Sunday, December 02, 2007

ಸಾಪ್ಟವೇರ್ ಇಂಜಿನೀಯರನ ಕಥೆ-ವ್ಯಥೆ.

ದೆವ್ವದಂತೆ ಬೀಕರವಾಗಿ ನಿಂತಿರುವ ಬಹುಮಹಡಿ ಕಟ್ಟಡ,ಒಳಗಡೆ ಕೇಳಿಬರುತ್ತಿರುವ ಕಂಪ್ಯೂಟರನ ಕೀ-ಬೋರ್ಡನ ಸದ್ದು,ಹೊರಗಡೆ ಇರುವೆ ಸಾಲುಗಳಂತೆ ನಿಂತಿರುವ ಕಂಪನಿಯ ಕ್ಯಾಬುಗಳು,ಹದ್ದಿನ ಕಣ್ಣಿನಂತೆ ಟ್ಯಾಗುಗಳನ್ನು ವಿಕ್ಷಿಸಿಸುತ್ತಿರುವ ಸೆಕ್ಯುರೇಟಿ ಗಾರ್ಡುಗಳು ಮತ್ತು ರೆಸೆಪಿನಿಸ್ಟಗಳು, ಕಾಫಿ-ಬ್ರೇಕ್ ಏರಿಯದಲ್ಲಿ ಮೀನಿನ ಮಾರ್ಕೆಟನಂತೆ ಕೇಳಿಬರುತ್ತಿರುವ ಗದ್ದಲಗಳು,ಹರಟೆಗಳು,ಮೀಟಿಂಗ-ರೂಮನಲ್ಲಿ ನಡೆಯುತ್ತಿರುವ ಸತ್ವಹೀನ ಮೀಟಿಂಗಳೆಲ್ಲವೂ ಸೇರಿ ಒಂದು ಬಹುರಾಷ್ಟೀಯ ಕಂಪನಿಯ(MNC)ಚಿತ್ರಣವನ್ನು ಕಟ್ಟಿಕೊಡುತ್ತವೆ.ಇಂತಹ ಒಂದು ಬೆಂಗಳೂರಿನ ಕಂಪನಿಯಲ್ಲಿ ತುಂಬ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ರಾಹುಲ ಮದ್ಯಾಹ್ನವಿರುವ ತನ್ನ ಅಪ್ರೈಸಲಗಾಗಿ ಕಾತುರದಿಂದ ಕಾಯುತ್ತ ಯೊಚನೆ ಮಾಡುತ್ತಿದ್ದಾನೆ. ವರ್ಷಕ್ಕೆ ಎರಡು ಸಾರಿ ಬರುವ ಈ ಅಪ್ರೈಸಲಗಾಗಿ ಬಹುತೇಕ ಎಲ್ಲರೂ ಶಬರಿ ರಾಮನಿಗೆ ಕಾಯ್ದಂತೆ ಕಾಯುತ್ತಾರೆ ಎನ್ನುವ ಸಂಗತಿ ಈತನಿಗೂ ಸಹ ಗೊತ್ತು.
ಕಳೆದ ೫ ವರ್ಷಗಳಿಂದ ಸಾಪ್ಟವೇರನಲ್ಲಿರುವ ರಾಹುಲನಿಗೆ ,ಉಳ್ಳವರಿಗೆ ಇನ್ನುಷ್ಟನ್ನು ನೀಡುವ ಮ್ಯಾನೆಜುಮೆಂಟು,ಒಂದು ವರ್ಷದ ಕೆಲಸವನ್ನು ಅರ್ಧ ಘಂಟೆಯಲ್ಲಿ ಪರಾಮರ್ಶಿಸುವ ಮ್ಯಾನೇಜರ್ರು ,ಎಲ್ಲಾ ಒಂದು ತರದಲ್ಲಿ ಅರ್ಥಹೀನ ಎಂಬ ಸಣ್ಣ ಸಂಶಯದ ಸುಳಿಯೊಂದು ಮನದಲ್ಲಿ ಬಂದು ಮಾಯವಾಯಿತು.