Saturday, March 17, 2007

ಜನರೇಷನ್ ಗ್ಯಾಪ್............



ಪ್ರಸಂಗ ೧:
ನನ್ನ ಮತ್ತು ಅಜ್ಜನ ನಡುವೆ,
ಅಜ್ಜ : ಯಾವ ಇಸ್ವಿ ನೀನು ಹುಟ್ಟಿದ್ದು?
ನಾನು : ೧೯೮೦ ಅಜ್ಜಾ.
ಅಜ್ಜ : ಹಂಗದರ ಎಸ್ಟು ವಯಸ್ಸು ಅದು?
ನಾನು : ೨೬ ನಡ್ಯಾತ್ತವ.
ಅಜ್ಜ :ಮದ್ವಿ ಬಗ್ಗೆ ಎನು ಯೊಚ್ನೆ ಮಾಡಿ?
ನಾನು : ನನಗೇನು ವಯಸ್ಸಾಗ್ಯವು?
ಅಜ್ಜ : ಮಗನಾ, ನಿನ್ನ ವಯಸ್ಸಿನ್ಯಾಗ ಎರಡು ಮಕ್ಳು ಇದ್ದು ನಂಗ!!!!
ನಾನು " ನಿಮ್ಮ ಕಾಲನೇ ಬೇರೆ, ನಮ್ಮ ಕಾಲನೇ ಬೇರೆ"...

ಪ್ರಸಂಗ ೨:
ನಮ್ಮ ಅಮ್ಮ ಮತ್ತು ತಮ್ಮನ ನಡುವೆ...
ಅಮ್ಮ : ಇಸ್ತ್ರಿ ಪೆಟ್ಟಿಗೆ ಮತ್ತ ಸಿ. ಡಿ. ಪ್ಲೇಯರ ರಿಪೇರಿ ಮಾಡಿಸಿಕೊಂಡು ಬಾರೋ
ತಮ್ಮ : ಹಳೇದೆ ಎನು ಮಾಡತೀ ಬೇ, ಹೊಸಾದ ತಗೊಂಡು ಬರ್‍ಓಣ,
ಅಮ್ಮ : ಯಾಕಪಾ ನಿಂಗ ರೊಕ್ಕ ಹೆಚ್ಚಾಗವೇನು????


ಪ್ರಸಂಗ ೩:
ತಮ್ಮ : ಅಣ್ಣಾ ಲೇ ,ನಿಂಗ ಸ್ಯಾಲರಿ ಏಷ್ಟು ಲೇ?
ನಾನು : ***** ಇಸ್ಟು ಇದೇ ನೋಡಲೇ...
ತಮ್ಮ : ಏನಲೇ? ಎಷ್ಟು ಕಡಿಮಿ ರೊಕ್ಕಕ್ಕೆ ಕೆಲ್ಸಾ ಮಾಡತಿ ಅಲ್ಲಾ ಲೇ ,ನಿಮ್ಮ ಜುನಿಯರ್ಸ್ ನೋಡು ನಿನಗೀಂತ ಜಾಸ್ತಿ ಗಳಸತಾರ.
ನಾನು : ?????????

ಪ್ರಸಂಗ ೪
ನಮ್ಮ :ಮಾವನ ಮಗಳು ಮತ್ತು ನನ್ನ ನಡುವೆ,
ಸೊಸೆ: ಮಾಮ ,ಪ್ರೊಜೆಕ್ಟ ಮಾಡೋದು ಹೇಳಿಕೊಡು....
ನಾನು: ಪ್ರೊಜೆಕ್ಟ ???
ಸೊಸೆ: ಹೂಂ......
ನಾನು : ನನಗ 1st ಬಿ.ಇ ವರಗೆ ಪ್ರೊಜೆಕ್ಟ ಅನ್ನೊದೇ ಗೊತ್ತ ಇರಲಿಲ್ಲ.....
ಸೊಸೆ: ನಿನ್ನ ಕಾಲನೇ ಬೇರೆ ನನ್ನ ಕಾಲನೇ ಬೇರೆ.....

