹಿತಶಾಹಿ ಪ್ರಾಬಲ್ಯ ಆ ಕಾಲದಿಂದಲೂ ಇತ್ತು ಅಂತ ಕಾಣುತ್ತದೆ. ಪ್ರವೇಶದ್ವಾರದಲ್ಲಿ ಜಯ-ವಿಜಯ ದ್ವಾರಪಾಲಕರು, ಒಳಗಡೆ ವಿಷ್ಣುವಿನವತಾರಗಳಾದ ವಾಮನ ಅವತಾರ,ಕೄಷ್ಣ ಲೀಲೆಗಳು,ನರಸಿಂಹನ ಅವತಾರ, ಹರಿಹರ,ಶೇಷನಾಗ ಮತ್ತು
ಛಾವಣಿ ಮೇಲೆ ಸ್ವಸ್ತಿಕ ಮತ್ತು ಮತ್ಸಗಳ ಸುಂದರವಾದ ಕೆತ್ತನೆ ಕಾಣಬಹುದು. ಜೈನರಿಗೆ ಸಮರ್ಪಿತವಾದ ಈ ಗುಹೆಯಲ್ಲಿ ಪಾರ್ಶ್ವನಾಥ,ತೀರ್ಥಂಕರರ ಕೆತ್ತನೆಯಿದೆ. ಇನ್ನು ಮೇಲಗಡೆ ಒಂದು ಚಿಕ್ಕದಾದ ಕೊಟೆಯಿದ್ದು, ಅಲ್ಲಿ ಒಂದು ದೊಡ್ಡದಾದ ತೊಪು ಇದೆ. ಇಲ್ಲಿಂದ ಬದಾಮಿಯ ವಿಹಂಗಮ ನೋಟ ನೋಡಬಹುದು. ಅದ್ರೆ ಸುಮಾರ್ರು ವರ್ಷಗಳ ಇಲ್ಲಿ ಹೊಗೊ ದಾರಿ ಬಂದಾಗಿದೆ. (ಯಾರೋ, ಇಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಾರಣ ಸಕ್ರಾರದವರೇ ಈ ದಾರಿ ಬಂದು ಮಾಡಿದ್ದಾರೆ).
ಉತ್ತರದಲ್ಲಿರೋ ಬೆಟ್ಟದಲ್ಲೆ ಯಾವದೇ ಮಹತ್ತರವಾದ ಕೆತ್ತನೆಗಳಿಲ್ಲ. ಇಲ್ಲಿ ಒಂದು ಮೂಸಿಮಂ ಇದೆ. ಇಲ್ಲಿ ಚಾಲುಕ್ಯರ ಇತಿಹಾಸ ಮತ್ತು ಶಿಲ್ಪಕಲೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಈ ಬೆಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯಗಳ ದಿನದಂದು ಮೇಲೆಗಡೆ ಇರುವ ಕೋಟೆಯಲ್ಲಿ ದ್ವಜಾವಂದನೆ ಹೊಗುತ್ತಿದ್ದು ನನಗೆ ಒಂದು ಒಳ್ಳೆ ನೆನಪು. ಮನೆಯಲ್ಲಿ ಬೇಜಾರದಾಗ ,ನಂಟರು ಬಂದಾಗ ನಾನು ಭೇಟಿ ಕೊಡುತ್ತಿದ್ದೆ ಈ ಮೆಣಬಸದಿಗಳಿಗೆ!!!! ಪ್ರತಿಸರತಿ ನೊಡಿದಾಗ ಮತ್ತೆಮ್ಮೆ ನೋಡಬೇಕೆಂಬ ಮೆಣಬಸದಿಯನ್ನು ಒಮ್ಮೆಯಾದರೂ ನೋಡಿಬನ್ನಿ.
"ವೈಭವದ ಸಾಮ್ರಾಜ್ಯಗಳು ,ಕೋಟೆಗಳು,ರಾಜಮನೆತನಗಳು ಏಕೆ ಹಾಳುಗುತ್ತವೆ? ಮೇಲೆರಿದ್ದು ಕಳಗಡೆ ಬರಬಕೆಂಬ ಪ್ರಕೃತಿ ಜಡ ನಿಯಮವೊ?"
ಇಷ್ಟೇಲ್ಲಾ ಯಾಕೆ ನೆನಪಿಗೆ ಬಂತು ಅಂದ್ರೇ,ಯಾವನೋ ಮಂಗ ತಮಿಳುನಲ್ಲಿ ಯಾವೊದೊ ಒಂದು ಚಲನಚಿತ್ರದಲ್ಲಿ,ನಮ್ಮ ಇಮ್ಮಡಿ ಪುಲಕೇಶಿ ಮತ್ತೆ ಸಂಗೋಳ್ಳಿ ರಾಯಣ್ಣ ಬಗ್ಗೆ ಎನೇನೋ ಹೇಳಿದಾರೆ ಅಂತಾ ಪೇಪರನಲ್ಲಿ ಓದಿದ ಮೇಲೆ ಅನ್ನೊದು ಕೂಡ ಒಂದು ವಿಪರಾಸ್ಯವೆ!!!!!!!





5 comments:

Shiv said...

