Wednesday, August 02, 2006

ಉತ್ತರ ಭಾರತದ ಬವಣೆಗಳು-1

"ಯಾರಿಗೆ ಬೇಕು ಈ ಲೋಕ
ಬಿಸ್ಲೇ ಇದ್ರು ಸಹ್ಲಿಬೇಕ.... ....
ಚಳಿಯ ಇದ್ರೆ ಇಲ್ರೆಬೇಕ.... "


ಎನಪ್ಪಾ ಈ ಮನಸ್ಯಾ ಹಿಂಗೆಲ್ಲಾ ಎನೇನೋ ಹುಚ್ಚರಂಗ ಹಾಡಕತ್ತನ್ನ ಅಂತ ಗಾಬರಿ ಬಿಳಬೇಡ್ರಿ........ಉತ್ತರ ಭಾರತದ ಬಗ್ಗೆ ಯೊಚ್ನೆ ಮಾಡಿದಾಗ ಈ ರೀತಿ ಮನಸನ್ಯಾಗ ಎರಡು ಸಾಲು ನೆನಪಿಗೆ ಬಂತು.ಎಲ್ಲರೂ ಮಾಡದು ಹೊಟ್ಟಿಗಾಗಿ ,ಗೇಣು ಬಟ್ಟೆಗಾಗಿ ಎಂಬ ದಾಸರ ಪದದಂತೆ ನಾನು ೨ ವರ್ಷದ ಹಿಂದ ಹೊಟ್ಟೆಪಾಡಿಗಾಗಿ ಇಲ್ಲಿ ಬಂದಿಟ್ಟೆ. ಬಂದ ತಕ್ಷಣ ಮೊದ್ಲು ಗೊತ್ತಾದದ್ದು ಇಲ್ಲಿ ಹಿಂದಿ/ಹಿಂದಿ ಅಂಕಿಗಳು ಗೊತ್ತು ಇಲ್ಲಂದ್ರ ಜೀವನದ ಗಾಡಿ ಮುಂದು ಒಡೊಲ್ಲ ಅನ್ನೊದು.ಹಿಂದಿ ಎನೊ ಸರಿಯಾಗಿ ಬರಿತಿತ್ತು.ಅದ್ರೆ ಆ ಅಂಕಿಗಳು,ಸಂಖ್ಯೆಗಳು ಇನ್ನು ಅದ್ರು ನನ್ನ ತೆಲೆಕೆಡಸತಾವ(ಈಗ ಸರಿ ಸುಮಾರ್ರಾಗಿ ಬರತಾವೆ). ಅಮ್ಯಾಲ ಸಣ್ಣಗ ಗೊತ್ತು ಅಗ್ಯಾಕ ಶುರು ಅಯಿತು ಎನೆನೊ ಇಲ್ಲಿ ಕಳ್ಕೊತಾದೀನಿ ಅಂತ...
ಬೆಳಗಿನ ಟಿ/ಕಾಫಿಗೆ ಬಿತ್ತು ಖೊತ. ಇಗಲೂ ಬೆಳಿಗಿನ 5-6 ಗಂಟೆಗೆ ಚಾ ಸಿಗಬೇಕಂದ್ರ ಮನ್ಯಾಗ ಮಾಡಿ ಕುಡಿಬೇಕು.ಅದು ಬಿಟ್ರೆ officeನ್ಯಾಗ ಸಿಗೊ ಡಿಪ್ ಟೀನೇ ಗತಿ.ಇನ್ನು ಕಾಫಿ ಕುಡಿದು ನನಗೆ ದಶಕನ ಅಗೈತಿ ಅನಸುತ್ತ."ಆರಾಮ ಹರಾಮ ಹೈ" ಅಂತ ನಮ್ಮ ಗಾಂಧಿ ಮುತ್ತ್ಯ ಹೇಳಿದರೆ,ಇಲ್ಲಿ ಜನ ಅದನ್ನ ಸ್ವಲ್ಪ ತಿದ್ದುಕೊಂಡು "ಆರಾಮ ಹಮಾರ ಹೈ" ಅಂತ ತಿಳಕೊಂಡು ಅರಾಮಾಗಿ ಇರೊ ಸೊಂಬೇರಿಗಳು.