ಮೇಲಿನ ಪ್ರಸಂಗಗಳು ಪೀಳಿಗೆಗಳ ನಡುವೆ ಹೆಚ್ಚುತ್ತಿರುವ ಜೆನರೇಷನ ಗ್ಯಾಪಗೆ ಅತ್ಯ್ತುತಮ ಉದಾಹರಣೆಗಳು.....

ಮುಗಿಸುವ ಮುನ್ನ:
ಭೂಮಿ ಹಸಿರುಟ್ಟ ನಿಂತಾಳ ನೋಡ
ಪೈರು ತಲೆದೂಗಿ ಹಾಡ್ಯಾವ ನೋಡ
ಕುಯ್ಯೋ ಕುಡುಗೋಲು ಕುಣಿದಾವೆ ನೋಡ
ಮೇಲೆ ಹಾರ್ಯವೆ ಬೆಳವಕ್ಕಿ ಜೋಡ......
(ಹಕ್ಕಿ ಹಾಡೇ.... ಪುನರ್ಜನ್ಮ )

ಸರ್ವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.....................

( ಚಿತ್ರ: ನಾನು ,ತಮ್ಮ ಹಾಗೂ ತಂಗಿ.....೨೩ ವರ್ಷಗಳ ಹಿಂದೆ:)-)

8 comments:

ಮನಸ್ವಿನಿ said...

ಹ ಹ ಹ ...ಚೆನ್ನಾಗಿದೆ...ಅಂದ ಹಾಗೆ ನಿಮ್ಮ ಬ್ಲಾಗಿನ ಲಿಂಕನ್ನ ನನ್ನ ಬ್ಲಾಗಲ್ಲಿ ಹಾಕಿಕೊಂಡಿರುವೆ...ಅಭ್ಯಂತರ ಇಲ್ಲ ತಾನೆ!

Shiv said...

ಮಹಾಂತೇಶ್,

ಜನರೇಷನ್ ಗ್ಯಾಪ್ ಬಗ್ಗಿ ಚಲೋ ಹೇಳಿದೀ ನೋಡಪಾ..
ಅದು ಹಂಗ ಅಲ್ಲಾ..ಇನ್ನಾ ಸ್ಪಲ್ಪ ವರ್ಷ ಹೋದಂಗ role reversal ಆಗ್ತಾವ..ಅಗ್ಲೆ ಪ್ರಸಂಗ ೩ ಮತ್ತಾ ೪ ರಾಗ ಆಗ್ಯಾದ..

ಮಾವ, ಯಾವದೋ ಪ್ರಾಜಕ್ಟ ಆದು ;)
ಸುಮ್ನೆ ಕೇಳಿದ್ನಿಪ..ತಮಾಷಿಗಿ..

ಪೋಟೋದಾಗ ಸಫಾರಿ ಡ್ರೆಸ್..ಚಲೋ ಉದ್ದಾ ಇದ್ದಿ ಬಿಡಪ ನೀ..

ನಿಂಗೂ ನಿಮ್ಮ ಮನೆಯವರ್‍ಗು ಯುಗಾದಿ ಶುಭಾಶಯಗಳು..

ಸುಪ್ತದೀಪ್ತಿ suptadeepti said...

ಜೀವನದ ಸಣ್ಣ-ಪುಟ್ಟ ಘಟನೆಗಳನ್ನು ನವಿರಾಗಿ ತೋರಿಸಿದ್ದೀರಿ. "Life is not to be taken for granted" ಅಂತ. ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.


ನನ್ನ ಬ್ಲಾಗಲ್ಲಿ ನಿಮ್ಮ ಪುಟಕ್ಕೆ ಕೈಮರ ಜೋಡಿಸಿಕೊಳ್ಳುತ್ತೇನೆ, ಅಭ್ಯಂತರ ಇಲ್ಲ ತಾನೆ?