ಮೀಟಿಂಗನಲ್ಲಿ ಪ್ರತಿ ಸರ್ತಿ ಹೇಳುವಂತೆ "You have done good job,you need to improve,their is scope of improvement" ಎನ್ನುವ ಗಿಣಿಪಾಠಕ್ಕೆ ನಾನೇನು ಹೇಳಲಿ? ಎಂಬುದನ್ನು ಚಿಂತಿಸುತ್ತ, ರಾಹುಲ ತನ್ನ ಕಂಪನಿಯ ಬಗ್ಗೆ ,ಸಾಪ್ಟವೇರ ಇಂಡಸ್ಟ್ರಿಯ ಬಗ್ಗೆ ದೀರ್ಘವಾಗಿ ಯೋಚಿಸತೊಡಗಿದ.
"ನೀನೇನು ಬಿಡಪ್ಪ, ಸಾಪ್ಟವೇರನಲ್ಲಿ ಇದ್ದಿಯ,ಕೈತುಂಬ ಸಂಬಳ,ಆಫೀಸ ತುಂಬ ಹುಡಿಗಿಯರು, ನೀನಗೇನು ಚಿಂತೆ" ಎನ್ನುವ ಜನಗಳಿಗೆ ,ನಾನು ಆಫೀಸನಲ್ಲಿ ಕ್ಲೈಂಟ ಕಾಲನಲ್ಲಿ ಉತ್ತರಿಸಲು ಒದ್ದಾಡುವದು,ಮುಗಿಯಲಾರದ ಡೆಡ್-ಲೈನಗಾಗಿ ಕೆಲಸ ಮಾಡುತ್ತ ನಾನೇ ಡೆಡ್ ಆಗ್ತಾ ಇರೋದು,ಬೆಳಿಗ್ಗೆಯಿಂದ ರಾತ್ರಿವರಗೆ ಒಂದೇ ಕುರ್ಚಿಯಲ್ಲಿ ಕುಳಿತು ,ಸ್ಕ್ರೀನ ನೊಡುತ್ತ ,ದಿನೆ ದಿನೆ ಬೊಜ್ಜು ಬೆಳಿಸಿಕೊಳ್ಳುತ್ತ ,ರಾತ್ರಿ ಉಸ್ಸಪ್ಪ ಎಂದು ಮನಗೆ ಬಂದು ಬೀಳುವದು, ರಾತ್ರಿ ನಿದ್ದೆಯಲ್ಲೂ ಸಹ ಅಫೀಸನ ಕೆಲಸ ಬಗ್ಗೆ ಕನಸುಗಳು, ಮತ್ತೆ ಮರುದಿನ ಅದೇ ದಿನಚರಿ,ಯಾರೋ ಶಾಸನ ಬರೆದಿಟ್ಟ ಹಾಗೆ! ಹೀಗೆ ಹಣದ ಹಿಂದೆ ಬಿದ್ದು ಜೀವನವನ್ನು ಪೂರ್ತಿಯಾಗಿ ಅನುಭವಿಸದೇ ಇರೊದು, ಜನಗಳಿಗೆ ಅರ್ಥವಾಗುದು ಹೇಗೆ? ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ತಾನೆ?? ಅಫೀಸನಲ್ಲಿ ಯಾರದೊ ಸಿಟ್ಟನ್ನ ಬಹಳ ಜನ ತಮ್ಮ ಹೆಂಡತಿ-ಮಕ್ಕಳ ಮೇಲೋ ,ಇಲ್ಲಾ ತಂದೆ ತಾಯಿಗಳ ಮೇಲೆ ತೋರಿಸಿಕೊಳ್ಳುವದು ಇಲ್ಲಿಯ ಟ್ರೇಡಮಾರ್ಕ್.