ಜನ ಇಲ್ಲಿ ಸಾಮನ್ಯವಾಗಿ ಎಳೋದೆ 9-10 am ಹೊಡದ ಮ್ಯಾಲ...ನನಗಂತೂ ಬೆಳಬೆಳಗ್ಗೆ ಹೊಟ್ಟೆಗೆ ಎನು ಹಾಕಲಿಲ್ಲ ಅಂದ್ರ ತೆಲಿನ ಕೆಲ್ಸಾ ಮಾಡುದಿಲ್ಲ. ಇನ್ನು ಊಟದ ವಿಷ್ಯಕ್ಕೆ ಬಂದ್ರ ಅದರ ಬಗ್ಗೆ ಮಾತಡುದ ಬ್ಯಾಡ ಅನ್ಸುತ್ತೆ.ನಾನು ಜ್ಯೊಳದ ರೊಟ್ಟಿ ,ಕೆನಿ ಮೊಸ್ರು,ಎನಗ್ಯಾಯಿ ,ಉಪ್ಪಿಟ್ಟು ,ಅವಲಕ್ಕಿ ತಿಂದ ಬೆಳದ್ಯಾವ.ಇಲ್ಲಿ ಸಮೊಶ,ಜೆಲಿಬಿ,ಪರಾಟ ಯಾರಿಗೆ ಹಿಡಸುತ್ತೆ ಹೇಳಿ?.ನಮ್ಮವ್ವ ಇಲ್ಲಿ ಬಂದ್ಯಾಗ ಹೆಂಗ ಇರ್ತಿಪ ಇಲ್ಲಿ ಇಂತದೆಲ್ಲಾ ತಿಂದು ಅಂತ ಕೇಳಿದ್ಲು ಅಂದ್ರೆ ನೀವ್ವೆ ಯೊಚನೆ ಮಾಡಿ!!!.ಇನ್ನು vegatarainಅಂದ್ರ ಇಲ್ಲಿ ಸಿಗೋದು ಎರಡು-ಮೂರು ಪಲ್ಲ್ಯೆ.ಪನೀರ,ಇಲ್ಲಿ ಎಲ್ಲಾ ಪಲ್ಲೆದ್ಯಾಗ ಸರ್ವಾಂತ್ರಯಾಮಿ,ಅದು ಬಿಟ್ಟ್ರೆ ಅಲೂ-ಗೊಬಿ....ಮೂರನೆ option ದಾಲ..ದಾಲನ್ಯಾಗ ಕಾಲಿ ದಾಲ (ದಾಲ್ ಮಖನಿ),ಪೀಲಿ ದಾಲ(ತೊಗರಿಬೇಳೆ),ಮೂಂಗ ದಾಲ,ಚನ್ನೆ ಕಿ ದಾಲ ಅಂತ ಎನೆನೋ ಸಿಗತವೆ ಇಲ್ಲಿ.ಪನೀರ್,ಅಲೂ, butterರೊಟಿ/ರೊಟಿ ತಿಂದ ತಿಂದ ಹೊಟ್ಟೆ ಬ್ಯಾರೆ ಸಿಕ್ಕಾಪಟ್ಟೆ ಬಂದುಬಿಟ್ಟದ.ಎನ ಮಾಡಿದ್ರು ಸಣ್ಣಗ ಅಗಾಗ ಸಾದ್ಯವಿಲ್ಲ ಅನಸಾಕ್ಕತ್ತೈತಿ.ಇಲ್ಲಿ ಜನ ದಕ್ಷಿಣ ಭಾರತದವರು ಅಂದ್ರ ಬರೆ ದೊಸೆ ,ಇಡ್ಲಿ,ವಡನೂ ಊಟದಲ್ಲಿ ತಿಂತಾರೆ ಅಂತ ತಪ್ಪು ಕಲ್ಪನ ಇದ.ನಾನೇ ಎಷ್ಟೋ ಜನಕ್ಕೆ ಅವೆಲ್ಲ ನಾಷ್ಟದಲ್ಲಿ ಮಾತ್ರ ತಿನ್ನೊದು ಅಂತ ತಿಳಿ ಹೇಳಿದನಿ. ...
ಮುಂದಿನವಾರ ಮುಂದುವರಿವುದು.......