Unknown said...

ಚೆನ್ನಾಗಿದೆ.. ತುಂಬ ದಿವಸಗಳ ನಂತರ ಭೇಟಿ ನೀಡಿದೆ..ತುಂಬ ಬರ್ದಿದ್ದೀರ..ಬ್ಲಾಗಿಸುತ್ತಾ ಇರಿ..
ಸಫಾರಿ ಸೂಟ್‍ನಲ್ಲಿ ಫುಲ್ಲು ಮಿಂಚಿಂಗ್ :-)

ಯಜ್ಞೇಶ್ (yajnesh) said...

ಮಹಾಂತೇಶ್,

ಜನರೇಷನ್ ಗ್ಯಾಪ್ ನ ಬಹಳ ಸೊಗಸಾಗಿ ಬರೆದಿದ್ದೀರಿ.

-ಯಜ್ಙೇಶ್

bhadra said...

ಲೇಖನ ಬಲೇ ಚಲೋ ಬಂದಿದ್ಯಪ್ಪಾ. ಚರಂತಿಮಥರ ಅಣ್ಣ ತಮ್ಮ ತಂಗಿ ಫೋಟೋ ಅಂತೂ ಬಹಳ ಸೂಪರಾಗಿದೆ.

Mahantesh said...

ಮನಸ್ವಿನಿ,
ಎನ್ರಿ ನಗತಾ ಇದೀರಾ ?? ಧಾರಳವಾಗಿ ಹಾಕಿಕೋಳ್ಳರಿ... ನನ್ನದೇನು ಅಬ್ಯಂತರವಿಲ್ಲ.....

ಶಿವ,
ಬದಲಾವಣೆ ಜಗದ ನಿಯಮ ಅಲ್ಲವೇನ್ರಿ..ನೀನು ಹೇಳಿದ್ದು ನಿಜಾ...ಯಾವದು ನಿನ್ನ ಪ್ರೊಜಕ್ಟ್ ಅನ್ನೋ ಕಾಲನೂ ದೂರವಿಲ್ಲ....
ಪೊಟೊ ಸುಮಾರು-೨೧-೨೨ ವರ್ಷದ ಹಿಂದಿನದು...... ಉದ್ದ ಜೋತೆ ಈಗೀಗ ಅಗಲಾನೂ ಅಗ್ತಾ ಇದಿನಿ (-......

ಸುಪ್ತದೀಪ್ತಿಯವರ್‍,
ನನ್ನ ಬ್ಲಾಗಗೆ ಭೇಟಿ ನೀಡಿದಕ್ಕೆ ಧನ್ಯವಾದಗಳು...
ಹೌದು ನೀವು ಹೇಳಿದಂತೆ ನಿಜ.....

ಯಜ್ಙೇಶ್
ಪ್ರತಿಕ್ರಿಯೆಗೆ ಧನ್ಯವಾದಗಳು............

ಶಿವ,
ಸಫಾರಿ ಸೂಟ ಅವಾಗ ಯಾರು ಕೊಡಿಸಿದ್ದು ಅಂತಾ ನೆನಪೇ ಇಲ್ಲಾ... ಫೊಟೊ ಹುಡಕಲು ಮಾತ್ರ ಸುಮಾರ್ರು ಟೈಮ ತೊಗೊಂಡೆ.... ಹೀಗೆ ಬ್ಲಾಗಿಗೆ ಭೇಟಿ ಕೊಡ್ತಾ ಇರಿ.....

ಶ್ರೀಗಳೇ,
ಫೊಟೊ ತುಂಬಾ ಹಳೇಯದು..... ಪ್ರತಿಕ್ರಿಯೆಗೆ ಧನ್ಯವಾದಗಳು......

Anonymous said...

Monne Chetan Bhagath ravara website nodthidde, namma kannada huduga na website nodlikke ishtu dina aithu.

Chennagi barediddeera, Thejaswi bagge bareda kavana ishta aithu.

Vani