Higher managementನಲ್ಲಿ ಅಗುತ್ತಿರುವ ಬದಲಾವಣೆಗಳಿಂದ ಇರುಸು-ಮುರುಸು ಆಗುತ್ತಿರುವ ಕಂಪನಿಯ ಸಹೋದ್ಯೋಗಿಗಳು,ನಾನು ಬದಲಾವಣೆ ಕೇಳಿದರೆ ತಿಪ್ಪೆ ಸಾರುವ ಮ್ಯಾನೆಜಮೆಂಟು, ಮೇಲಿನಿಂದ ಕೆಳಗಿನವರಗೆ Ego problems, team issues,ಹೀಗಾದರೆ ಕೆಳಗಿರುವ ಜನ ಮೇಲಕ್ಕೆ ಬರುವುದು ಹೇಗೆ? "ಮೇಲಿನವರು ಇನ್ನುಸ್ಟು ಮೇಲೆರಿದಂತೆ, ಕೇಳಗಿನವರು ಇನ್ನುಸ್ಟು ಕೇಳಗಿಳಿವವುರು " ಎಂಬ ಹೊಸ ತರ್ಕ ರಾಹುಲನ ಮನದಲ್ಲಿ ಮೂಡತೊಡಗಿತು.ಡಾಲರ್ ಬೆಲೆ ಕುಸಿದರೆ ಭಯಬೀಳುವ ಈಲ್ಲಿಯ ಜನ,ರೂಪಾಯಿಯ ಬೆಲೆ ಬಲಗೊಂಡಂತೆ,ನಮ್ಮ ದೇಶದ ಹಣಕಾಸು ಸ್ಥಿತಿ ಉತ್ತಮಗೊಂಡಿದೆ ಎನ್ನುವದರ ಬಗ್ಗೆ ಹೆಮ್ಮೆ ಪಡುವದರ ಬದಲು ,ನಾಳಿನ ಭವಿಷ್ಯದ ಬಗ್ಗೆ ಅತಂಕಪಡುವ ಇಲ್ಲಿಯ ಕೆಲವು ಜನಗಳು ಚಿತ್ರ ಮೂಡಿಬಂತು.ಬ್ರಿಟಿಷರ ರಾಜಕೀಯ ಗುಲಾಮಗಿರಿಂದ ,ನಾವೆಲ್ಲ ಅಮೆರಿಕನ್ನರ ಅರ್ಥಿಕ ಗುಲಾಮರಾಗುತ್ತಿದ್ದೆವೆ ಎಂಬ ಭಾವನೆ ತೀವ್ರವಾಗತೊಡಗಿತು. ಹಾಗೆ ಮೊನ್ನೆ ಡಾಲರ ಬೆಲೆ ನಲವತ್ತಿಕ್ಕಿಂತ ಕೆಳಗೆ ಕುಸಿದಾಗ, ಸಹೋದ್ಯೊಗಿ ನೀಡಿದ ಹೇಳಿಕೆ " ಅಮೆರಿಕ್ಕನ್ನರು ಮತ್ತು ಅವರ Ecomony ಚೆನ್ನಾಗಿದ್ದರೆ ಮಾತ್ರ ನಾವು ನೆಮ್ಮದಿಯಾಗಿರಲು ಸಾದ್ಯ " ಎನ್ನುದು ಎಷ್ಟು ಸರಿ ? ತಪ್ಪು ? ಅನ್ನೊದನ್ನ ರಾಹುಲನ ಮನಸ್ಸು ಯೊಚಿಸತೊಡಗಿತು.ಎಲ್ಲಾ ಜಾಗತಿಕರಣದ ಮಾಯೆ.ಒಂದು 30X40ಸೈಟ ಕೊಂಡು,ಒಂದು ಮನೆ ಕಟ್ಟಿಸಿ, ಸಾಯೋವರಗೆ EMI ಕಟ್ಟುತ್ತ ತಂಮ ಜೇವನದ ಸಾರ್ಥಕತೆ ಕಂಡುಕೊಂಡಿರುವ ಸಹೋದ್ಯೋಗಿಗಳಂತೆ ನಾನು ಆಗಬೇಕಂದರೆ ಈಸಲ ಒಳ್ಳೆ ರೇಟಿಂಗ ಮತ್ತು ಪ್ರಮೋಶನಗಾಗಿ ಪ್ರಯತ್ನಿಸಬೇಕು, ಆದರೆ ಇಲ್ಲಿ ಹೊಸದಾಗಿ ಬಂದವರಿಗೆ ಮಣೆ ಹಾಕುತ್ತ ,ಹಳಬರನ್ನು ಕಡೆಗಣಿಸುತ್ತ ,ನಾವು ಕೊಟ್ಟಿದನ್ನು ತಗೊಂಡು ಮುಚ್ಚಕೊಂಡು ಇರು ಅನ್ನೊ ಈ ಕಂಪನಿಯಲ್ಲಿ ನನ್ನಾಸೆ ಕೈಗೂಡುವಂತಿಲ್ಲ ಎನಿಸಿ,ಬೇರೆ ಕಂಪನಿಗೆ ಹೊಸಬನಾಗಿ ಹೋಗಿ,ಹೆಚ್ಚು ಹಣ, ಅಧಿಕಾರ ಪಡೆಯಿಲೆ? ಅನ್ನುವ ಜಿಜ್ಘಾಸೆ ಶುರುವಾಯಿತು.