ಮಹಾಂತೇಶ್,
ನಮ್ಮ ನಾಡಿನ ಭವ್ಯ ವೈಭವವನ್ನು ಸಾರುವ ಬದಾಮಿ ಬಗ್ಗೆ ಸೊಗಸಾದ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.ಚಿತ್ರಗಳು ಕೂಡ ಸುಂದರವಾಗಿ ಮೂಡಿಬಂದಿವೆ.

ಹಳದಿ ಸೆರಗು..ಸೋಜಿಗವಾಗಿದೆ..ಯಾಕೇ ಹಾಗೆ ಅಂತ ಎನಾದರೂ ಮಾಹಿತಿ ಇದೆಯೇ?

ಅಂದ ಹಾಗೆ, ಆ ತಮಿಳು ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಿದ್ದಾರೆ ಅಂತಾ ನಾನು ಓದಿದೆ.

Anonymous said...

ಕಿತ್ತೂರು ಚೆನ್ನಮ್ಮ,ಸಂಗೊಳ್ಳಿ ರಾಯಣ್ಣ , ಥ್ಯಾಕರೆ, ಅಗಸ್ತ್ಯ, ವಾತಾಪಿ,ಇಲ್ವಲ -ಇವರೆಲ್ಲರ ಬಗ್ಗೆ ಚಿಕ್ಕವನಿರುವಾಗ 'ಅಮರ ಚಿತ್ರ ಕಥೆ'ಯಲ್ಲಿ ಓದಿ ತಿಳ್ಕೊಂಡಿದ್ದೆ.ಮಹಾಭಾರತ(ಸುಮಾರು 5೦ ಪುಸ್ತಕಗಳು) ಮತ್ತು ಕೃಷ್ಣನ(10 ಪುಸ್ತಕಗಳು) ಕಥೆಗಳನ್ನು ಬುಕ್‍ಬೈಂಡ್ ಮಾಡಿ ಇಟ್ಟುಕೊಂಡಿದ್ದು(ಈಗ ಈ ಪುಸ್ತಕಗಳು(ಕನ್ನಡದಲ್ಲಿ) ಬರುತ್ತದೆಯಾ?)... hm..ನಿಮ್ಮ ಲೇಖನ ಓದುವಾಗ ಇವೆಲ್ಲಾ ನೆನಪಾಯಿತು..

ಹಳದಿಸೆರಗು- ಯಾಕೆ ಎಲ್ಲಾ ಹಳದಿಯಾಗಿ ಕಾಣಿಸುತ್ತದೆ?

ಆ ತಮಿಳುಚಿತ್ರವನ್ನು ಕರ್ನಾಟಕದಲ್ಲಿ ನಿಶೇಧಿಸಿದ ಮೇಲೆ, ನನ್ನ ತಮಿಳು ಸಹೋದ್ಯೋಗಿ ಒಬ್ಬ thatastamil.com ಓದಿಕೊಂದು ಹೇಳುತಿದ್ದ, "ಅದು ನಿಶೇಧಿಸಲು ರಾಜ್ ಫ್ಯಾಮಿಲಿ ಕಾರಣ.ಯಾಕೆಂದರೆ 'ಗಂಡುಗಲಿ ಕುಮಾರ ರಾಮ'ದಲ್ಲಿ ಶಿವರಾಜ್‍ಕುಮಾರ್ ಹಾಕಿದ ಕಾಸ್ಟ್ಯೂಮ್ ಎಲ್ಲಾ ವಡಿವೇಲುವಿನ(ಆ ತಮಿಳು ಸಿನೆಮಾದ ಹೀರೊ)ಹಾಗೆ ಕಾಣಿಸುತ್ತದೆ ಅಂಥೆ".. ಚಿಕ್ಕ ಮನಸ್ಸು..ಏನೂ ಮಾಡಕಾಗೊಲ್ಲ..

ಗೀಗಿ ಪದದ ಬಗ್ಗೆ ಬರಿಯುವಿರ? ನಾವೆಲ್ಲ ಅದನ್ನು ಕೇಳಿದ್ದು ಯುವಜನ ಸಮ್ಮೇಳನಗಳಲ್ಲಿ ಮಾತ್ರ..

Mahantesh said...

ಶಿವ,
ಸಣ್ಣ ಮನಸಿಗೆ ನೀವದಂತೆ ಏನು ಮಾಡಲಿಕ್ಕೆ ಅಗುವದಿಲ್ಲ.
ನೀವು ಈ ಕಥೆಗಳನ್ನು ಓದಿದ್ದು ಕೇಳಿ ಸಂತಸವಾಯಿತು.
ಇನ್ನು ಉಳಿದ ವಿಷಯಗಳಾದ ಗೀಗೀ ಪದಗಳನ್ನು ಹುಡಕುತ್ತಾ ಇದೀನಿ. ಊರಿಗೆ ಹೊದ್ರೆ ಹಳಬರ ಹತ್ರ ಖಂಡಿತವಾಗಿ ಸಿಗುತ್ತವೆ ಅನ್ನೋ ಭರವಸೆಯಿದೆ. ಹಳದಿ ಸೆರಗು ತಿಳಯಲು ಅಲ್ಲಿ ಹೋಗಬೇಕು.ಒಂದು ತಿಂಗ್ಳು time ಕೊಡಿ. :))

ಮನಸ್ವಿನಿ said...

ಎಷ್ಟೊಂದು ವಿಷಯಗಳು ಗೊತ್ತಾದವು. ಹೀಗೆ ಬರೆಯುತ್ತಿರಿ

Unknown said...

good store