Wednesday, March 07, 2007

ಕಾವೇರಿ

ರಾಜ್ಯದ್ಯಾದಂತ್ಯ ಕಾವೇರಿಗಾಗಿ ಹೋರಾಟ
ಶಾಸನ ಸಭೆಯಲ್ಲಿಸಭಾಪತಿಗಾಗಿ ಕಿತ್ತಾಟ
ಇದೆಲ್ಲಾ ಕಾಗೆಗಳ ರಾಜಕೀಯದಾಟ
ಎಲ್ಲಿಯವರಗೆ ಕನ್ನಡಿಗರ ಪರದಾಟ?

ತಂದೆ-ಮಕ್ಕಳ ದಿವ್ಯಮೌನ,ಮೌನಂ ಸಮ್ಮತಿ ಲಕ್ಷಣವೇ?
ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೆ?
ಮೇಲಿನ ಕೄಷ್ಣಾ ಆಂಧ್ರಕ್ಕೆ,ಈಗಕಾವೇರಿ ತಮಿಳುನಾಡಿಗೆ??
ಏಚ್ಚತ್ತುಕೊಳ್ಳಿ ಡೊಂಕುಬಾಲಕದ ನಾಯಕರೇ!

ಅಂಬಿ ರಾಜಿನಾಮೆ ಕಾವೇರಿಗಾಗಿ ಅನ್ನೋ ಗಿಮಿಕ್ಕು
ಮಂತ್ರಿಗಳ ಜನತಾ ದರ್ಶನ,ಸಾಲಮನ್ನಾದ ಚಮಕ್ಕು
ತಮಿಳಿರಿಗೆ ಸಿಂಹಪಾಲಿನಲ್ಲಿ ಕೇಂದ್ರದ ಕುಮ್ಮಕ್ಕು
ನಮ್ಮ ಶಾಸಕರು ಕತ್ತೆಕಾಯೊದಕ್ಕೆ ಲಾಯಖ್ಖು

ಬನ್ನಿ ಕನ್ನಡಿಗರ್‍ಏ ನಾವೆಲ್ಲಾ ಒಟ್ಟಾಗೋಣ
ನಮ್ಮ ಜಲ-ನೆಲ ಹಕ್ಕಿಗಾಗಿ ಹೋರಾಡೋಣ
ಕನ್ನಡ ಭಾಷೆ,ಸಂಸ್ಕೄತಿ ಉಳಿಸೋಣ
ಜಗತ್ತಿನ್ಯಾದಂತ ಕನ್ನಡಿಗರ ಕೀರ್ತಿ ಪತಾಕೆ ಹರಡೋಣ

6 comments:

Shiv said...

ಮಹಾಂತೇಶ್,

ಸೂಪರ್ ಉಗಿತ !!
ಕತ್ತೆ ಕಾಯೋದಕ್ಕೆ ಅಂತಾ ಹೇಳಿ ಪಾಪ ಆ ಕತ್ತೆಗಳ ಮಾನ ತೆಗಿಬೇಡ..

ಒಂದೇ ಮಾತಲ್ಲಿ ಹೇಳಬೇಕೆಂದರೆ ಇದು ರಾಜಕೀಯ ಇಚ್ಚಾಶಕ್ತಿ ಇಲ್ಲ ನಮ್ಮಲ್ಲಿ..ಅದೇ ಅಲ್ಲಿ ನೋಡಿದರೆ ಕೇಂದ್ರದಲ್ಲಿ ಯಾವ ಸರ್ಕಾರ ಬಂದರೂ ಅಲ್ಲಿ ತಮಿಳರು ಇರಲೇಬೇಕು..ಕೈ ತಿರುವಿ ತಮಗೆ ಬೇಕಾದದ್ದನ್ನು ಪಡೆಯುತ್ತಾರೆ

MD said...

ಮಹಾಂತೇಶ..
ಕಿಚ್ಚಿದೆ ನಿಮ್ಮಲ್ಲಿ, ಇನ್ನು ಅದನ್ನು ಆರಲು ಬಿಡಬೇಡಿ
ನಾನು ಹೇಳ್ತಾ ಇರೋದು ನಿಮ್ಮ ಕವಿತೆ ಬರೆಯುವ ಕಿಚ್ಚಿನ ಬಗ್ಗೆ... :-)

ಒಳ್ಳೆಯ ಪೆಟ್ಟು ಕೊಟ್ಟಿದ್ದೀರಿ ನಿಮ್ಮ ಈ ಕವಿತೆಯಿಂದ... ಬೇರೆಯವರಿಗಲ್ಲ !!! ನಮ್ಮಂಥ ಸೋಮಾರಿ ಕನ್ನಡ ಪ್ರೀಯರಿಗೆ

ಪಬ್ said...

ನೀವು ಬರೆದದ್ದೆಲ್ಲ ಸರಿ. ಆದರೆ ನಾನು ಮಾತ್ರ ಒಂದು ಪೆಗ್ ಹಾಕಿ ಕಾಲು ಚಾಚಿ ಮಲಗುವವನು. ನನ್ನಿಂದ ಯಾವ ಹೋರಾಟವೂ ಸಾಧ್ಯವಿಲ್ಲ. ಯಾಕೆ ಹೇಳಿ? ನಾನು ಟಿಪಿಕಲ್ ಕನ್ನಡಿಗ !

Mahantesh said...

Shiv,
ugitadiMdalU kelsa agolla saar...
namma dappa charmada rajakaraNigaLella nidde madata idare..enu madodu gotte illa avarige... "naavu kudiyodu bislery neeru,namagyake kaveri usbari "
anno mentality naduve enO madokke agolla...

Rafi...
kichchu aradaMte kaapadaLu samasta kannadigara beMbal beku...navella echchttukoLLabeku...

pub...
typical kannadiga....namage typical kannadigara sahavAsavE beDa...samanya kannadigarU saku....

bhadra said...

soooooooooooooooooooooooooper kavana

Mahantesh said...

ಶ್ರೀಗಳೇ,
ಕವನ ಪ್ರಥಮ ಬಾರಿ ಬರೆದಿದ್ದು..... ನಿಮ್ಮ ಪ್ರೊತ್ಸಾಹಕ್ಕೆ ಧನ್ಯವಾದಗಳು......