ಬುದ್ದನಂತೆ " ಆಸೆಯೆ ದು:ಖಕ್ಕೆ ಮೂಲ" ಎಂಬ ನುಡಿಯನ್ನು ಅನುಸರಿಸಿ ನಿರ್ಲಿಪ್ತವಾಗಿರೋಣ ಎನ್ನುವದಕ್ಕೆ ಮನಸ್ಸು ಒಪ್ಪಲಿಲ್ಲ.
ಸಾಫ್ಟವೇರ ಬಂದದ್ದರಿಂದಲೇ, ಬೆಂಗಳೂರಿನ ರಿಯಲ ಎಸ್ಟೇಟ, ಮಧ್ಯಮ ವರ್ಗದ ಜನರಿಗೆ ಗಗನಕುಸುಮವಾಯಿತು ಎನ್ನುವ ಯೊಚನೆಯಿಂದ ಹಿಡಿದು ನಾನು ಸಾಫ್ಟವರನಲ್ಲಿ ಇರದಿದ್ದರೆ ಎನು ಮಾಡುತ್ತಿದ್ದೆ? ಮೆಕ್ಯಾನಿಕಲ ಇಂಜಿನಿಯರ ಓದಿದರಿಂದ ಯಾವುದೊ ಕಂಪನಿಯಲ್ಲಿ ಡಿಸೈನ ಅಥವಾ ಪ್ರೊಡಕ್ಷನ ಇಂಜಿನಯರ್ರೊ ,ಇನ್ನೆನೋ ಆಗಿರುತ್ತಿದ್ದೆ.ಯಾರು ಎನೇ ಹೇಳಲಿ ಸಾಫ್ಟವೇರ ಇಂಡಿಸ್ಟ್ರಿಯಿಂದ ಸಾವಿರಾರು ಜನಗಳ ಜೀವನ ಪಾವನವಾಗಿರೊದು ಸುಳ್ಳಲ್ಲ,ಎಷ್ಟೊ ಜನರಿಗೆ ನೇರ ಪರೋಕ್ಷ ಉದ್ಯೋಗಗಳನ್ನು ಕಲ್ಪಿಸಿರುವ ಸಾಫ್ಟವೇರನ್ನು ತೆಗಳುವುದು ಎಷ್ಟು ಅರ್ಥಪೂರ್ಣ? ನಿರೋದ್ಯೊಗ ಸಮಸ್ಯೆಯನ್ನು ನಮ್ಮ ಘನ ಭಾರತ ಸರ್ಕಾರ ಕಳೆದ ೬೦ ವರ್ಷಗಳಲ್ಲಿ ,ಎಷ್ಟು ಪರಿಹರಿಸಿದೆ ? ಅದಕ್ಕಿಂತ ಹೆಚ್ಚು ಜಾಬ್ಸಗಳನ್ನ ಸಾಫ್ಟವೇರ ಕಂಪನಿಗಳು ನೀಡಿವೆ.ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಬ್ರಷ್ಟಾಚರ ,ಲಂಚಗುಳಿತನವಿಲ್ಲ,ಗುಂಪುಗಾರಿಕೆವಿದ್ದರೂ ಸಹ ಪ್ರತಿಭೆಯೊಂದೇ ಮೂಲವಾಗಿ ಬೇಕಾಗಿರುವದು ಎಂಬ ಇತ್ಯಾದಿ ಯೊಚನೆಗಳು ಮನದಲ್ಲಿ ಬಂದು ,ಗೀತೆಯ ಉಪದೇಶದಂತೆ "ಕರ್ಮ ಮಾಡು ಫಲ ಮಾತ್ರ ನಿರಕ್ಷೀಸಬೇಡ" ಎಂದುದನ್ನ ಅನುಷ್ಠಾನಕ್ಕೆ ಇಲ್ಲಿಯೂ ತರಬೇಕಂದು ನಿರಾಳಾಗಿ ತನ್ನ ಕೆಲಸದಲ್ಲಿ ಗಮನಹರಿಸಿದ.