3 comments:

Shiv said...

ಮಹಾಂತೇಶ್,

ಚಲೋ ಬರಿದೀರಿ ನಿಮ್ಮ ಉತ್ತರದ ಭಾರತದ ಬವಣೆಗಳ ಬಗ್ಗೆ.
ಬಹುಷಃ ದಕ್ಷಿಣ ಭಾರತದವರು ಅಂದರೆ ಇಡ್ಲಿ-ದೋಸೆ ತಿನ್ನೋರು ಅನ್ನೋ stereotype ಎಲ್ಲಾ ಕಡೆ ಇದೆ ಅನಿಸುತ್ತೆ.ನಾನೀರೋ ಜಾಗದಲ್ಲಿ ನನಗೆ ತುಂಬಾ ಬೆಂಗಾಲಿ ಸ್ನೇಹಿತರಿದ್ದಾರೆ.ಅವರೂ ಸಹ ಅಷ್ಟೆ ಸಿಕ್ಕಾಗೆಲ್ಲ 'ಊಟಕ್ಕೆ ದೋಸೆ ತಿಂದಿಯಾ" ಅಂತಾ ಕೇಳ್ತಾ ಇರತಾರ..

ಜೋಳದ ರೊಟ್ಟಿ,ಕೆನಿ ಮೊಸರು,ಎನಗ್ಯಾಯಿ...ಯಾಕಪಾ ನೆನಪು ಮಾಡಿಕೊಟ್ಟಿ :(

ನನ್ನ ಬವಣೆ ನೋಡಿ ಸ್ಪಲ್ಪ ಸಮಾಧಾನ ತಗೋ :))

bhadra said...

ವಾಹ್ ವಾಹ್! ಎಂಥ ಚಂದದ ಬರವಣಿಗಿ. ಆ ತಿನಿಸಿನ ಬಗ್ಗೆ ಓದ್ತಿದ್ರೆ ನನ್ನ ಹೊಟ್ಟಿ ಚುರ್ ಅಂತಿದ್ಯೋ ಮಾರಾಯ. ಪುಂಡಿಪಲ್ಲಿ ಯಾಕ್ ಮರ್ತ್ಯಪ್ಪಾ.

ಹೌದು ದಕ್ಷಿಣ ಭಾರತ ಬಿಟ್ಟು ಮಿಕ್ಕ ಕಡೆಗಳಲ್ಲೆಲ್ಲಾ ದೋಸೆ ಇಡ್ಲಿ ತಿನ್ನೋದು ಯಾವಾಗ, ಹೇಗೆ ಅನ್ನೋದು ಗೊತ್ತೇ ಇಲ್ಲ. ಎರಡು ಇಡ್ಲಿ ತಿಂದ್ರೆ ಸಾಕು ತೇಗುಬಿಡ್ತಾರೆ. ಒಂದಕ್ಕಿಂತ ಜಾಸ್ತಿ ದೋಸೆ ತಿಂದು ಗೊತ್ತೇ ಇಲ್ಲ. ಲೇಖನ ಮತ್ತು ಚಿತ್ರಗಳು ಬಹಳ ಚೆನ್ನಾಗಿವೆ. ಮೊದಲ ಚಿತ್ರ (ನೀರು ಕುಡಿಯುತ್ತಿರುವುದು) ತುಂಬಾ ಸೊಗಸಾಗಿ ಮೂಡಿ ಬಂದಿದೆ. ಮೇಲಿರುವ ಮೋಡಗಳನ್ನು ಕೂಡಾ ಸೊಗಸಾಗಿ ಸೆರೆ ಹಿಡಿದಿದ್ದೀಯೇ. ಅಂತೂ ಎರಡನೆಯ ಮನೆಯೂ ಸಿಂಗಾರದರಮನೆಯಾಯಿತು.

ಚಲೋ ಬರೀತ್ಯಪ್ಪಾ ಮರಿ. ಹೀಂಗ ಮುಂದುವರೆಸು.

ಮನಸ್ವಿನಿ said...

ಮಸ್ತ ಅದ. :)