17 comments:

MD said...

ಪ್ರಸ್ತುತ ಸ್ಥಿತಿಗತಿಯತ್ತ ಕಣ್ಣು ಹರಿಸುತ್ತ, ಎಲ್ಲ ಅಂಶಗಳ ಕಡೆಗೆ ಗಮನ ಕೊಟ್ಟಿದ್ದೀರ.
ಲೇಖನ ವಾಸ್ತವಿಕತೆಗೆ ಹಿಡಿದ ಕನ್ನಡಿಯಾಗಿದೆ.
ಕಥೆಯಾಗಿಸುವ ಗೋಜಿಗೆ ಹೋಗದೆ ನೇರಾನುನೇರ ಬರೆದದ್ದೇ ಪ್ಲಸ್ ಪಾಯಿಂಟ್.
ನೀವು ಏಕೆ ವಾರಕ್ಕೊಂದು ಈ ತರಹದ ಲೇಖನ ಬರೆಯಬಾರದು?

Anonymous said...

ಮಹಾಂತೇಶ್, ಮೊದ ಮೊದಲಿಗೆ ಓದಿ ನೀವು ನನ್ನ ಮ್ಯಾಲೆ ಬರ್ದೀರಿ ಅಂತ ಅನ್ನಿಸ್ತು. ಅದ್ರ, ಕಡೀ ಮೂರ್ನಾಲ್ಕು ಲೈನ್ ಓದಿದ ಮ್ಯಾಲೆ ಸಮಾಧಾನ ಆತು. ನಿಮಗ ಹಿಂಗೆಲ್ಲ ಬರೀಲಿಕ್ಕೆ ಹಚ್ಚಿ ನಾ ಎಲ್ಲೀ ಪಾಪಕ್ಕ ಹೋಗ್ಲಿ?

Anonymous said...

Good one Monty , keep writing

Giri said...

It been said "Pen is Mightier than Sword" let's wait and watch if this is true even in a IT Industry.
Hope your message reaches the masses.All the very best.

Anonymous said...

ಪ್ರತಿ ಅಪ್ಪ್ರಿಸಲ್ ಅಲ್ಲಿ ಮನಸ್ಸಲ್ಲಿ ಮೂಡುವ ದ್ವಂದ್ವವನ್ನು ಬಹಳ ಸೊಗಸಾಗಿ ವಿವರಿಸಿದ್ದೀರ.

ಧನ್ಯವಾದಗಳೊಂದಿಗೆ,
ಕೇಶವ್

ಮಹೇಶ ಎಸ್ ಎಲ್ said...

"ಕರ್ಮ ಮಾಡು ಫಲ ಮಾತ್ರ ನಿರಕ್ಷೀಸಲೇಬೇಡ ಎಂದು ಹೇಳಿದರೆ ಚೆನ್ನಾಗಿತ್ತೆನು. ಅದೇ ನಡೆಯುತ್ತಿರುದು ಅನ್ನಿಸುತ್ತೆ
ತೇಜಸ್ವಿಯವರಿಗೊಂದು ಭಾವಪೂರ್ಣ ಶ್ರಧ್ದಾಂಜಲಿ, ಚೆನ್ನಾಗಿದೆ

ತೇಜಸ್ವಿನಿ ಹೆಗಡೆ said...

ಚೆನ್ನಾಗಿ ಬರೆದಿರುವಿರಿ. ಒಳಿತು-ಕೆಡುಕುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆದೇ ರೀತಿ ಈ Software field ಕೂಡಾ.

Shiv said...

ಮಹಾಂತೇಶ್,

ಭಾಳ ಚಲೋ ಬರೆದಿದ್ದೀರಿ..
ಅಂದಾಗೆ ರಾಹುಲನ ಅಪ್ರೆಸಲ್ ಎನಾಯ್ತು :)

ಚಿತ್ರಾ ಸಂತೋಷ್ said...

ಚೆನ್ನಾಗಿ ಬರೆದಿದ್ದೀರಿ...ಶುಭವಾಗಲಿ..ಹೀಗೆ ಬರೆಯುತ್ತೀರಿ..ಮನಸ್ಸಿನ ಚಪಲಕ್ಕಾಗಿ ಒಂಚೂರು ಓದಲು ಹೀಗೆ ಬರೆಯುತ್ತೀರಿ..ಸಾಫ್ಟ್ ವೇರ್ ಕ್ಷೇತ್ರದ ನಗ್ನ ಸತ್ಯಗಳನ್ನು ನಮ್ಮೆದುರಿಟ್ಟದ್ದಕ್ಕೆ ಥ್ಯಾಂಕ್ಸ್ ..
ಗೆಳತಿ,
ಚಿತ್ರಾ

MD said...

Mahantesh we are waiting for your next post :-)

sunaath said...

ಮಹಾಂತೇಶ,
ಗಂಡುಮೆಟ್ಟಿನ ಭಾಷಾದಾಗ ಬರದೀರಿ. ಓದಲಿಕ್ಕೆ ಭಾಳ ಖುಶಿ ಆತು. ಹಿಂಗs ಬರೀರಿ. ಈಗಿನ software companyಗಳ ಒಳಗಿನ ಜಗತ್ತನ್ನ ಛಲೋ ತೋರಸೀರಿ. ಶಭಾಶ್!

bhadra said...

ಸಾಫ್ಟ್ ವೇರ್ ಎಂಜಿನಿಯರರ ಕಟುವಾದ ಜೀವನ ಪರಿಯನ್ನು ಕಥೆಯ ರೂಪದಲ್ಲಿ ಬಹಳ ಚೆನ್ನಾಗಿ ನಿರೂಪಿಸಿದ್ದೀರಿ.
ನೀವೆಲ್ಲರೂ ಎಸಿ ರೂಮಿನಲ್ಲಿ, ಕಾಫಿ ಕುಡಿದುಕೊಂಡು, ಓರ್ಕುಟ್, ಚಾಟ್‍ನಲ್ಲಿ ಸಮಯ ಕಳೆದುಕೊಂಡು
ಹಾಯಾಗಿ ಕುಳಿತಿರ್ತೀರಿ ಎಂಬ ನನ್ನ ಅನಿಸಿಕೆ ಸುಳ್ಳಾಯಿತು.

ಕಥೆಯಂತಿದ್ದರೂ, ಇದು ಸತ್ಯ ಅಲ್ಲವೇ?

ARUN MANIPAL said...

"Ecomony" ?.."economy" agbekittu tappage mudritavagide swlpa gamana harisi..

Anonymous said...
This comment has been removed by a blog administrator.
Anonymous said...
This comment has been removed by a blog administrator.
Anonymous said...

Dear Mahantesh,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends.

Mahantesh said...

ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.......